Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ವಯಸ್ಸಾದ ಪುರುಷರೊಂದಿಗೆ ಡೇಟಿಂಗ್-ಕಿರಿಕಿರಿ ಕಟ್ಟಿಟ್ಟ ಬುತ್ತಿ!
ಡೇಟಿಂಗ್ ಎಂದರೆ ರೋಮಾಂಚಕ ಅನುಭವವೊಂದು ಮನಸ್ಸಿನ ಮುಂದೆ ಸುಳಿಯುತ್ತದೆ. ಹಾಗೆಂದು ಡೇಟಿಂಗ್ ಯಾವಾಗಲು ರಮ್ಯ ಚೈತ್ರ ಕಾಲದ ರೀತಿ ಇರುತ್ತದೆ ಎಂದು ಭಾವಿಸಬೇಕಾಗಿಲ್ಲ. ಅಲ್ಲಿ ಸಹ ಸಿಹಿ-ಕಹಿ ಇರುತ್ತದೆ. ಅದು ಅದ್ಭುತ ಸಂಬಂಧಕ್ಕೆ ಬಾಗಿಲು ತೆರೆಯುವ ಸಂದರ್ಭವೇ ಇರಬಹುದು. ಆದರೆ ಅದಕ್ಕೂ ಒಂದು ಇತಿ ಮಿತಿ ಇರುತ್ತದೆ. ಕೆಲವೊಮ್ಮೆ ನಮ್ಮ ಆಯ್ಕೆಯು ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸಬಹುದು. ಅದರಲ್ಲೂ ಒಬ್ಬ ತನಗಿಂತ ವಯಸ್ಸಾದ ವ್ಯಕ್ತಿಯ ಜೊತೆಗೆ ಡೇಟಿಂಗ್ ಮಾಡುವ ಹೆಂಗಸರು ಎದುರಿಸುವ ಸಮಸ್ಯೆಗಳನ್ನು ಈ ಅಂಕಣದಲ್ಲಿ ನಾವು ಚರ್ಚಿಸುತ್ತಿದ್ದೇವೆ, ಮುಂದೆ ಓದಿ...

ಪ್ರೀತಿ ಇಂತಹ ವಯಸ್ಸಿನವರ ಜೊತೆಯಲ್ಲಿಯೇ ಬೆಳೆಯಬೇಕು ಎಂಬ ಕಾನೂನು ಇಲ್ಲ. ಅದು ಅವರಿಗೆ ಬಿಟ್ಟ ವಿಚಾರ, ಅದರಲ್ಲೂ ವಯಸ್ಸಿನ ಅಂತರವು ಡೇಟಿಂಗ್ ಮೇಲೆ ಕೊಂಚ ಪರಿಣಾಮಬೀರುತ್ತದೆ. ಹೆಂಗಸು ವಯಸ್ಸಾದ ಪುರುಷರ ಜೊತೆಗೆ ಡೇಟಿಂಗ್ ಮಾಡಿದರೆ ಜನ ಒಂದು ರೀತಿ ನೋಡುವುದು ಸಹಜ. ಆದರೆ ನಾವು ಅಂದುಕೊಂಡಂತೆ ಅಲ್ಲ ಈ ಮಹಿಳೆಯರು! ಇವರು ಓಲ್ಡ್ ಈಸ್ ಗೋಲ್ಡ್ ಎಂದು ಅರಿತುಕೊಂಡವರು, ಅದನ್ನೆ ಧ್ಯೇಯವನ್ನಾಗಿಸಿಇಕೊಂಡು ಚಿನ್ನವನ್ನು ಗಣಿಗಾರಿಕೆ ಮಾಡುವ ಮನೋಭಾವದವರು ಸಹ ಆಗಿರುತ್ತಾರೆ. ಆದರೆ ಎಲ್ಲಾ ಸಮಯದಲ್ಲಿ ಇವರ ಆಸೆ ಈಡೇರುವುದಿಲ್ಲ ಅದು ಬೇರೆ ಮಾತು.
ಹುಣಸೆಗೆ ಮುಪ್ಪಾದರೆ ಹುಳಿಗೆ ಮುಪ್ಪೆ-ಎಂಬ ಮಾತು ಡೇಟಿಂಗ್ ಮಾಡುವ ವಯಸ್ಸಾದ ಪುರುಷರಿಗು ಅನ್ವಯಿಸುತ್ತದೆ. ಪ್ರೀತಿಗೆ ರೋಮಾಂಚನ ಬೇಕು. ಅದನ್ನು ಪ್ರೀತಿಯೆ ಪಡೆದುಕೊಳ್ಳುತ್ತದೆ. ಇಲ್ಲಿ ವಯಸ್ಸು ಕೇವಲ ಸಂಖ್ಯೆ ಮಾತ್ರ. ಇಬ್ಬರೂ ಅರ್ಥ ಮಾಡಿಕೊಂಡು ಹೋದರೆ ಈ ಡೇಟಿಂಗ್ ಸಂಬಂಧವಾಗಿ ಬೆಳೆಯುತ್ತದೆ. ಆದರೂ ಕೆಲವೊಂದು ಸಮಸ್ಯೆಗಳು ಬೇಡ ಬೇಡ ಎಂದರು ಮಹಿಳೆಯರನ್ನು ಈ ವಿಚಾರವಾಗಿ ಕಾಡುತ್ತದೆ. ಬನ್ನಿ ಅದು ಯಾವುದು ಎಂದು ನೋಡೋಣ. ಡೇಟಿಂಗ್ ವಿಷಯದಲ್ಲಿ ಪುರುಷರನ್ನು ಮಾತ್ರ ನಂಬಬೇಡಿ!
ಜನರೇಷನ್ ಗ್ಯಾಪ್
ಪೋಷಕರು ಮತ್ತು ಮಕ್ಕಳು ಯಾವಾಗಲು ಈ ಜನರೇಷನ್ ಗ್ಯಾಪ್ ಎಂಬ ಪದವನ್ನು ಬಳಸಿ ಹೀಯಾಳಿಸುತ್ತಿರುತ್ತಾರೆ. ಒಬ್ಬ ಮಹಿಳೆಯು ವಯಸ್ಸಾದ ಪುರುಷನ ಜೊತೆಗೆ ಡೇಟಿಂಗ್ ಮಾಡಿದರೆ ಮೊದಲು ಎದುರಿಸುವ ಸಮಸ್ಯೆ ಈ ಜನರೇಷನ್ ಗ್ಯಾಪ್. ಅದು ಬಿಡಿ ಡೇಟಿಂಗ್ ಮಾಡುವವರಲ್ಲಿಯೇ ವಿಭಿನ್ನ ಅಭಿಪ್ರಾಯಗಳು ತಲೆದೋರಿದಲ್ಲಿ ಅವರ ಸಂಬಂಧವು ಮುಂದುವರಿಯುವುದಿಲ್ಲ.
ಸದೃಢ ಮತ್ತು ಪ್ರಭಾವಿ ಗಂಡಸು ಅಪಾಯಕಾರಿ
ಬಹುತೇಕ ಸಂದರ್ಭಗಳಲ್ಲಿ, ವಯಸ್ಸಾದ ಗಂಡಸು ತನ್ನ ಕಿರಿ ವಯಸ್ಸಿನ ಗರ್ಲ್‌ಫ್ರೆಂಡ್ ಅಥವಾ ಸಂಗಾತಿಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಾನೆ. ಆ ಮಹಿಳೆಯ ಜೀವನವನ್ನು ನರಕ ಮಾಡಲು ಅವರು ಏನು ಬೇಕಾದರು ಮಾಡುತ್ತಾರೆ. ಅದರಲ್ಲೂ ಆಕೆಗೆ ವಿಚ್ಛೇಧನ ನೀಡಲು ಬೇಕಾದ ಕಾರ್ಯವನ್ನು ಅವರು ಮಾಡುತ್ತಾರೆ.
ವಯಸ್ಸಾದ ಗಂಡಸರನ್ನು ಪಳಗಿಸುವುದು ಅಸಾಧ್ಯ
ಒಬ್ಬ ಯುವಕನು ನೀವು ಹೇಳಿದಂತೆ ಕೇಳುತ್ತಾನೆ. ಆದರೆ ವಯಸ್ಸಾದ ಗಂಡಸು ನೀವು ಹೇಳಿದಂತೆ ಕೇಳುತ್ತಾನೆ ಎಂದು ಭಾವಿಸಬೇಡಿ. ಅವರು ಬೇಗ ಯಾವುದೇ ಒಪ್ಪಂದಕ್ಕೆ ಬರುವುದಿಲ್ಲ. ಅವರು ಯಾವಾಗಲು ಒಂದು ನಿರ್ಧಾರ ತೆಗೆದುಕೊಂಡು ಅದಕ್ಕೆ ಬದ್ಧರಾಗಿರುತ್ತಾರೆ. ಮದುವೆ ಮುಂಚೆ ಡೇಟಿಂಗ್, ಸರಿಯೋ? ತಪ್ಪೋ?
ಮದುವೆಯಾದ ಗಂಡಸರು ವಿಚ್ಛೇಧನ ನೀಡುವುದಿಲ್ಲ
ಇದು ವಿಶೇಷವಾಗಿ ವಯಸ್ಸಾದ ಗಂಡಸರ ವಿಚಾರದಲ್ಲಿ ಸತ್ಯವಾಗುತ್ತದೆ. ಒಂದು ವೇಳೆ ನೀವು ಈಗಾಗಲೇ ಮದುವೆಯಾಗಿರುವ ಗಂಡಸನ್ನು ಇಷ್ಟಪಟ್ಟಲ್ಲಿ, ಆತ ತನ್ನ ಹೆಂಡತಿಗೆ ವಿಚ್ಛೇಧನ ನೀಡಿ ನಿಮ್ಮ ಜೊತೆ ಬಾಳುತ್ತಾನೆ ಎಂದು ಭಾವಿಸಬೇಡಿ. ಅವರು ತನ್ನ ಹೆಂಡತಿಗೆ ವಿಚ್ಛೇಧನ ನೀಡುವುದಿಲ್ಲ. ಮಕ್ಕಳನ್ನು ತೊರೆಯುವುದಿಲ್ಲ. ಆದರೆ ನೀವು ಬೇಕು ಅವರಿಗೆ!. ನೀವು ನೀಡುವ ಸಂತೋಷ ಬೇಕು ಮತ್ತು ಅವರ ಕುಟುಂಬವು ಅವರಿಗೆ ಬೇಕು. ಇಂತಹ ಇನ್ನಿತರ ಸಮಸ್ಯೆಗಳು ನಿಮಗೆ ಈ ವಿಚಾರದಲ್ಲಿ ಕಾಡುತ್ತವೆ. ಈ ಕುರಿತಾಗಿ ನಿಮಗೆ ಏನಾದರು ಅಭಿಪ್ರಾಯಗಳಿದ್ದಲ್ಲಿ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.



Click it and Unblock the Notifications


