ಪ್ರವಾಸಕ್ಕೆಂದು ಹೋಗುತ್ತಾರೆ, ಸಣ್ಣ-ಪುಟ್ಟ ವಿಷಯಕ್ಕೂ ಜಗಳ ಮಾಡಿಕೊಳ್ಳುತ್ತಾರೆ!

Posted By: Staff
Subscribe to Boldsky

ಒತ್ತಡದ ಜೀವನದಿಂದ ಸ್ವಲ್ಪ ಮುಕ್ತಿ ಪಡೆಯಬೇಕೆಂದು ಪ್ರವಾಸಗಳಿಗೆ ಹೋಗುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ದಂಪತಿಗೆ ಮಕ್ಕಳಿದ್ದರೆ ಮಕ್ಕಳ ರಜಾ ಸಮಯದಲ್ಲಿ ದೇಶದಲ್ಲಿ ಅಥವಾ ವಿದೇಶಕ್ಕೆ ಪ್ರವಾಸ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ದಂಪತಿ ಆದಷ್ಟು ಸಂತೋಷದಿಂದ ಇರುತ್ತಾರೆಂದು ನಾವು ಭಾವಿಸುತ್ತೇವೆ.

ಆದರೆ ಸಂಬಂಧಗಳ ತಜ್ಞರು ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಹೆಚ್ಚಾಗಿ ಪ್ರವಾಸಗಳಲ್ಲಿಯೇ ದಂಪತಿ ಮಧ್ಯೆ ಜಗಳವಾಗುತ್ತದೆಯಂತೆ. ಯಾವ ಕಾರಣಕ್ಕಾಗಿ ದಂಪತಿ ಜಗಳವಾಡುತ್ತಾರೆಂದು ನಮಗೆ ತಿಳಿದಿಲ್ಲ. ಆದರೆ ಸಮೀಕ್ಷೆಯ ಪ್ರಕಾರ ಕೆಲವೊಂದು ಕಾರಣಗಳನ್ನು ನೀಡಲಾಗಿದೆ. ಅದನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮುಂದಿನ ಪ್ರವಾಸದ ವೇಳೆ ಇಂತಹ ಜಗಳಗಳನ್ನು ತಪ್ಪಿಸಿ. ಖುಷಿಯಾಗಿರಿ....

1#

1#

ಮನೆಯಲ್ಲಿ ಇರುವಾಗ ಪರಸ್ಪರ ಮಾತನಾಡಲು ಹೆಚ್ಚು ಸಮಯವೇ ಸಿಗದಿರುವ ದಂಪತಿ ರಜಾ ಪ್ರವಾಸದ ವೇಳೆ ಸಿಗುವ ಸಮಯದಲ್ಲಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಮನುಷ್ಯ ಆರಾಮವಾಗಿರುವ ವೇಳೆ ಆತನ ತಲೆಯಲ್ಲಿ ಇಲ್ಲದ ಆಲೋಚನೆಗಳು ಮೂಡುತ್ತದೆ.

2#

2#

ಪ್ರವಾಸಕ್ಕೆ ಹೋಗುವಾಗ ಏನೆಲ್ಲಾ ತೆಗೆದುಕೊಳ್ಳಬೇಕು ಮತ್ತು ಏನನ್ನು ತೆಗೆದುಕೊಳ್ಳಬಾರದು ಎನ್ನುವ ಬಗ್ಗೆ ದಂಪತಿಯಲ್ಲಿ ಜಗಳ ಆಗುತ್ತಾ ಇರುತ್ತದೆ. ಇದು ತುಂಬಾ ತಮಾಷೆಯೆಂದು ಕಾಣಿಸಬಹುದಾದರೂ ಇದು ನಿಜ. ಮೂರು ದಿನಗಳ ಪ್ರವಾಸಕ್ಕೆ 37 ಜತೆ ಬಟ್ಟೆ ಹಿಡಿದುಕೊಂಡಿರುವುದು ಯಾಕೆ? ಕಾಮಿಕ್ ಪುಸ್ತಕ ಮತ್ತು ವೀಡಿಯೋ ಗೇಮ್ ಗಳನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗುವುದು ತುಂಬಾ ಅಪಾಯಕಾರಿ.

3#

3#

ಬೀಚ್ ಸುತ್ತಾಡಲು ಹೋದಾಗ ನಿಮ್ಮ ಪತಿ ಬೇರೆ ಹುಡುಗಿಯನ್ನು ನೋಡಿದಾಗ ಖಂಡಿತವಾಗಿಯೂ ನಿಮ್ಮ ಮನಸ್ಸು ಕೆಡುವುದು. ಅದೇ ರೀತಿ ನಿಮ್ಮ ಸುತ್ತ ಯಾರಾದರೂ ಪುರುಷ ಸುತ್ತಾಡುತ್ತಾ ಇದ್ದರೆ ಆಗ ನಿಮ್ಮ ಪತಿಯ ಮನಸ್ಸು ಕೆಡುವುದರಲ್ಲಿ ಸಂಶಯವೇ ಇಲ್ಲ.

4#

4#

ಪ್ರವಾಸ ಹೋಗುವಾಗ ಹೆಚ್ಚು ಖರ್ಚಾಗುತ್ತದೆ. ಕೇವಲ ಒಬ್ಬ ಸಂಗಾತಿ ಮಾತ್ರ ಈ ಖರ್ಚನ್ನು ಭರಿಸುತ್ತಾ ಇದ್ದರೆ ಆಗ ಕೋಪ ಹೆಚ್ಚಾಗುವುದು. ಶಾಪಿಂಗ್ ವೇಳೆ ಜಗಳವಾಗುವುದು ಸಾಮಾನ್ಯ. ಪತಿ ತನ್ನ ಸ್ನೇಹಿತರಿಗೆ ಉಡುಗೊರೆಗಳನ್ನು ಖರೀದಿಸಿದರೆ ಅಥವಾ ಪತ್ನಿ ಅತಿಯಾಗಿ ಶಾಪಿಂಗ್ ಮಾಡಿದರೆ ಇಬ್ಬರ ಮಧ್ಯೆ ವಾಗ್ವಾದ ನಡೆಯುವುದು ಖಚಿತ.

5#

5#

ಇಬ್ಬರು ಹೆಚ್ಚಿನ ಸಮಯ ಜತೆಯಾಗಿ ಕಳೆದಾಗ ಕಿರಿಕಿರಿ ಅಥವಾ ಬೋರ್ ಆಗುವುದು. ಇದರಿಂದಾಗಿ ಆಗಾಗ ಏಕಾಂಗಿಯಾಗಿ ವಾಸಿಸುವುದು ಉತ್ತಮ. ಸಂಗಾತಿಗಳಿಬ್ಬರು ತಮ್ಮ ಜಾಗವನ್ನು ಆಕ್ರಮಿಸುತ್ತಿದ್ದಾರೆಂಬ ಭಾವನೆ ಬಂದರೆ ವಾದ ನಡೆಯುವುದು ಖಚಿತ.

6#

6#

ವಿಮಾನ ಅಥವಾ ರೈಲುಗಳು ರದ್ದುಗೊಂಡಾಗ ಒತ್ತಡ ಉಂಟಾಗಿ ವಾಗ್ವಾದ ನಡೆಯಬಹುದು. ನೀವು ತಯಾರಾಗಲು ತುಂಬಾ ಸಮಯ ವ್ಯಯಿಸಿ, ವಿಮಾನ ಸಿಗದೇ ಇದ್ದಾಗ ಪತಿ ತನ್ನ ತಾಳ್ಮೆ ಕಳೆದುಕೊಳ್ಳುವುದು ಖಚಿತ. ಕಳೆದ ರಾತ್ರಿ ನಶೆ ಇಳಿಯದೆ ತುಂಬಾ ತಡವಾಗಿ ಎದ್ದರೆ ಪತ್ನಿ ತಾಳ್ಮೆ ಕಳೆದುಕೊಳ್ಳುತ್ತಾಳೆ.

7#

7#

ನೀವು ಸಂಪೂರ್ಣವಾಗಿ ಧಣಿದಿದ್ದರೆ ನಿಮ್ಮ ಸಂಗಾತಿ ತಾಳ್ಮೆ ಪರೀಕ್ಷಿಸುತ್ತಾ ಇದ್ದಾಗ ಅಥವಾ ನೀವು ಯಾವುದೇ ದೂರು ನೀಡುತ್ತಾ ಬೈಯುತ್ತಾ ಇದ್ದಾಗ ವಾಗ್ವಾದ ನಡೆಯುತ್ತದೆ. ಪ್ರವಾಸದಲ್ಲಿ ಇಂತಹ ಸಂದರ್ಭದಲ್ಲಿ ಜಗಳ ನಡೆಯುತ್ತದೆ.

8#

8#

ಹೊಂದಾಣಿಕೆ ಇರುವಂತಹ ಸಂಗಾತಿಗಳು ರಜಾ ಪ್ರವಾಸವನ್ನು ಆನಂದಿಸುತ್ತಾರೆ. ಆದರೆ ಅವರಿಬ್ಬರು ಸಂಪೂರ್ಣ ದಿನವನ್ನು ಯಾವುದೇ ವಾಗ್ವಾದವಿಲ್ಲದೆ ಕಳೆಯಲು ಸಾಧ್ಯವಿಲ್ಲ. ಈ ವೇಳೆ ಪರಸ್ಪರರ ಮಧ್ಯೆ ವಿವಾದ ಆರಂಭವಾಗುತ್ತದೆ. ಹೊಂದಾಣಿಕೆ ಇಲ್ಲದೆ ಇರುವಂತಹ ವ್ಯಕ್ತಿಯೊಂದಿಗೆ ನೀವು ಹಲವು ದಿನಗಳನ್ನು ಕಳೆಯುತ್ತಾ ಇದ್ದರೆ ಆಗ ಖಂಡಿತವಾಗಿಯೂ ವಾಗ್ವಾದ ನಡೆದೇ ನಡೆಯುತ್ತದೆ.

English summary

Why Couples Argue On A Holiday?

This fact may surprise you. Relationship experts did a survey recently and found out that most of the arguments happen between couples during holiday trips! Well, holidays are meant to have fun. But some couples ruin their holidays by picking up arguments. But what could be the reason? Well, here are some probable reasons why some holidays go wrong between couples.
Story first published: Saturday, June 17, 2017, 23:31 [IST]
Subscribe Newsletter