ಸಂಸಾರದಲ್ಲಿ ಅನುಮಾನದ ಬೀಜ ಎಂದಿಗೂ ಹುಟ್ಟದಿರಲಿ....

By: Arshad
Subscribe to Boldsky

ಪರಿಪೂರ್ಣ ಎಂಬ ವ್ಯಕ್ತಿ ಈ ಜಗತ್ತಿನಲ್ಲಿಯೇ ಇಲ್ಲ. ಎಲ್ಲರಲ್ಲಿಯೂ ಒಂದಲ್ಲಾ ಒಂದು ಕೊರತೆ ಇದ್ದೇ ಇರುತ್ತದೆ. ಇದು ಮಾನವರ ಸಹಜ ದೌರ್ಬಲ್ಯಗಳು. ನಮ್ಮ ಅಕ್ಕಪಕ್ಕದಲ್ಲಿರುವವರ ಬಗ್ಗೆ ನಾವು ಅಂದುಕೊಂಡಿರುವ ಅಭಿಪ್ರಾಯಗಳು ಕೆಲವೊಮ್ಮೆ ತಪ್ಪಾಗಿರಬಹುದು. ಆಗ ಅವರನ್ನೇ ನೇರವಾಗಿ ಕೇಳಿ ಅನುಮಾನವನ್ನು ಪರಿಹರಿಸಿಕೊಳ್ಳುವುದರಲ್ಲಿ ಏನೂ ತಪ್ಪಿಲ್ಲ ಹಾಗೂ ಇದೊಂದು ಉತ್ತಮವಾದ ನಡತೆ ಸಹಾ. ಆದರೆ ನಮಗೆ ಸದಾ ಕೆಲವು ವ್ಯಕ್ತಿಗಳ ನಡುವೆಯೇ ಇರಲು ಸಾಧ್ಯವಿಲ್ಲ. ಸಂಗಾತಿಗಳ ನಡುವಿನ ಆ ಆತ್ಮೀಯ ಸ್ಪರ್ಶದ ಹಿಂದಿನ ರಹಸ್ಯ!  

ಕಾರ್ಯನಿಮಿತ್ತ ನಮ್ಮ ಸ್ವಂತ ವಲಯದಿಂದ ಹೊರಹೋದಾಗ ಬೇರೆಯವರೊಂದಿಗೆ ವ್ಯವಹಸಲೇಬೇಕಾಗುತ್ತದೆ. ಆಗ ಕೆಲಸಕ್ಕೆ ಬರುವುದೇ ನಂಬಿಕೆ. ಯಾರನ್ನೂ ನಾವು ಸುಲಭಕ್ಕೆ ನಂಬಲು ಸಾಧ್ಯವಿಲ್ಲ. ಅದರಲ್ಲೂ ಕೆಲವರ ರೂಪ ಮತ್ತು ನಡವಳಿಕೆ ಕಂಡರೆ ಅನುಮಾನ ಸಹಜವಾಗಿ ಮೂಡುತ್ತದೆ. ಅದರಲ್ಲೂ ಜೀವನಸಂಗಾತಿಯ ನಡವಳಿಕೆಯಲ್ಲಿ ಏನಾದರೂ ಅನುಮಾನಾಸ್ಪದವಾದುದು ಕಂಡುಬಂದರೆ ಇದುವರೆಗಿನ ನಂಬುಗೆಗಳೆಲ್ಲಾ ಅಲ್ಲಡತೊಡಗುತ್ತವೆ.

ಒಂದು ವೇಳೆ ಸಂಬಂಧದಲ್ಲಿ ವಿಶ್ವಾಸ ಗಟ್ಟಿಯಾಗಿದ್ದು ಪರಸ್ಪರಿಗೆ ವಿಧೇಯರಾಗಿದ್ದರೆ ಯಾವುದೇ ಚಿಕ್ಕ ಪುಟ್ಟ ಕಲಹ ದೊಂಬಿಗಳು ಕೋಳಿಜಗಳದ ತರಹ ಬಂದ ಹಾಗೇ ಕರಗಿಯೂ ಹೋಗುತ್ತವೆ. ಆದರೆ ಇದಕ್ಕೆ ನೇರವಾಗಿ ಕೇಳಿ ಸತ್ಯವಾದ ಉತ್ತರ ಕೊಟ್ಟು ಪರಿಹರಿಸುವುದು ಖಂಡಿತಾ ಅಗತ್ಯ. ಇಲ್ಲದಿದ್ದರೆ ಈ ಅನುಮಾನ ಬೀಜ ಬೆಳೆದು ಹೆಮ್ಮರವಾಗಿ ಸಂಬಂಧವನ್ನೇ ಅಲುಗಾಡಿಸಬಹುದು. ಬನ್ನಿ, ಈ ಅನುಮಾನದ ಬೀಜಗಳೆಲ್ಲಿ ಮೊಳೆಯುತ್ತವೆ ನೋಡೋಣ.... 

ಸಲಹೆ #1

ಸಲಹೆ #1

ಒಂದು ವೇಳೆ ನಿಮ್ಮ ಸಂಬಂಧ ಗಟ್ಟಿಯಾಗಿಯೇ ಇದ್ದರೆ ಪರಸ್ಪರರ ಬಗ್ಗೆ ಅತ್ಯಂತ ಖಾಸಗಿಯಾದ ವಿಷಯಗಳನ್ನೂ ಕೇಳಿ ಸ್ಪಷ್ಟೀಕರಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ ಒಂದು ವೇಳೆ ನಿಮಗೆ ಮೂರನೆಯವರಿಂದ ನಿಮ್ಮ ಮನದನ್ನ ಬೇರೆ ಯಾರನ್ನೋ ಊಟಕ್ಕೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ತಿಳಿದು ಬಂದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ನೇರವಾಗಿಯೇ ಯಾರನ್ನು ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ? ಏನು ವಿಷಯ ಎಂದು ನೇರವಾಗಿ ಕೇಳಿ. ಇದರಿಂದ ದೊರಕುವ ಉತ್ತರದ ಮೂಲಕ ತಲೆಯಲ್ಲಿ ಅನುಮಾನದ ಹುಳಗಳು ಕೊರೆಯುವುದು ತಪ್ಪುತ್ತದೆ ಹಾಗೂ ಅನಾವಶ್ಯಕವಾದ ಗೊಂದಲ ಇಲ್ಲವಾಗುತ್ತದೆ.

ಸಲಹೆ #2

ಸಲಹೆ #2

ಒಂದು ವೇಳೆ ನಿಮ್ಮ ಗೆಳತಿ ಯಾರನ್ನೋ ಭೇಟಿಯಾಗಲು ಹೊರಟಿದ್ದು ನಿಮಗೆ ಆ ಯಾರೋ ವ್ಯಕ್ತಿ ಪುರುಷನೋ ಮಹಿಳೆಯೋ ಎಂದು ಗೊತ್ತಿಲ್ಲದೇ ಇದ್ದರೆ ಈ ವಿಷಯ ನಿಮ್ಮ ತಲೆಕೊರೆಯಲು ಪ್ರಾರಂಭಿಸಬಹುದು. ಆಗ ತಾಳ್ಮೆ ಕಳೆದುಕೊಳ್ಳದೇ ನೇರವಾಗಿ, ಸರಳವಾದ ಮಾತುಗಳಿಂದ, ಆಕೆಯ ಮನಸ್ಸಿಗೆ ನೋವಾಗದಂತೆ ವಿಷಯವನ್ನು ಕೆದಕಿ. ಒಂದು ವೇಳೆ ನೀವು ಆಕೆಯಲ್ಲಿ ಅನುರಕ್ತರಾಗಿದ್ದರೆ ಹೀಗೆ ಕೇಳುವುದರಲ್ಲಿ ಏನೂ ತಪ್ಪಿಲ್ಲ. ಒಂದು ವೇಳೆ ನಿಮ್ಮ ಪ್ರಶ್ನಿಸುವ ವಿಧಾನ ಕೊಂಚ ಕಟುವಾಗಿದ್ದರೆ ಆಕೆ ನಿಮ್ಮ ಬಗ್ಗೆ ತಪ್ಪು ಭಾವನೆಯನ್ನು ಮೂಡಿಸಿಕೊಳ್ಳಬಹುದು.

ಸಲಹೆ #3

ಸಲಹೆ #3

ಒಂದು ವೇಳೆ ನಿಮ್ಮ ಗೆಳೆಯ ತನ್ನ ಮಹಿಳಾ ಬಾಸ್ ರನ್ನು ಅತಿ ಹೆಚ್ಚಾಗಿ ಹಚ್ಚಿಕೊಂಡಿದ್ದು ಅತ್ತ ಹೆಚ್ಚಾಗಿ ವಾಲುತ್ತಿರುವ ಬಗ್ಗೆ ನಿಮಗೆ ಅನುಮಾನ ಬಂದರೆ ಇದನ್ನು ನೇರವಾಗಿ ಕೇಳಿ ವಿಷಯವನ್ನು ಸ್ಪಷ್ಟೀಕರಿಸುವುದು ಅಗತ್ಯ ಮತ್ತು ಇದರಲ್ಲಿ ಏನೂ ತಪ್ಪಿಲ್ಲ. ಎಷ್ಟೋ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿನ ಆತ್ಮೀಯತೆ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ.

ಸಲಹೆ #4

ಸಲಹೆ #4

ಒಂದು ವೇಳೆ ನಿಮ್ಮ ಗೆಳೆಯ ಅಥವಾ ಗೆಳತಿಯ ನಡವಳಿಕೆಯ ಬಗ್ಗೆ ಅನುಮಾನ ಮೂಡಿದ್ದರೆ ಇದನ್ನು ಎದುರುಬದುರಾಗಿ ಕುಳಿತು ಸ್ಪಷ್ಟಪಡಿಸಿಕೊಳ್ಳುವುದು ಅಗತ್ಯ. ಏಕೆಂದರೆ ಒಂದು ವೇಳೆ ಇಬ್ಬರಲ್ಲೊಬ್ಬರಿಗೆ ಮೂರನೆಯ ವ್ಯಕ್ತಿಯ ಪರಿಚಯವಾಗಿ ಅವರ ಗುಣಗಳು ಇವರಿಗಿಂತಲೂ ಮಿಗಿಲಾಗಿ ಕಂಡಿದ್ದರೆ ಆ ಈ ಸಂಬಂಧದ ಬದಲು ಹೊಸ ಸಂಬಂಧವನ್ನು ಹೊಂದುವ ಮನದಾಳದ ಅಭಿಲಾಶೆ ಈಗಿನ ಸಂಬಂಧವನ್ನು ಶಿಥಿಲಗೊಳಿಸಬಹುದು. ಆದರೆ ಈ ಆಕರ್ಷಣೆ ನಿಜವಾಗಿಯೂ ಈಗಿನ ಸಂಬಂಧಕ್ಕಿಂತಲೂ ಗಟ್ಟಿಯಾದುದೇ ಎಂಬುದನ್ನು ಸ್ಪಷ್ಟೀಕರಿಸಲು ಇಬ್ಬರೂ ಎದುರುಬದುರಾಗಿ ಕುಳಿತು ಮಾತನಾಡುವುದು ಅವಶ್ಯ. ಒಂದು ವೇಳೆ ಮೂರನೆಯ ವ್ಯಕ್ತಿಯ ಬಗೆಗಿನ ಆಕರ್ಷಣೆ ನಿಜವೇ ಆಗಿದ್ದರೆ ಮಾತ್ರ ಪ್ರಥಮ ವ್ಯಕ್ತಿ ಈ ಸಂಬಂಧವನ್ನು ಉಳಿಕೊಳ್ಳುವ ಬದಲು ಮುಂದಿನ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ. ಒಂದು ವೇಳೆ ಹಾಗೇನೂ ಇಲ್ಲವೆಂದಾದಲ್ಲಿ ಈಗಿರುವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಅಗತ್ಯ.

ಸಲಹೆ #5

ಸಲಹೆ #5

ಒಂದು ವೇಳೆ ನಿಮ್ಮ ಗೆಳೆಯನಿಗೆ ನಿಮ್ಮ ಸಂಬಂಧದಲ್ಲಿ ಏನಾದರೂ ಕೊರತೆ ಕಂಡುಬಂದರೆ ಇದಕ್ಕೆ ದುಃಖಪಡುವ ಬದಲು ಹಸನ್ಮುಖರಾಗಿ. ಏಕೆಂದರೆ ನಿಮ್ಮ ಸೌಂದರ್ಯದ ಕಾರಣ ಆತ ಅನಿಶ್ಚಿತತೆಯನ್ನು ಅನುಭವಿಸುತ್ತಿರಬಹುದು. ಒಂದು ವೇಳೆ ನೀವು ಪುರುಷನಾಗಿದ್ದು ಸ್ಪುರದ್ರೂಪಿಯಾಗಿದ್ದರೆ ನಿಮ್ಮ ಗೆಳತಿಯೂ ಇದೇ ರೀತಿಯ ಅನಿಶ್ಚಿತತೆಯನ್ನು ಅನುಭವಿಸುತ್ತಿದ್ದಿರಬಹುದು. ಆದರೆ ಬಾಹ್ಯ ಸೌಂದರ್ಯ ಕೇವಲ ಪ್ರಥಮ ಆಕರ್ಷಣೆ, ಅಂತರಂಗದ ಬಾಂಧವ್ಯವೇ ಶಾಶ್ವತ ಎಂದು ಇಬ್ಬರಿಗೆ ಯಾವಾಗ ಅರ್ಥವಾಗುತ್ತದೆಯೋ ಆಗ ನಿಮ್ಮಿಬ್ಬರ ಸಂಬಂಧವೂ ಗಟ್ಟಿಗೊಳ್ಳುತ್ತಾ ಹೋಗುತ್ತದೆ.

ಸಲಹೆ #6

ಸಲಹೆ #6

ಎಲ್ಲಾ ರೀತಿಯ ಅನುಮಾನಗಳು ಭಯ ಮತ್ತ್ತುಅನಿಶ್ಚಿತತೆಯ ಮೂಲಕವೇ ಮೂಡುತ್ತವೆ. ಅನುಮಾನ ಮೂಡಲು ಹಲವಾರು ಕಾರಣಗಳಿವೆ. ಆದರೆ ಒಂದು ವೇಳೆ ನಿಮ್ಮ ಸಂಬಂಧ ಗಟ್ಟಿಯಾಗಿದ್ದು ನೀವು ನಿಮ್ಮ ಸಂಗಾತಿಯನ್ನು ನಿಜವಾಗಿಯೂ ಪ್ರೀತಿಸುತ್ತಾ ಇದ್ದರೆ ನಿಮ್ಮ ಸಂಗಾತಿಯ ಯಾವುದೇ ಅನುಮಾನವನ್ನು ಪ್ರಕಟಿಸಲು ತಿಳಿಸಿ ಇದಕ್ಕೆ ಸೂಕ್ತವಾದ ಮತ್ತು ಸತ್ಯವಾದ ಉತ್ತರಗಳನ್ನು ನೀಡುವ

ಮೂಲಕ ನಿಮ್ಮ ಸಂಬಂಧ ಶಾಶ್ವತವಾಗುವತ್ತ ಮುಂದುವರೆಯುತ್ತದೆ.

 
English summary

How To Deal With Trust Issues

if you are suffering with trust issues or if your partner has trust issues, don't worry. It is okay to have such issues in any relationship. They are temporary. They will vanish once you talk. If you don't talk about them, then you may end up showing your frustration in some other area. That could kill the relationship.
Story first published: Thursday, February 9, 2017, 23:20 [IST]
Please Wait while comments are loading...
Subscribe Newsletter