ಮಾತು ಕೊಟ್ಟವರು..ಕೈಕೊಟ್ಟಾಗ, ಜೀವನವೇ ಮುಗಿದು ಹೋಗಲ್ಲ!

By Arshad
Subscribe to Boldsky

ಪ್ರೀತಿ ಎನ್ನುವುದು ಹೃದಯದಾಳದಿಂದ ಹುಟ್ಟುವ ಭಾವನೆಯಾಗಿದ್ದು ಈ ಜಗತ್ತನ್ನು ಬೆಸೆದಿರುವ ಕೊಂಡಿಯಾಗಿದೆ. ಪ್ರತಿ ವ್ಯಕ್ತಿಯೂ ತನ್ನ ಆತ್ಮೀಯರನ್ನು, ತನ್ನ ಆಪ್ತ ವಸ್ತುಗಳನ್ನು, ಕೆಲಸವನ್ನು, ತನ್ನ ಕರ್ತವ್ಯವನ್ನು ಪ್ರೀತಿಸುತ್ತಾನೆ, ಪ್ರೀತಿಸಬೇಕು ಸಹಾ. ಯಾವುದೋ ಕಾರಣದಿಂದ ನಾವು ಅಪಾರವಾಗಿ ಪ್ರೀತಿಸುವ ವ್ಯಕ್ತಿ ಅಥವಾ ವಸ್ತು ವಿಮುಖಗೊಂಡರೆ ಈ ಪ್ರೀತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. 

Heartbreaks
 

ಕಳೆದುಕೊಂಡ ಈ ಭಾವನೆ ಕೇವಲ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಯೂ ಕುಗ್ಗಿಸಿಬಿಡುತ್ತದೆ. ಪ್ರೀತಿಯ ಆಳ ಹೆಚ್ಚಿದ್ದಷ್ಟೂ ಕಳೆದುಕೊಂಡಾಗ ಅದರ ದುಃಖವೂ ಹೆಚ್ಚುತ್ತಾ ಹೋಗುತ್ತದೆ. ನಿಜವಾದ ಸಂಬಂಧಗಳಲ್ಲಿನ ಪ್ರೀತಿ ಕಳೆದುಕೊಂಡಾಗ ಆಗುವ ದುಃಖಕ್ಕೂ ಕಾಲ್ಪನಿಕ ಸಂಬಂಧವನ್ನು ಕಳೆದುಕೊಂಡಾಗ ಆಗುವ ದುಃಖಕ್ಕೂ ಅಪಾರ ಅಂತರವಿದೆ. 

Heartbreaks
 

ಕೆಲವೊಮ್ಮೆ ಎದುರಿನ ವ್ಯಕ್ತಿಯ ಬಗ್ಗೆ ಇಲ್ಲಸಲ್ಲದ್ದನ್ನು ಕಲ್ಪಿಸಿಕೊಂಡು ಏಕಮುಖವಾಗಿ ಪ್ರೀತಿಸುವವರು ಎದುರಿನ ವ್ಯಕ್ತಿ ತಮ್ಮನ್ನು ಪ್ರೀತಿಸುತ್ತಿಲ್ಲವೆಂದು ಗೊತ್ತಾದ ಬಳಿಕ ಹೃದಯ ಒಡೆದು ಹೋದಂತೆ ಆಡುತ್ತಾರೆ. ಈ ಸಮಯದಲ್ಲಿ ಹಿರಿಯರ ಮತ್ತು ಆಪ್ತರ ಸಾಂತ್ವನದ ಕೆಲವು ಮಾತುಗಳು ಅವರನ್ನು ಪುನಃ ಸಾಮಾನ್ಯವಾಗಿಸಲು ನೆರವಾಗುತ್ತವೆ.  

Heartbreaks
 

ಆದರೆ ನಿಜವಾದ, ಎರಡೂ ಕಡೆಯಿಂದ ಸಮಾನವಾದ ಪ್ರೀತಿ ಇರುವ ವ್ಯಕ್ತಿಗಳ ನಡುವಣ ಪ್ರೀತಿ ಕೊನೆಯಾದರೆ ಮಾತ್ರ ಇದು ಕೇವಲ ಹೃದಯವನ್ನು ಮಾತ್ರವಲ್ಲ, ದೇಹವನ್ನೂ ಭಗ್ನಗೊಳಿಸುತ್ತದೆ. ಈ ಬಗ್ಗೆ ನಡೆಸಿದ ಸಂಶೋಧನೆಗಳ ಮೂಲಕ ಭಗ್ನಹೃದಯಿಗಳ ಮೆದುಳು ತಮ್ಮ ಹಿಂದಿನ ಕ್ಷಣಗಳನ್ನು ನೆನೆದು ಕೊಂಡು ದುಃಖಿಸುವ ಮೂಲಕ ಹೆಚ್ಚಿನ ರಕ್ತಪ್ರವಾಹವನ್ನು ತನ್ನೆಡೆಗೆ ಸೆಳೆಯುತ್ತದೆ.  ಪ್ರೀತಿ ಮುರಿದು ಬಿತ್ತು, ಜೀವನ ಏನೆಂಬುದು ಅರ್ಥವಾಯಿತು

ಪರಿಣಾಮವಾಗಿ ಇತರ ಅಂಗಗಳ ಕ್ಷಮತೆ ಕಡಿಮೆಯಾಗಿ ಕೆಲವಾರು ನೋವು ಮತ್ತು ತೊಂದರೆಗಳು ಎದುರಾಗುತ್ತವೆ ಎಂದು ಕಂಡುಕೊಳ್ಳಲಾಗಿದೆ. ಬನ್ನಿ, ಈ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ನೋಡೋಣ:

Heartbreaks

ಭಗ್ನಹೃದಯಿಗಳಿಗೆ ಮುಖ್ಯವಾಗಿ ಕಾಡುವ ತೊಂದರೆ ಎಂದರೆ ಇಡಿಯ ಮೈಯಲ್ಲಿ ನೋವು. ದುಃಖದ ಭರದಲ್ಲಿ ಇವರು ಇದನ್ನು ಹೆಚ್ಚಾಗಿ ಗಮನಿಸಿರುವುದಿಲ್ಲ. ಆದರೆ ನಿತ್ಯದ ಎಲ್ಲಾ ಚಟುವಟಿಕೆಗಳನ್ನು ಇವರು ಕನಿಷ್ಠಗೊಳಿಸಿಬಿಡುತ್ತಾರೆ.

ಯಾವುದೇ ಕೆಲಸಕ್ಕೆ ಮುಂದಾಗದೇ, ಅನಿವಾರ್ಯವಲ್ಲದ ಕೆಲಸವನ್ನು ಬಿಟ್ಟು ಬೇರಾವುದನ್ನೂ ಸ್ವೀಕರಿಸದೇ ಒಂದು ಬಗೆಯಲ್ಲಿ ಜಡವ್ಯಕ್ತಿಗಳಾಗಿ ಮಾರ್ಪಾಡು ಹೊಂದುತ್ತಾರೆ. ಖಿನ್ನತೆ ಈ ತೊಂದರೆಗೆ ಪ್ರಮುಖ ಕಾರಣವಾಗಿದೆ. ಜಗತ್ತೇ ಶೂನ್ಯವಾದಂತೆ, ಜೀವನದ ಭರವಸೆಯೇ ಕಳೆದುಕೊಂಡಂತೆ ಅನ್ನಿಸುತ್ತದೆ. ಖಿನ್ನತೆಗೆ ಒಳಗಾದ ದೇಹದ ಹೆಚ್ಚಿನ ಶಾರೀರಿಕ ಅಗತ್ಯತೆಗಳು ಕನಿಷ್ಟಕ್ಕಿಳಿಯುವ ಕಾರಣ ದೇಹಕ್ಕೆ ಹೆಚ್ಚಿನ ಆಹಾರದ ಅಗತ್ಯತೆ ಕಂಡುಬರದೇ ಹಸಿವಿನ ಸೂಚನೆಗಳನ್ನು ಮೆದುಳು ನೀಡುವುದನ್ನು ಕಡಿಮೆಮಾಡುತ್ತದೆ.

Heartbreaks
 

ಇದರಿಂದಾಗಿ ಊಟ ಮಾಡುವ ಬಯಕೆಯೇ ಇಲ್ಲವಾಗಿ ಊಟವನ್ನೇ ಬಿಟ್ಟುಬಿಡುತ್ತಾರೆ. ಆದರೆ ಮಾನಸಿಕವಾಗಿ ದೃಢವಾಗಿರುವ ಆತ್ಮಸ್ಥೈರ್ಯವುಳ್ಳ ವ್ಯಕ್ತಿಗಳು ಮಾತ್ರ ಎದೆಗುಂದದೇ ನಿತ್ಯಜೀವನಕ್ಕೆ ಶೀಘ್ರವಾಗಿ ಹಿಂದಿರುಗುತ್ತಾರೆ. ಇದನ್ನೇ ಕಲ್ಲು ಮನಸ್ಸು ಎಂದು ಕರೆಯುತ್ತೇವೆ.     ಮೊದಲ ಪ್ರೀತಿಯ ಸಿಹಿ-ಕಹಿ ನೆನಪು ಎಂದಿಗೂ ಶಾಶ್ವತ!

ಖಿನ್ನತೆಗೆ ಒಳಗಾಗಿರುವ ಸಮಯದಲ್ಲಿ ಮೆದುಳು ಈ ಪ್ರೀತಿಗೂ ಹಿಂದಿನ ಕ್ಷಣಗಳನ್ನೇ ಮೆಲುಕು ಹಾಕುತ್ತಾ ಈ ದುಃಖವನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಆಪ್ತರೊಂದಿಗೆ, ಸ್ನೇಹಿತರೊಂದಿಗೆ ಸಮಯ ಕಳೆಯಬೇಕು ಎಂದು ತಜ್ಞರು ಸಲಹೆ ಮಾಡುತ್ತಾರೆ. ಇದರಿಂದ ಹೃದಯದ ಬಡಿತ ಸಾಮಾನ್ಯಗತಿಗೆ ಇಳಿಯುತ್ತದೆ.

ಕೆಲವರಲ್ಲಿ ದುಃಖದ ಕಾರಣ ನಿದ್ದೆ ಹಾರಿಹೋಗುತ್ತದೆ. ವಿಶೇಷವಾಗಿ ಪ್ರೀತಿಯ ಸಂಬಂಧ ಕಳೆದುಕೊಂಡ ಬಳಿಕ ನಿದ್ದೆ ಕಡಿಮೆಯಾಗಿರುವುದನ್ನು ಗಮನಿಸಲಾಗಿದೆ. ಈ ಸಮಯದಲ್ಲಿ ಹಿಂದಿನ ದಿನಗಳಲ್ಲಿ ಜೋಡಿಯಾಗಿ ಕಳೆದಿದ್ದ ದಿನಗಳೇ ಸತತವಾಗಿ ಕಾಡುತ್ತವೆ.

Heartbreaks
 

ಇನ್ನೂ ಕೆಲವರು ಹಾಸಿಗೆ ಹಿಡಿಯುತ್ತಾರೆ. ದುಃಖದ ಕಾರಣ ಹೆಚ್ಚಿನ ರಕ್ತಪ್ರವಾಹವನ್ನು ಮೆದುಳು ಕಬಳಿಸಿಬಿಡುವ ಕಾರಣ ಮತ್ತು ಹಸಿವೇ ಇಲ್ಲದ ಕಾರಣ ದೇಹ ಅಪಾರವಾಗಿ ಸೊರಗಿ ಕೆಲವು ಮುಖ್ಯ ಅಂಗಗಳ ಕಾರ್ಯಕ್ಷಮತೆ ಉಡುಗುತ್ತದೆ.  ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?

ಪರಿಣಾಮವಾಗಿ ಕೆಲವಾರು ಕಾಯಿಲೆಗಳು ಆವರಿಸುತ್ತವೆ. ಎಲ್ಲಿಯವರೆಗೆ ಮೆದುಳು ಈ ದುಃಖದ ಗುಂಗಿನಿಂದ ಹೊರಬರುವುದಿಲ್ಲವೋ, ಅಲ್ಲಿಯವರೆಗೆ ಈ ಸೊರಗಿದ ಅಂಗಗಳು ಮೊದಲಿನಂತಾಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ವೈದ್ಯರು ಮಾನಸಿಕ ರೋಗಕ್ಕೆ ಮದ್ದಿಲ್ಲ, ರೋಗಿಯನ್ನು ಮಾನಸಿಕವಾಗಿ ಬಲಪಡಿಸಲು ಯತ್ನಿಸಿ ಎಂದೇ ಸಲಹೆ ನೀಡುತ್ತಾರೆ.

Heartbreaks
 

ಅತಿರೇಕಕ್ಕೆ ಹೋದಾಗ ಭಗ್ನಹೃದಯಿಗಳ ಮೆದುಳಿನಲ್ಲಿ ವಿಪರೀತವಾದ ಯೋಚನೆಗಳು ಹುಟ್ಟುತ್ತವೆ. ಪರಿಣಾಮವಾಗಿ ಆತ್ಮಹತ್ಯೆ, ಮನೆಯಿಂದ ಓಡಿ ಹೋಗುವುದು, ತಮ್ಮ ಭಗ್ನಹೃದಯಕ್ಕೆ ಕಾರಣರಾದವರ ಹತ್ಯೆ, ಎಲ್ಲವನ್ನೂ ಸುಟ್ಟು ಬಿಡುತ್ತೇನೆ ಎಂಬ ಆಕ್ರೋಶ ಮೊದಲಾದ ಆವೇಶಗಳು ಎದುರಾಗಬಹುದು.

Heartbreaks
 

ಈ ಸಮಯದಲ್ಲಿ ಸರಿಯಾದ ಸಲಹೆ, ಸಾಂತ್ವಾನಗಳಿಲ್ಲದೇ ಹೋದರೆ ಮಾತ್ರ ಈ ಯೋಚನೆಗಳು ಕಾರ್ಯರೂಪಕ್ಕೆ ಬರುವ ಅಪಾಯವೂ ಇದೆ. ಆದ್ದರಿಂದ ಯಾವುದೇ ವ್ಯಕ್ತಿ, ವಿಷಯ, ಅಭಿರುಚಿಯ ಬಗ್ಗೆ ವಿಪರೀತ ಎನ್ನಿಸುವಷ್ಟು ಪ್ರೀತಿ ಬೆಳೆಸಿಕೊಳ್ಳದೇ ಆತ್ಮೀಯವೆನಿಸುವಷ್ಟು ಪ್ರೀತಿ ಇದ್ದರೆ ಸಾಕು. ಅಲ್ಲದೇ ನಿಮ್ಮ ಹೃದಯವನ್ನು ನಿಮ್ಮನ್ನು ಅರ್ಥಮಾಡಿಕೊಂಡು ನಿಮ್ಮೊಂದಿಗೆ ಮನಸ್ಸನ್ನು ಬೆಸೆಯುವ ವ್ಯಕ್ತಿಗಳಿಗೆ ನೀಡುವುದೇ ಜಾಣತನ.

For Quick Alerts
ALLOW NOTIFICATIONS
For Daily Alerts

    English summary

    Why Heartbreaks Are Disastrous

    Those who are in love can experience joys but when the love fails and results in a heartbreak, the pain is very tough to endure. In fact, that is the reason why experts opine that even heartbreaks should be considered as health problems though most of us perceive it only as an emotional issue.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more