Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಕ್ತ ವಿವಾಹ: ಇಲ್ಲಿ ಮಧುರ ಸಂಬಂಧಕ್ಕೆ ಬೆಲೆಯೇ ಇಲ್ಲ!
ಮುಕ್ತ ವಿವಾಹ ಅಥವಾ ತೆರೆದ ಮದುವೆಗಳು ನಿಜಕ್ಕೂ ಒಳ್ಳೆಯದೆ? ಅರೆ ಮೊದಲು ಹೇಳಿ ತೆರೆದ ಮದುವೆಗಳು ಎಂದರೇನು? ಒಂದು ಗಂಡು-ಹೆಣ್ಣು ಮದುವೆಯ ಹೊರಗೆ ದೈಹಿಕ ಸಂಬಂಧವನ್ನು ಇರಿಸಿಕೊಳ್ಳಲು ಪರಸ್ಪರ ಒಪ್ಪಿಕೊಂಡು ಬಾಳುವ ಮದುವೆಯನ್ನು ತೆರೆದ ಮದುವೆ ಎಂದು ಕರೆಯುತ್ತಾರೆ.
ಇತ್ತೀಚಿನ ದಿನಗಳಲ್ಲಿ ಇದು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಲವಾರು ಜನರು ತಮ್ಮ ದೇಹ ತಮ್ಮದು, ಅದಕ್ಕೂ ಸ್ವಾತಂತ್ರ್ಯ ಬೇಕು ಎಂದು ಕೊಂಡು ಈ ಬಗೆಯ ಸಂಬಂಧದಲ್ಲಿ ಮುಂದುವರಿಯುತ್ತಾರೆ. ಹಾಗಾದರೆ ಗಂಡು-ಹೆಣ್ಣು ಇಬ್ಬರನ್ನು ಆಕರ್ಷಿಸುವಂತಹ ಅಂಶ ಈ ತೆರೆದ ಮದುವೆಯಲ್ಲಿ ಏನಿದೆ? ಅದು ಆಯ್ಕೆಯ ಸ್ವಾತಂತ್ರ.
ಒಬ್ಬ ವ್ಯಕ್ತಿಯು ಒಬ್ಬರೆ ಜೊತೆಗೆ ಮಲಗಬೇಕು ಎಂಬ ನಿಯಮ ಇಲ್ಲಿಲ್ಲ. ಆ ವಿಚಾರ ಕೆಲವರನ್ನು ಆಕರ್ಷಿಸುತ್ತದೆ. ಹಾಗೆಂದು ಈ ಸಂಬಂಧಗಳು ಆರೋಗ್ಯಕರವಾಗಿರುತ್ತವೆಯೇ? ಇದರಲ್ಲಿ ಯಾವುದೇ ನೈತಿಕ ನೆಲೆಗಟ್ಟು ಇಲ್ಲ. ಇಲ್ಲಿ ಕೇವಲ ಆಸೆ, ವಾಂಛೆ, ಹಂಬಲಗಳು ಮತ್ತು ದುರಾಸೆಗಳು ಮಾತ್ರ ಇರುತ್ತವೆ. ಇದರಿಂದ ಉಂಟಾಗುವ ದುಷ್ಫರಿಣಾಮಗಳ ಕುರಿತು ನೋಡೋಣ ಬನ್ನಿ....

ಅಸೂಯೆ
ನಿಮ್ಮ ಶ್ರೀಮತಿಯು ನಿಮ್ಮ ಸಹೋದ್ಯೋಗಿಯ ಜೊತೆಗೆ ಒಂದು ಅಫೇರ್ ಇರಿಸಿಕೊಳ್ಳಲು ಸಮ್ಮತಿಸಿದರು ಸಹ, ಈ ಪ್ರಕ್ರಿಯೆ ಆಕೆಗೆ ನಿಮ್ಮ ಕುರಿತಾಗಿ ಅಸೂಯೆ ಉಂಟಾಗುವಂತೆ ಮಾಡುತ್ತದೆ. ಆಕೆಗೆ ನೀವು ಗಮನ ನೀಡುತ್ತಿಲ್ಲ ಎಂಬುದು ಅದಕ್ಕೆ ಇರುವ ಕಾರಣ.

ಜಗಳಗಳು
ಕೆಲವೊಮ್ಮೆ ಗಂಡ-ಹೆಂಡತಿ ಇಬ್ಬರೂ ಮದುವೆಯ ಹೊರಗೆ ಪರಸ್ಪರ ಒಪ್ಪಿ ಸಂಬಂಧಗಳನ್ನು ಇರಿಸಿಕೊಂಡಿರುತ್ತಾರೆ. ಆಗ ಮೊದಲು ಇದು ತಮಾಷೆಯ ಸಂಗತಿಯಾಗಿರುತ್ತದೆ. ಆದರೆ ಮುಂದೆ ಇದರಿಂದ ಮದುವೆಯ ಭಾಂದವ್ಯ ಹಾಳಾಗುತ್ತದೆ. ಕಾಲ ಕ್ರಮೇಣ ಇಬ್ಬರ ನಡುವೆ ಅನ್ಯೋನ್ಯತೆ ಹೋಗಿ, ಜಗಳಗಳು ಆರಂಭವಾಗುತ್ತದೆ.

ಉದಾಸೀನತೆ
ತಮ್ಮ ಸಂಗಾತಿ ತಮ್ಮನ್ನು ಉದಾಸೀನ ಮಾಡುತ್ತಿದ್ದರೆ ಎಂಬ ಭಾವನೆ ಒಬ್ಬರಲ್ಲ ಒಬ್ಬರಿಗೆ ಬಂದೇ ಬರುತ್ತದೆ. ನೀವು ಎಷ್ಟೇ ಜಾಗರೂಕತೆ ವಹಿಸಿದರು, ಈ ಸಮಸ್ಯೆ ತಪ್ಪುವುದಿಲ್ಲ. ಪರಸ್ಪರ ಬೇಸರ ಹೊಂದುವ ಸಂದರ್ಭ ಬರುತ್ತದೆ.

ಬ್ಲಾಕ್ಮೇಲ್
ಒಮ್ಮೊಮ್ಮೆ ನಿಮ್ಮ ಜೊತೆಗೆ ಮೋಜು ಮಾಡಿದ ಸಂಗಾತಿ ಅದನ್ನು ಬಹಿರಂಗ ಮಾಡುತ್ತೇವೆ ಎಂದು ಬ್ಲಾಕ್‌ಮೇಲ್ ಮಾಡಬಹುದು. ಅದು ಹಣಕ್ಕಾಗಿ ಇಲ್ಲವೇ ಲೈಂಗಿಕ ಕ್ರಿಯೆ ಅಥವಾ ಇನ್ನೊಂದಕ್ಕಾಗಿರಬಹುದು. ಇದು ಈ ಬಗೆಯ ಸಂಬಂಧದಲ್ಲಿರುವ ಅತ್ಯಂತ ದೊಡ್ಡ ಅಪಾಯವಾಗಿರುತ್ತದೆ.

ವಿಚ್ಛೇಧನ
ಇಂತಹ ಪ್ರಕ್ರಿಯೆಯನ್ನು ಹೊಂದಿರುವ ಗಂಡ-ಹೆಂಡತಿ ತುಂಬಾ ದಿನ ಒಟ್ಟಿಗೆ ಬಾಳುವುದಿಲ್ಲ. ಅವರಿಗೆ ಅವರ ಸಂಬಂಧದಲ್ಲಿ ಎಲ್ಲವೂ ತಪ್ಪುಗಳು ಕಂಡು, ಒಂದು ದಿನ ಬೇರೆಯಾಗುತ್ತಾರೆ.

ಹಣಕಾಸು ಸಮಸ್ಯೆಗಳು
ಮದುವೆಯ ಹೊರಗೆ ನೀವು ಒಂದು ಸಂಬಂಧದಲ್ಲಿದ್ದರೆ, ನಿಮಗೆ ಹಣಕಾಸು ಎಷ್ಟಿದ್ದರು ಸಾಲದು. ಖರ್ಚುಗಳು ಹೆಚ್ಚಿರುತ್ತವೆ. ಇದು ನಿಮ್ಮ ಹೆಂಡತಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ.



Click it and Unblock the Notifications
