ಇದು ಪ್ರೀತಿ ಕಳೆದುಕೊಂಡವರ ನೋವು! ಇದಕ್ಕೆ ಮದ್ದೇ ಇಲ್ಲವೇ?

By: Deepu
Subscribe to Boldsky

ಆಗಾಗ ಪತ್ರಿಕೆಗಳಲ್ಲಿ ಬರುವ ಕೊಲೆ ಪ್ರಕರಣಗಳಲ್ಲಿ ಕೊಲೆ ಮಾಡಿದವರು ವಿಫಲ ಪ್ರೇಮವೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಿ ಶರಣಾಗತರಾಗಿರುವುದನ್ನು ಕಾಣಬಹುದು. ತಾವು ಪ್ರೀತಿಸಿದವರನ್ನೇ ಕೊಲೆ ಮಾಡುವಷ್ಟು ಕಠೋರತೆ ಇವರ ಮನದಲ್ಲಿ ಮೂಡಿದ್ದಾದರೂ ಹೇಗೆ? ಇದಕ್ಕೆ ಉತ್ತರ ಭಗ್ನಹೃದಯ ಅಥವಾ heartbreak. ಇದರ ನೋವನ್ನು ಅಳೆಯಲು ಸಾಧ್ಯವಿಲ್ಲ. 

heartbreak hurt
 

ತಜ್ಞರು ಈ ನೋವನ್ನೂ ಅನಾರೋಗ್ಯವೆಂದು ಪರಿಗಣಿಸಿ ಮನಃಶಾಸ್ತ್ರಜ್ಞರ ನೆರವು ನೀಡುವಂತೆ ಸಲಹೆ ಮಾಡಿದ್ದಾರೆ. ಹೆಚ್ಚಿನವರು ಈ ನೋವನ್ನು ಬಾವನಾತ್ಮಕವಾಗಿ ಗ್ರಹಿಸುತ್ತೇವೆ. ಇದು ತಾತ್ಕಾಲಿಕವಾಗಿ ಮನಸ್ಸಿಗೆ ನೋವುಂಟುಮಾಡಿದರೂ ಇದೇ ಜೀವನವಲ್ಲ, ಇದರ ಹೊರಗಿನ ಜೀವನ ಇನ್ನೂ ಸುಂದರವಾಗಿದೆ ಎಂಬ ವಾಸ್ತವವನ್ನು ಎಷ್ಟು ಬೇಗ ಅರ್ಥ ಮಾಡಿಕೊಂಡು ತಮ್ಮನ್ನು ತಾವೇ ಸಂಭಾಳಿಸಿಕೊಂಡರೆ ಜೀವನ ಮತ್ತೆ ಸಂತೋಷಕರವಾಗುತ್ತದೆ. ಪ್ರೀತಿಯನ್ನೇ ಕಾಮದ ದೃಷ್ಟಿಯಿಂದ ನೋಡುವುದು ಸರಿಯೇ?  

heartbreak hurt
 

ಆದರೆ ಕೆಲವರು ಈ ನೋವಿನ ಭಾರವನ್ನು ತಾಳಲಾರದೇ ಯಾರೂ ಯೋಚಿಸದ ಬಗ್ಗೆ ಯೋಚಿಸಿ ದುರಂತಕ್ಕೆ ಕಾರಣರಾಗುತ್ತಾರೆ. ಇವುಗಳಲ್ಲಿ ಕೆಲವು ಕೊಲೆ, ಧಾಳಿ, ಓಡಿಹೋಗುವುದು, ಆತ್ಮಹತ್ಯೆ ಮೊದಲಾವುಗಳಲ್ಲಿ ಪರ್ಯವಸಾನವಾಗಬಹುದು. ಆದರೆ ಭಗ್ನಹೃದಯಿ ಮಾನಸಿಕವಾಗಿ ಬಳಲಿದ್ದು ತನಗೆ ಈ ರೋಗ ಇದೆ ಎಂದೇ ತಿಳಿದಿರುವುದಿಲ್ಲ.

ಈ ಪರಿಸ್ಥಿತಿಯನ್ನು ವೈದ್ಯರು ಮತ್ತು ಮನಃಶಾಸ್ತ್ರಜ್ಞರು ಸುಲಭವಾಗಿ ಗುರುತಿಸಿ ಸೂಕ್ತ ಸಲಹೆ ನೀಡಬಲ್ಲರು. ಭಗ್ನಹೃದಯದ ಕೆಲವು ಸೂಚನೆಗಳು ಹೀಗಿರುತ್ತವೆ ವಿಫಲ ಪ್ರೇಮದ ಬಳಿಕ ನಿಮ್ಮ ಮೆದುಳು ನೀಡುವ ಸೂಚನೆಗಳ ಕಾರಣ ಇಡಿಯ ದೇಹ ನೋವಿನಿಂದ ತುಂಬಿರುವಂತೆ ಅನ್ನಿಸುತ್ತದೆ. 

heartbreak hurt
 

ವಿಫಲ ಪ್ರೇಮದ ಬಳಿಕ ಮೆದುಳು ನಿಮ್ಮ ಹಿಂದಿನ ಪ್ರೇಮ, ಇದಕ್ಕೆ ಕಾರಣಗಳು, ಹೀಗೆ ಮಾಡಬೇಕಿತ್ತು, ಹೀಗೆ ಮಾಡಬಾರದಿತ್ತು ಎಂಬೆಲ್ಲಾ ತರ್ಕದಲ್ಲಿ ಮುಳುಗಿರುವ ಕಾರಣ ಅತಿ ಹೆಚ್ಚಿನ ಪ್ರಮಾಣದ ರಕ್ತವನ್ನು ಬಳಸಿಕೊಳ್ಳುತ್ತದೆ. ಪರಿಣಾಮವಾಗಿ ನಿಮ್ಮ ದೇಹದ ಇತರ ಭಾಗಗಳು ಹಲವು ರೀತಿಯ ಕೊರತೆಯನ್ನು ಅನುಭವಿಸುತ್ತದೆ. 

ಪರಿಣಾಮವಾಗಿ ಮಾನಸಿಕ ಒತ್ತಡ, ಯಾವುದರಲ್ಲಿಯೂ ಉತ್ಸಾಹವಿಲ್ಲದಿರುವುದು, ಊಟ ಬೇಡವಾಗುವುದು ನಿದ್ದೆ ಬರದೇ ಇರುವುದು, ಕೊಂಚಕಾಲದವರೆಗೆ ತನ್ನ ಕರ್ತವ್ಯಗಳನ್ನೂ ಮರೆಯುವುದು ಮೊದಲಾದವು ಕಂಡುಬರುತ್ತದೆ. ವಿಫಲ ಪ್ರೇಮದ ಬಳಿಕ ಕೆಲವು ಕಾಲದವರೆಗೆ ಖಿನ್ನತೆ ಆವರಿಸುತ್ತದೆ. ಹತಾಶೆ ಮತ್ತು ನಿರಾಶಾವಾದ ವ್ಯಕ್ತಿಯ ನಡವಳಿಕೆಯಲ್ಲಿ ಗೋಚರವಾಗುತ್ತದೆ. 

heartbreak hurt
 

ಕೆಲವರಿಗೆ ಹಸಿವು ಹಾರಿಹೋಗುತ್ತದೆ. ಊಟದಲ್ಲಿ ಆಸಕ್ತಿ ಇಲ್ಲದ ಕಾರಣ ತೂಕ ಶೀಘ್ರವಾಗಿ ಇಳಿಯುತ್ತದೆ, ಕಣ್ಣುಗುಡ್ಡೆಗಳು ಆಳಕ್ಕಿಳಿಯುತ್ತವೆ. ಆದರೆ ಕೆಲವು ವ್ಯಕ್ತಿಗಳು ಸೇಡಿನ ಭಾವನೆಯಿಂದ ಹೆಚ್ಚು ತಿನ್ನುತ್ತಾ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ.

ಕೆಲವು ಸಂಶೋಧನೆಗಳ ಪ್ರಕಾರ ವಿಫಲ ಪ್ರೇಮದ ಬಳಿಕ ಹೃದಯದ ಬಡಿತವೂ ನಿಧಾನಗೊಳ್ಳುತ್ತದೆ. ಆದ್ದರಿಂದ ಈ ಸಮಯವನ್ನು ಸಾಧ್ಯವಾದಷ್ಟು ಸ್ನೇಹಿತರೊಂದಿಗೆ, ಆತ್ಮೀಯರೊಂದಿಗೆ ಕಳೆಯುವ ಮೂಲಕ ಶೀಘ್ರವಾಗಿ ಸಾಮಾನ್ಯಸ್ಥಿತಿಗೆ ಮರಳಬಹುದು. ಕಣ್ಣಲ್ಲಿ ಕಣ್ಣೀರು ತರಿಸುವ ಪ್ರೇಮಿಗಳ 'ಪ್ರೇಮ ಕಥೆ' ಇದು.....

ವಿಫಲ ಪ್ರೇಮದ ಬಳಿಕ ನಿದ್ದೆ ಆವರಿಸುವುದು ಕಷ್ಟಕರವಾಗುತ್ತದೆ. ಸದಾ ಪ್ರೇಮದ ಕುರಿತಾದ ಚಿಂತನೆಗಳು, ಜೊತೆಯಲ್ಲಿ ಕಳೆದ ಕ್ಷಣಗಳೇ ಮನಸ್ಸನ್ನು ಆವರಿಸಿ ನಿದ್ದೆ ಇಲ್ಲದೇ ಹೋಗುತ್ತದೆ ಹಾಗೂ ನಿದ್ದೆ ಬರಬಾರದ ಸಮಯದಲ್ಲಿ ಆವರಿಸುತ್ತದೆ. ವಿಫಲ ಪ್ರೇಮದ ಬಳಿಕ ಕೆಲವರು ಅಸೌಖ್ಯಕ್ಕೂ ತುತ್ತಾಗುತ್ತಾರೆ. ಕೆಲವರು ತಮ್ಮ ಆತ್ಮಗೌರವವನ್ನೇ ಕಳೆದುಕೊಂಡರೆ ಕೆಲವರು ತಮ್ಮ ವೃತ್ತಿ, ಪ್ರವೃತ್ತಿ, ಓದು ಮೊದಲಾದವುಗಳಲ್ಲಿ ಉತ್ಸಾಹವನ್ನೇ ಕಳೆದುಕೊಳ್ಳುತ್ತಾರೆ.

heartbreak hurt
 

ವಿಫಲಪ್ರೇಮದ ಬಳಿಕ ಹಲವಾರು ಬಗೆಯ ತೊಂದರೆಗಳು ಎದುರಾಗಬಹುದು. ಆದ್ದರಿಂದ ನಿಮ್ಮ ಹೃದಯವನ್ನು ಯಾರಿಗಾದರೂ ಕೊಡುವ ಮುನ್ನ ಈ ಹೃದಯಕ್ಕೆ ಆತ/ಆಕೆ ಅರ್ಹರೇ ಎಂದು ಮೊದಲು ತಿಳಿದುಕೊಳ್ಳುವುದು ಅವಶ್ಯವಾಗಿದೆ. ನಿಮ್ಮ ಹಿರಿಯರು ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲರು.

English summary

Why does heartbreak hurt so bad? Can you die of a broken heart?

Those who are in love can experience joys but when the love fails and results in a heartbreak, the pain is very tough to endure. In fact, that is the reason why experts opine that even heartbreaks should be considered as health problems though most of us perceive it only as an emotional issue.
Please Wait while comments are loading...
Subscribe Newsletter