For Quick Alerts
ALLOW NOTIFICATIONS  
For Daily Alerts

ರಕ್ಷಾಬಂಧನದಲ್ಲಿ ಅಡಗಿದೆ ಹಲವಾರು ಪುರಾಣ ಕಥೆಗಳು

By Super
|

ಭಾರತೀಯ ಸಂಸ್ಕೃತಿಯಲ್ಲಿ ಸೋದರನಿಗೆ ಸಹೋದರಿಯು ಕಟ್ಟುವ ರಾಖಿಯನ್ನು ರಕ್ಷಾಬಂಧನವೆಂದು ಕರೆಯಲಾಗುತ್ತದೆ. ಈ ದಿನ ಸೋದರಿಯು ತನ್ನ ಸೋದರ ಅಥವಾ ಯಾವುದೇ ಅಪಾಯದಿಂದ ತನ್ನನ್ನು ರಕ್ಷಿಸಬಲ್ಲ ವ್ಯಕ್ತಿಗೆ ಸೋದರನ ಸ್ಥಾನ ನೀಡಿ ಆತನಿಗೆ ರಾಖಿ ಕಟ್ಟುತ್ತಾಳೆ.

ರಾಖಿ ಕಟ್ಟುವುದು ಕೇವಲ ಸೋದರ ಮತ್ತು ಸೋದರಿಗೆ ಮಾತ್ರ ಸೀಮಿತವಾಗಿಲ್ಲ. ಬಹುಸಂಸ್ಕೃತಿಯ ಸಮಾಜದಲ್ಲಿ ಇದು ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ. ಆದರೆ ನಾವು ರಾಖಿ ಯಾಕೆ ಕಟ್ಟುತ್ತೇವೆ? ಭಾರತದ ಗ್ರಂಥಗಳು, ಇತಿಹಾಸ ಮತ್ತು ಜಾನಪದಗಳಲ್ಲಿ ಇದರ ಬಗ್ಗೆ ಹಲವಾರು ಕಾರಣಗಳಿವೆ.

ಹಿಂದೂ ಪುರಾಣದ ಪ್ರಕಾರ ರಾಖಿ ಕಟ್ಟುವ ಸಂಪ್ರದಾಯದ ಆರಂಭವು ಸಮಾಜವು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ಜನರಲ್ಲಿ ನಂಬಿಕೆ ಉಂಟುಮಾಡಲು ಆರಂಭಿಸಲಾಗಿತ್ತು. ರಾಖಿ ಅಥವಾ ರಕ್ಷಾ ವನ್ನು ದೇವಸ್ಥಾನದಲ್ಲಿ ಪೂಜಾರಿಯು ಪೂಜೆಗಳನ್ನು ನಿರ್ವಹಿಸಿದ ಬಳಿಕ ಕಟ್ಟಲಾಗುತ್ತದೆ. ವರ್ಷದ ಎಲ್ಲಾ ಸಮಯದಲ್ಲಿ ವ್ಯಕ್ತಿಯನ್ನು ಆಪತ್ತುಗಳಿಂದ ರಕ್ಷಿಸಲು ಕಟ್ಟಲಾಗುತ್ತದೆ. ಶ್ರಾವಣ (ಜುಲೈ-ಅಗಸ್ಟ್) ತಿಂಗಳಲ್ಲಿ ಇದನ್ನು ಆಚರಿಸಲಾಗುತ್ತದೆ.

Significance of Rakshabandhan

ಭವಿಷ್ಯ ಪುರಾಣದಲ್ಲಿರುವ ಕಥೆಯೊಂದರ ಪ್ರಕಾರ ರಾಕ್ಷಸರ ವಿರುದ್ಧ ಎಲ್ಲಾ ಯುದ್ಧಗಳನ್ನು ಸೋತು ಬಂದ ಇಂದ್ರ ತನ್ನ ಆತ್ಮವಿಶ್ವಾಸ ಕಳಕೊಂಡು ಖಿನ್ನನಾಗಿ ತನ್ನ ಅರಮನೆಗೆ ಬಂದಿದ್ದ. ಈ ವೇಳೆ ಆತನ ಪತ್ನಿ, ತನ್ನ ಗುರುವಿನ ಸಲಹೆಯಂತೆ ಒಂದು ದಾರವನ್ನು ತೆಗೆದುಕೊಂಡು ಅದನ್ನು ಪವಿತ್ರಗೊಳಿಸಿ ಇಂದ್ರನ ಕೈಗೆ ಕಟ್ಟುತ್ತಾಳೆ. ಇದರಿಂದ ಇಂದ್ರನು ಖಿನ್ನತೆಯಿಂದ ಹೊರಬಂದು ರಾಕ್ಷಸರನ್ನು ಸೋಲಿಸುತ್ತಾನೆ.

ರಾಖಿ ಹಬ್ಬದ ಸ್ಪೆಷಲ್-ಕೇಸರಿ ಸಂದೇಶ್ ಸ್ವೀಟ್

ಇನ್ನೊಂದು ಪುರಾಣ ಕಥೆಯೆಂದರೆ ಅದು ಯಮ ಮತ್ತು ಆತನ ತಂದಿ ಯಮಿ ಅಥವಾ ಯಮುನಾ. ಒಂದು ಸಲ ಯಮಲೋಕದಲ್ಲಿ ಯಮಿಯು ತಿರುಗಾಡುತ್ತಿರುವುದನ್ನು ಕಂಡ ಕಾಮ ದೇವ, ಆಕೆಯೊಂದಿಗೆ ತಮಾಷೆ ಮಾಡಲು ಬಯಸುತ್ತಾನೆ. ಕಾಮ ತನ್ನ ಬಾಣವನ್ನು ಯಮಿಯ ಮೇಲೆ ಪ್ರಯೋಗಿಸುತ್ತಾನೆ ಮತ್ತು ಆಕೆ ಕಾಮೋತ್ತೇಜಿತ್ತಳಾಗುತ್ತಾಳೆ.

ಈ ವೇಳೆ ಯಮ ಅಲ್ಲಿಗೆ ಆಗಮಿಸಿದಾಗ ಯಮಿಯ ಕಾಮದ ಭಾವನೆಯಿಂದ ಗೊಂದಲಕ್ಕೀಡಾಗುತ್ತಾನೆ. ಇದು ಕಾಮದೇವ ಮಾಡಿರುವ ತಮಾಷೆಯೆಂದು ತಿಳಿದ ಯಮ , ತನ್ನ ಕೈಗೆ ರಾಖಿ ಕಟ್ಟುವಂತೆ ಹೇಳುತ್ತಾನೆ. ಯಮಿಯನ್ನು ಎಲ್ಲಾ ಬೇಡ ಆಸೆ ಮತ್ತು ದೈಹಿಕ ದಾಳಿಯಿಂದ ತಡೆಯುವುದಾಗಿ ಯಮನು ಆಕೆಗೆ ಭರವಸೆ ನೀಡುತ್ತಾನೆ.

ರಾಖಿ ಕಟ್ಟುವ ಸಂಪ್ರದಾಯದ ಬಗ್ಗೆ ಹಲವಾರು ಕಥೆಗಳು ಮತ್ತು ಜಾನಪದ ಕಥೆಗಳಿವೆ. ಇತಿಹಾಸದ ದಂತಕಥೆಗಳಾದ ರಾಣಿ ಕರ್ಣಾವತಿ, ರಾಜ ಹುಮಾಯುನ್ ಮತ್ತು ದ ಗ್ರೇಟ್ ಅಲೆಕ್ಸಾಂಡರ್ ಮತ್ತು ರಾಜ ಪುರು ಇದರಲ್ಲಿ ಒಳಗೊಂಡಿದ್ದಾರೆ. ಗುಜರಾತ್‌ನ ಸುಲ್ತಾನ ತಮ್ಮ ರಾಜ್ಯದ ಮೇಲೆ ದಾಳಿ ಮಾಡಿದಾಗ ರಾಣಿ ಕರ್ಣಾವತಿ ಹುಮಾಯುನ್ ಗೆ ರಾಖಿಯನ್ನು ಕಳುಹಿಸುತ್ತಾಳೆ. ರಾಖಿಯ ಮಹತ್ವವನ್ನು ತಿಳಿದ ಹುಮಾಯುನ್, ರಾಣಿ ಕರ್ಣಾವತಿಗೆ ನೆರವಾಗುತ್ತಾನೆ.

ಪುರು ರಾಜನನ್ನು ಸೋಲಿಸಲು ಅಲೆಕ್ಸಾಂಡರ್ ಗೆ ಸಾಧ್ಯವಾಗುವುದಿಲ್ಲ. ತನ್ನ ಪತಿಯ ಸೇನೆ ಸಂಕಷ್ಟದಲ್ಲಿದೆಯೆಂದು ತಿಳಿದ ಅಲೆಕ್ಸಾಂಡರ್ ನ ಪತ್ನಿ ರಕ್ಷಾಬಂಧನದ ಸಂಸ್ಕೃತಿಯನ್ನು ತಿಳಿದು ಪುರು ರಾಜನಿಗೆ ರಾಖಿ ಕಳುಹಿಸುತ್ತಾಳೆ.

ಪುರು ರಾಜನು ಆಕೆಯನ್ನು ತನ್ನ ತಂಗಿಯೆಂದು ಭಾವಿಸಿ ಅಲೆಕ್ಸಾಂಡರ್ ನೊಂದಿಗಿನ ಹೋರಾಟವನ್ನು ನಿಲ್ಲಿಸುತ್ತಾನೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ರಾಖಿ ಕಟ್ಟುವ ಬಗ್ಗೆ ಹಲವಾರು ಪುರಾಣ ಮತ್ತು ಜನಪದ ಕಥೆಗಳು ನಮಗೆ ಸಿಗುತ್ತದೆ. ಆದರೆ ಸಂಕೇತ ಮಾತ್ರ ಒಂದೇ ಆಗಿರುತ್ತದೆ. ರಾಖಿಯು ಸೌಹಾರ್ದತೆ ಮತ್ತು ಶಕ್ತಿಯ ಸಂಕೇತವಾಗಿದೆ.

English summary

Significance of Rakshabandhan

Tying of Rakhi is not limited to just brothers and sisters, it has wider dimensions in a multicultural society. But why do we tie Rakhi? Several reasons for this custom are found in the Hindu scriptures, history and folklore.
X
Desktop Bottom Promotion