For Quick Alerts
ALLOW NOTIFICATIONS  
For Daily Alerts

ಪ್ರೀತಿ, ಪ್ರೇಮ, ಕಾಮದ ವಿಷಯದಲ್ಲಿ ದಾರಿ ತಪ್ಪುವ ಪುರುಷರು!

|

ಮಹಿಳೆಯರ ಆಕರ್ಷಣೆಯ ವಿಷಯ ಬಂದಾಗ ಪುರುಷರು ಮಹಿಳೆಯರ ಮೈಮಾಟಕ್ಕೆ ಪ್ರಥಮ ಆದ್ಯತೆ ನೀಡುವುದನ್ನು ಎಲ್ಲೆಡೆ ಕಾಣಬಹುದು. ಎಲ್ಲಿಯವರೆಗೆ ಇದು ಕೇವಲ ದೂರದ ಆಕರ್ಷಣೆಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ತೊಂದರೆ ಇಲ್ಲ. ಆದರೆ ಯಾವಾಗ ಪುರುಷರು ತಮ್ಮ ಜೀವನಸಂಗಾತಿಯಲ್ಲಿ ಪ್ರೇಮಕ್ಕಿಂತಲೂ ಕಾಮಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಕಂಡುಬಂದರೆ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂಭವ ಹೆಚ್ಚಿರುತ್ತದೆ.

ಕಾಮವಾಂಛೆ ಹೆಚ್ಚಿದ್ದಾಗ ವಿವೇಕವನ್ನೂ ಕಳೆದುಕೊಂಡಿರುವುದನ್ನು ಹಲವು ಪ್ರಸಂಗಗಳಲ್ಲಿ ಕಾಣಬಹುದು. ಇದರ ಪರಿಣಾಮಗಳು ಅನೈತಿಕ ಸಂಬಂಧ ಮೊದಲಾದ ಅತಿರೇಕಕ್ಕೂ ಕಾರಣವಾಗಬಹುದು. ಇದಕ್ಕೆ ಏನು ಕಾರಣ? ತಾತ್ಕಾಲಿಕವಾದ ಕಾಮವಾಂಛೆಗೆ ಒಳಗಾದ ಪುರುಷರ ಮನಸ್ಸು ವಿಕೃತಿಯೆಡೆಗೆ ಏಕೆ ಸೆಳೆಯುತ್ತದೆ? ಇದಕ್ಕೆ ಕಾರಣಗಳನ್ನು ನೀಡಲು ವಿಜ್ಞಾನ ಇಂದು ಸಮರ್ಥವಾಗಿದೆ.

ತಾನು ಪ್ರೀತಿಸುತ್ತಿರುವ ಮಹಿಳೆಯೊಂದಿಗೆ ಹೊಂದುವ ದೈಹಿಕ ಸಂಪರ್ಕ ಪವಿತ್ರ ಪ್ರೀತಿಯಾಗಿದೆ. ಆದರೆ ಯಾವುದೇ ಭಾವನೆಗಳಿಲ್ಲದೇ ಕೇವಲ ದೈಹಿಕ ಆಕರ್ಷಣೆಯನ್ನೇ ಮೆಚ್ಚಿ ಹೊಂದುವ ಸಂಪರ್ಕ ಕೇವಲ ಕಾಮವಾಂಛೆಯನ್ನು ತೀರಿಕೊಳ್ಳುವ ವಿಧಾನವಾಗಿದೆ. ಎಷ್ಟೋ ದಂಪತಿಗಳಲ್ಲಿ ಪುರುಷರು ಕೇವಲ ಮೈಮಾಟವನ್ನು ಮೆಚ್ಚಿ ವಿವಾಹವಾದ ಬಳಿಕ ತಮ್ಮ ದುಡುಕಿನ ನಿರ್ಧಾರಕ್ಕಾಗಿ ಪಶ್ಚಾತ್ತಾಪ ಪಡುವುದನ್ನು ಕಾಣಬಹುದು.

ಹೆಚ್ಚಿನ ಸಂದರ್ಭಗಳಲ್ಲಿ ಕಾಮವಾಂಛೆಯಲ್ಲಿ ಪುರುಷರು ತಮ್ಮ ವಿವೇಕ, ಬುದ್ಧಿವಂತಿಕೆ, ಸಮಯ, ಹಣ ಎಲ್ಲವನ್ನೂ ತಪ್ಪುದಾರಿಗೆ ಸುರಿಯುವುದನ್ನು ಕಾಣಬಹುದು. ಇದಕ್ಕೆ ವೈಜ್ಞಾನಿಕವಾದ ಕಾರಣ ಕಂಡುಕೊಂಡರೆ ಇದಕ್ಕೆ ಪರಿಹಾರವನ್ನೂ ಸುಲಭವಾಗಿ ಕಂಡುಕೊಳ್ಳಬಹುದು. ಬನ್ನಿ ಈ ವಿಷಯದಲ್ಲಿ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಕಾಮವಾಂಛೆ ಹೆಚ್ಚಾದಾಗ

ಕಾಮವಾಂಛೆ ಹೆಚ್ಚಾದಾಗ

ಕಾಮವಾಂಛೆ ಹೆಚ್ಚಾದಾಗ ಪುರುಷರ ಜನನಾಂಗಗಳಲ್ಲಿ ಹೆಚ್ಚಿನ ರಕ್ತಸಂಚಾರವಾಗುತ್ತದೆ. ಇದೇ ವೇಳೆ ಮೆದುಳಿಗೂ ಹೆಚ್ಚಿನ ರಕ್ತ ಸರಬರಾಜು ಆಗುತ್ತದೆ. ಎರಡೂ ಶಕ್ತಿಗಳು ಒಂದರ ವಿರುದ್ಧ ಹೋರಾಡುವ ವೇಳೆ ಜನನಾಂಗಗಳ ಶಕ್ತಿಯ ಕೈ ಮೇಲಾದರೆ ಮೆದುಳಿನ ಶಕ್ತಿ ಅಂದರೆ ವಿವೇಕ ದೂರವಾಗುತ್ತದೆ. ಈಗ ಸರಿ ಯಾವುದು ತಪ್ಪು ಯಾವುದು, ಯಾವುದು ನೈತಿಕ, ಯಾವುದು ಅನೈತಿಕ ಎಂದು ನಿರ್ಧರಿಸಲು ಮೆದುಳು ವಿಫಲವಾಗಿ ಕಾಮವಾಂಛೆಗೆ ಪ್ರಥಮ ಆದ್ಯತೆ ದೊರಕುತ್ತದೆ. ವೈಜ್ಞಾನಿಕವಾಗಿ ಇದೇ ತಪ್ಪು ನಿರ್ಧಾರಗಳಿಗೆ ಕಾರಣವಾಗಿದೆ.

ಕಾಮವಾಂಛೆಯ ಸಮಯದಲ್ಲಿ

ಕಾಮವಾಂಛೆಯ ಸಮಯದಲ್ಲಿ

ಪುರುಷನಲ್ಲಿ ಎಷ್ಟೇ ಬುದ್ಧಿವಂತಿಕೆ ಇರಲಿ, ಕಾಮವಾಂಛೆಯ ಸಮಯದಲ್ಲಿ ಇದರ ಬಳಕೆಯಾಗದಿರುವುದು ವೈಜ್ಞಾನಿಕ ಸತ್ಯವಾಗಿದೆ. ಇದನ್ನು ಕಂಡುಕೊಳ್ಳಬೇಕೆಂದರೆ ಒಂದು ಪ್ರಯೋಗ ಮಾಡಿ ನೋಡಬಹುದು. ದಂಪತಿಗಳು ತಮ್ಮ ಮಲಗುವ ಕೋಣೆಯಲ್ಲಿ ಏಕಾಂತದಲ್ಲಿದ್ದಾಗ ಇಬ್ಬರೂ ವಿವಸ್ತ್ರರಾಗಿದ್ದ ವೇಳೆ ಪುರುಷನಿಗೆ ಪತ್ರಿಕೆಯ ಮೇಲಿರುವ ಸುಡೋಕು ಪದಬಂಧವೊಂದನ್ನು ಬಿಡಿಸಲು ತಿಳಿಸಿ. ಉಳಿದ ಸಮಯದಲ್ಲಿ ಕೆಲವೇ ನಿಮಿಷದಲ್ಲಿ ಬಿಡಿಸುತ್ತಿದ್ದ ನಿಮ್ಮ ಪತಿ ಈಗ ಕೆಲವು ಅಂಕೆಗಳನ್ನು ಕಂಡುಹಿಡಿಯಲೂ ವಿಫಲರಾಗುತ್ತಾರೆ.

ಐದು ನಿಮಿಷ ಮಾತನಾಡಲು ಬಿಟ್ಟಾಗ !

ಐದು ನಿಮಿಷ ಮಾತನಾಡಲು ಬಿಟ್ಟಾಗ !

ಇನ್ನೊಂದು ಮಾಹಿತಿಯ ಪ್ರಕಾರ ಓರ್ವ ಪುರುಷನನ್ನು ಅತಿ ಸೌಂದರ್ಯ ಹೊಂದಿರುವ ಮಹಿಳೆಯೊಂದಿಗೆ ಐದು ನಿಮಿಷ ಮಾತನಾಡಲು ಬಿಟ್ಟಾಗ ಮತ್ತು ಸಾಮಾನ್ಯ ರೂಪಿನ ಮಹಿಳೆಯೊಂದಿಗೆ ಐದು ನಿಮಿಷ ಮಾತನಾಡಲು ಬಿಟ್ಟಾಗ ಅವರ ಶರೀರದಲ್ಲಿ ಟೆಸ್ಟ್ರೋಸ್ಟೆರೋನ್ ಹಾರ್ಮೋನುಗಳ ಪ್ರಮಾಣದಲ್ಲಿ ಏಕಪ್ರಕಾರದ ಏರಿಕೆ ಕಂಡುಬಂದಿದೆ. ಇದರ ವೈಜ್ಞಾನಿಕ ವಿಶ್ಲೇಷಣೆಯ ಅಭಿಪ್ರಾಯವೇನೆಂದರೆ ಪುರುಷರ ಎದುರು ಮಹಿಳೆಯೊಬ್ಬಳಿದ್ದರೆ ಸಾಕು, ಆಕೆ ಸುಂದರಳಾಗಿದ್ದರೂ, ಇಲ್ಲದಿದ್ದರೂ ಟೆಸ್ಟೋಸ್ಟೆರೋನ್ ಏರಿಕೆಯ ಪ್ರಮಾಣ ಮಾತ್ರ ಏಕಪ್ರಕಾರವಾಗಿರುತ್ತದೆ.

ಮಾಹಿತಿ #4

ಮಾಹಿತಿ #4

ಇನ್ನೊಂದು ಪ್ರಯೋಗದಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ಒಂಟಿಯಾಗಿ ಕಾಯುತ್ತಿದ್ದ ವೇಳೆ ಆತನ ಟೆಸ್ಟೋಸ್ಟೆರೋನ್ ಪ್ರಮಾಣ ಸಾಮಾನ್ಯ ಮಟ್ಟದಲ್ಲಿರುತ್ತದೆ. ಅದೇ ಸಂದರ್ಭದಲ್ಲಿ ಅಪರಿಚಿತ ಮಹಿಳೆಯೊಬ್ಬರು ಪಕ್ಕದಲ್ಲಿ ಕುಳಿತು ಅದೇ ವಿಮಾನಕ್ಕೆ ಕಾಯುತ್ತಿದ್ದ ವೇಳೆ ಆತನ ಟೆಸ್ಟೋಸ್ಟೆರೋನ್ ಪ್ರಮಾಣ ತಾರಕಕ್ಕೇರುವುದನ್ನು ಗಮನಿಸಲಾಗಿದೆ.

ಟೆಸ್ಟೋಸ್ಟೆರೋನ್ ಏರಿಕೆ

ಟೆಸ್ಟೋಸ್ಟೆರೋನ್ ಏರಿಕೆ

ಮತ್ತೊಂದು ಸಂಶೋಧನೆಯಲ್ಲಿ ಟೆಸ್ಟೋಸ್ಟೆರೋನ್ ಏರಿಕೆಯ ಕ್ರಮ ಪುರುಷರ ನಿಯಂತ್ರಣದಲ್ಲಿ ಇರುವುದೇ ಇಲ್ಲ. ಇದು ಸಂಪೂರ್ಣವಾಗಿ ಅನೈಚ್ಛಿಕವಾಗಿದ್ದು ಇದು ಸಂದರ್ಭಾನುಸಾರವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಹಿಳೆಯೊಂದಿಗೆ ಕೂಡುವ ವೇಳೆಯಲ್ಲಿ

ಮಹಿಳೆಯೊಂದಿಗೆ ಕೂಡುವ ವೇಳೆಯಲ್ಲಿ

ಅಂದರೆ ಮಹಿಳೆಯೊಂದಿಗೆ ಕೂಡುವ ವೇಳೆಯಲ್ಲಿ ಅಥವಾ ಆಕೆಯನ್ನು ಆಪತ್ಕಾಲದಲ್ಲಿ ರಕ್ಷಣೆ ನೀಡಬೇಕಾದ ಸಂದರ್ಭದಲ್ಲಿ ಟೆಸ್ಟೋಸ್ಟೆರೋನ್ ಸ್ರಾವದ ಪ್ರಮಾಣ ಹೆಚ್ಚುವುದನ್ನು ಗಮನಿಸಲಾಗಿದೆ.

 

English summary

Why Lust Blinds Men- Scientific Reasons

Even the most intelligent man tends to behave irrationally when he is in love with a woman. And when lust dominates his relationship, he tends to lose his mind totally. What is the reason behind it? Why do men lose their minds when a temporary desire hits their minds? Well, there is a difference between love and lust. When a man is physically attached to a woman, it is lust and when a man is emotionally attached to a woman, it could be love.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more