For Quick Alerts
ALLOW NOTIFICATIONS  
For Daily Alerts

ಸಣ್ಣಪುಟ್ಟ ಕಾರಣಕ್ಕೆ ಮುನಿಸಿಕೊಳ್ಳುವುದು ಸರಿಯೇ?

By Manu
|

ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬುದೊಂದು ಗಾದೆ. ಸಂಬಂಧಗಳ ದೃಷ್ಟಿಯಲ್ಲಂತೂ ಮಾತು ಪ್ರಮುಖ ಪಾತ್ರ ವಹಿಸುತ್ತದೆ. ಇಬ್ಬರಲ್ಲಿಯೂ ಪರಸ್ಪರ ಗೌರವ, ಅಭಿಮಾನ ಹಾಗೂ ತ್ಯಾಗ ಇದ್ದರೆ ಮಾತ್ರ ಸಂಬಂಧ ಗಟ್ಟಿಗೊಳ್ಳಲು ಹಾಗೂ ಸುಖಮಯವಾಗಿರಲು ಸಾಧ್ಯ. ಕೆಲವೊಮ್ಮೆ ಅರಿವಿಲ್ಲದೇ ಅಥವಾ ಪರಿಣಾಮದ ಭೀತಿಯಿಲ್ಲದೇ ಆಡಿದ ಒಂದು ಮಾತು ಗಟ್ಟಿ ಸಂಬಂಧಗಳನ್ನೂ ಸಡಿಲಗೊಳಿಸಬಹುದು. ಸುಖಸಂಸಾರದ ನಡುವೆ ಹುಳಿಹಿಂಡುವ ಜನರೂ ನಮ್ಮ ನಡುವೆ ಬೇಕಾದಷ್ಟಿದ್ದಾರೆ.

ಯಾವುದೇ ಸಂಬಂಧಗಳಲ್ಲಿ ಚಿಕ್ಕಪುಟ್ಟ ಜಗಳ ಇದ್ದೇ ಇರುತ್ತವೆ. ಕೆಲವು ವಿಷಯಗಳು ಚಿಕ್ಕ ಹಾಗೂ ಗಣನೆಗೆ ಬಾರದಂತಿದ್ದು ಅರಿವಿಗೆ ಬಾರದೇ ಬಳಿಕ ಗೋಜಲಾಗಿ ಸಂಬಂಧಗಳನ್ನೇ ಅಲ್ಲಾಡಿಸುತ್ತವೆ. ಇಂತಹ ಕಲವೊಂದು ವಿಷಯಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ. ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿ ದೀರ್ಘಕಾಲ ಬಾಳಲು, ಸುಖಮಯ ಜೀವನ ನಡೆಸಲು ಸಹಕಾರಿಯಾಗಿವೆ. ಉಂಡು ಮಲಗಿದ ಬಳಿಕವೂ ಜಗಳ ಮುಗಿದಿಲ್ಲವೇ?

Relationship Truths Everyone Should Know

ನಗು ನಗುತ ನಲಿ ನಲಿ ಏನೇ ಆಗಲಿ
ನಗು ನಗುತ ನಲಿ ನಲಿ ಏನೇ ಆಗಲಿ ಈ ಹಾಡಿನ ಸಾಲನ್ನು ನಿಮ್ಮ ಜೀವನದ ಧ್ಯೇಯವಾಗಿಸಿಕೊಳ್ಳಿ. ಹೌದು ಏನೇ ಆಗಲಿ ನಗುತ್ತ ಎದುರಿಸಿ. ಈ ನಗು ನಿಮ್ಮ ನಡುವಿನ ಕಂದಕಗಳನ್ನು, ಒತ್ತಡವನ್ನು ಮತ್ತು ಸಮಸ್ಯೆಗಳನ್ನು ಹಗುರವಾಗಿಸುತ್ತದೆ. ಎಂತಹ ಸಮಸ್ಯೆಯಲ್ಲಿಯು ಒಂದು ಜೋಕ್ ಹೇಳಿಕೊಂಡು ನಕ್ಕು ಹಗುರಾಗಿ. ಸಂಶೋಧಕರ ಪ್ರಕಾರ ನಗುವು ನಮ್ಮನ್ನು ದೀರ್ಘಾಯುಷ್ಯಿಗಳನ್ನಾಗಿ ಮಾಡುತ್ತದೆಯಂತೆ. ಇದು ನಾವು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಇದೆಲ್ಲಕ್ಕು ಮೇಲಾಗಿ ನಗುವಿನಿಂದ ನಮ್ಮಲ್ಲಿ ಧನಾತ್ಮಕ ಮನೋಭಾವ ಮತ್ತು ಒಳ್ಳೆಯ ಸ್ಫೂರ್ತಿ ಉಂಟಾಗುತ್ತದೆ.

ಎಷ್ಟೇ ಚಿಕ್ಕ ತಪ್ಪಾದರೂ ಸರಿ, ಕ್ಷಮೆ ಕೇಳಿ
ಕೆಲವೊಮ್ಮೆ ನಮಗೆ ಅರಿವಿಲ್ಲದಂತೆಯೇ ಏನೋ ಎಡವಟ್ಟಾಗಿ ಚಿಕ್ಕಪುಟ್ಟ ತಪ್ಪುಗಳಾಗಿ ಬಿಡುತ್ತವೆ. ಆ ಸಮಯದಲ್ಲಿ ಎಲ್ಲಾ ಬಿಗುಮಾನ, ಅಹಮ್ಮಿಕೆಗಳನ್ನು ಬದಿಗಿಟ್ಟು ಮನಃಪೂರ್ವಕವಾಗಿ ಕ್ಷಮೆ ಕೇಳಿ. ಇದರಿಂದ ಎಷ್ಟೋ ದೊಡ್ಡದಾಗಬಹುದಾದ ವಿಷಯ ಮೊಳಕೆಯಲ್ಲಿಯೇ ಚಿವುಟಿದಂತಾಗುತ್ತದೆ. ಕ್ಷಮೆ ಕೇಳಿದ ಬಳಿಕ ನಿಮ್ಮ ಪ್ರಿಯತಮ/ಪ್ರಿಯತಮೆಯ ದೃಷ್ಟಿಯಲ್ಲಿ ನೀವು ಇನ್ನಷ್ಟು ದೊಡ್ಡವರಾಗುತ್ತೀರಿ.

ಕೋಪದಲ್ಲಿ ಎಂದಿಗೂ ಯಾವುದೇ ಕ್ರಮ ಕೈಗೊಳ್ಳಬೇಡಿ
ಕಡುಕೋಪ ಬಂದಾದ ತಡಕೊಂಡವನೇ ಜಾಣ ಎಂಬುದೊಂದು ಗಾದೆ. ಇದು ಸಂಗಾತಿಗಳ ನಡುವಣ ಚಿಕ್ಕಪುಟ್ಟ ಕ್ಲೇಶಗಳಿಗೂ ಅನ್ವಯಿಸುತ್ತದೆ. ಸಾಧ್ಯವಾದಷ್ಟು ಕೋಪ ಬರುವುದರಿಂದ ತಪ್ಪಿಸಿಕೊಳ್ಳಿ. ಆದರೆ ಕೆಲವೊಮ್ಮೆ ಕೈಮೀರಿ ಕೋಪ ಏರುವ ಪ್ರಸಂಗ ಎದುರಾಗಿಯೇ ಆಗುತ್ತದೆ. ಆ ಸಮಯದಲ್ಲಿ ನಿಮ್ಮ ಕೋಪವನ್ನು ಸಂಗಾತಿಯ ಮೇಲೆ ತೋರದೇ ನಯವಾಗಿ ಇದರ ಪರಿಣಾಮವನ್ನು ಸಂಕ್ಷೇಪವಾಗಿ ವಿವರಿಸಿ. ಉದಾಹರಣೆಗೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟಿದ್ದೀರಿ, ಈಗಾಗಲೇ ತಡವಾಗಿದೆ, ಅದರಲ್ಲೂ ನಿಮ್ಮ ಸಂಗಾತಿಯ ಮೇಕಪ್ ಮುಗಿಯುತ್ತಲೇ ಇಲ್ಲ, ಕಡೆಯ ಬಸ್ ಹೋಗಲು ಇನ್ನು ಐದೇ ನಿಮಿಷ ಬಾಕಿ ಇದೆ, ಆಗ ಉಕ್ಕೇರುತ್ತಿದೆ ಕೋಪ. ದಾಂಪತ್ಯ ಸರಿಗಮದಲ್ಲಿ ಅಪಸ್ವರ ಏಳದಂತೆ ಜಾಗ್ರತೆ ವಹಿಸಿ

ಒಂದು ವೇಳೆ ಆಗಲೇ ಬಂದ ಸಂಗಾತಿಯ ಮೇಲೆ ನಿಮ್ಮ ಕೋಪ ಹರಿಹಾಯ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ.ಗಾದೆಮಾತಿನಂತೆ ಆಗ ಕೋಪ ತಡಕೊಂಡರೆ ಮಾತ್ರ ನೀವು ಜಾಣರಾಗುತ್ತೀರಿ. ನಯವಾಗಿ 'ಬೇಗ ಹೊರಡು ಇನ್ನು ಐದೇ ನಿಮಿಷ ಬಾಕಿ ಇದೆ, ನಾವು ತಡವಾಗಿ ಹೋದರೆ ನಿನ್ನ ಸ್ನೇಹಿತೆಗೆ ನಿರಾಶೆಯಾಗುವುದಲ್ಲಾ' ಎಂದು ವಿವರಿಸಿ. ನಿಜವಿಷಯವೇನೆಂದರೆ ಒಳಗೆ ಮೇಕಪ್ ರೂಮಿನಲ್ಲಿ ಮಗುವೊಂದು ತಾಯಿಯಿಂದ ತಪ್ಪಿಸಿಕೊಂಡಿದ್ದು ಅವರನ್ನು ಒಂದು ಮಾಡಲು ಕೊಂಚ ಕಾಲಾವಕಾಶ ಬೇಕಾಗಿತ್ತು. ಆದರೆ ಆ ಕ್ಷಣದಲ್ಲಿ ಈ ವಿಚಾರ ವಿವರಿಸುವಷ್ಟು ಸಮಯವಿರಲಿಲ್ಲ. ಬಳಿಕ ಇಬ್ಬರೂ ಒಬ್ಬರ ದೃಷ್ಟಿಯಲ್ಲೊಬ್ಬರು ಹೆಚ್ಚು ಗೌರವವುಳ್ಳವರಾಗುತ್ತೀರಿ.

ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ
ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಕಾಲಗಳು ಬಂದೆ ಬರುತ್ತವೆ. ಅದು ಮುಂದೆ ಕೆಲವೊಂದು ಸಂಕೀರ್ಣ ಸನ್ನಿವೇಶಗಳಿಗೆ ಎಡೆಮಾಡಿಕೊಡುವುದು ಸಹಜ. ನಿಮ್ಮ ಜೀವನದ ಕೆಲವೊಂದು ಕಾಲ ಘಟ್ಟಗಳಲ್ಲಿ ನೀವೂ ಕೆಲವೊಂದು ಒತ್ತಡಗಳು ಕಂಡು ಬರುತ್ತವೆ. ನೀವು ನಿಮ್ಮ ಸಂಗಾತಿಯ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರ ವಿಚಾರದಲ್ಲಿ ಅಲ್ಲಿ ಏನು ನಡೆದಿದೆಯೋ ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯು ಇರಬಹುದು. ಅದಕ್ಕಾಗಿ ನಿಮ್ಮ ಸಂಗಾತಿಯೇ ಇದಕ್ಕೆ ವಿರುದ್ಧವಾಗಿ ಹೋರಾಡಲು ಬಿಟ್ಟು ಬಿಡಿ. ಇಡೀ ಸನ್ನಿವೇಶವನ್ನು ನೀವು ವೈಯುಕ್ತಿಕವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಡಿ. ಆದರೆ ನೈತಿಕ ಬೆಂಬಲವೊ ಅಥವಾ ಸಲಹೆ ಸೂಚನೆಗಳು ಬೇಕಾಗಿದ್ದಲ್ಲಿ, ಧನಾತ್ಮಕ ನೆಲೆಗಟ್ಟಿನಲ್ಲಿ ಅಗತ್ಯವಾಗಿ ಒದಗಿಸಿ.

ಪರಸ್ಪರ ಅಭಿಪ್ರಾಯಗಳಿಗೆ ಒತ್ತು ನೀಡಿ
ಸಂಗಾತಿಯ ಅಭಿಪ್ರಾಯಗಳನ್ನು ಸ್ವಾಗತಿಸಿ ಒಂದು ವಿಷಯದ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವೂ ಭಿನ್ನವಾಗಿರಬಹುದು. ನಿಮ್ಮ ಸಂಗಾತಿಯ ಅಭಿಪ್ರಾಯವೂ ನಿಮ್ಮ ಅಭಿಪ್ರಾಯಕ್ಕೆ ಪೂರಕವೂ ಆಗಿರಬಹುದು, ವಿರುದ್ಧವೂ ಆಗಿರಬಹುದು. ಒಂದು ವೇಳೆ ವಿರುದ್ಧವಾಗಿದ್ದರೆ ತಕ್ಷಣ ಪ್ರತಿಕ್ರಿಯಿಸಬೇಡಿ, ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಪರಿಗಣಿಸಿ. ಎರಡೂ ಅಭಿಪ್ರಾಯಗಳ ಸಾಧಕ ಬಾಧಕಗಳನ್ನು ಪರಾಮರ್ಶಿಸಿ. ಒಂದು ವೇಳೆ ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಪರಾಮರ್ಶಿಸದೇ ಕಡೆಗಣಿಸಿದರೆ, ನಿಮ್ಮ ಸಂಗಾತಿ ನಿಮ್ಮನ್ನೇ ಕಡೆಗಣಿಸುವ ಅಪಾಯವಿರುತ್ತದೆ.

English summary

Relationship Truths Everyone Should Know

It is not so difficult if you are aware of your behavior when you are in a relationship. Words are there to communicate and express your feelings but not for hurting each other. There are subtle ways in which you can make your point without hurting the other person. How to reach a state where you are more careful with your speech? Well, here are some ways to start off. Read on.
Story first published: Tuesday, October 27, 2015, 15:28 [IST]
X
Desktop Bottom Promotion