For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿ ಹಬ್ಬದ ವಿಶೇಷ: ಹೊಸ ರುಚಿಯ 'ಸಿಹಿ ಪೊಂಗಲ್'

ಸಂಕ್ರಾಂತಿ ಹಬ್ಬವನ್ನು ತಮಿಳುನಾಡಿನಲ್ಲಿ ಕರಿಯುವುದೇ "ಪೊಂಗಲ್" ಅಂತ. ಅಷ್ಟು ಹತ್ತಿರದ ಸಂಬಂಧ ಪೊಂಗಲ್ ಹಾಗೂ ಸಂಕ್ರಾಂತಿಗೂ. ಕರ್ನಾಟಕದಲ್ಲೂ ಸಹ ಅನೇಕ ಪ್ರದೇಶಗಳಲ್ಲಿ ಸಂಕ್ರಾಂತಿಗೆ ಸಿಹಿ ಪೊಂಗಲ್ ತಯಾರಿಸುತ್ತಾರೆ.

By Manasa K M
|

ಸಂಕ್ರಾಂತಿ ಬಂತು ರತ್ತೋ ರತ್ತೋ...ನೆನಪಿದೆಯಾ ಈ ಜನಪ್ರಿಯ ಕನ್ನಡ ಚಲನಚಿತ್ರ ಗೀತೆ? ಬಹುಶಃ ಯಾವ ಕನ್ನಡಿಗನೂ ಕೇಳದೆ ಇರಲಾರದ ಗೀತೆ ಇದು ಎಂದರೆ ತಪ್ಪಾಗಲಾರದು. 'ಸಂಕ್ರಾಂತಿ' ಹಬ್ಬವನ್ನು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸಂಕೇತಾರ್ಥವಾಗಿ ಆಚರಿಸಲಾಗುತ್ತದೆ. ಆದ್ದರಿಂದ ಇದನ್ನು ಮಕರ ಸಂಕ್ರಾಂತಿ ಎಂದು ಕೂಡ ಕರೆಯಲಾಗುತ್ತದೆ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ, ಸಂಕ್ರಾಂತಿ ವರ್ಷದ ಮೊದಲನೇ ಹಬ್ಬ. ಇನ್ನು ಇಂತಹ ಹಬ್ಬಕ್ಕೆ ವಿಶೇಷ ಸಿಹಿ ಇಲ್ಲದೆ ಇದ್ದರೆ ಹೇಗೆ ಮತ್ತೆ ಹೇಳಿ...?ಎಳ್ಳು ಬೆಲ್ಲ ಸಂಕ್ರಾಂತಿ ಸ್ಪೆಷಲ್ ಹೌದಾದರೂ ಸಿಹಿ ಪೊಂಗಲ್ ಕೂಡ ಅದರದೇ ಆದ ಸ್ಥಾನ ಇದೆ. ಸಂಕ್ರಾಂತಿ ಹಬ್ಬವನ್ನು ತಮಿಳುನಾಡಿನಲ್ಲಿ ಕರಿಯುವುದೇ "ಪೊಂಗಲ್" ಅಂತ. ಅಷ್ಟು ಹತ್ತಿರದ ಸಂಬಂಧ ಪೊಂಗಲ್ ಹಾಗೂ ಸಂಕ್ರಾಂತಿಗೂ.

ಕರ್ನಾಟಕದಲ್ಲೂ ಸಹ ಅನೇಕ ಕಡೆಗಳಲ್ಲಿ ಸಂಕ್ರಾಂತಿಗೆ ಸಿಹಿ ಪೊಂಗಲ್ ತಯಾರಿಸುತ್ತಾರೆ. ಸಂಕ್ರಾಂತಿಗೆ ಅಲ್ಲದೆ ಈ ಸಿಹಿ ಎಲ್ಲ ಸಂದರ್ಭಗಳಿಗೂ ಒಪ್ಪುತ್ತದೆ. ಇದು ನಾಲಿಗೆಗೆ ರುಚಿಕರ ಹಾಗೂ ಹಿತ. ಸಿಹಿ ಪೊಂಗಲ್ ಅನ್ನು ಸುಲಭವಾಗಿ ಕುಕ್ಕರ್ ಉಪಯೋಗಿಸಿ ತಯಾರಿಸುವ ವಿಧಾನವನ್ನು ಕೆಳಗೆ ನೀಡಲಾಗಿದೆ. ಚಟ್ನಿ ಜೊತೆ ಸವಿಯಿರಿ ಖಾರಾ ಪೊಂಗಲ್

sweet pongal recipe

ಬೇಕಾಗುವ ಪದಾರ್ಥಗಳು
*ಅಕ್ಕಿ - ಒಂದು ಕಪ್
*ಹೆಸರು ಬೇಳೆ - ಒಂದು ಕಪ್
*ಹಾಲು - ಒಂದು ಕಪ್
*ಬೆಲ್ಲ - ಅರ್ಧ ಕಪ್
*ಹಸಿ ತೆಂಗಿನ ತುರಿ- ಅರ್ಧ ಕಪ್
*ಏಲಕ್ಕಿ - 4
*ಗೋಡಂಬಿ ಹಾಗೂ ದ್ರಾಕ್ಷಿ - ಒಂದು ಹಿಡಿ
*ತುಪ್ಪ - ಅರ್ಧ ಕಪ್ ಸುಗ್ಗಿಯ ಹಿಗ್ಗಿನ ಸಂಕ್ರಾಂತಿಗೆ 'ಸಿಹಿ ಅವಲಕ್ಕಿ' ಪೊಂಗಲ್

ತಯಾರಿಸುವ ವಿಧಾನ:
*ಹೆಸರು ಬೇಳೆಯನ್ನು ಸ್ವಲ್ಪವೇ ಸ್ವಲ್ಪ ಹುರಿದು ಇಟ್ಟುಕೊಳ್ಳಿ.
*ಅಕ್ಕಿಯನ್ನು ತೊಳೆದು ನೀರನ್ನು ಬಸಿದು ತೆಗೆಯಿರಿ. ತೊಳೆದ ಅಕ್ಕಿ ಹಾಗೂ ಸ್ವಲ್ಪವೇ ಹುರಿದ ಹೆಸರು ಬೇಳೆ ಎರಡನ್ನೂ ಒಂದೇ ಕುಕ್ಕರ್ ನಲ್ಲಿ ಹಾಕಿ, ಎರಡರಷ್ಟು ಪ್ರಮಾಣದಲ್ಲಿ ನೀರು ಹಾಕಿ ಮುಚ್ಚಿಡಿ.
*ಸುಮಾರು ಎರಡು ಅಥವಾ ಮೂರು ಸೀಟಿ ಬಂದ ಮೇಲೆ ಸ್ಟವ್ ಆಫ್ ಮಾಡಿ.
*ಬೆಲ್ಲವನ್ನು ಸಣ್ಣಗೆ ಕುಟ್ಟಿ ಪುಡಿಮಾಡಿ. ಬೆಲ್ಲದ ಪುಡಿಯನ್ನುಕುದಿಯುತ್ತಿರುವ ನೀರಿನಲ್ಲಿ ಹಾಕಿ ಕರಗಿಸಿ. ಬೆಲ್ಲವೂ ಪಾಕದಂತೆ ಇರದೆ ಹೆಚ್ಚು ನೀರು ಹಾಕಿ ಪಾನಕದಂತೆ ಮಾಡಿಕೊಳ್ಳಿ.
*ಬೆಲ್ಲ ಕರಗಿದ ನೀರನ್ನು ಶೋದಿಸಿಕೊಳ್ಳಿ. ಇದರಿಂದ ಬೆಲ್ಲದಲ್ಲಿ ಇರುವ ಮಣ್ಣು ಪೊಂಗಲ್ ನಲ್ಲಿ ಸೇರುವುದಿಲ್ಲ.
*ಕುಕ್ಕರ್ ತಣ್ಣಗಾದ ಮೇಲೆ ಮುಚ್ಚಳ ತೆಗೆದು ನೋಡಿ. ಅಕ್ಕಿ ಹಾಗೂ ಹೆಸರು ಬೇಳೆ ಚೆನ್ನಾಗಿ ಬೆಂದಿರಬೇಕು.
*ಹೀಗೆ ಬೆಂದ ಮಿಶ್ರಣಕ್ಕೆ, ಅದೇ ಕುಕ್ಕರ್ ನಲ್ಲಿ ಒಂದು ಕಪ್ ಹಾಲು ಹಾಕಿ ಬೆಲ್ಲದ ನೀರು ಹಾಕಿ ಚೆನ್ನಾಗಿ ಕಲೆಸಿ ಹಾಗೆಯೇ ಕುಡಿಯಲು ಬಿಡಿ. ಹಸಿ ತೆಂಗಿನ ತುರಿ ಕೂಡ ಹಾಕಿ ಕಲೆಸಿರಿ. ಕುದಿಯುತ್ತಾ ಈ ಮಿಶ್ರಣವು ಒಂದು ಹದಕ್ಕೆ ಬರುತ್ತದೆ. (ಮುಂಚೆಯೇ ಕುಕ್ಕರ್ ನಲ್ಲಿ ಬೆಂದಿರುವ ಕಾರಣ ಹೆಚ್ಚು ಕುದಿಸುವ ಅಗತ್ಯವಿಲ್ಲ.
ಸುಮಾರು ಹತ್ತು ನಿಮಿಷಕ್ಕೆಲ್ಲ ಒಂದು ಹದಕ್ಕೆ ಬರುತ್ತದೆ.) ನಿಮಗೆ ಸಿಹಿ ಇನ್ನೂ ಬೇಕೆಂದರೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಬಹುದು.
*ಇನ್ನೊಂದು ಪಾತ್ರೆಯಲ್ಲಿ ಅರ್ಧ ಕಪ್ ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಕುಟ್ಟಿ ಪುಡಿಮಾಡಿದ ಏಲಕ್ಕಿ, ಗೋಡಂಬಿ ಹಾಗೂ ದ್ರಾಕ್ಷಿ ಹಾಕಿ ಬಾಡಿಸಿ. ಅದನ್ನು ಪೊಂಗಲ್ ಮೇಲೆ ಹಾಕಿ ಚೆನ್ನಾಗಿ ಕಲೆಸಿರಿ.
*ಪೊಂಗಲ್ ದೇಹಕ್ಕೆ ಬಹಳ ತಂಪು. ಇದರಲ್ಲಿರುವ ಹೆಸರು ಬೇಳೆ ಹಾಗೂ ಬೆಲ್ಲ ದೇಹದ ಉಷ್ಣವನ್ನು ಕಡಿಮೆ ಮಾಡುತ್ತವೆ. ಇದು ಸುಲಭವಾಗಿ ಜೀರ್ಣ ಕೂಡ ಆಗುತ್ತದೆ. ಇನ್ನೇಕೆ ತಡ? ಈ ಸಂಕ್ರಾಂತಿಗೆ ಮಾಡಿ ನೋಡಿ ಸಿಹಿ ಪೊಂಗಲ್.

English summary

sankranti special: sweet pongal recipe

Pongal is nearing so check out the best sweet recipes that you can prepare with jaggery. Yes, read to know what are the best jaggery recipes ...
X
Desktop Bottom Promotion