For Quick Alerts
ALLOW NOTIFICATIONS  
For Daily Alerts

ನೀವು ಈಗಾಗಲೇ ಸಂಬಂಧದಲ್ಲಿರುವಾಗ ಮತ್ತೊಬ್ಬರ ಮೇಲೆ ಕ್ರಶ್ ಆದರೆ ತಪ್ಪೇ?

|

'ಕ್ರಶ್' ಇತ್ತೀಚಿನ ದಿನಮಾನದಲ್ಲಿ ಹೆಚ್ಚಾಗಿ ಕೇಳುತ್ತಿರುವ ಪದ. ಅದರಲ್ಲೂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ, ಕೆಲಸ ಮಾಡುವ ಸ್ಥಳದಲ್ಲಿ, ತಮ್ಮ ಇಷ್ಟದ ನಟನ ಮೇಲೆ, ಹೀಗೆ ಹತ್ತು ಹಲವು ಸಂದರ್ಭದಲ್ಲಿ "ನನಗೆ ಅವನ/ಅವಳ ಮೇಲೆ ಕ್ರಶ್ ಆಗಿದೆ,'' ಎಂದು ಹೇಳುವುದನ್ನು ಕೇಳಿಯೆ ಇರುತ್ತೇವೆ.

ಎಲ್ಲರ ಜೀವನದಲ್ಲೂ ಯಾವುದೋ ಒಂದು ಹಂತದಲ್ಲಿ ಅಥವಾ ಆಗಾಗ್ಗೆ ಕ್ರಶ್ (ಸೆಳೆತ/ಆಕರ್ಷಣೆ) ಆಗಿಯೇ/ಆಗುತ್ತಲೆ ಇರುತ್ತದೆ. ಕ್ರಶ್ ಆಗುವುದು ತಪ್ಪೇನು ಅಲ್ಲ, ಇದೊಂದು ನೈಸರ್ಗಿಕ ಆಕರ್ಷಣೆಯಷ್ಟೇ. ನಿಮಗೆ ಮತ್ತೊಬ್ಬರ ಮೇಲೆ ಕ್ರಶ್ ಆಗಿದೆ ಎಂದಾಕ್ಷಣ ನಿಮ್ಮ ಸಂಗಾತಿಯ ಮೇಲೆ ಪ್ರೀತಿ ಇಲ್ಲನ ಅಥವಾ ಮೋಸ ಮಾಡುತ್ತಿದ್ದೀರಾ ಎಂದಲ್ಲ.

ಆದರೆ ಇದು ಮುಂದುವರೆದು, ಆ ವ್ಯಕ್ತಿಯ ಮೇಲೆ ನಿಮ್ಮ ಭಾವನೆಗಳು ಬೆಳೆಯಲು ಅಥವಾ ಭಾವನಾತ್ಮಕ ಸಂಬಂಧವನ್ನು ಮುಂದುವರೆಸುವುದು ಅಪಾಯಕಾರಿ ಬೆಳವಣಿಗೆ. ನೀವು ಸಹ, ನಿಮ್ಮ ಕ್ರಶ್ ಮೇಲಿನ ಆಕರ್ಷಣೆಯನ್ನು ನಿಯಂತ್ರಿಸಲು ಸಾಧ್ಯವಾಗದೇ, ನಿಮ್ಮ ಸಂಗಾತಿಗೆ ಮೋಸ ಮಾಡಲು ಇಷ್ಟವಾಗದಂತ ಪರಿಸ್ಥಿತಿಯಲ್ಲಿ ಸಿಲುಕಿದ್ದೀರಾ. ಚಿಂತೆ ಬೇಡ, ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಈ ಲೇಖನ ಓದಿ, ಇಲ್ಲಿರುವ ಸಲಹೆಗಳನ್ನು ಪಾಲಿಸಿ ನಿಮ್ಮ ಆಕರ್ಷಣೆಯನ್ನು ನೀವೇ ನಿಯಂತ್ರಿಸಿ.

1. ಇದು ಕೇವಲ ಆಕರ್ಷಣೆ ಮಾತ್ರ

1. ಇದು ಕೇವಲ ಆಕರ್ಷಣೆ ಮಾತ್ರ

ಅತಿಯಾಗಿ ಚಿಂತಿಸಬೇಡಿ. ನೀವು ಈಗಾಗಲೇ ಸಂಬಂಧದಲ್ಲಿ ಇದ್ದೀರಾ ಎಂದಾದರೆ ನಿಮ್ಮ ಕ್ರಶ್ ಬಗ್ಗೆ ಮುಕ್ತವಾಗಿ ನಿಮ್ಮ ಸಂಗಾತಿ ಬಳಿ ಹೇಳಿ. ಇಂಥ ಸಂದರ್ಭದಲ್ಲಿ ನಿಮ್ಮ ಸಂಗಾತಿಯನ್ನು ಗೌರವಿಸುವುದು ಮತ್ತು ನಂಬಿಕೆ ಇಡುವುದು ಬಹಳ ಮುಖ್ಯವಾಗುತ್ತದೆ. ಈ ವಿಷಯ ಚರ್ಚಿಸುವುದರಿಂದ ಸಂಗಾತಿ ತುಂಬಾ ಬೇಸರ ಪಡುತ್ತಾರೆ ಎಂದಾದರೆ, ಆತ್ಮೀಯ ಸ್ನೇಹಿತರ ಬಳಿ ಹೇಳಿಕೊಳ್ಳಿ. ಇಂಥಾ ವಿಷಯಗಳನ್ನು ಹೆಚ್ಚು ರಹಸ್ಯವಾಗಿ ಇಟ್ಟಷ್ಟು ನಿಮ್ಮ ಭಾವನೆಗಳು ಇನ್ನೂ ಹೆಚ್ಚಾಗುತ್ತದೆ. ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸಿಗೆ ನಿರಾಳವಾಗುತ್ತದೆ, ಕ್ರಶ್ ಇನ್ನಷ್ಟು ತೀವ್ರತೆಗೆ ಹೋಗುವುದನ್ನು ತಪ್ಪಿಸಬಹುದು. ಸಮಯ ಕಳೆದಂತೆ ಕ್ರಶ್ ಮಾಯವಾಗುತ್ತದೆ ಹಾಗೂ ಇದಕ್ಕೆ ಸಾಕಷ್ಟು ಪ್ರಯತ್ನ ಸಹ ಅಗತ್ಯವಿದೆ. ಆದರೆ ಗಾಢವಾದ ಪ್ರೀತಿ ಮತ್ತು ನಂಬಿಕೆ ಗಳಿಸುವುದು ಅಷ್ಟು ಸುಲಭವಲ್ಲ ಎಂಬುದು ನೆನಪಿರಲಿ.

2. ಏಕಾಂಗಿ ಭೇಟಿ ಬೇಡವೇ ಬೇಡ

2. ಏಕಾಂಗಿ ಭೇಟಿ ಬೇಡವೇ ಬೇಡ

ನಿಮಗೆ ಇರುವಂತೆ ನಿಮ್ಮ ಕ್ರಶ್ ಗೆ ಸಹ ನಿಮ್ಮ ಮೇಲೆ ಆಸಕ್ತಿ ಇದ್ದರೆ ನಿಮ್ಮನ್ನು ಏಕಾಂಗಿಯಾಗಿ ಭೇಟಿ ಮಾಡಲು ಇಚ್ಚಿಸಬಹುದು, ಅಥವಾ ನೀವೇ ಭೇಟಿಗೆ ಕೇಳಬಹುದು. ಒಟ್ಟಾಗಿ ಊಟ ಮಾಡಲು, ಬೆಳಿಗ್ಗೆ ಜಾಗಿಂಗ್, ಸಿನೆಮಾ, ಮಾಲ್ ಹೀಗೆ ನಿಮ್ಮನ್ನು ಭೇಟಿ ಮಾಡಲು ನೆಪ ಹೇಳಿ ಕರೆಯಬಹುದು. ಆದರೆ ಎಲ್ಲವನ್ನೂ ಇದಾವುದಕ್ಕೂ ಗಟ್ಟಿ ಮನಸ್ಸಿನಲ್ಲಿ ತಿರಸ್ಕರಿಸಿ. ಯಾವುದೇ ಪ್ರಲೋಭನೆಗಳಿಗೆ ಒಳಗಾಗಬೇಡಿ. ನೀವು ಇಷ್ಟ ಪಡುವ ವ್ಯಕ್ತಿಯೊಂದಿಗೆ ಕೆಲವು ಸಮಯ ಕಳೆಯುವುದು ತಪ್ಪಲ್ಲ, ಆದರೆ ಹೆಚ್ಚಿನ ಸಮಯ ಅವರ ಜತೆಯೇ ಕಳೆಯುವುದರಿಂದ ಭವಿಷ್ಯಕ್ಕೆ ಸಮಸ್ಯೆಯಾಗಬಹುದು. ನೀವಿಬ್ಬರು ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಅವರಿಂದ ತುಸು ಅಂತರ ಕಾಯ್ದುಕೊಳ್ಳಿ ಮತ್ತು ಅವರಿಗೆ ಹತ್ತಿರವಾಗುವಂಥ ಯಾವುದೇ ಮಾರ್ಗಗಳನ್ನು ಹುಡುಕುವ ಪ್ರಯತ್ನವನ್ನೂ ಮಾಡಬೇಡಿ.

3. ಆನ್ ಲೈನ್ ಚಾಟಿಂಗ್ ನಿಂದ ಅಂತರ ಕಾಯ್ದುಕೊಳ್ಳಿ

3. ಆನ್ ಲೈನ್ ಚಾಟಿಂಗ್ ನಿಂದ ಅಂತರ ಕಾಯ್ದುಕೊಳ್ಳಿ

ನೀವು ಈಗಾಗಲೇ ಸಂಬಂಧದಲ್ಲಿದ್ದರೆ ಮೇಲೆ ಹೇಳಿದ ಭೇಟಿಗಳು, ಆನ್ ಲೈನ್ ಚಾಟಿಂಗ್ ಗಳು ಉತ್ತಮ ಅಭ್ಯಾಸವಲ್ಲ. ಚಾಟ್ ಮಾಡುವುದು ತಪ್ಪಲ್ಲ, ಆದರೆ ಹೀಗೆಂದುಕೊಂಡು ನೀವೇನಾದರೂ ಚಾಟ್ ಆರಂಭಿಸದರೆ, ನಿಮ್ಮ ನಿಯಂತ್ರಣವನ್ನು ನೀವೇ ತಪ್ಪುವುದು ಖಂಡಿತ. ಒಂದು ಸಂದೇಶ ನೂರು ಸಂದೇಶಗಳಿಗೆ ಕಾರಣವಾಗಬಹುದು, ಒಂದು ಮತ್ತೊಂದಕ್ಕೆ ಸೇರಿ ನಿಮ್ಮ ಸಂಬಂಧದ ಸ್ವಾಸ್ಥ್ಯ ಕೆಡಬಹುದು, ಸಂಬಂಧ ಹಾಳಾಗಲೂಬಹುದು.

4. ಹಂಚಿಕೊಳ್ಳುವುದನ್ನು ನಿಲ್ಲಿಸಿ

4. ಹಂಚಿಕೊಳ್ಳುವುದನ್ನು ನಿಲ್ಲಿಸಿ

ಇದು ಬಹಳ ಸೂಕ್ಷ್ಮ ವಿಷಯ. ನಿಮಗೆ ಕ್ರಶ್ ಆಗಿರುವವರ ಬಳಿ ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದು ಆರೋಗ್ಯಕರವಲ್ಲ. ಅಲ್ಲದೆ ಅವರ ಬಳಿ ನಿಮ್ಮ ಸಂಬಂಧ ಬಗ್ಗೆ , ಸಂಗಾತಿ ಬಗೆಗಿನ ವಿಷಯಗಳನ್ನು ಚರ್ಚಿಸುವುದು ಸಹ ಒಳಿತಲ್ಲ. ಇಂತಹ ನಿಮ್ಮ ವರ್ತನೆಗಳು ನೀವು ಈಗಾಗಲೇ ಸಂಬಂಧದಲ್ಲಿದ್ದೀರಾ ಹಾಗೂ ಅವರಿಗೆ ಮೋಸ ಮಾಡುವ ಮನಸ್ಥಿತಿ ನಿಮ್ಮದಲ್ಲ ಎಂಬುದನ್ನು ಇತರರಿಗೆ ಸ್ಪಷ್ಟವಾಗಿ ತಿಳಿಸುತ್ತದೆ.

5. ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಆಕರ್ಷಣೆ ನೀಡಿ

5. ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಆಕರ್ಷಣೆ ನೀಡಿ

ನೀವು ದೀರ್ಘ ಕಾಲದ ಸಂಬಂಧ ಹೊಂದಿದ್ದೀರಾ ಎಂದಾದರೆ ಖಂಡಿತವಾಗಿಯೂ ಅಲ್ಲಿ ಆಕರ್ಷಣೆ, ಪ್ರೀತಿ ಕಡಿಮೆ ಕಡಿಮೆ ಆಗಿರುತ್ತದೆ. ಆದರೆ ಸಂಬಂದ ಎನ್ನುವುದು ಸಸ್ಯದಂತೆ, ಅದಕ್ಕೆ ನೀರು ಹಾಕಿದಷ್ಟು ಚೆನ್ನಾಗಿ ಬೆಳೆಯುತ್ತದೆ, ಉತ್ತಮ ಫಲಾಪೇಕ್ಷೆ ಲಭಿಸುತ್ತದೆ. ಕ್ರಶ್ ಮೇಲಿನ ಆಸಕ್ತಿ ಕಡಿಮೆ ಆಗಲು ನಿಮ್ಮ ಸಂಬಂಧಕ್ಕೆ ಹೆಚ್ಚು ಮಹತ್ವ, ಪ್ರೀತಿ ನೀಡಿ. ನೈಟ್ ಔಟ್, ಪ್ರವಾಸಕ್ಕೆ ಹೋಗಿ, ಇಬ್ಬರು ಒಟ್ಟಾಗಿ ಪ್ರೀತಿಯ ಕ್ಷಣಗಳನ್ನು ಕಳೆಯಿರಿ.

ನಿಮ್ಮ ಸಂಗಾತಿಯಿಂದ ನಿಮಗೆ ಅಗಾಧ ಪ್ರೀತಿ ಲಭಿಸಿದ್ದರೆ, ನೀವು ಸಹ ನಿಮ್ಮ ಸಂಗಾತಿಯನ್ನು ಅಗಾಧವಾಗಿ ಇಷ್ಟಪಟ್ಟಿದ್ದರೆ ಕ್ರಶ್ ಗಳೆಲ್ಲಾ ಕ್ಷಣಿಕವಾಗುತ್ತದೆ ನೆನಪಿಡಿ.

English summary

Is It Ok To Have A Crush When You Are Already In A Relationship?

No, having a crush will not land your relationship in soup! It is very natural to feel attracted towards a person, and that doesn't make you an unfaithful partner. But, taking it a step further, acting on those feelings and developing it into an emotional relationship can have a devastating effect. If you are in a situation, where you don't want to hurt your partner and yet cannot resist the sight for your crush, fret no more, for help has arrived! 5 tips that can help you to deal with tough situations.
Story first published: Wednesday, September 18, 2019, 16:28 [IST]
X