ಇತರರ ಭಾವನೆಗಳೊಂದಿಗೆ ಚೆಲ್ಲಾಟವಾಡಬೇಡಿ ಪ್ಲೀಸ್!

By: Arshad
Subscribe to Boldsky

ನಮ್ಮ ಚಲನಚಿತ್ರಗಳಲ್ಲಿ ಕೆಲವು ಪಾತ್ರಧಾರಿಗಳು ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳೊಂದಿಗೆ ಚೆಲ್ಲಾಟವಾಡುವಾಡ ಅನುಭವಿಸುವ ತೊಂದರೆಗಳನ್ನು ಮನರಂಜನೆಯ ರೂಪದಲ್ಲಿ ನೋಡಿದ್ದೇವೆ. ಆದರೆ ನಿಜಜೀವನದಲ್ಲಿಯೂ ಕೆಲವು ವ್ಯಕ್ತಿಗಳು ಈ ಪರಿಯ ಚಾಳಿಯನ್ನು ಹೊಂದಿರುತ್ತಾರೆ.

ಇವರು ಇಬ್ಬರು ಅಥವಾ ಇದಕ್ಕೂ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದು ಯಾರೊಂದಿಗೂ ಶಾಶ್ವತ ಸಂಬಂಧ ಹೊಂದುವ ಇರಾದೆಯಿಲ್ಲದೇ ಎಲ್ಲರಿಗೂ ಮೋಸ ಮಾಡುತ್ತಾ ಇರುತ್ತಾರೆ. ತನ್ಮೂಲಕ ಇವರು ಆ ಎಲ್ಲರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಾರೆ. ಒಂದು ಕುತೂಹಲಕರ ಅಂಶವೆಂದರೆ ಈ ರೀತಿಯಾಗಿ ಆಟ ಆಡಿಸುವವರು. ಸಂಸಾರದಲ್ಲಿ ಅನುಮಾನದ ಬೀಜ ಎಂದಿಗೂ ಹುಟ್ಟದಿರಲಿ.... 

ಬಹುತೇಕ ಸ್ಪುರದ್ರೂಪರೇ ಆಗಿರುತ್ತಾರೆ. (ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಸುಂದರ ಮಹಿಳೆಯರೇ ಹೀಗೆ ಆಡಿಸುವವರಲ್ಲಿ ಹೆಚ್ಚು). ಇವರು ಎಲ್ಲರೊಂದಿಗೂ ನಗುನಗುತ್ತಾ ಮಾತನಾಡುತ್ತಾ, ನಿನ್ನನ್ನೇ ಮದುವೆಯಾಗುತ್ತೇನೆ ಎಂದೆಲ್ಲಾ ಹೇಳಿ ಈ ಭರವಸೆಯ ತಪ್ಪು ಪ್ರಯೋಜನ ಪಡೆಯುತ್ತಾ ಕಡೆಗೊಂದು ದಿನ ಎಲ್ಲರಿಗೂ ಮೂರು ನಾಮ ಹಾಕಿ ಇನ್ನೋರ್ವ ವ್ಯಕ್ತಿಯ ಹಿಂದೆ ಹೋಗುತ್ತಾರೆ. ಇದು ನಂಬಿಕೆದ್ರೋಹವಲ್ಲದೇ ಮತ್ತೇನು? ಹೀಗೆ ಕೈಕೊಟ್ಟು ಹೋಗುವವರು ಕೈಗೊಳ್ಳುವ ನಿರ್ಧಾರದ ಹಿಂದೆ

ಹಣ ಅಥವಾ ಶ್ರೀಮಂತಿಕೆ ಪ್ರಮುಖ ಪಾತ್ರವಾಗಿರುವ ಅಂಶವನ್ನು ಅಲ್ಲಗಳೆಯುವಂತಿಲ್ಲ. ಆದರೆ ಇವರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ಬಲವಾಗಿ ತಿಳಿದಿದ್ದರೂ ಏಕೆ ನಂಬಿಕೆದ್ರೋಹ ಮಾಡುತ್ತಾರೆ? ಇದರಿಂದ ಎದುರಿನವರ ಮನಸ್ಸಿಗೆ ಯಾವ ರೀತಿಯಾಗಿ ಘಾಸಿಯಾಗಬಹುದು? ಈ ವಿಷಯದ ಬಗ್ಗೆ ವೃತ್ತಿಪರರು ಆತ್ಮೀಯ ಸಂಭಾಷಣೆಯ ಮೂಲಕ ಕಂಡುಕೊಂಡ ಕೆಲವು ಕಹಿಸತ್ಯಗಳನ್ನು ಮತ್ತು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.... 

ಕಾರಣ #1

ಕಾರಣ #1

ಸಾಮಾನ್ಯ ಜನರು ತಮ್ಮ ಆತ್ಮಾಭಿಮಾನದಷ್ಟೇ ಅಕ್ಕಪಕ್ಕದವರ ಆತ್ಮಾಭಿಮಾನವನ್ನೂ ಗೌರವಿಸುತ್ತಾರೆ. ಇವರು ಎಂದಿಗೂ ಎದುರಿನವರ ಕಣ್ಣೀರಿಗೆ ಕಾರಣರಾಗಲು ಇಚ್ಛಿಸುವುದಿಲ್ಲ. ಆದರೆ ಹೃದಯಾಂತರಾಳದಲ್ಲಿ ಹಿಂದೆಂದೋ ತಿಂದಿದ್ದ ಪೆಟ್ಟನ್ನು ಸಹಿಸಲು ಸಾಧ್ಯವಾಗದೇ ಇವರು ಕಲ್ಲು ಹೃದಯ ದವರಾಗಿರುತ್ತಾರೆ. ತಾನು ಪೆಟ್ಟು ತಿಂದ ನರಳುತ್ತಿರುವಾಗ ತನ್ನ ಸುತ್ತ ಮುತ್ತಲಿನವರು ಹೇಗೆ ತಾನೇ ಸುಖಿಯಾಗಿರಲು ಸಾಧ್ಯ ಎಂಬ ವಿಚಿತ್ರವಾದ ತರ್ಕ ಈ ಕೆಲಸಕ್ಕೆ ಅವರನ್ನು ಪ್ರೇರೇಪಿಸಿರುವುದನ್ನು ಮನಃಶಾಸ್ತ್ರಜ್ಞರೇ ಕಂಡುಕೊಂಡು ದಂಗಾಗಿರುವ ಸತ್ಯ. ಇದಕ್ಕೆ ಪರಿಹಾರವೆಂದರೆ ಇವರ ಅಂತರಾಳದಲ್ಲಿ ಹುದುಗಿದ್ದ ಅಸುರಕ್ಷತೆಯ ಭಾವನೆಯನ್ನು ಹೋಗಲಾಡಿಸಿ ವಾಸ್ತವವನ್ನು ಎದುರಿಸುವ, ಸಮಾಜವನ್ನು ಪ್ರೀತಿಸುವ ಭಾವನೆಯನ್ನು ಮೂಡಿಸುವಂತೆ ಮಾಡುವುದು.

ಕಾರಣ #2

ಕಾರಣ #2

ಒಂದು ವೇಳೆ ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಯ ಬಗ್ಗೆ ಅಪಾರವಾದ ಆಕರ್ಷಣೆ ಹೊಂದಿದ್ದು ಅವರ ಪ್ರೇಮವನ್ನು ಪಡೆಯಲು ಏನು ಬೇಕಾದರೂ ಮಾಡಬಲ್ಲೆ ಎಂಬ ಹಂತವನ್ನು ತಲುಪಿದಾಗ ಸುತ್ತಮುತ್ತಲ, ವಿಶೇಷವಾಗಿ ಆ ವ್ಯಕ್ತಿಯ ಪರಿಚಿತರೇ ಆಗಿರುವ ವ್ಯಕ್ತಿಗಳೊಂದಿಗೆ ಸಂಬಂಧ ಬೆಳೆಸಿ ಈ ವ್ಯಕ್ತಿಯಲ್ಲಿ ಹೊಟ್ಟೆಕಿಚ್ಚಿನ ಭಾವನೆಯುಂಟು ಮಾಡಿ ಅವರನ್ನು ಪಡೆಯುವುದು ಇವರ ಉದ್ದೇಶವಾಗಿರುತ್ತದೆ. ಚಿಕ್ಕಂದಿನಲ್ಲಿ ವಿಫಲವಾದ ಪ್ರೇಮ ಪ್ರಕರಣ ಅಥವಾ ಹಿಂದಿನ ಸಂಬಂಧದಲ್ಲಿ ತ್ಯಜಿಸಲ್ಪಟ್ಟ ಭಾವನೆ ಈಗ ಈ ವ್ಯಕ್ತಿಯನ್ನು ಪಡೆಯುವತ್ತ ಹೆಚ್ಚು ಒತ್ತಡ ಹೇರಲು ಕಾರಣವಾಗುತ್ತದೆ.

ಕಾರಣ #3

ಕಾರಣ #3

ಕೆಲವರಿಗೆ ತಮ್ಮ ಸುತ್ತಮುತ್ತಲಿನವರು ತಮ್ಮ ಬಗ್ಗೆ ಒಳ್ಳೆಯದನ್ನೇ ಹೇಳುತ್ತಿರಬೇಕು, ಅಥವಾ ತಮ್ಮ ರೂಪದ ಬಗ್ಗೆ ಹೊಗಳುತ್ತಲೇ ಇರಬೇಕು ಎಂದು ಬಯಸುತ್ತಾರೆ. ಹೀಗೆ ಹೇಳುವವರು ಒಬ್ಬರಿಗಿಂತ ಹೆಚ್ಚಿದ್ದಷ್ಟೂ ಇವರು ಹೆಚ್ಚು ಹೆಚ್ಚು ಸಂಭ್ರಮಗೊಳ್ಳುತ್ತಾರೆ. ಹೆಚ್ಚಿನ ಸಂಬಂಧ ಹೊಂದಲು ಇದೂ ಒಂದು ಕಾರಣವಾಗಿದೆ.

ಕಾರಣ #4

ಕಾರಣ #4

ಕೆಲವರಿಗೆ ಒಂದೇ ಸಂಬಂಧದಲ್ಲಿ ಗಟ್ಟಿಯಾಗಲು ಭಯವಿರುತ್ತದೆ. ವಿಶೇಷವಾಗಿ ಪುರುಷರು ಈ ಭಯವನ್ನು ಹೆಚ್ಚಾಗಿ ಹೊಂದಿದ್ದು ಯಾವುದೇ ಒಂದು ಸಂಬಂಧವನ್ನು ನೆಚ್ಚಿಕೊಳ್ಳದೇ ಹಲವಾರು ಸಂಬಂಧಗಳೊಂದಿಗೆ ಚೆಲ್ಲಾಟವಾಡುತ್ತಾ ಇರುತ್ತಾರೆ.

ಕಾರಣ #5

ಕಾರಣ #5

ಕೆಲವು ವ್ಯಕ್ತಿಗಳಿಗೆ ತಾವು ಬಯಸಿದ ವ್ಯಕ್ತಿಗಳು ತಕ್ಷಣ ಒಪ್ಪಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ. ಆದರೆ ಎದುರಿನ ವ್ಯಕ್ತಿಗಳು ಈ ಸಂಬಂಧದ ಬಗ್ಗೆ ದೃಢೀಕರಣ ಮತ್ತು ಹಿರಿಯರ ಒಪ್ಪಿಗೆ ಮೊದಲಾದ ಅನುಮೋದನೆಗಳನ್ನು ಪಡೆಯುವ ಬಗ್ಗೆ ಮಾತನಾಡಲು ತೊಡಗಿದ ತಕ್ಷಣ ಇವರು ಈ ವ್ಯಕ್ತಿಯನ್ನು ಬಿಟ್ಟು ಬೇರೆ ವ್ಯಕ್ತಿಯ ಕಡೆಗೆ ತಮ್ಮ ಗಾಳವನ್ನು ಹಾಕುತ್ತಾ ಸಾಗುತ್ತಾರೆ.

 
English summary

Why Some People Play With Feelings

You must have seen at least one man (or a woman) in your circle who keeps dating several partners but never settles down. Of course, dating isn't the problem, but playing with others' feelings could be a disorder. But still, some people do that. They seem to derive fun out of multiple relationships. They raise hopes, have as much fun as possible and one day, simply walk away to find someone better. Isn't that selfish? Why do they do that?
Story first published: Saturday, February 18, 2017, 23:31 [IST]
Subscribe Newsletter