For Quick Alerts
ALLOW NOTIFICATIONS  
For Daily Alerts

ಮಹಿಳೆಯರೇಕೆ ಮುದ್ದಾಟವನ್ನು ಹೆಚ್ಚು ಬಯಸುತ್ತಾರೆ?

By Manu
|

ಪ್ರಕೃತಿ ಪುರುಷರಿಗೆ ಸಮಾಗಮದತ್ತ ಹೆಚ್ಚು ಒಲವು ತೋರುವ ಶಕ್ತಿ ನೀಡಿದ್ದರೆ ಮಹಿಳೆಯರಿಗೆ ಇದಕ್ಕಿಂತಲೂ ಮುದ್ದಾಟ ಮತ್ತು ಬಿಸಿಯಪ್ಪುಗೆಯ ಬಾಂಧವ್ಯವೇ ಹೆಚ್ಚು ಆಪ್ತವಾಗುತ್ತದೆ. ಏಕೆ ಹೀಗೆ ಗೊತ್ತೇ? ನಮ್ಮ ದೇಹ ನಿಸರ್ಗದ ಒಂದು ಅದ್ಭುತ ಸೃಷ್ಟಿಯಾಗಿದೆ. ದೇಹದ ಪ್ರತಿ ಚಟುವಟಿಕೆಗೂ ವೈಜ್ಞಾನಿಕವಾದ ಕಾರಣವಿದೆ. ಪ್ರಾಪ್ತ ವಯಸ್ಸಿನಲ್ಲಿ ಬೆದೆಗೆ ಬರುವುದು ಬಳಿಕ ಸಮಾಗಮದಿಂದ ಸಂತಾನ ವೃದ್ಧಿಯಾಗುವುದು ಮೊದಲಾದವುಗಳಿಗೆ ನಿಸರ್ಗವೇ ಒಂದು ವೇಳಾಪಟ್ಟಿಯನ್ನು ತಯಾರಿಸಿ ಸಕಲ ಜೀವಿಗಳ ವಂಶವಾಹಿನಿಯಲ್ಲಿಯೇ ಸೇರಿಸಿದೆ. ಅಂತೆಯೇ ಸಮಾಗಮದಲ್ಲಿ ಸುಖಪ್ರಾಪ್ತಿಯನ್ನೂ ಕಲ್ಪಿಸಿದೆ.

ಇದಕ್ಕೆ ನಮ್ಮ ಮೆದುಳಿಗೆ ಆ ಸಮಯದಲ್ಲಿ ಲಭ್ಯವಾಗುವ ಹಲವು ರಾಸಾಯನಿಕಗಳು ಮತ್ತು ಹಾರ್ಮೋನುಗಳು ಕಾರಣ. ವೈಜ್ಞಾನಿಕ ಕಾರಣಗಳನ್ನು ಬದಿಗಿಡುವುದಾದರೆ ಸಮಾಗಮದಲ್ಲಿ ಮಹಿಳೆಯರ ಮೆದುಳಿನಲ್ಲಿ ಉತ್ಪತ್ತಿಯಾಗುವ ಅಥವಾ ಪರಿಚಲಿಸುವ ರಾಸಾಯನಿಕಗಳಿಗಿಂತಲೂ ಆತ್ಮೀಯ ಅಪ್ಪುಗೆ ಅಥವಾ ಮುದ್ದಾಟದ ಸಮಯದಲ್ಲಿ ಲಭ್ಯವಾಗುವ ರಾಸಾಯನಿಕಗಳೇ ಹೆಚ್ಚು ಇಷ್ಟವಾಗುತ್ತವೆ.

ಆದ್ದರಿಂದ ಸುಖ ದಾಂಪತ್ಯಕ್ಕೆ ಮಹಿಳೆಯರಿಗೆ ಯಾವ ಪರಿ ಇಷ್ಟ, ಇದಕ್ಕಾಗಿ ಏನು ಮಾಡಬಹುದು ಎಂಬ ಬಗ್ಗೆ ಮಾಹಿತಿ ದೊರಕಿದರೆ ಬಹಳಷ್ಟು ದಂಪತಿಗಳು ಇನ್ನಷ್ಟು ಸುಖಮಯವಾಗಿ ತಮ್ಮ ಜೀವನವನ್ನು ಸಾಗಿಸಬಹುದು. ಬನ್ನಿ ಈ ಬಗ್ಗೆ ಹೆಚ್ಚು ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ತಾವು ಪ್ರೀತಿಸಲ್ಪಡುತ್ತಿದ್ದೇವೆ ಎಂಬ ಭಾವನೆ

ತಾವು ಪ್ರೀತಿಸಲ್ಪಡುತ್ತಿದ್ದೇವೆ ಎಂಬ ಭಾವನೆ

ಮುದ್ದಾಟದಲ್ಲಿ ಮಹಿಳೆಯರಿಗೆ ಅತಿ ಹೆಚ್ಚಿನ ಭದ್ರತೆಯ ಮತ್ತು ತಾವು ಒಬ್ಬರಿಂದ ಪ್ರೀತಿಸಲ್ಪಡುತ್ತಿದ್ದೇವೆ ಎಂಬ ಭಾವನೆ ಮೂಡುತ್ತದೆ. ಅದರಲ್ಲೂ ಬಿಸಿಯಪ್ಪುಗೆಯಲ್ಲಿ ಈ ಭಾವನೆ ಅತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ಸಮಯ ಆಕೆಗೆ ಅತ್ಯಂತ ನೆಮ್ಮದಿ ತರುವ ಕ್ಷಣವಾಗಿದೆ.

ತಾವು ಆಕರ್ಷಕರಾಗಿದ್ದೇವೆ ಎಂಬ ಭಾವನೆ

ತಾವು ಆಕರ್ಷಕರಾಗಿದ್ದೇವೆ ಎಂಬ ಭಾವನೆ

ಪ್ರತಿ ಹೆಣ್ಣಿಗೂ ತನ್ನ ಸೌಂದರ್ಯವನ್ನು ತಮ್ಮ ಪ್ರಿಯಕರ ಗಮನಿಸಬೇಕು ಎಂಬ ಹಂಬಲವಿರುತ್ತದೆ. ಆತ್ಮೀಯ ಅಪ್ಪುಗೆಯಲ್ಲಿ ಆಕೆ ಈ ಭಾವವನ್ನು ಪಡೆಯುತ್ತಾಳೆ. ಆಕೆಯ ಪತಿ ಪ್ರೀತಿಯಿಂದ ತನ್ನ ಬಾಹುಗಳನ್ನು ಚಾಚಿ ತನ್ನ ಬಳಿ ಆಹ್ವಾನಿಸಿದರೆ ಈ ಕ್ಷಣ ಆಕೆಗೆ ತನ್ನ ಸೌಂದರ್ಯದ ಬಗ್ಗೆ ಅಭಿಮಾನ ಮೂಡಿಸುತ್ತದೆ. ಈ ಕ್ಷಣದ ಸಂತೃಪ್ತಿ ಸಮಾಗಮದ ಸಂತೋಷಕ್ಕಿಂತಲೂ ಹೆಚ್ಚಿನದಾಗಿ ಆಕೆಗೆ ಕಾಣುತ್ತದೆ.

ಈ ಕ್ಷಣದಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ

ಈ ಕ್ಷಣದಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ

ಇದಕ್ಕೆ ವೈಜ್ಞಾನಿಕವಾಗಿ ಉತ್ತರಿಸುವುದಾದರೆ ಈ ಕ್ಷಣದಲ್ಲಿ ಆಕೆಯ ಮೆದುಳಿನಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಬಿಡುಗಡೆಯಾಗುತ್ತದೆ. ಈ ರಸದೂತದ ಸ್ರವಿಕೆಯಿಂದ ಮೆದುಳು ನಿರಾಳವಾಗುತ್ತದೆ. ಮೆದುಳಿನಲ್ಲಿರುವ ಎಲ್ಲಾ ಒತ್ತಡಗಳು ಬಿಡುಗಡೆಯಾಗುತ್ತವೆ. ಮನ ಹಕ್ಕಿಯಂತೆ ಹಾರುತ್ತದೆ.

ಸುರಕ್ಷಿತ ಭಾವನೆ ಮೂಡುತ್ತದೆ

ಸುರಕ್ಷಿತ ಭಾವನೆ ಮೂಡುತ್ತದೆ

ನೆಮ್ಮದಿಯ ತಳಹದಿ ಸುರಕ್ಷತೆಯ ಭಾವನೆಯಾಗಿದೆ. ಎಲ್ಲಿ ತಾವು ಸುರಕ್ಷಿತರಲ್ಲ ಎಂಬ ಭಾವನೆ ಇದೆಯೋ ಅಲ್ಲಿ ನೆಮ್ಮದಿ ಇರಲು ಸಾಧ್ಯವೇ ಇಲ್ಲ. ಎಷ್ಟೇ ಧನ ಮತ್ತು ಐಶ್ವರ್ಯಗಳಿದ್ದರೂ ಅಸುರಕ್ಷಿತ ಭಾವನೆ ನೆಮ್ಮದಿಯನ್ನು ಕೆಡಿಸುತ್ತದೆ. ಈ ನೆಮ್ಮದಿ ನಮ್ಮ ಜೀವನದ ಅತ್ಯಂತ ದೊಡ್ಡದಾದ ಐಶ್ವರ್ಯವಾಗಿದೆ. ಆತ್ಮೀಯ ಅಪ್ಪುಗೆಯಲ್ಲಿ ಆಕೆ ಆತ್ಮೀಯವಾದ ಮತ್ತು ಅತ್ಯಂತ ಸುರಕ್ಷಿತ ಭಾವನೆಯ ಮೂಲಕ ನೆಮ್ಮದಿಯನ್ನು ಪಡೆಯುತ್ತಾಳೆ.

ಸಮಾಗಮದ ಬಳಿಕವೂ ಬಯಸುವ ಅಪ್ಪುಗೆ

ಸಮಾಗಮದ ಬಳಿಕವೂ ಬಯಸುವ ಅಪ್ಪುಗೆ

ಸಾಮಾನ್ಯವಾಗಿ ಸಮಾಗಮದ ಬಳಿಕ ಪುರುಷರ ಆಸಕ್ತಿ ಸಂಪೂರ್ಣವಾಗಿ ಉಡುಗಿ ನೇರವಾಗಿ ನಿದ್ದೆಗೆ ಜಾರಲು ಬಯಸುತ್ತಾರೆ. ಆದರೆ ಮಹಿಳೆಯರು ಆತ್ಮೀಯ ಅಪ್ಪುಗೆ ಮುಂದುವರೆಯಲಿ ಎಂದು ಬಯಸುತ್ತಾರೆ.

ಸಮಾಗಮದ ಬಳಿಕವೂ ಬಯಸುವ ಅಪ್ಪುಗೆ

ಸಮಾಗಮದ ಬಳಿಕವೂ ಬಯಸುವ ಅಪ್ಪುಗೆ

ಏಕೆಂದರೆ ಸಮಾಗಮ ದೈಹಿಕ ಇಚ್ಛೆಯಾಗಿದ್ದರೆ ಅಪ್ಪುಗೆ ಮಾನಸಿಕ ಇಚ್ಛೆಯಾಗಿದ್ದು ತನ್ನನ್ನು ಕೇವಲ ಕಾಮನೆಗಾಗಿ ಬಳಸಿಕೊಂಡಿಲ್ಲ, ತನ್ನನ್ನು ತನು ಮತ್ತು ಮನಃಪೂರ್ವಕವಾಗಿ ಅರ್ಪಿಸಿಕೊಂಡಿದ್ದೇನೆ ಎಂಬ ಭಾವನೆಯ ಮೂಲಕ ಸುರಕ್ಷತಾ ಭಾವನೆಯನ್ನು ಆಕೆ ಪಡೆಯುತ್ತಾಳೆ.

English summary

Why do women love cuddling?

Men crave a lot for intercourse whereas women ask for long periods of cuddling. They would love to get cozy. But why? Every action and every motive of every living thing has some scientific reason behind it. We tend to do what gives us pleasure. And your pleasure comes from certain chemicals that are released in your brain. Putting aside the scientific side of the act, there are also many romantic reasons behind women craving for cuddling. What this simple act can do to relationships could be surprising.
X
Desktop Bottom Promotion