For Quick Alerts
ALLOW NOTIFICATIONS  
For Daily Alerts

  ಗಂಡಸರು ಸೌಂದರ್ಯದ ಹಿಂದೆ ಓಡುತ್ತಾರಾ?

  By Deepak M
  |

  ಗಂಡಸರಿಗೆ ಏನಿಷ್ಟ? ಹೆಂಗಸರ ಬಳಿ ಈ ಪ್ರಶ್ನೆಯನ್ನು ಕೇಳಿದರೆ ಅವರ ಉತ್ತರ ಒಂದೇ, ಅವರು ಯಾವಾಗಲು ಸೌಂದರ್ಯದ ಹಿಂದೆಯೇ ಸಾಗುತ್ತಾರೆ ಎಂಬುದು ಅವರ ಉತ್ತರವಾಗಿರುತ್ತದೆ. ವಾಸ್ತವ ಏನಪ್ಪಾ ಎಂದರೆ ತಮ್ಮ ಸುತ್ತ ಮುತ್ತ ಓಡಾಡುವ ಹೆಂಗಸರ ಕಡೆಗೆ ಗಂಡಸರು ವಿಚಿತ್ರವಾಗಿ ಒಂದು ನೋಟವನ್ನು ಬೀರುವುದುಂಟು, ಅದರಲ್ಲೂ ಸುಂದರವಾದ ಹೆಂಗಸರು ಅಕ್ಕ-ಪಕ್ಕ ಓಡಾಡಿದರೆ ಮುಗಿಯಿತು ಗಂಡಸರ ಕಣ್ಣನ್ನು ಅನಾಮತ್ತಾಗಿ ಆಕಡೆ ಸೆಳೆದಂತೆ ಅವರು ಅತ್ತ ಒಂದು ನೋಟ ಬೀರುತ್ತಾರೆ.

  ಇದನ್ನು ಕೂಲಂಕುಷವಾಗಿ ನೋಡಿದರೆ ನಿಮಗೆ ಒಂದು ವಿಷಯ ಅರ್ಥವಾಗುತ್ತದೆ. ಗಂಡಸರು ಹೆಂಗಸರಲ್ಲಿ ಸೌಂದರ್ಯವನ್ನು ಮಾತ್ರ ನೋಡುವುದಿಲ್ಲ. ಅವರ ಬುದ್ಧಿವಂತಿಕೆ, ಜ್ಞಾನ, ಕರುಣೆ, ಔದಾರ್ಯ, ಕಳಕಳಿ, ಕೌಶಲ್ಯ, ಸಾಮರ್ಥ್ಯ, ಹಾಸ್ಯ ಪ್ರಜ್ಞೆ, ಚತುರತೆ ಇತ್ಯಾದಿ ಇತ್ಯಾದಿಗಳನ್ನು ಅವರು ಇಷ್ಟಪಡುತ್ತಾರೆ. ಆದರೂ ಒಂದು ವಿಷಯ ಇಲ್ಲಿ ಹೇಳಬೇಕು, ತೀರಾ ಬುದ್ಧಿವಂತ ಗಂಡಸರು ಸುಂದರವಾದ ಹೆಂಗಸರನ್ನು ಇಷ್ಟಪಟ್ಟಿರುತ್ತಾರೆ. ಬನ್ನಿ ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯೋಣ.

  ಸತ್ಯ#1

  ಸತ್ಯ#1

  15-25 ವರ್ಷದ ಯುವಕರಿಗೆ ಸತ್ಯವಾಗಿ ಮಾಡೆಲ್ ರೀತಿ ಕಾಣುವ ಒಂದು ಸುಂದರವಾದ ಹುಡುಗಿಯೇ ಬೇಕು. ಸಾಮಾನ್ಯವಾಗಿ ಈ ವಯಸ್ಸಿನ ಹುಡುಗರಲ್ಲಿ ಬುದ್ಧಿ ಇನ್ನೂ ಪ್ರಬುದ್ಧತೆಯ ಹಂತಕ್ಕೆ ಬಂದಿರುವುದಿಲ್ಲ ಮತ್ತು ಅವರು ಏನು ಇಷ್ಟಪಡುತ್ತಿದ್ದಾರೆ ಎಂದು ಅವರಿಗೆ ಗೊತ್ತಿರುವುದಿಲ್ಲ.

  ಸತ್ಯ#2

  ಸತ್ಯ#2

  25-30 ವರ್ಷ ವಯಸ್ಸಿನ ಗಂಡಸರಿಗೆ ಭಾವನೆಗಳ ಮೇಲೆ ಹಿಡಿತವಿರುವ ಹೆಂಗಸರನ್ನು ಕಂಡರೆ ಇಷ್ಟವಾಗುತ್ತದೆ. ಏಕೆಂದರೆ ಈ ಹಿಂದೆ ಏನಾದರು ಡೇಟಿಂಗ್ ಮಾಡುವಾಗ ಅವರಿಗೆ ಆದ ಕಹಿ ಅನುಭವದಿಂದಾಗಿ ಅವರಿಗೆ ಈ ಕೋರಿಕೆ ಬಂದಿರಬಹುದು. ಅವರಿಗೆ ಗೊತ್ತು ಸೌಂದರ್ಯವೊಂದೇ ಮಾನದಂಡವಲ್ಲ ಎಂದು.

  ಸತ್ಯ #3

  ಸತ್ಯ #3

  30 ವರ್ಷ ವಯಸ್ಸಿನ ನಂತರ ಹೆಂಗಸರನ್ನು ಅಳೆಯಲು ಸೌಂದರ್ಯವೊಂದೆ ಮಾನದಂಡವಲ್ಲ ಎಂದು ಅರ್ಥ ಮಾಡಿಕೊಳ್ಳುವ ಗಂಡಸರು, ಹೆಂಗಸರಲ್ಲಿ ಬೇರೆ ಗುಣಗಳ ಪ್ರಾಮುಖ್ಯತೆಯನ್ನು ಅರಿಯುತ್ತಾರೆ. ಸುಂದರಿಯರತ್ತ ಕಣ್ಣು ಹೋದರು ಸಹ, ತಮ್ಮ ಜೀವನಾನುಭವದ ಮೂಲಕ ಆ ಹೆಂಗಸಿನ ಇತರೆ ಗುಣಗಳನ್ನು ಅಳೆಯಲು ಇವರು ಪ್ರಯತ್ನಿಸುತ್ತಾರೆ.

  ಸತ್ಯ #4

  ಸತ್ಯ #4

  30 ವರ್ಷದ ನಂತರ ಮದುವೆಯಾಗದೆ ಉಳಿದಿರುವ ಗಂಡಸರನ್ನು ನೋಡುವ ಮದುವೆಯಾದ ಗಂಡಸರು, ಅವರ ಕುರಿತು ಸ್ವಲ್ಪ ಅಸೂಯೆ ಪಡುತ್ತಾರೆ. ಏಕೆಂದರೆ ಅವನು ಇನ್ನೂ ಮದುವೆಯಾಗಿರುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಸತ್ಯ #4

  ಸತ್ಯ #4

  ಈ ವಯಸ್ಸಿನ ಗಂಡಸರಿಗೆ ತಮಗೆ ಎಂತಹ ಬಾಳ ಸಂಗಾತಿ ಬೇಕು ಎಂದು ಗೊತ್ತಿರುತ್ತದೆ. ಆಗ ಅವರು ನಿಜಕ್ಕೂ ಸೌಂದರ್ಯವನ್ನು ತಮ್ಮ ಪಟ್ಟಿಯಲ್ಲಿ ಅಂತಹ ದೊಡ್ಡ ಆಧ್ಯತೆಯಾಗಿ ನೀಡಿರುವುದಿಲ್ಲ.

  ಸತ್ಯ #5

  ಸತ್ಯ #5

  35 ವರ್ಷದ ನಂತರ ಗಂಡಸರು ಒಂಟಿಯಾಗಿದ್ದಲ್ಲಿ, ಅವರು ಸತ್ಯವಾಗಿ ಬುದ್ಧಿವಂತೆಯಾದ ಹುಡುಗಿ ಅಥವಾ ಹೆಂಗಸರನ್ನು ಹುಡುಕುತ್ತಾರೆ. ಕೇವಲ ಸೌಂದರ್ಯ, ಲೈಂಗಿಕ ಸುಖಗಳು ಮಾತ್ರವೇ ಜೀವನವನ್ನು ರೂಪಿಸುವುದಿಲ್ಲ ಎಂದು ಇವರು ಅರಿತಿರುತ್ತಾರೆ.

   

  English summary

  Do Men Run After Only Beauty?

  Women think that men run after only beauty. Of course, most of the men seem to run after beautiful women. In fact, some men give weird stares at women the moment a beautiful woman walks around. In fact, there are so many handsome men who fell for intelligent women rather than beautiful women. If you don't believe, here are some facts.
  Story first published: Tuesday, May 10, 2016, 23:10 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more