For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿ ಹಬ್ಬಕ್ಕೆ ಸ್ಪೆಷೆಲ್ -ಸ್ವೀಟ್ ಪೊಂಗಲ್

|

ಸಂಕ್ರಾಂತಿ ಹಬ್ಬಕ್ಕೆ ಇತರ ಹಬ್ಬಗಳಲ್ಲಿ ಮಾಡುವಂತೆ ನಾನಾ ಬಗೆಯ ತಿನಿಸುಗಳನ್ನು ಮಾಡದಿದ್ದರೂ 2-3 ಬಗೆಯ ಸಿಹಿ ತಿನಿಸನ್ನು ಮಾಡುವುದು ಸಹಜ. ಅದರಲ್ಲೂ ಪೊಂಗಲ್ ಅಡುಗೆಯನ್ನು ಈ ಹಬ್ಬಕ್ಕೆ ಹಚ್ಚಿನವರು ತಯಾರಿಸುತ್ತಾರೆ.

ಪೊಂಗಲ್ ನಲ್ಲಿ ತುಂಬಾ ವಿಧಗಳಿವೆ, ಖಾರ ಪೊಂಗಲ್, ಸಿಹಿ ಪೊಂಗಲ್, ಸಾಲ್ಟ್ ಪೊಂಗಲ್ ಹೀಗೆ ಅನೇಕ ಬಗೆಯ ಪೊಂಗಲ್ ಅಡುಗೆಯನ್ನು ಮಾಡಬಹುದು. ಇಲ್ಲಿ ನಾವು ಸಿಹಿ ಪೊಂಗಲ್ ನ ರೆಸಿಪಿ ನೀಡಿದ್ದೇವೆ. ಕನ್ನಡ ಬೋಲ್ಡ್ ಸ್ಕೈ ಓದುಗರಿಗೆ ಸಂಕ್ರಾಂತಿಯ ಶುಭಾಶಯಗಳು...

Sweet Pongal Recipe

ಸಿಹಿ ಪೊಂಗಲ್ ಗೆ ಬೇಕಾಗುವ ಸಾಮಗ್ರಿಗಳು

ಅಕ್ಕಿ 1/2 ಕಪ್
ಹೆಸರುಬೇಳೆ 1/2 ಕಪ್
ನೀರು 2 ಕಪ್
ಹಾಲು 2 ಕಪ್
ಏಲಕ್ಕಿ ಪುಡಿ 1 ಚಮಚ
ಬೆಲ್ಲದ ಪುಡಿ 1/2 ಕಪ್
ತುಪ್ಪ 2 ಚಮಚ
ಸ್ವಲ್ಪ ದ್ರಾಕ್ಷಿ
ಸ್ವಲ್ಪ ಗೋಡಂಬಿ

ತಯಾರಿಸುವ ವಿಧಾನ

* ಹೆಸರು ಬೇಳೆಯನ್ನು ಘಮ್ಮೆನ್ನುವ ಪರಿಮಳ ಬರುವ ತನಕ ಹುರಿದು, ಅಕ್ಕಿಯ ಜೊತೆ ಸೇರಿಸಿ ಕುಕ್ಕರಿನಲ್ಲಿ ನೀರು ಹಾಗೂ ಹಾಲು ಸೇರಿಸಿ ಬೇಯಲು ಇಡಿ.

* ಅಕ್ಕಿ ಮತ್ತು ಬೇಳೆ ಬೆಂದ ನಂತರ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ. ಬೆಲ್ಲವನ್ನು ಕರಗಲು ಬಿಡಿರಿ.

* ಬೆಲ್ಲ ಕರಗಿದ ನಂತರ ಬೇಯಿಸಿದ ಅಕ್ಕಿ, ಬೇಳೆಯನ್ನು ಹಾಕಿ, ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಬೆರೆಸಿರಿ. ಏಲಕ್ಕಿಯನ್ನು ಹಾಕಿ, ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಸೇರಿಸಿದರೆ, ಸಿಹಿ ಪೊಂಗಲ್ ಸವಿಯಲು ರೆಡಿ.

English summary

Sweet Pongal Recipe | variety Of Pongal Recipe | ಸಿಹಿ ಪೊಂಗಲ್ ರೆಸಿಪಿ | ಅನೇಕ ಬಗೆಯ ಪೊಂಗಲ್ ರೆಸಿಪಿ

If you want to prepare some thing special for this sankranti you can make this sweet pongal. This is very easy to prepare. here is sweet pongal recipe.
X
Desktop Bottom Promotion