For Quick Alerts
ALLOW NOTIFICATIONS  
For Daily Alerts

ಜೀವನ ಸಂಗಾತಿಯ ಆಯ್ಕೆಯ ವಿಚಾರದಲ್ಲಿ, ತಪ್ಪದಿರಲಿ ಹೆಜ್ಜೆ

By Deepak M
|

ಜೀವನದಲ್ಲಿ ಒಂದು ಕಾಲ ಬರುತ್ತದೆ. ಆಗ, ಆ ಹಂತದಿಂದ ನಮಗೆ ಒಬ್ಬ ಸಂಗಾತಿಯ ಅವಶ್ಯಕತೆ ಇರುತ್ತದೆ. ಆಗ ಅವರೊಂದಿಗೆ ಸೇರಿ ನೀವು ಮುಂದಿನ ಜೀವನವನ್ನು ನಡೆಸುವ ಆಲೋಚನೆ ಮಾಡುತ್ತೀರಿ. ಆದರೆ ಇಂದಿನ ಕಾಲದಲ್ಲಿ ನಾವು ಸಾಮಾನ್ಯವಾಗಿ ಬ್ರೇಕಪ್‌ಗಳನ್ನು ಅಥವಾ ಮುರಿದು ಬಿದ್ದ ಸಂಬಂಧಗಳನ್ನು ಹೆಚ್ಚಾಗಿ ನೋಡುತ್ತಿರುತ್ತೇವೆ. ಇವು ಸಂಬಂಧದಲ್ಲಿ ಮುಂದುವರಿಯಬೇಕು ಎಂದು ಕನಸು ಕಾಣುವ ಪ್ರತಿಯೊಬ್ಬರನ್ನು ಚಿಂತೆಗೆ ತಳ್ಳುವ ಒಂದು ವಿಚಾರವಾಗಿರುತ್ತದೆ. ಅದಕ್ಕಾಗಿಯೇ ಒಳ್ಳೆಯ ಸಂಗಾತಿಯನ್ನು ಹುಡುಕುವ ಕೆಲಸವನ್ನು ಪ್ರತಿಯೊಬ್ಬರು ಮಾಡುತ್ತಾರೆ.

ಸಾಮಾನ್ಯವಾಗಿ ತಮ್ಮ ಭವಿಷ್ಯದ ಸಂಗಾತಿಯ ಬಗ್ಗೆ ಪ್ರತಿಯೊಬ್ಬರಿಗೂ ಒಂದು ಕಲ್ಪನೆ ಇರುತ್ತದೆ. ಅದಕ್ಕಾಗಿ ಅವರು ಒಂದು ರೂಪುರೇಷೆಯನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಹಾಗೆ ಒಂದು ಯೋಜನೆಯನ್ನು ಇರಿಸಿಕೊಳ್ಳುವುದು ತಪ್ಪಲ್ಲ. ಏಕೆಂದರೆ ಯಾರೋ ಒಬ್ಬರು ಸಿಕ್ಕಿದರು ಎಂದು ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವುದು ಸರಿಯಲ್ಲ.

How To Find The Person Of Your Dreams

ಅದೆಲ್ಲಕ್ಕಿಂತ ಮುಖ್ಯವಾಗಿ ಪ್ರೀತಿಗಾಗಿ ಹುಡುಕುವುದು ಮಾನವನ ಸಹಜ ಸ್ವಭಾವವಾಗಿರುತ್ತದೆ. ಅದರಲ್ಲೂ ಸಂಗಾತಿಯಿಂದ ಪವಿತ್ರ ಪ್ರೀತಿಯನ್ನು ಬಯಸುವುದು ಮಾನವರ ಒಂದು ಗುಣವಾಗಿರುತ್ತದೆ. ಈ ಲೇಖನದಲ್ಲಿ ನೀವು ನಿಮ್ಮ ಬಾಯ್‌ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಅನ್ನು ಹೇಗೆ ಆರಿಸಿಕೊಳ್ಳಬೇಕು ಎಂಬುದರ ಕುರಿತಾಗಿ ಕೆಲವೊಂದು ಶಿಫಾರಸುಗಳನ್ನು ನಾವು ನೀಡಿದ್ದೇವೆ. ಬನ್ನಿ ನಮ್ಮ ಲವ್ ಗುರುಗಳು ಏನು ಹೇಳುತ್ತಾರೆ ಎಂದು ತಿಳಿದುಕೊಳ್ಳೋಣ. ಬನ್ನಿ ಇನ್ನು ತಡಮಾಡದೆ ಸಂಗಾತಿಯನ್ನು ಹುಡುಕುವ ಬಗೆ ಎಂಬ ಕುರಿತು ಕೆಲವೊಂದು ಆಸಕ್ತಿಕರವಾದ ವಿಚಾರಗಳನ್ನು ತಿಳಿದುಕೊಳ್ಳೋಣ. ನೀವು ಸಹ ಈ ಅಂಶಗಳನ್ನು ಒಪ್ಪಿಕೊಳ್ಳುತ್ತೀರಿ ಎಂದು ನಾವು ಭಾವಿಸುತ್ತೇವೆ.

ಗಮನ ನೀಡುವ ಕಾಲ
ಈ ಸಮಯದಲ್ಲಿ ನೀವು ಜಾಗರೂಕತೆಯಿಂದ ಮುಂದುವರಿಯುತ್ತೀರಿ. ಸಂಗತಿಗಳು ಹೇಗೆ ನಡೆಯುತ್ತವೆ ಎಂದು ಗಮನಿಸುತ್ತೀರಿ. ಇಲ್ಲಿ ಬರೀ ಮಾತು ಕತೆ ಮಾತ್ರ ಇರುತ್ತದೆ ಹಾಗು ನೀವು ಮಾತನಾಡುವ ಮೂಲಕವೇ ನಿಮ್ಮ ಸಂಗಾತಿಯಾಗಲು ಬಂದಿರುವವರು ಹೇಗೆ, ಏನು ಎಂಬುದರ ಚಿತ್ರಣವನ್ನು ಪಡೆದುಕೊಂಡು ಮುಂದುವರಿಯುವುದೇ ಬೇಡವೇ ಎಂಬ ತೀರ್ಮಾನವನ್ನು ತೆಗೆದುಕೊಳ್ಳುತ್ತೀರಿ. ಗಮನ ನೀಡುವ ಕಾಲ ಅತ್ಯಂತ ಮುಖ್ಯ ಕಾಲವಾಗಿರುತ್ತದೆ.

ಸಂಬಂಧದಲ್ಲಿ ಪ್ರತಿಫಲಾಪೇಕ್ಷೆ
ಸಂಬಂಧದಲ್ಲಿ ಪ್ರತಿಫಲಾಪೇಕ್ಷೆಯನ್ನು ನಿಧಾನವಾಗಿ ಮಾಡಿ. ಈ ಕುರಿತಾಗಿ ಸ್ವಯಂನಿಯಂತ್ರಣವಿರುವುದು ಒಳ್ಳೆಯದು. ನೀವು ನಿಮ್ಮ ಸಂಬಂಧದಲ್ಲಿ ಮುಂಗೋಪಿಯಾಗಿರುವುದು ಒಳ್ಳೆಯದಲ್ಲ, ಹಾಗೆಯೇ ಆಸೆಬುರುಕರಾಗಿರುವುದು ಒಳ್ಳೆಯದಲ್ಲ. ತಾಳ್ಮೆ ಸಂಬಂಧ ಬೆಳೆಸಲು ತೀರಾ ಅವಶ್ಯಕ. ಮೊದಲು ತಾಳಿ, ಆಮೇಲೆ ಸಂಬಂಧ ಬೆಳೆಯುತ್ತದೆ.

ಗುರಿ ಇರಬೇಕು
ನಿಮ್ಮ ಸಂಗಾತಿಗೆ ಜೀವನದಲ್ಲಿ ಗುರಿ ಇದೆಯೇ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಅವರಿಗೆ ಜೀವನದಲ್ಲಿ ಏನಾದರೂ ಸಾಧಿಸುವ ಛಲ ಇದೆಯೇ, ಅಥವಾ ಅವರಿಗೆ ಜೀವನದಲ್ಲಿ ಕೇವಲ ಕಾಲ ಕಳೆಯುವ ಮನೋಭಾವ ಇದೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಒಂದು ವೇಳೆ ನಿಮ್ಮ ಸಂಗಾತಿಯಾಗುವವರಿಗೆ ಜೀವನದಲ್ಲಿ ಗುರಿ ಇಲ್ಲವೆಂದಾದಲ್ಲಿ, ಅವರು ನಿಮ್ಮ ನಿರೀಕ್ಷೆಯನ್ನು ತಲುಪುವುದು ಕಷ್ಟವಾಗುತ್ತದೆ.

ನಿಮಗಾಗಿ ಸಮಯವನ್ನು ನೀಡುವುದು
ಇದು ನಿಮ್ಮ ಸಂಗಾತಿಯಲ್ಲಿ ನೀವು ಮೆಚ್ಚಲೇ ಬೇಕಾದ ಗುಣವಾಗಿರುತ್ತದೆ. ನಿಮಗಾಗಿ ಅವರು ಸಮಯವನ್ನು ಮಾಡಿಕೊಂಡು ಭೇಟಿಯಾಗಲು ಬಂದರೆ ಅದನ್ನು ಗೌರವಿಸಿ. ಪ್ರತಿಯೊಬ್ಬರಿಗೂ ಇರುವುದು ಒಂದೇ ರೀತಿಯ ಕಾಲ. ಆ ಕಾಲದಲ್ಲಿ ನಿಮಗೂ ಒಂದು ಪಾಲನ್ನು ನೀಡಿದರೆ, ನೀವು ಅದಕ್ಕಾಗಿ ಸಂತೋಷಪಡಬೇಕು. ಅದರಲ್ಲೂ ಹುಡುಗ ಆಗಲಿ, ಹುಡುಗಿ ಆಗಲಿ, ನಿಮ್ಮ ಸಂಗಾತಿ ನಿಮ್ಮನ್ನು ಭೇಟಿಯಾಗಲು ಬಂದಾಗ ನೀಡುವ ನಗು ಸಾಕು, ಅದೇ ದೊಡ್ಡ ಉಡುಗೊರೆಯಾಗಿರುತ್ತದೆ.

English summary

How To Find The Person Of Your Dreams

When you are searching for a partner or are in the plans to settle down with somebody special, you need to be clear on certain things in your life. With an increase in the trend of breakups these days, it has become a major worry for all of us, if we'll ever be able to find the right person in our life.
Story first published: Sunday, May 15, 2016, 12:45 [IST]
X
Desktop Bottom Promotion