Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರೀತಿ ಮುರಿದು ಬಿತ್ತು, ಜೀವನ ಏನೆಂಬುದು ಅರ್ಥವಾಯಿತು
ಪ್ರೀತಿ ಮುರಿದು ಬಿದ್ದಾಗ ಆಗುವಂತಹ ನೋವು ಸಹಿಸಲು ಅಸಾಧ್ಯ. ಕೆಲವೊಮ್ಮೆ ನೋವಿನಿಂದಾಗಿ ಖಿನ್ನತೆ ಕೂಡ ಕಾಡುವುದಿದೆ. ಆದರೆ ಒಂದು ಹಂತವನ್ನು ದಾಟಿದ ಬಳಿಕ ನಡೆದಿರುವುದು ಎಲ್ಲವೂ ಒಳ್ಳೆಯದೇ ಎನ್ನುವ ಭಾವನೆ ಮೂಡುತ್ತದೆ.
ಯೌವನದಲ್ಲಿ ಕೆಲವೊಮ್ಮೆ ನಾವು ನಮ್ಮದೇ ಆದ ಲೋಕದಲ್ಲಿರುತ್ತೇವೆ. ಜೀವನ ಹಾಗೂ ವೃತ್ತಿಯನ್ನು ಕಟ್ಟಿಕೊಳ್ಳುವಂತಹ ಸಂದರ್ಭದಲ್ಲಿ ಪ್ರೀತಿ ಪ್ರೇಮ ಎನ್ನುವ ಪಾಶಕ್ಕೆ ಸಿಲುಕಿ ಅದೇ ಲೋಕದಲ್ಲಿ ತೇಲುತ್ತಾ ಇರುತ್ತೇವೆ. ಕಾಲೇಜು ಹಾಗೂ ಕಚೇರಿಗಳಲ್ಲಿ ಮೂಡುವಂತಹ ಇಂತಹ ಪ್ರೇಮ ಸಂಬಂಧಗಳು ಮುರಿದು ಬೀಳುವುದೇ ಹೆಚ್ಚು.

ಸಂಬಂಧ ಮುರಿದು ಬಿದ್ದಾಗ ಆಗುವಂತಹ ನೋವು ಸಹಿಸಲು ಅಸಾಧ್ಯ. ಕೆಲವೊಮ್ಮೆ ನೋವಿನಿಂದಾಗಿ ಖಿನ್ನತೆ ಕೂಡ ಕಾಡುವುದಿದೆ. ಆದರೆ ಒಂದು ಹಂತವನ್ನು ದಾಟಿದ ಬಳಿಕ ನಡೆದಿರುವುದು ಎಲ್ಲವೂ ಒಳ್ಳೆಯದಕ್ಕೆ ಮತ್ತು ಇನ್ನು ನಡೆಯುವುದು ಎಲ್ಲವೂ ಒಳ್ಳೆಯದೇ ಎನ್ನುವ ಭಾವನೆ ಮೂಡುತ್ತದೆ. ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..!
ಪ್ರೀತಿಯ ಸಂಬಂಧ ಮುರಿದು ಬೀಳುವುದರಿಂದ ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿತುಕೊಳ್ಳುತ್ತೇವೆ. ಇಂತಹ ಕೆಲವು ಘಟನೆಗಳೇ ವ್ಯಕ್ತಿಯನ್ನು ಜೀವನದಲ್ಲಿ ಉನ್ನತಿಗೇರಿಸುತ್ತದೆ. ಪ್ರೀತಿಯ ಸಂಬಂಧ ಮುರಿದು ಹೃದಯ ಒಡೆಯುವುದರಿಂದ ಯಾವ ಪಾಠಗಳನ್ನು ಕಲಿತುಕೊಳ್ಳಬಹುದು ಎಂದು ತಿಳಿಯುವ.
*ಜೀವನದಲ್ಲಿ ವ್ಯಕ್ತಿಯೊಬ್ಬ ನಿಮ್ಮಿಂದ ದೂರವಾದಾಗ ಅಲ್ಲಿಗೆ ಜೀವನ ಅಂತ್ಯವಾಯಿತೆಂದು ನೀವು ಭಾವಿಸಬಾರದು. ನೀವು ಇನ್ನು ಜೀವನ ಸಾಗಿಸಬಹುದಾಗಿದೆ. ಹೃದಯ ಒಡೆದು ಹೋಗುವುದರಿಂದ ವಾಸ್ತವವನ್ನು ಅರಿತುಕೊಳ್ಳಲು ನಿಮಗೆ ನೆರವಾಗುತ್ತದೆ ಮತ್ತು ನೀವು ವಿಶೇಷವಾದವರಲ್ಲ ಎನ್ನುವುದನ್ನು ಅರಿತುಕೊಳ್ಳುವಂತೆ ಮಾಡುವುದು. ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?
*ಹೃದಯ ಒಡೆದು ಹೋಗುವುದರಿಂದ ನಿಮ್ಮ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಯಾವುದೇ ವ್ಯಕ್ತಿ ನಮಗೆ ಆಘಾತ ನೀಡುವ ತನಕ ನಾವು ನಮ್ಮೊಳಗೆ ನೋಡುವುದೇ ಇಲ್ಲ ಮತ್ತು ಹಲವಾರು ಬದಲಾವಣೆ ಮಾಡಿಕೊಳ್ಳುತ್ತೇವೆ. ಹೃದಯ ಒಡೆಯುವುದರಿಂದ ನಾವು ಪ್ರೌಢ ಹಾಗೂ ಬುದ್ಧಿವಂತರಾಗುತ್ತೇವೆ. ಇದು ನಿಮ್ಮನ್ನು ಭಿನ್ನ ವ್ಯಕ್ತಿಯನ್ನಾಗಿ ಮಾಡುತ್ತದೆ.
*ಘಟನೆ ಬಳಿಕ ನೀವು ಸಮಾಜವನ್ನು ಬೇರೆ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ. ಪ್ರೀತಿಯಲ್ಲಿ ಮುಳುಗಿದ್ದಾಗ ನಿಮಗೆ ಅದರ ಅನುಭವವೇ ಶ್ರೇಷ್ಠ ಎಂದೆನಿಸುತ್ತದೆ. ಆದರೆ ಹೃದಯ ಒಡೆದ ಬಳಿಕ ನೈಜ ಸಂತೋಷ ಎಲ್ಲಿದೆಯೆಂದು ನಿಮಗೆ ತಿಳಿಯುತ್ತದೆ. ಸುಳ್ಳು ಅಭಿಲಾಷೆ ಹಾಗೂ ನಿರೀಕ್ಷೆಗಳನ್ನು ನೀವು ನಿಲ್ಲಿಸುತ್ತೀರಿ. ಪ್ರೀತಿ-ಕಾಮ, ಒಂದೇ ನಾಣ್ಯದ ಎರಡು ಮುಖವಿದ್ದಂತೆ...
*ಯಾರನ್ನೂ ಕೂಡ ಹೆಚ್ಚಾಗಿ ಹಚ್ಚಿಕೊಳ್ಳಬಾರದು ಎಂದು ಹೃದಯ ಒಡೆದು ಹೋಗುವುದರಿಂದ ತಿಳಿಯುತ್ತದೆ. ಪ್ರೀತಿ ಮತ್ತು ಒಬ್ಬರನ್ನು ಹಚ್ಚಿಕೊಳ್ಳುವುದು ತುಂಬಾ ಭಿನ್ನ. ನಿಮ್ಮ ಎಲ್ಲಾ ಕಲ್ಪನೆಗಳನ್ನು ಇದು ಬುಡಮೇಲು ಮಾಡುತ್ತದೆ.
*ನಿಮ್ಮ ಜತೆಗಾರ/ಜತೆಗಾರ್ತಿ ನಿಮ್ಮನ್ನು ಬಿಟ್ಟು ಬದುಕಲ್ಲ ಎಂದು ಭಾವಿಸಿ ಇರುತ್ತೀರಿ. ನಿಮ್ಮನ್ನು ಬಿಟ್ಟ ಬಳಿಕ ಯಾವುದೇ ಸಮಸ್ಯೆಯಿಲ್ಲದೆ ಜೀವಿಸಲು ಆರಂಭಿಸಿದಾಗ ಎಲ್ಲಾ ಸತ್ಯ ನಿಮಗೆ ಅರ್ಥವಾಗುತ್ತದೆ.



Click it and Unblock the Notifications





