For Quick Alerts
ALLOW NOTIFICATIONS  
For Daily Alerts

  ಪ್ರೀತಿಗೋಸ್ಕರ ಗಂಡು-ಹೆಣ್ಣು ನಡುವಿನ ಮೆಸೇಜ್ ಪುರಾಣ!

  By Arshad
  |

  ನಿಮ್ಮ ಈ ಮೇಲ್ ಇನ್ ಬಾಕ್ಸ್‌ನಲ್ಲಿ ಸ್ಪಾಮ್ ಫೋಲ್ಡರ್ ಇದ್ದರೂ ನಿತ್ಯವೂ ನೂರಾರು ಅನಗತ್ಯ ಈಮೇಲ್‌ಗಳು ಬಂದು ತುಂಬಿಕೊಳ್ಳುತ್ತಿವೆಯೇ? ಇದರ ಕಾಟ ತಡೆಯಲಾರದೇ ಈ ಮೇಲ್ ವಿಳಾಸವನೇ ಬದಲಿಸಲು ಯೋಚಿಸುತ್ತಿದ್ದೀರಾ? ಆದರೆ ಹೊಸ ಈ ಮೇಲ್ ವಿಳಾಸವಿದ್ದರೂ ಇದರಲ್ಲಿಯೂ ಅನಗತ್ಯ ಈ ಮೇಲ್ ಬರುವುದಿಲ್ಲ ಎಂದು ಖಾತರಿಯಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಕೆಲವು ಉತ್ಪನ್ನಗಳ ಪ್ರಚಾರ ಮಾಡಲು ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ಕಾರಣ ಇವು ಬರುತ್ತಲೇ ಇರುತ್ತವೆ.

  ಆದ್ದರಿಂದ ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ನಿತ್ಯವೂ ಅನಗತ್ಯವಾದ ಈಮೇಲ್‪ಗಳನ್ನು ಡಿಲೀಟ್ ಮಾಡುವುದೇ ಉತ್ತಮ ಕ್ರಮ ಎಂದು ಹೆಚ್ಚಿನವರು ಒಪ್ಪಿಕೊಂಡುಬಿಟ್ಟಿದ್ದಾರೆ. ಅಂದರೆ ಒಂದು ರೀತಿಯಲ್ಲಿ ನಿಮ್ಮನ್ನು ಈ ಈಮೇಲ್‌ಗಳು ಸೋಲಿಸಿವೆ. ಈ ಕ್ರಮವನ್ನೇ ಕೆಲವು ಖದೀಮರು ತಮ್ಮ ಎದುರಾಳಿಯನ್ನು ಮಣಿಸಲು ಬಳಸುತ್ತಾರೆ. Text Blasting ಅಥವಾ ಪದಸ್ಫೋಟ ಎಂದು ಕರೆಯಲಾಗುವ ಈ ಕ್ರಮದಲ್ಲಿ ಸತತವಾಗಿ ತನ್ನ ಎದುರಾಳಿಯ ಸ್ಮೃತಿ ತಪ್ಪುವವರೆಗೆ ಪದಗಳ ಮಹಾಪುಂಜಗಳನ್ನೇ ರವಾನಿಸಿ ಗೆಲುವು ಸಾಧಿಸುವುದು ಒಂದು ಕ್ರಮ. ಆದರೆ ಇದು ಎಲ್ಲಾ ವಯಸ್ಸಿನವರಿಗೆ ಅನ್ವಯಿಸುವುದಿಲ್ಲ.

  ಜೀವನದಲ್ಲಿ ಪ್ರೌಢತೆ ಪಕ್ವತೆಯನ್ನು ಗಳಿಸಿದವರು ಈ ಪದಗಳಿಗೆ ಯಾವುದೇ ಮಹತ್ವ ನೀಡದೇ 'ತಾಕತ್ತಿದ್ದರೆ ನೇರವಾಗಿ ಎದುರು ಬಂದು ಮಾತನಾಡು' ಎಂಬ ಒಂದೇ ವಾಕ್ಯ ಬರೆದು ಮುಗಿಸುತ್ತಾರೆ. ಆದರೆ ದುರ್ಬಲರು, ಹೊಸತಾಗಿ ಮದುವೆಯಾದವರು, ಹದಿಹರೆಯದವರು, ಜೀವನಸಂಗಾತಿಯ ಅನ್ವೇಶಣೆಯಲ್ಲಿರುವವರು ಮೊದಲಾದವರಿಗೆ ಈ ಪದಗಳನ್ನು ಎದುರಿಸುವ ಮನೋಬಲ ಇರುವುದಿಲ್ಲ. ಇವನ್ನು ನಿರ್ಲಕ್ಷಿಸಿ ಹೆಚ್ಚಿನ ತೊಂದರೆಗೆ ಒಳಗಾಗಲೂ ಸಿದ್ಧರಿರದೇ ಮನೋವೇದನೆ ಅನುಭವಿಸುತ್ತಾರೆ. ಈ ವಿಧಾನಗಳನ್ನು ದುರುಳರು ಏಕೆ ಅನುಸರಿಸುತ್ತಾರೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ...

  ಕಾರಣ #1

  ಕಾರಣ #1

  ಈ ವಿಧಾನದ ಮೂಲಕ ಎದುರಾಳಿಯ ಮನಸ್ಸಿನಲ್ಲಿ ತನ್ನ ಚಿತ್ರ ಸದಾ ಹಸಿರಾಗಿರಬೇಕು, ತನ್ನ ಮಾತುಗಳನ್ನೇ ಆತ/ಆಕೆ ಕೇಳುತ್ತಿರಬೇಕು, ತನ್ನ ಬಗ್ಗೆಯೇ ಆತ/ಆಕೆ ಯೋಚಿಸುತ್ತಿರಬೇಕು ಎಂದು ಬಯಸುತ್ತಾನೆ. ಯಾವಾಗ ಈ ವ್ಯಕ್ತಿಯ ಮೆಸೇಜ್ ಬಂತೋ ಆಗ ಅತ್ತ ಗಮನ ಹೊರಳಿಸಿದರೂ ಮನಸ್ಸಿನಲ್ಲಿ ಈ ವ್ಯಕ್ತಿಯ ಚಿತ್ರ ಮೂಡಿದರೂ ಆತನ ಉದ್ದೇಶ ನೆರವೇರಿದಂತೆ.

  ಕಾರಣ #2

  ಕಾರಣ #2

  ತನ್ನ ಎದುರು ಇರುವ ವ್ಯಕ್ತಿಯನ್ನು ಕಳೆದುಕೊಳ್ಳುವ ಭಯ. ಎದುರಿನ ವ್ಯಕ್ತಿಯನ್ನು ಅಪಾರವಾಗಿ ಆರಾಧಿಸುತ್ತಿದ್ದು ಆತ/ಆಕೆ ಅಪ್ಪಿತಪ್ಪಿಯೂ ಬೇರೆ ಯಾರನ್ನಾದರೂ ಮೋಹಿಸಿದರೆ? ಇದಕ್ಕೆ ಆಸ್ಪದ ನೀಡದೇ ಇರಲು ಸತತವಾಗಿ ಮೆಸೇಜ್‌ಗಳನ್ನು ಕಳಿಸುತ್ತಾ ಇರುವುದು ಒಂದು ಕ್ರಮ.

  ಕಾರಣ #3

  ಕಾರಣ #3

  ಓರ್ವ ವ್ಯಕ್ತಿಯ ಮೆಸೇಜ್ ಕಳಿಸುವ ವ್ಯಸನ. ಇವರಿಗೆ ಮೆಸೇಜ್ ಕಳಿಸುವುದೇ ಒಂದು ವ್ಯಸನವಾಗಿದ್ದು ಇಡಿಯ ದಿನ ಒಬ್ಬರಿಗಿಂತ ಹೆಚ್ಚು ಜನರಿಗೆ ಸತತವಾಗಿ ಮೆಸೇಜ್ ಕಳಿಸುತ್ತಾ ಇರುತ್ತಾರೆ. ರಾತ್ರಿಮಲಗಿದ್ದಾಗಲೂ, ಶೌಚಾಲಯದಲ್ಲಿದ್ದಾಗಲೂ ಇವರ ಕ್ರಿಯೆ ನಡೆಯುತ್ತಾ ಇರುತ್ತದೆ. ಮೊಬೈಲು ಒಂದು ಕ್ಷಣ ಇಲ್ಲದೇ ಇದ್ದರೂ ಇವರು ವಿಚಲಿತರಾಗುತ್ತಾರೆ.

  ಕಾರಣ #4

  ಕಾರಣ #4

  ಕೆಲವರು ತಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಈ ವಿಧಾನ ಅನುಸರಿಸುತ್ತಾರೆ. ಆದರೆ ಈ ವಿಧಾನದಲ್ಲಿ ಎರಡೂ ಕಡೆಯಿಂದ ಸಮಾನವಾಗಿ ಸಂದೇಶಗಳು ರವಾನೆಯಾಗುವ ಕಾರಣ ಇದನ್ನೊಂದು ಪೂರಕ ವಿಧಾನವೆಂದು ಪರಿಗಣಿಸಬಹುದು.

  ಕಾರಣ #5

  ಕಾರಣ #5

  ತಮ್ಮನ್ನೇ ಬಲವಂತವಾಗಿ ಮತ್ತು ಸತತವಾಗಿ ತಮ್ಮ ಪ್ರಿಯತಮೆ ಪ್ರೀತಿಸುತ್ತಿರಬೇಕೆಂದು ಕೆಲವು ಪುರುಷರು ಬಯಸುತ್ತಾರೆ. ಈ ವಿಧಾನದಲ್ಲಿ ಸತತವಾಗಿ ಇನ್ನೂರು ಮುನ್ನೂರು ಸಂದೇಶಗಳನ್ನು ರವಾನಿಸಿ ಬಳಿಕ ಥಟ್ಟನೇ ನಿಲ್ಲಿಸಿ ಬಿಡುವುದು ಒಂದು ಕ್ರಮ. ಸಂದೇಶ ಇಲ್ಲದೇ ಇದ್ದಾಗ ಆಕೆ ಈತನ ಬಗ್ಗೆ ಚಿಂತಿಸುತ್ತಾಳೆ, ಏಕೆ ಮೆಸೇಜ್ ಬರಲಿಲ್ಲ ಎಂದು ವ್ಯಾಕುಲಳಾಗುತ್ತಾಳೆ ಎಂಬುದನ್ನು ನೆನೆಸಿಕೊಂಡೇ ಈ ಪುರುಷರು ಪುಳಕಿತರಾಗುತ್ತಾರೆ.

  ಕಾರಣ #6

  ಕಾರಣ #6

  ಕೆಲವರು ತಮ್ಮ ವಿಚಾರಗಳನ್ನು ಮಂಡಿಸಲು ಮತ್ತು ಇದರ ಬಗ್ಗೆ ಪ್ರತಿಕ್ರೆಯೆಗಳನ್ನು ಗಮನಿಸಲು ಉತ್ಸುಕರಾಗಿರುತ್ತಾರೆ. ಈ ವಿಚಾರ ವಿಮರ್ಶೆ ಯಾವತ್ತಿದ್ದರೂ ಉತ್ತಮವೇ. ಆದರೆ ಎಷ್ಟೋ ಸಂದರ್ಭಗಳಲ್ಲಿ ಕೆಲವರು ತಮ್ಮ ಮನಸ್ಸಿನಾಳದ ಕೆಟ್ಟ ಭಾವನೆಗಳನ್ನೂ ಹೊರಹಾಕಿ ಉಳಿದವರ ಕೋಪಕ್ಕೆ ಗುರಿಯಾಗುತ್ತಾರೆ. ಮತಗಳನ್ನು ಸೆಳೆಯಲೂ ರಾಜಕಾರಣಿಗಳು ಈ ಹೊಸ ತಂತ್ರವನ್ನು ಇತ್ತೀಚೆಗೆ ಬಳಸುತ್ತಿದ್ದಾರೆ.

   

  English summary

  What Is Text Blasting In Romance?

  Generally, business owners use the technique of text blasting by sending lots of texts to lots of people at a time using automated programs. They do this to promote their products or services. But when it comes to relationships, some men and woman use text blasting to overwhelm their partners.
  Story first published: Monday, May 23, 2016, 16:13 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more