For Quick Alerts
ALLOW NOTIFICATIONS  
For Daily Alerts

ಲೈಂಗಿಕತೆಯ ಬಗ್ಗೆ ಪ್ರಶ್ನೆಗಳಿವೆಯೇ? ಹಾಗಿದ್ದರೆ ಇದನ್ನು ಓದಿ...

By Akshatha K B
|

ಯಾವ ಪ್ರಶ್ನೆಯೂ ಪೆದ್ದು ಪ್ರಶ್ನೆಯಲ್ಲ ಮತ್ತು ಕೇಳುವವರು ಪೆದ್ದರೂ ಅಲ್ಲ. ನಿಸ್ಸಂದೇಹವಾಗಿ ಎಲ್ಲರ ಮನದಲ್ಲಿ ಲೈಂಗಿಕತೆಯ ಬಗ್ಗೆಯಾರಲ್ಲೂ ಹೇಳಲಾರದ ಕೇಳಲಾರದ ಪ್ರಶ್ನೆಗಳಿರುತ್ತವೆ. ಈ ಪ್ರಶ್ನೆಗಳನ್ನು ಕೇಳಲು ನಾಚಿಕೆ ಎನಿಸಿದರೂ ಇವುಗಳೇ ನಿಮ್ಮನ್ನು ಒಬ್ಬ ಉತ್ತಮ ಪ್ರೇಮಿಯಿಂದ ಅತ್ಯುತ್ತಮ ಪ್ರೇಮಿಯಾಗದಂತೆ ತಡೆಯುವುದು. ತಿಳಿದುಕೊಳ್ಳುವ ಕುತೂಹಲ ನಿಮ್ಮ ಲೈಂಗಿಕ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದೀರಿ ಎಂದು ಮನದಟ್ಟು ಮಾಡುತ್ತದೆ.

ಇದರಿಂದ ಲಾಭವಾಗುವುದು ನಿಮಗೂ ಮತ್ತು ನಿಮ್ಮ ನಲ್ಲೆಗೆ. ಈ ವಿಷಯದ ಬಗ್ಗೆ ದಿನಂಪ್ರತಿ ನಮ್ಮ ಹಲವಾರು ಓದುಗರಿಂದ ಬಹಳಷ್ಟು ಪ್ರಶ್ನೆಗಳು ಬರುತ್ತವೆ. ಅವುಗಳಲ್ಲಿ ಎಲ್ಲವನ್ನೂ ಉತ್ತರಿಸಲು ಸಾಧ್ಯವಾಗದಿದ್ದರೂ, ಎಲ್ಲರನ್ನೂ ಕಾಡುವ ಈ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನ ಮಾಡಿದ್ದೇವೆ....

ಶಿಶ್ನದ ಗಾತ್ರ ಹೆಚ್ಚಿಸುವುದು ಹೇಗೆ?

ಶಿಶ್ನದ ಗಾತ್ರ ಹೆಚ್ಚಿಸುವುದು ಹೇಗೆ?

ಈ ಪ್ರಶ್ನೆಯು ಒಳ್ಳೆಯ ಮತ್ತು ಉತ್ತರಿಸಲು ಬಹಳ ಕಷ್ಟವಾಗಿರುವ ಪ್ರಶ್ನೆಯೆಂದು ಹೇಳಲು ವಿಷಾದವೆನಿಸುತ್ತದೆ. ಕೆಲವು ಭಂಗಿಗಳಲ್ಲಿ ಸಂಭೋಗಕ್ಕೆ ತೊಡಗುವುದರಿಂದ ಶಿಶ್ನದ ಗಾತ್ರ ದೊಡ್ಡದೆನಿಸಬಹುದು. ಉದಾಹರಣೆಗೆ, ಸಂಗಾತಿಯನ್ನು ಹಿಂದಿನಿಂದ ಸಂಭೋಗಿಸಲು ಪ್ರಯತ್ನಿಸುವುದರಿಂದ ಸಂಗಾತಿಗೆ ಶಿಶ್ನದ ಗಾತ್ರ ಹೆಚ್ಚಾಗಿದೆ ಎಂದೆನಿಸಬಹುದು. ಜನನಾಂಗದ ಸುತ್ತಲಿನ ಕೂದಲನ್ನು ಕತ್ತರಿಸಿ ಚೊಕ್ಕಟವಾಗಿಡುವುದು, ಸಮತೋಲಿತ ಆಹಾರವನ್ನು ಸೇವಿಸಿ ದೇಹವನ್ನು ಆಕರ್ಷಕವಾಗಿಟ್ಟುಕೊಳ್ಳುವುದರಿಂದ ಸಂಗಾತಿಯು ನಿಮ್ಮನ್ನು ಪ್ರಶಂಸಿಸುವುದಲ್ಲದೆ ಶಿಶ್ನದ ಗಾತ್ರ ಮರೆತೇ ಹೋಗುತ್ತದೆ.

ಶಿಶ್ನದ ಗಾತ್ರ ಒಂದು ಚಿಂತಿಸುವ ವಿಷಯವೇ?

ಶಿಶ್ನದ ಗಾತ್ರ ಒಂದು ಚಿಂತಿಸುವ ವಿಷಯವೇ?

ಅದು ನಿಮ್ಮ ಸಂಗಾತಿಯನ್ನು ಆಧರಿಸಿರುತದೆ. ಮೂರರಲ್ಲಿ ಒಂದು ಭಾಗ ಮಹಿಳೆಯರು ಶಿಶ್ನದ ಗಾತ್ರ ದೊಡ್ಡದಾಗಿದ್ದರೆ ಹೆಚ್ಚಿನ ಸುಖವನ್ನು ಅನುಭವಿಸುತ್ತಾರೆ ಎಂದು ಲೈಂಗಿಕ ವೈದ್ಯ ಅಧ್ಯಯನದ ಒಂದು ದಿನ ಪತ್ರಿಕೆಯಲ್ಲಿ ಹೇಳಲಾಗಿದೆ. ಬಹಳಷ್ಟು ಮಹಿಳೆಯರಿಗೆ ಕೇವಲ ಸಂಭೋಗದಿಂದ ಮಾತ್ರ ಲೈಂಗಿಕ ಸುಖ ದೊರೆಯುವುದಿಲ್ಲ. ಅವರಿಗಿಷ್ಟವಾದ ರೀತಿಯಲ್ಲಿ ಸ್ಪರ್ಶಿಸುವುದು, ಚುಂಬಿಸುವುದು, ಪ್ರೀತಿಯಿಂದ ಪರಚುವುದು ಹೀಗೆಲ್ಲಾ ಮಾಡುವ ಸಂಗಾತಿ ಇರಬೇಕೆಂದು ಇಚ್ಛಿಸುತ್ತಾರೆ. ಆದ್ದರಿಂದ ಶಿಶ್ನದ ಗಾತ್ರದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಸಂಗಾತಿಯೊಡನೆ ಮೋಜು ಮಾಡುವುದರ ಬಗ್ಗೆ ಗಮನಹರಿಸಿ.

ಫೋನ್ ನಂಬರ್ ಕೊಟ್ಟ ಹುಡುಗಿಗೆ ಕರೆ ಮಾಡಲು ಎಷ್ಟು ಹೊತ್ತು ಕಾಯಬೇಕು?

ಫೋನ್ ನಂಬರ್ ಕೊಟ್ಟ ಹುಡುಗಿಗೆ ಕರೆ ಮಾಡಲು ಎಷ್ಟು ಹೊತ್ತು ಕಾಯಬೇಕು?

24 ಗಂಟೆಗಳ ಸಮಯ ಕೊಡಿ. ಟ್ವೀಟ್ಗಳು, ಮೆಸೇಜ್ಗಳು ಮತ್ತು ಸ್ಟೇಟಸ್ ಅಪ್ ಡೇಟ್ನ ಯುಗದಲ್ಲಿ 3 ದಿನ ಕಾಯುವ ಹಳೆ ನಿಯಮವನ್ನು ಮರೆತುಬಿಡಿ. ಮೂರು ದಿನಗಳ ಕಾಲ ಕರೆ ಮಾಡಲು ಕಾದರೆ, ಹುಡುಗಿಯು ನಿಮ್ಮ ಕರೆಗಾಗಿ ಕಾಯುತ್ತಿರುತ್ತಾಳೆಂದುಕೊಂಡೀರಾ? ಸಂಭಾಷಣೆಯನ್ನು ಚಿಕ್ಕದಾಗಿ ಚೊಕ್ಕವಾಗಿ ಸಿಹಿಯಾಗಿಡಿ. " ಭೇಟಿಯಾದದ್ದು ಖುಷಿಯಾಯಿತು" ಎಂದೆನ್ನಿ. ಕಾಫಿ, ಟೀ, ಊಟಕ್ಕೆ ಹೊರಗೆ ಹೋಗಲು ಆಹ್ವಾನಿಸಿ. ಒಪ್ಪಿಕೊಂಡರೆ, "ಭೇಟಿಯಾಗಲು ಕಾಯುತ್ತಿರುತ್ತೇನೆ, ಕರೆದುಕೊಂಡು ಹೋಗಲು 8 ಗಂಟೆಗೆ ಮನೆಯ ಹತ್ತಿರ ಹಾಜರಿರುವೆ" ಎಂದು ಹೇಳಿ ಅಷ್ಟೆ!!

ಓರಲ್ ಸೆಕ್ಸ್ (ಮೌಖಿಕ ಲೈಂಗಿಕತೆ) ನ್ನು ಕೆಲವು ಮಹಿಳೆಯರು ಅಷ್ಟು ಇಷ್ಟಪಡುವುದಿಲ್ಲ ಏಕೆ?

ಓರಲ್ ಸೆಕ್ಸ್ (ಮೌಖಿಕ ಲೈಂಗಿಕತೆ) ನ್ನು ಕೆಲವು ಮಹಿಳೆಯರು ಅಷ್ಟು ಇಷ್ಟಪಡುವುದಿಲ್ಲ ಏಕೆ?

ಹಲವು ಮಹಿಳೆಯರು ಇದು ರುಚಿಸುವುದಿಲ್ಲ.ಆದರೆ ಇನ್ನು ಕೆಲವರಿಗೆ ಇಷ್ಟವಾಗಬಹುದು. ಹೀಗೆ ಮಾಡುವುದನ್ನು ಅವರು ಪ್ರೀತಿಯ ಬಂಧನದ ಒಂದು ಪ್ರತೀಕವಾಗಿ ತೆಗೆದುಕೊಳ್ಳುತ್ತಾರೆ. ಹಲವು ಮಹಿಳೆಯರು ಓರಲ್ ಸೆಕ್ಸ್ ನ ನಂತರದ ಪುರುಷನ ವೀರ್ಯ ನುಂಗಲು ಇಷ್ಟ ಪಡುವುದಿಲ್ಲ ಹಾಗೂ ಬಲವಂತ ಪಡಿಸಿದರೆ ನಿಮಗೇನೋ ಖುಷಿ ಸಿಗಬಹುದು ಆದರೆ ಸಂಗಾತಿಯು ಸಂತಸ ಪಡುವುದಿಲ್ಲ. ಆದ್ದರಿಂದ ಸಂಗಾತಿಯ ಇಷ್ಟದಂತೆ ಕೆಲಸ ನಡೆಯಲು ಬಿಡಿ.

ಲೈಂಗಿಕ ಉದ್ರೇಖವನ್ನು ಬಹಳ ಹೊತ್ತು ಕಾಪಾಡಿಕೊಳ್ಳುವುದು ಹೇಗೆ?

ಲೈಂಗಿಕ ಉದ್ರೇಖವನ್ನು ಬಹಳ ಹೊತ್ತು ಕಾಪಾಡಿಕೊಳ್ಳುವುದು ಹೇಗೆ?

ತುಂಬಾ ಹೊತ್ತು ಹಾಸಿಗೆಯ ಮೇಲೆ ಸಕ್ರಿಯವಾಗಿರಲು ಸಲಹೆ ಮತ್ತು ತಂತ್ರಗಳನ್ನು ಹುಡುಕುತ್ತಿದ್ದೀರೇ? ಹಾಗಿದ್ದರೆ ಈ ಲೇಖನದಲ್ಲೊಮ್ಮೆ ಕಣ್ಣು ಹಾಯಿಸಿ. ನಮ್ಮ ಪ್ರಾಮಾಣಿಕ ಅಭಿಪ್ರಾಯವೆಂದರೆ ಗಂಟೆಯ ಮೇಲಿನ ಪ್ರೀತಿಯನ್ನು ದಯಮಾಡಿ ಬಿಟ್ಟು ಬಿಡಿ. ಶಿಶ್ನದ ಗಾತ್ರ, ಸಂಭೋಗದ ಅವಧಿ ಇವೆಲ್ಲ ಹೇಗೆ ಅತಿರೇಖದ ವಿಶ್ಯಗಳೋ , ಹಾಗೆ ಇದೂ ಕೂಡ. ನಿಜ ಜೀವನದ ಲೈಂಗಿಕತೆ ಹಾಗೂ ಪೋರ್ನ್ಗೋ ತುಂಬಾ ವ್ಯತ್ಯಾಸವಿದೆ. ಅಲ್ಲಿ ತೋರಿಸುವಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಾಧ್ಯವಿಲ್ಲ. ನೀವು ಉದ್ರೇಕತೆಯನ್ನು ತುಂಬಾ ಹೊತ್ತು ಕಾಪಾಡಿಕೊಳ್ಳಬೇಕೆಂಬ ಉತ್ತಡದಲ್ಲಿದ್ದರೂ ನಿಮ್ಮ ಸಂಗತಿಯು ಮಾನಸಿಕ ಹಾಗೂ ದೈಹಿಕವಾಗಿ ತಯಾರಿರದಿರಬಹುದು. ಸಂಭೋಗವು 3 ರಿಂದ 13 ನಿಮಿಷದ ಒಳಗೆ ಪೂರ್ಣಗೊಂಡರೆ ಸೂಕ್ತವೆಂದು ಲೈಂಗಿಕ ಚಿಕಿತ್ಸಕರ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

ಮಾಜಿ ಪ್ರೇಯಸಿಯು ಹತ್ತಿರವಾಗಲು ಏಕೆ ಪ್ರಯತ್ನಿಸುತ್ತಿದ್ದಾಳೆ?

ಮಾಜಿ ಪ್ರೇಯಸಿಯು ಹತ್ತಿರವಾಗಲು ಏಕೆ ಪ್ರಯತ್ನಿಸುತ್ತಿದ್ದಾಳೆ?

ಇದು ನೀವು ಬೇರ್ಪಡೆಯಾದ ರೀತಿ ಮತ್ತು ಸಂದರ್ಭವನ್ನು ಅವಲಂಬಿಸಿರುತ್ತದೆ. ನಿಮ್ಮಿಂದಲೇ ಈ ಸಂಬಂಧ ಮುರಿದಿದ್ದರೆ ಅವಳಿಗೆ ಮರು ಹತ್ತಿರವಾಗುವ, ಮನಸ್ಸನ್ನು ಗೆಲ್ಲುವ ಭರವಸೆ ಅಥವಾ ಆಸೆ ಇರಬಹುದು. ಆದರೆ ಮಾಜಿ ಪ್ರೇಯಸಿಯೇ ನಿಮ್ಮಿಂದ ದೂರವಾಗಿದ್ದರೆ ಆದ ಬೇರೆ ಬೇರೆ ಕಾರಣಗಳಿರಬಹುದು.

1. ನೀವು ತೋರಿಸಿದ ಕಾಳಜಿ ಎಲ್ಲಿಂದಲೂ ಸಿಗದಿರಬಹುದು.

ಹಾಗಿರುವಾಗ, ಈ ಕಾಳಜಿಯನ್ನು ಪುನಃ ಪಡೆಯಲಿಚ್ಛಿಸುತ್ತಿರಬಹುದು.

2. ನಿಮ್ಮಿಂದ ಸಿಕ್ಕಿದ ಪ್ರೀತಿಯ ಬಂಧನಕ್ಕಾಗಿ ಹಾತೊರೆಯುತ್ತಿರಬಹುದು.

ಇದು ನಿಮ್ಮನ್ನು ಹಿಂಪಡೆಯುವ ಪ್ರಯತ್ನವಾಗಿರಲಿಕ್ಕಿಲ್ಲ. ಆದರೆ ನಿಮ್ಮ ಜೊತೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿರಬಹುದು. ನಿಮ್ಮ ಬಗ್ಗೆ ಇನ್ನೂ ಕಾಳಜಿ ಇರಬಹುದು.

3. ನಿಮ್ಮನ್ನು ಹಿಂಪಡೆಯಬೇಕೆಂದಿರಬಹುದು. ಒಂಟಿಯಾಗಿರುವ ಜೀವನ ಅಷ್ಟು ಸುಂದರವೇನಲ್ಲವೆಂದೆನಿಸಿರಬಹುದು ಅಥವಾ ಸಂಗಾತಿಯ ಬೆಲೆ ಅರಿವಾಗಿರ ಬಹುದು. ಹಿಂಪಡೆಯಲು ಹೇಗೆಲ್ಲಾ ಪ್ರೇರೇಪಿಸಿದರೂ, ಮತ್ತೆ ಸ್ನೇಹಿತರಾಗಬೇಕೆಂಬ ಅನಿವಾರ್ಯತೆಯೇನಿಲ್ಲ ಎಂಬುದನ್ನು ಮನದಲ್ಲಿಡಿ. ಆಗಿಹೋದ ವಿಷ್ಯದ ಬಗ್ಗೆ ತಲೆ ಕೆಡಿಸಿ ಕೊಳ್ಳುವುದರಿಂದ ಪ್ರಯೋಜನವೇನಿಲ್ಲ. ಆದ್ದರಿಂದ ಈ ವಿಷಯವನ್ನು ಎಲ್ಲಿ ಬಿಡಬೇಕೋ ಅಲ್ಲಿ ಬಿಟ್ಟುಬಿಡಿ.

 ಹೆಂಡತಿಯನ್ನು ಹಾಸಿಗೆಯ ಮೇಲೆ ಇನ್ನಷ್ಟು ಉತ್ಸಾಹಿಯನ್ನಾಗಿಸುವುದು ಹೇಗೆ?

ಹೆಂಡತಿಯನ್ನು ಹಾಸಿಗೆಯ ಮೇಲೆ ಇನ್ನಷ್ಟು ಉತ್ಸಾಹಿಯನ್ನಾಗಿಸುವುದು ಹೇಗೆ?

ನಿಮ್ಮ ಸಾಮಾನ್ಯವಾದ ಯೋಚನಾಕ್ಷೇತ್ರದಿಂದ ಹೊರಬಂದು ಯೋಚಿಸುವುದರಿಂದ ಹೀಗೆ ಮಾಡಲು ಸಾಧ್ಯ. ಪ್ರೀತಿಯ ಸಮಯವನ್ನು ಸ್ವಲ್ಪ ಬೆಚ್ಚಗೆ ಮಾಡುವ ಕೆಲವು ಲೈಂಗಿಕ ಮೋಜಿನ ಸಾಮಗ್ರಿಗಳಾದ ವೈಬ್ರಟರ್, ಬ್ಲೈಂಡ್ ಫೋಲ್ಡ್ ಅಥವಾ ಹ್ಯಾಂಡ್ ಕಾಫ್ಗಳನ್ನೂ ಕೊಂಡುಕೊಳ್ಳಿ ಮತ್ತು ಉಪಯೋಗಿಸಿ.ಈ ಆಟಿಕೆಗಳಲ್ಲಿ ಆಸಕ್ತಿಯಿಲ್ಲವೇ? ಹಾಗಾದರೆ ಕಾಮಸೂತ್ರದ ಪುಸ್ತಕವೊಂದನ್ನು ಖರೀದಿಸಿ ಅದನ್ನು ಅನುಸರಿಸಿ. ಸಾಧಾರಣ ಲೈಂಗಿಕ ರೂಢಿಯಿಂದ ಹೊರಬಂದು ಹೊಸ ರೀತಿಯನ್ನು ಪ್ರಯತ್ನಿಸುವುದೊಂದೇ ನಿಮ್ಮ ಪ್ರಶ್ನೆಗೆ ಉತ್ತರ.

English summary

Your Most Frequent Sex Questions—ANSWERED!

You’ve heard the phrase dozens of times before: There’s no such thing as a dumb question. And while the expression sounds cliché, it’s spot-on when it comes to your sex life. Asking those sensitive—and sometimes embarrassing—questions is what separates a good lover from a great one. Curiosity shows that you actually care about your sexual health. And in return, that only means good things for your and your lady. On a daily basis, And while I can’t always address every single one, consider this my attempt to knock out 10 of the most common ones!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more