For Quick Alerts
ALLOW NOTIFICATIONS  
For Daily Alerts

ಚಪಾತಿ ಇನ್ನಷ್ಟು ರುಚಿ ಬರಲು ಈ ಸಲಹೆ ಪಾಲಿಸಿ

|
Tips to Make Chapati Roti Tastier
ಚಪಾತಿ ಅಥವಾ ರೊಟ್ಟಿ ಭಾರತೀಯರ ದಿನನಿತ್ಯದ ಆಹಾರ ಕ್ರಮದಲ್ಲಿ ಒಂದು. ಈ ದಿನನಿತ್ಯದ ಆಹಾರವನ್ನು ಇನ್ನಷ್ಟು ರುಚಿಕರವಾಗಿ ಮಾಡಲು ಸಾಧ್ಯವಿದೆ. ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಿದರೆ ಚಪಾತಿಯನ್ನು ಇನ್ನಷ್ಟು ಆರೋಗ್ಯಕರವಾಗಿ, ರುಚಿಕರವಾಗಿ ಮಾಡಬಹುದು.

ರೊಟ್ಟಿ ಚಪಾತಿ ಮಾಡುವಾಗ ಈ ಸಲಹೆ ಅನುಸರಿಸಿ:

1. ರೊಟ್ಟಿ ಮಾಡುವಾಗ ಸ್ವಲ್ಪ ನೀರು ಕುದಿಸಿ, ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಸ್ವಲ್ಪ ನಿಮಿಷ ಬಿಟ್ಟು ಗೊಟಾಯಿಸಿ, ಕಲೆಸಿ, ಚೆನ್ನಾಗಿ ನಾದಿ ರೊಟ್ಟಿ ಮಾಡಿದರೆ ರೊಟ್ಟಿಗಳು ದೋಸೆಯಂತೆ ಮೃದುವಾಗಿ ಬರುತ್ತವೆ. (ಇದು ಒಂದು ರೀತಿ)

2. ರೊಟ್ಟಿ ಹಿಟ್ಟನ್ನು ಕಲೆಸುವಾಗ ಅದಕ್ಕೆ ಒಂದು/ಎರಡು ಚಮಚ ಡಾಲ್ಡ ಅಥವಾ ವೆಜೆಟಬಲ್ ಗೀಯನ್ನು ಮತ್ತು ನೀರಿನ ಜೊತೆ ಹಾಲನ್ನು ಸೇರಿಸಿ ಕಲೆಸಿ, ಚೆನ್ನಾಗಿ ನಾದಿ,ರೊಟ್ಟಿ ಮಾಡಿದರೆ ರೊಟ್ಟಿಗಳು ಮೃದುವಾಗಿ ಬರುತ್ತದೆ ಮತ್ತು ಬೇಯಿಸುವಾಗ ಉಬ್ಬುತ್ತದೆ.(ಈ ರೀತಿ ಸಹ ಒಂದು)

3. ಇದೇ ರೀತಿ ಚಪಾತಿ ಹಿಟ್ಟಿಗೂ ಕಲೆಸಿದರೆ ಚಪಾತಿ ಸಹ ಮೃದುವಾಗಿ ಬರುತ್ತವೆ ಮತ್ತು ರುಚಿಯಾಗಿಯೂ ಇರುತ್ತದೆ.

4. ಚಪಾತಿ ಹಿಟ್ಟನ್ನು ತುಂಬಾ ಹೊತ್ತಿನವರೆಗೂ ಕಲೆಸಿಡಬೇಡಿ. ತುಂಬಾ ಹೊತ್ತು ನೆನೆಸಿದರೆ ಅದರಲ್ಲಿರುವ ಅಂಶಗಳೆಲ್ಲಾ ಹಾಳಾಗುತ್ತವೆ. ಅರ್ಧ ಅಥವಾ ಮುಕ್ಕಾಲು ಗಂಟೆ ನೆನೆಸಿದರೆ ಸಾಕು. ಹೆಚ್ಚೆಂದರೆ ಹದಿನೈದು ನಿಮಿಷಗಳಷ್ಟೇ ಸಾಕು.

5. ಚಪಾತಿ ಹಿಟ್ಟನ್ನು ಕಲೆಸಿ ತಂಗಳು ಫ್ರಿಡ್ಜ್ ನಲ್ಲಿಟ್ಟು ಉಪಯೋಗಿಸಿದರೆ ಅದರಲ್ಲಿನ ಸತ್ವಗಳೆಲ್ಲಾ ನಶಿಸುತ್ತವೆ.

6. ಹಿಟ್ಟನ್ನು ತುಂಬಾ ಹೊತ್ತು ನೆನೆಸಿದರೆ ಚಪಾತಿಗಳೇನೋ ಮೃದುವಾಗಿ ಬರುತ್ತವೆ,ಆದರೆ ಅದರಲ್ಲಿನ ಒಳ್ಳೆಯ ಸತ್ವಯುತ ಅಂಶಗಳು ಇರುವುದಿಲ್ಲ.

7. ಗೋಧಿ ಹಿಟ್ಟು ಬೀಸಲು ಕೊಡುವಾಗ ಅದಕ್ಕೆ ಮೆಂತ್ಯ,ಹೆಸರುಕಾಳು ಮತ್ತು ಉಪ್ಪು ಹಾಕಿ ಬೀಸಿಟ್ಟುಕೊಂಡರೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಜೊತೆಯಲ್ಲಿ ಸೋಯಾಬೀನ್ಸ್ ಸಹ ಸೇರಿಸಬಹುದು.

8. ರಾಗಿ ರೊಟ್ಟಿ ತಯಾರಿಸುವಾಗ ರಾಗಿ ಹಿಟ್ಟಿನೊಂದಿಗೆ ಸ್ವಲ್ಪ ಗೋಧಿಹಿಟ್ಟು ಸೇರಿಸಿ ಕಲೆಸಿ,ರೊಟ್ಟಿ ತಯಾರಿಸಿದರೆ,ರೊಟ್ಟಿಗಳು ಮುರಿದುಕೊಳ್ಳದೆ ಚೆನ್ನಾಗಿ ಬರುತ್ತವೆ.

9. ಯಾವುದೇ ತರಹದ ರೊಟ್ಟಿ ತಯಾರಿಸುವಾಗ ಅದಕ್ಕೆ ಕೆಲವು ತರಕಾರಿಗಳನ್ನು ಸೇರಿಸಿದರೆ, ರುಚಿಯೂ ವಿಭಿನ್ನವಾಗಿರುತ್ತೆ. ವಿಟಮಿನ್ಸ್ ಮತ್ತು ಪ್ರೋಟಿನ್ಸ್ ಸಿಗುತ್ತದೆ.

(ಕೃಪೆ: ಅಡಿಗೆ ಟಿಪ್ಸ್ ಮತ್ತು ಮನೆಮದ್ದು ಬ್ಲಾಗ್)

English summary

Tips to Make Chapati Roti Tastier | Kitchen Tips | ಚಪಾತಿ, ರೊಟ್ಟಿಯನ್ನು ಇನ್ನಷ್ಟು ರುಚಿಕಟ್ಟಾಗಿ ಮಾಡುವುದು ಹೇಗೆ? | ಅಡುಗೆ ಮನೆಗೆ ಕೆಲ ಸಲಹೆ

If you want to prepare chapati or roti more tasty and healthy, here are some useful tips. Just Have a look.
Story first published: Monday, December 5, 2011, 11:07 [IST]
X
Desktop Bottom Promotion