Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ,,,, ಹಾಡು ಕೇಳಿದ್ದೀರಲ್ಲವೇ? ನಿಜ ನೀವು ಪ್ರೀತಿಯಲ್ಲಿ ಬೀಳುವವರೆಗೆ ಅದರ ಅನುಭವ ನಿಮಗೆ ಗೊತ್ತಾಗುವುದಿಲ್ಲ. ಇದು ಮನುಷ್ಯನನ್ನು ಸಂತೋಷಪಡಿಸುವುದರ ಜೊತೆಗೆ ದುಃಖವನ್ನೂ ಪಡಿಸುತ್ತದೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ! ಯಾರು ಪ್ರೀತಿಯ ಬಲೆಗೆ ಬೀಳುತ್ತಾರೆಯೋ ಅವರ ಪ್ರಕಾರ ಪ್ರೀತಿ ಎಂಬುದು ಒಂದು ಕಾಯಿಲೆ, ಅಥವಾ ಮನೋರೋಗವಂತೆ!
ಹೌದು ಪ್ರೀತಿಗೆ ನಾನಾ ಬಗೆಯ ಆಯಾಮಗಳು ಇರುತ್ತವೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ಪ್ರೀತಿ ಎಂಬುದು ನಿಮ್ಮ ಪ್ರೀತಿ ಪಾತ್ರರಿಗೆ ಅತ್ಯಂತ ಪ್ರಮುಖವಾದ ಅಂಶವಾಗಿರುತ್ತದೆ.
ನಿಜವಾಗಿ ಒಬ್ಬ ವ್ಯಕ್ತಿಯ ಜೊತೆಗೆ ಪ್ರೀತಿಯಲ್ಲಿ ಬೀಳುವುದು ನಿಜಕ್ಕೂ ಒಂದು ಅವಿನಾನುಭವದ ಅಂಶವಾಗಿರುತ್ತದೆ. ನೀವು ಪ್ರೀತಿಯಲ್ಲಿ ಬಿದ್ದಾಗ, ನಿಮ್ಮ ಮೆದುಳಿನಲ್ಲಿ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಆಗ ನೀವು ಸೋಮಾರಿಗಳಾಗಿ ನಿಮ್ಮ ಕಾಲವನ್ನು ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಕಳೆಯಲು ಇಷ್ಟಪಡುತ್ತೀರಿ. ಚುಂಬನದ ಹಿಂದಿರುವ ಇಂಟರೆಸ್ಟಿಂಗ್ ಸಂಗತಿ
ಸುಮಾರು ಜನ ಖ್ಯಾತ ವ್ಯಕ್ತಿಗಳು ಪ್ರೀತಿಯಲ್ಲಿ ಬಿದ್ದಾಗ ಕವಿತೆಗಳನ್ನು, ಕಾದಂಬರಿಗಳನ್ನು, ಸೂಕ್ತಿಗಳನ್ನು ಮತ್ತು ಮುಂತಾದ ಸೃಜನಶೀಲ ಚಟುವಟಿಕೆಗಳನ್ನು ಮಾಡಿದ್ದಾರೆ. ಮಿರ್ಜಾ ಗಾಲಿಬ್ ಎಂಬ ವ್ಯಕ್ತಿಯು ಕವಿತೆಗಳನ್ನು ಬರೆದ, ಶಹಜಹಾನ್ ತಾಜ್ ಮಹಲ್ ಕಟ್ಟಿಸಿದ. ಹೀಗೆ ಸುಮಾರು ಜನ ಸುಮಾರು ಕೆಲಸಗಳನ್ನು ಮಾಡಿದರು. ಇದೆಲ್ಲವು ಪ್ರೀತಿಯಿಂದ ಮಾತ್ರ ಸಾಧ್ಯ. ಬನ್ನಿ ಪ್ರೀತಿಯ ಕುರಿತು ನಿಮಗೆ ಗೊತ್ತಿರದ ಕುತೂಹಲಕಾರಿ ವಿಚಾರಗಳು ಯಾವುವು ಎಂದು ಮುಂದೆ ತಿಳಿಸುತ್ತೇವೆ.

ಸಂಗಾತಿಯನ್ನು ಅಪ್ಪಿಕೊಳ್ಳುವುದು
ಪ್ರೀತಿಯಲ್ಲಿ ಬಿದ್ದವನಿಗೆ ನೋವಾದರೆ ನೋವು ನಿವಾರಕಗಳ ಅಗತ್ಯವಿರುವುದಿಲ್ಲ. ಬದಲಿಗೆ ಹೋಗಿ ಸಂಗಾತಿಯನ್ನು ಅಪ್ಪಿಕೊಂಡರೆ ಸಾಕು, ಎಲ್ಲಾ ನೋವು ಮಾಯ!

ಹೃದಯದ ಚಿಹ್ನೆ
ಹೃದಯದ ಚಿಹ್ನೆಯನ್ನು ಬರೆಯಲಿಲ್ಲವಾದರೆ ಅದೆಂತಹ ಪ್ರೇಮಿಗಳು ನಾವು ಎಂದು ನಮಗೆ ಅನಿಸುತ್ತದೆ. ಆದರೆ ನಾವು ಇಂದು ಬರೆಯುವ ಆ ಚಿಹ್ನೆಯನ್ನು 1250ಕ್ಕೆ ಮೊದಲು ಎಲೆಗಳ ಗುಂಪನ್ನು ಸೂಚಿಸಲು ಬಳಸುತ್ತಿದ್ದರು.

ಉತ್ಪಾದನಾಶೀಲತೆಯನ್ನು ಕಡಿಮೆ ಮಾಡುತ್ತದೆ
ಅಧ್ಯಯನಗಳ ಪ್ರಕಾರ ಪ್ರೀತಿಯಲ್ಲಿ ಬಿದ್ದವರ ಉತ್ಪಾದನಾಶೀಲತೆ ಕಡಿಮೆಯಾಗುತ್ತದೆಯಂತೆ. ಪ್ರೀತಿ ಮಾಯೆಯಲ್ಲವೇನು?

ಮಾನಸಿಕ ರೋಗಗಳು
ಪ್ರೀತಿಯಲ್ಲಿ ಬಿದ್ದಾಗ ಮಾನಸಿಕ ರೋಗಗಳು ಬರುತ್ತವೆಯಂತೆ. ಖಿನ್ನತೆ, ಭಾವ-ತೀವ್ರತೆ, ಅಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ ಇತ್ಯಾದಿಗಳು ಇವರನ್ನು ಕಾಡುತ್ತವೆ. ಈಗ ಗೊತ್ತಾಯಿತಲ್ಲ ಕೋಮಾ....ಎಂದು ಶಿವರಾಜ್‌ಕುಮಾರ್ ಹಾಡು ಏಕೆ ಬಂತು ಎಂದು!!

ಫಿಲೋಫೋಬಿಯಾ
ಫಿಲೋಫೋಬಿಯಾ ಅಥವಾ ಅಧಿಕ ಭಯ ಎಂಬುದು ಎಲ್ಲಿ ಪ್ರೀತಿಯಲ್ಲಿ ಬಿದ್ದು ಬಿಡುತ್ತೇನೋ ಎಂಬ ಭಯವಂತೆ.

ಮ್ಯಾಚ್.ಕಾಂ
ಇದು ಒಂದು ಡೇಟಿಂಗ್ ವೆಬ್‍ಸೈಟ್. ಇದರ ಸ್ಥಾಪಕ ಗರ್ಲ್ ಫ್ರೆಂಡ್ ಯಾರ ಜೊತೆಯಲ್ಲಿಯೋ ಓಡಿಹೋದಳಂತೆ. ಆಮೇಲೆ ಆಕೆ ಇವನಿಗೆ ಇದೇ ವೆಬ್‍ಸೈಟಿನಲ್ಲಿ ಸಿಕ್ಕಳಂತೆ.



Click it and Unblock the Notifications
