Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಪ್ರೀತಿಯನ್ನೇ ಕಾಮದ ದೃಷ್ಟಿಯಿಂದ ನೋಡುವುದು ಸರಿಯೇ?
ಇಂದು ಕಾಮವನ್ನೇ ಪ್ರೇಮವನ್ನಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿ ಹೆಚ್ಚಿನವರು ಬಾಹ್ಯ ಸೌಂದರ್ಯವನ್ನೇ ಅರಸುತ್ತಿದ್ದಾರೆ, ಬಯಸುತ್ತಿದ್ದಾರೆ. ಸಂಗಾತಿಯನ್ನು ಕೇವಲ ತಮ್ಮ ಬಯಕೆಗಳನ್ನು ಈಡೇರಿಸುವ ಸಲುವಾಗಿ ಬಳಸಕಲಾಗುತ್ತಿದೆ....
ನಾಗರೀಕತೆ ತನ್ನೊಂದಿಗೆ ಅನಾಗರೀಕತೆಯನ್ನೂ ಕೊಂಡೊಯ್ಯುತ್ತದಂತೆ. ಸಂಬಂಧಗಳ ವಿಷಯದಲ್ಲಿ ಇದನ್ನು ಒಪ್ಪಲೇಬೇಕು. ಏಕೆಂದರೆ ಸಂಬಂಧಗಳು ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕುಸಿಯತೊಡಗಿವೆ. ಬದ್ಧತೆ ಮಾಯವಾಗುತ್ತಿದೆ, ವಿಚ್ಛೇದನಗಳ ಪ್ರಕರಣಗಳ ಸಂಖ್ಯೆ ಚಿಂತಾಜನಕವಾಗಿದೆ. ಸಂಬಂಧ ಚೆನ್ನಾಗಿದೆ ಎನ್ನಿಸಿದ ಕಡೆಗಳಲ್ಲೂ ಅನುಬಂಧ ಕಡಿಮೆಯಾಗಿರುವುದನ್ನು ನಮ್ಮ ಕೆಲಸಬಾಹುಳ್ಯದಲ್ಲಿ ನಾವು ಗಮನಿಸದೇ ಹೋಗಿದ್ದೇವೆ. ಪ್ರೇಮ vs ಕಾಮ: ಎಡವಟ್ಟು ಮಾಡ್ಕೊಬೇಡಿ!
ಇಂದು ಕಾಮವನ್ನೇ ಪ್ರೇಮವನ್ನಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿ ಹೆಚ್ಚಿನವರು ಬಾಹ್ಯ ಸೌಂದರ್ಯವನ್ನೇ ಅರಸುತ್ತಿದ್ದಾರೆ, ಬಯಸುತ್ತಿದ್ದಾರೆ. ಸಂಗಾತಿಯನ್ನು ಕೇವಲ ತಮ್ಮ ಬಯಕೆಗಳನ್ನು ಈಡೇರಿಸುವ ಅಥವಾ ಸಾಮಾಜಿಕ ಸ್ಥಾನಮಾನದಲ್ಲಿ ಗಣ್ಯತೆಯನ್ನು ಪಡೆಯಲೆಂದೇ ಆರಿಸಲಾಗುತ್ತಿದೆ. ಈ ಗೊಂದಲಗಳ ನಡುವೆ ಜೀವನ ಬರಡಾಗುತ್ತಿದೆ. ಪ್ರೀತಿ-ಕಾಮ, ಒಂದೇ ನಾಣ್ಯದ ಎರಡು ಮುಖವಿದ್ದಂತೆ...
ಇಂದಿನ ದಿನಗಳಲ್ಲಿ ಸಂಬಂಧಗಳು ತನ್ನ ನೈಜಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದಿಸಬೇಕಾಗಿದೆ. ಸಂಬಂಧಗಳು ಪರಸ್ಪರಿಗೆ ಅನುರೂಪವಾಗಿ ಇರದೇ ಪರಸ್ಪರರ ಸ್ವ-ತೃಪ್ತಿಗಾಗಿಯೇ ಎಂದಾಗಿಬಿಟ್ಟಿದೆ. ಇದಕ್ಕೆಲ್ಲಾ ಕಾರಣವೇನು ಎಂಬ ಪ್ರಶ್ನೆಗೆ ಮಾನಸಿಕ ತಜ್ಞರು ಕಂಡುಕೊಂಡಿರುವ ಉತ್ತರಗಳು ಈ ಕೆಳಗಿನಂತಿವೆ...

ಕಾರಣ #1
ಮದುವೆಯೇ ಇಲ್ಲದೇ ಸಾಂಸಾರಿಕ ಸುಖವನ್ನು ಅನುಭವಿಸಲು ಇಂದಿನ ಯುವಜನಾಂಗ ಕೆಲವು ಮಾರ್ಗಗಳನ್ನು ಕಂಡುಕೊಂಡಿದೆ. ಇದಕ್ಕೆ 'ಒಂದೇ ರಾತ್ರಿಯ ಜೊತೆ', 'ತೆರೆದ ಸಂಬಂಧ', 'ಲಾಭಯುತ ಸ್ನೇಹಿತ' ಮೊದಲಾದ ಹೆಸರುಗಳನ್ನಿಟ್ಟಿದ್ದಾರೆ. ಹೀಗೆ ಅಗ್ಗವಾಗಿ ಅಥವಾ ಯಾವುದೇ ಬಂಧವಿಲ್ಲದೇ ಶಾರೀರಿಕ ಮತ್ತು ಕೊಂಚ ಮಾನಸಿಕ ಅಗತ್ಯವನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿರುವುದೇ ಶಾಶ್ವತ ಬಂಧಗಳು ಶಿಥಿಲಗೊಳ್ಳಲು ಕಾರಣವಾಗಿದೆ.

ಕಾರಣ #2
ಎಲ್ಲರೂ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಪ್ರತಿಯೊಬ್ಬರೂ ಇಂದಿನ ದಿನಗಳಲ್ಲಿ ವ್ಯಸ್ತರಿರುತ್ತಾರೆ. ಎಲ್ಲರೂ ಯಶಸ್ಸಿನ ಹಿಂದೆ ಧಾವಿಸುತ್ತಾರೆ. ಈ ಧಾವಂತದಲ್ಲಿ ಯಾರಿಗೂ ಸಮಯವೇ ಇಲ್ಲ. ಆದ್ದರಿಂದ ಆರೋಗ್ಯಕರ ಸಂಬಂಧ ಉಳಿಸಿಕೊಳ್ಳುವುದು ಎರಡನೆಯ ಪ್ರಾಮುಖ್ಯತೆಯ ವಿಷಯವಾಗಿಬಿಡುತ್ತದೆ. ಧನ ಮತ್ತು ಯಶಸ್ಸೇ ಪ್ರಥಮ ಆದ್ಯತೆ ಪಡೆಯುತ್ತದೆ.

ಕಾರಣ #3
ಕೆಲವೊಮ್ಮೆ, ನಮಗೆಲ್ಲಾ ಸುಮ್ಮನೇ ತಿರುಗಾಡಲು ಒಬ್ಬರು ಜೊತೆಗೆ ಬೇಕಾಗುತ್ತದೆ. ಸಿನೆಮಾ ನೋಡಲು, ಬಾರ್ ಗೆ ಹೋಗಲು, ಕಾಫಿ ಶಾಪ್ ಅಥವಾ ಶಾಪಿಂಗ್ ಗೆ ಹೋಗಲು ಒಬ್ಬರ ಜೊತೆಯ ಅಗತ್ಯವಿದೆ. ಅಷ್ಟೇ, ಈ ಅಗತ್ಯವನ್ನು ಪೂರೈಸಿಕೊಳ್ಳಲು ನಮ್ಮ ಜೊತೆ ಯಾರಾಗುತ್ತಾರೆ, ಯಾರು ಸರಿಯಾದ ಸಲಹೆ ನೀಡುತ್ತಾರೆ ಎಂಬ ವ್ಯಕ್ತಿಯನ್ನು ಹುಡುಕುತ್ತಾ ಹೋಗುವುದರಿಂದ ಸಂಬಂಧಗಳು ಶಿಥಿಲಗೊಳ್ಳುತ್ತವೆ.

ಕಾರಣ #4
ನಮ್ಮ ಸುತ್ತಮುತ್ತಲ ವ್ಯಕ್ತಿಗಳಲ್ಲಿ ಕೆಲವರಾದರೂ ಅತ್ಯಾಕರ್ಷಕ ಲಾವಣ್ಯ ಹೊಂದಿರುತ್ತಾರೆ. ನಿತ್ಯವೂ ಹಲವಾರು ವ್ಯಕ್ತಿಗಳನ್ನು ಭೇಟಿಯಾಗುತ್ತೇವೆ. ಇವರಲ್ಲಿ ಕೆಲವರ ಬಾಹ್ಯ ಅಥವಾ ಆಂತರಿಕ ಸೌಂದರ್ಯ ನಮಗೆ ಬಹಳವಾಗಿಯೇ ಹಿಡಿಸುತ್ತದೆ. ಹೆಚ್ಚು ಹೆಚ್ಚು ವ್ಯಕ್ತಿಗಳನ್ನು ಭೇಟಿಯಾಗುವ ಮೂಲಕ ಇಷ್ಟಪಡುವ ವ್ಯಕ್ತಿಗಳ ಸಂಖ್ಯೆಯೂ ಹೆಚ್ಚುತ್ತದೆ. ಯಾವಾಗ ಈ ಇಷ್ಟಪಡುವಿಕೆ ಆರಾಧನೆಯ ಹಂತ ತಲುಪುತ್ತದೆಯೋ ಆಗ ಸಂಗತಿಯನ್ನು ಕಡೆಗಣಿಸುವ ಹಂತ ಪ್ರಾರಂಭವಾಗುತ್ತದೆ.

ಕಾರಣ #5
ಇಂದು ನಮ್ಮ ಮನಸ್ಸುಗಳನ್ನು ಆಧುನಿಕ ಗ್ಯಾಜೆಟ್ಟುಗಳು ಆಕ್ರಮಿಸಿಬಿಟ್ಟಿವೆ. ನಾವು ದೈಹಿಕವಾಗಿ ನಮ್ಮ ಸಂಗಾತಿಗಳ ಬಳಿ ಇದ್ದರೂ ಮಾನಸಿಕವಾಗಿ ನಾವು ನಮ್ಮ ಮೊಬೈಲುಗಳಿಗೆ ಹೆಚ್ಚು ಹತ್ತಿರಾಗುತ್ತಿದ್ದೇವೆ. ನಮ್ಮ ಕಣ್ಣುಗಳು ಮೊಬೈಲು ಪರದೆಯಮೇಲೂ, ಮನಸ್ಸು ಇದರಲ್ಲಿರುವ ವಿಷಯಗಳ ಮೇಲೂ ಬೆರಳುಗಳು ಮೊಬೈಲು ಕೀಪ್ಯಾಡ್ ಮೇಲೂ ಹೆಚ್ಚು ಕೀಲಿಸಿಬಿಟ್ಟಿವೆ. ಈ ಕಡೆಗಣನೆ ಸಂಗಾತಿಯನ್ನು ದೂರಾಗಿಸುತ್ತಿದೆ.

ಕಾರಣ #6
ನಾವು ಇಂದಿನ ದಿನಗಳಲ್ಲಿ ಭಾವೋದ್ವೇಗವನ್ನು ಪ್ರೀತಿಗೆ ಹೋಲಿಸಿಕೊಂಡು ಗೊಂದಲದಲ್ಲಿದ್ದೇವೆ. ಸಂಬಂಧಗಳು ರೋಚಕತೆ ನೀಡಬೇಕು, ಮನರಂಜನೆ ನೀಡಬೇಕು, ಎಂದೆಲ್ಲಾ ಬಯಸುತ್ತಿದ್ದೇವೆ. ಸಾಮಾನ್ಯ ವಿಷಯಗಳು ಇಂದು ನಮಗೆ ಬೇಸರ ತರಿಸುತ್ತಿವೆ.



Click it and Unblock the Notifications