Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಬಂಧದಲ್ಲಿ ರೋಮ್ಯಾನ್ಸ್‌ಗೂ ಹೆಚ್ಚಿನ ಒತ್ತು ನೀಡಿ..!
ಮೊದಲ ನೋಟದಲ್ಲೇ ಕೆಲವರು ಪರಸ್ಪರ ಆಕರ್ಷಿತರಾದರೆ, ಕಾಲೇಜು, ಕಚೇರಿಯಲ್ಲಿ ಕಣ್ಣುಕಣ್ಣು ಸೇರುವುದು. ಇದರ ಬಳಿಕ ತಿರುಗಾಟ, ಮನೆಯವರ ವಿರೋಧ ಅಥವಾ ಒಪ್ಪಿಗೆ, ಅಂತಿಮವಾಗಿ ಮದುವೆ. ಮದುವೆಯ ತನಕ ರೊಮ್ಯಾನ್ಸ್ ತುಂಬಾ ಚೆನ್ನಾಗಿಯೇ ನಡೆಯುತ್ತಿರುತ್ತದೆ. ಮದುವೆಯಾದ ಬಳಿಕ ಲೈಂಗಿಕ ಆಕರ್ಷಣೆ ಹೆಚ್ಚಾಗುತ್ತದೆ. ಮೊದಲು ಪ್ರೀತಿ ಒಂದೇ ಸಾಕು ಎನ್ನುತ್ತಿದ್ದವರು, ಕೊನೆಗೆ ಲೈಂಗಿಕ ಆಸಕ್ತಿಯನ್ನು ದೂರ ಮಾಡದಾಗುತ್ತಾರೆ.
ಪರಸ್ಪರರನ್ನು ಬಿಟ್ಟುಬಿಡಲಾರದಷ್ಟು ನಂಟು ಇವರಿಬ್ಬರ ಮಧ್ಯೆ ಬೆಳೆದು ಬಿಟ್ಟಿರುತ್ತದೆ. ಇಂತಹ ಜೋಡಿಗಳು ಜೀವನದಲ್ಲಿ ರೊಮ್ಯಾನ್ಸ್ ಉಳಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಯಾಕೆಂದರೆ ಜೀವನದ ಜಂಜಾಟದಲ್ಲಿ ಸಮಯ ಕಳೆದಂತೆ ರೊಮ್ಯಾನ್ಸ್ ಮತ್ತು ಪ್ರತಿಯೊಂದು ಆಸಕ್ತಿಯು ಕಡಿಮೆಯಾಗುತ್ತಾ ಸಾಗುತ್ತದೆ. ಇಬ್ಬರು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡಿದ್ದರೆ ವರ್ಷಗಳು ಉರುಳಿದರೂ ರೊಮ್ಯಾನ್ಸ್ ಎನ್ನುವುದು ಹಾಗೆ ಉಳಿದುಕೊಂಡಿರುತ್ತದೆ. ಇದರ ಬಗ್ಗೆ ಮುಂದಕ್ಕೆ ಓದಿಕೊಳ್ಳಿ...

ಇಬ್ಬರು ಪರಸ್ಪರರನ್ನು ನೋಡುವುದು
ಇದು ಮೊದಲನೇ ಹಂತ. ನೀವು ಮೊದಲ ಸಲ ಯಾರನ್ನಾದರೂ ನೋಡುತ್ತೀರಿ. ಅವರ ಮೇಲೆ ನಿಮಗೆ ಆಸಕ್ತಿ ಮೂಡುತ್ತದೆ. ಕೆಲವು ಭೇಟಿಗಳ ಬಳಿಕ ಈ ಆಸಕ್ತಿಯು ಭಾವನೆಗಳಲ್ಲಿ ಬದಲಾಗುತ್ತದೆ.

ಆಸಕ್ತಿ ಧನಾತ್ಮಕವಾಗುವುದು
ನಿಮ್ಮಲ್ಲಿನ ಆಸಕ್ತಿ ಆಳವಾಗಿ ಬೇರೂರಲು ಆರಂಭಿಸಿದಾಗ ಆಕೆ ನಿಮಗಾಗಿಯೇ ಬಂದಾಕೆ ಎಂಬ ಭಾವನೆಯಾಗುತ್ತದೆ. ಇದರಿಂದ ನಿಮ್ಮಿಬ್ಬರ ಸಂಬಂಧ ಬಲಗೊಳ್ಳುತ್ತದೆ.

ಬಿಟ್ಟಿರುವುದು ಅಸಾಧ್ಯ
ನೀವು ಜತೆಯಾಗಿ ಹೆಚ್ಚಿನ ಸಮಯ ಕಳೆಯಲು ಬಯಸುವುದು ಮತ್ತು ಒಬ್ಬರನ್ನೊಬ್ಬರು ಬಿಟ್ಟಿರುವುದು ನಿಮಗೆ ಅಸಾಧ್ಯವಾಗುವುದು.

ಪ್ರೀತಿ ನಿಮ್ಮ ಜೀವನದ ಅಂಗವಾಗುವುದು
ನೀವು ಆಕೆ/ಆತನೊಂದಿಗೆ ಹಾಸಿಗೆ ಹಂಚಿಕೊಳ್ಳಬಹುದು ಮತ್ತು ಪ್ರತಿಯೊಂದು ಕ್ಷಣವನ್ನು ನೀವು ಆನಂದಿಸಬಹುದು.

ಪರಸ್ಪರರನ್ನು ಲಘುವಾಗಿ ಪರಿಗಣಿಸುವುದು
ಪರಸ್ಪರರನ್ನು ಲಘುವಾಗಿ ಪರಿಗಣಿಸಲು ಆರಂಭಿಸಿದಾಗ ನಿಮ್ಮ ಮಧ್ಯೆ ಮನಸ್ತಾಪ ಮೂಡಲು ಆರಂಭವಾಗುತ್ತದೆ.

ಬೇಸರ ಮೂಡಿಸುವುದು
ಮಲಗುವ ಕೋಣೆಯು ನಿಮ್ಮ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡಿದಾಗ ಮಲಗುವ ಕೋಣೆಯು ಬೇಸರ ಮೂಡಿಸುವುದು.



Click it and Unblock the Notifications
