For Quick Alerts
ALLOW NOTIFICATIONS  
For Daily Alerts

ಲಿವ್ ಇನ್ ರಿಲೇಶನ್ ಶಿಪ್ ಒಳ್ಳೆಯದೇ?

By Hemanth Amin
|

ಮದುವೆ ಸ್ವರ್ಗದಲ್ಲಿ ನಿರ್ಧಾರವಾಗುತ್ತದೆ ಎನ್ನುವ ಮಾತಿದೆ. ಆ ಮಾತು ಸತ್ಯವೋ ಸುಳ್ಳೋ ಎನ್ನುವುದು ತಿಳಿದಿಲ್ಲ. ಆದರೆ ಹಿಂದಿನಿಂದಲೂ ಮದುವೆ ಎನ್ನುವ ಬಂಧನ ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಇದು ಎರಡು ಆತ್ಮಗಳ ಮಿಲನವೆಂದೇ ಹೇಳಲಾಗುತ್ತದೆ. ಸಂಪ್ರದಾಯ ಮತ್ತು ಸಮಯಕ್ಕೆ ಅನುಗುಣವಾಗಿ ಮದುವೆ ಕೂಡ ಹಲವಾರು ಬದಲಾವಣೆ ಕಂಡಿದೆ. ಆದರೆ ಇಂದಿನ ದಿನಗಳಲ್ಲಿ ಮದುವೆಗಿಂತ ಹೆಚ್ಚಾಗಿ ನಮಗೆ ಕೇಳಿಸುತ್ತಿರುವ ಪದವೆಂದರೆ ಅದು ಲಿವ್ ಇನ್ ರಿಲೇಶನ್ ಶಿಪ್. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ವಿಕಸ ಮತ್ತು ಇದು ಜಗತ್ತಿನ ಎಲ್ಲಾ ಕಡೆ ಮದುವೆಯನ್ನುವ ಪಾವಿತ್ರ್ಯತೆ ಧಕ್ಕೆಯುಂಟು ಮಾಡುತ್ತಿದೆ. ಲಿವ್ ಇನ್ ರಿಲೇಶನ್ ಶಿಪ್ ಎನ್ನುವುದು ಒಂದು ಅನಧಿಕೃತ ಮದುವೆ ಮತ್ತು ಇಬ್ಬರು ಜತೆಯಾಗಿ ವಾಸಿಸುವುದು ಎಂದರ್ಥ.

ಕೆಲವು ರಾಷ್ಟ್ರಗಳು ಲಿವ್ ಇನ್ ರಿಲೇಶನ್ ಶಿಪ್ ನ್ನು ಇದುವರೆಗೆ ಸ್ವೀಕರಿಸಿಲ್ಲ ಮತ್ತು ಇದಕ್ಕಾಗಿ ಕೆಲವೊಂದು ಕಾನೂನುಗಳನ್ನು ರೂಪಿಸುವುದು ಅಗತ್ಯವಾಗಿದೆ. ಮದುವೆಯಾಗದೆ ಇಬ್ಬರು ಸಂಬಂಧದಲ್ಲಿ ಒಳಗೊಳ್ಳುವುದು ಪೂರ್ವ ರಾಷ್ಟ್ರಗಳಲ್ಲಿ ಇಂದಿಗೂ ನಿಷೇಧವಿದೆ. ಆದಾಗ್ಯೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಯುವಜನರು ಈ ಸಂಸ್ಕೃತಿಗೆ ಒಗ್ಗಿ ಹೋಗಿರುವ ಕಾರಣ ಅಲ್ಲಿನ ರಾಷ್ಟ್ರಗಳು ಇದನ್ನು ಸ್ವೀಕರಿಸಿವೆ. ಹೆಚ್ಚಿನ ಜನರು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವ ಅನುಕೂಲ ಮತ್ತು ಕಟ್ಟಪಾಡುಗಳ ಜಂಜಾಟವಿಲ್ಲದ ಕಾರಣ ಇದನ್ನೇ ಆಯ್ಕೆ ಮಾಡುತ್ತಾರೆ.

Live-in Relationship: Is it a good idea?

ಮದುವೆ ಎನ್ನುವುದು ತುಂಬಾ ದುಬಾರಿ, ಹೆಚ್ಚಿನ ಸಂಪತ್ತು ಮತ್ತು ಸಮಯ ಬೇಕಾಗುತ್ತದೆ. ಮದುವೆ ವಿಫಲವಾದರೂ ಅದಕ್ಕಾಗಿ ಕಾನೂನುಬದ್ಧ ವಿಚ್ಛೇದನ ಮತ್ತು ಇತರ ಕೆಲವೊಂದು ಕ್ರಮಗಳಿಂದ ಹಣ ವ್ಯಯವಾಗುತ್ತದೆ. ಲಿವ್ ಇನ್ ರಿಲೇಶನ್ ಶಿಪ್ ಎಂದರೆ ಮದುವೆಗೆ ಪೂರ್ವ ತಯಾರಿ ಎನ್ನಬಹುದು. ಇದು ಕೆಲಸ ಮಾಡಿದರೆ ಮದುವೆ, ಇಲ್ಲವಾದಲ್ಲಿ ಸುಮ್ಮನಿರಲು ಯಾವುದೇ ಸಮಸ್ಯೆಯಿಲ್ಲ. ಲಿವ್ ಇನ್ ರಿಲೇಶನ್ ಶಿಪ್ ಬಗ್ಗೆ ಪ್ರತಿಯೊಬ್ಬರದ್ದು ಭಿನ್ನ ಅಭಿಪ್ರಾಯವಿದೆ.

1. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಸಿಗುವ ಸ್ವಾತಂತ್ರ್ಯ ಮತ್ತು ಹೊಂದಾಣಿಕೆ ಯುವ ಜನಾಂಗವನ್ನು ಇದರತ್ತ ಸೆಳೆಯುತ್ತಿದೆ. ಇದರಲ್ಲಿ ಒಳಗೊಂಡಿರುವ ಜೋಡಿ ಮದುವೆಯ ಕಾನೂನುಬದ್ಧ ತೊಡಕು ಮತ್ತು ಇತರ ಸಾಮಾನ್ಯ ನಿಯಮಗಳಿಂದ ಬಂಧಿತರಾಗಿರುವುದಿಲ್ಲ.

2. ಮಕ್ಕಳ ಬಗ್ಗೆ ಯೋಜನೆ, ಸಂಬಂಧಿಕರೊಂದಿಗೆ ಒಡನಾಟ, ಪ್ರತಿಯೊಂದನ್ನು ಹಂಚಿಕೊಳ್ಳುವುದು ಇತ್ಯಾದಿ ಕಟ್ಟುಪಾಡುಗಳಿಂದ ಲಿವ್ ಇನ್ ರಿಲೇಶನ್ ಮುಕ್ತವಾಗಿದೆ. ಪರಸ್ಪರರ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಕಡ್ಡಾಯವಲ್ಲ.

3. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವಾಗ ಆರ್ಥಿಕವಾಗಿಯೂ ಸ್ವತಂತ್ರರಾಗಿರಬಹುದು. ನಿಮ್ಮ ಜತೆಗಾರ್ತಿ ಜತೆ ಸಂಪಾದನೆಯನ್ನು ಹಂಚಿಕೊಳ್ಳಬೇಕೆಂದಿಲ್ಲ. ನಿಮ್ಮ ಆರ್ಥಿಕ ಯೋಜನೆಗಳನ್ನು ಹಾಕಿಕೊಳ್ಳಲು ಸ್ವತಂತ್ರರು.

4. ಲಿವ್ ಇನ್ ರಿಲೇಶನ್ ಶಿಪ್ ನಿಮ್ಮ ಮತ್ತು ನಿಮ್ಮ ಜೊತೆಗಾರ್ತಿಯ ಹೊಂದಾಣಿಕೆಯ ಪರೀಕ್ಷೆಯಾಗಿರಬಹುದು. ನಿಜವಾದ ಜೀವನದಲ್ಲಿ ಜತೆಯಾಗಿ ವಾಸಿಸುವಾಗ ಜತೆಗಾರ್ತಿಯೊಂದಿಗೆ ಯಾವ ರೀತಿ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ ಎಂದು ತಿಳಿಯುತ್ತದೆ.

5. ಎಲ್ಲರೂ ಸಂಬಂಧವನ್ನು ಕೊನೆಗಾಣಿಸಲು ಬಯಸುವುದಿಲ್ಲ. ಆದರೆ ಕೆಲವರಿಗೆ ಸ್ವಲ್ಪ ಸಮಯದ ಬಳಿಕ ಬೋರ್ ಅನಿಸುತ್ತದೆ. ಲಿವ್ ಇನ್ ರಿಲೇಶನ್ ಶಿಪ್ ಇಂತವರಿಗೆ ಹೇಳಿ ಮಾಡಿಸಿದಂತಿದೆ. ಯಾಕೆಂದರೆ ಅವರು ಯಾವಾಗಲೂ ಬೋರ್ ಅನಿಸಿದಾಗ ತಮ್ಮ ಜತೆಗಾರರನ್ನು ಬದಲಾಯಿಸಬಹುದು.

6. ಮದುವೆಗೆ ಹೋಲಿಸಿದರೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಬೇರೆಯಾಗವುದು ಯಾವುದೇ ಸಮಸ್ಯೆಯಿಲ್ಲದ ಅನುಭವ. ಬೇರೆಯಾಗುವ ಮೊದಲು ಯಾವುದೇ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದಿಲ್ಲ. ಇಬ್ಬರು ದೂರಾಗುವುದರಿಂದ ಭಾವನಾತ್ಮಕವಾಗಿ ಸ್ವಲ್ಪ ನೋವಾಗಬಹುದು.

7. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ನಿಮ್ಮದೇ ಆದ ನಿಯಮಗಳನ್ನು ಮಾಡಿಕೊಳ್ಳಬಹುದು. ನಿಮ್ಮ ಸಂಬಂಧದ ಬಗ್ಗೆ ನಿಯಮಗಳನ್ನು ಮಾಡಲು ನೀವು ಸ್ವತಂತ್ರರು. ಇದಕ್ಕೆ ಯಾವುದೇ ಸಾಮಾಜಿಕ ಕಟ್ಟುಪಾಡುಗಳಿಲ್ಲ.

8. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಜೋಡಿಗಳಿಗೆ ಹೊಂದಿಕೊಳ್ಳಲು ಹೆಚ್ಚಿನ ಅವಕಾಶವಿದೆ. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವ ಕೆಲವು ಜೋಡಿ ತಮ್ಮ ಜತೆಗಾರರು ಮತ್ತೊಂದು ಸಂಬಂಧದಲ್ಲಿ ಮುಂದುವರಿಯಲು ಸ್ವತಂತ್ರ ನೀಡುತ್ತದೆ.

9. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವ ಜೋಡಿಗೆ ಪರಸ್ಪರರಿಗೆ ಹೊಂದಿಕೊಳ್ಳುವಂತ ತ್ಯಾಗ ಅಥವಾ ನಡವಳಿಕೆ ಸರಿಪಡಿಸುವಂತಹ ಅವಶ್ಯಕತೆ ಇರುವುದಿಲ್ಲ. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಪರಸ್ಪರರಿಗೆ ಹೆಚ್ಚಿನ ಸ್ವತಂತ್ರವಿರುತ್ತದೆ. ನಿಮ್ಮ ಜತೆಗಾರರೊಂದಿಗೆ ಹೊಂದಿಕೊಳ್ಳಲು ನಡವಳಿಕೆ ಬದಲಾಯಿಸಬೇಕೆಂಬ ಒತ್ತಡವಿರಲ್ಲ.

10. ಕೊನೆಯ ಮತ್ತು ಹೆಚ್ಚಿನ ಜನರು ಲಿವ್ ಇನ್ ರಿಲೇಶನ್ ಶಿಪ್ ಗೆ ಆಕರ್ಷಿತರಾಗಲು ಕಾರಣ ಡೈವೋರ್ಸ್. ಜತೆಯಾಗಿ ಜೀವನ ಸಾಗಿಸಿದರೂ ಹೊಂದಾಣಿಕೆ ಇಲ್ಲವೆಂದು ಕಾಣಿಸಿದರೆ ಆಗ ಜೋಡಿ ಯಾವುದೇ ಸಮಸ್ಯೆಯಿಲ್ಲದೆ ದೂರವಾಗಬಹುದು. ಮದುವೆಯಾದರೆ ಡೈವೋರ್ಸ್ ನೀಡಿದರೂ ಕೆಲವೊಂದು ಸಲ ಜೀವನಾಂಶ ನೀಡಬೇಕಾಗುತ್ತದೆ.

English summary

Live-in Relationship: Is it a good idea?

Marriage is the oldest form of bonding between people to solemnise their coming together. It is the oldest institution that has passed the test of times and adopted through the ages according to evolving cultures and times.
Story first published: Tuesday, December 3, 2013, 9:22 [IST]
X
Desktop Bottom Promotion