For Quick Alerts
ALLOW NOTIFICATIONS  
For Daily Alerts

ಸಕ್ಕರೆ ಪೊಂಗಲ್: ಸಂಕ್ರಾಂತಿ ವಿಶೇಷ

By Manohar.V
|

ಮಕರ ಸಂಕ್ರಾಂತಿ ಹೆಸರೇ ಹೇಳುವಂತೆ ಸಂಕ್ರಾಂತಿ ಹಬ್ಬದ ಆಚರಣೆಯನ್ನು ನಾಡಿನಾದ್ಯಂತ ನೆನಪು ಮಾಡುತ್ತದೆ. ದಕ್ಷಿಣ ಭಾರತ ಮತ್ತು ಉತ್ತರ ಭಾರತದಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ ದಕ್ಷಿಣದಲ್ಲಿ ಸುಗ್ಗಿ ಹಬ್ಬವೆಂದು ಕರೆಯಲಾಗುವ ಈ ಹಬ್ಬವನ್ನು ಉತ್ತರ ಭಾರತದಲ್ಲಿ ಮಕರ ಸಂಕ್ರಾಂತಿಯೆಂಬ ಹೆಸರಿನಿಂದ ಆಚರಿಸಲ್ಪಡುತ್ತದೆ.

ಈ ವಿಶೇಷ ದಿನದಂದು ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ ಅದರಲ್ಲೂ ಪೊಂಗಲ್ ಈ ದಿನ ಮಾಡುವ ವಿಶೇಷ ಭಕ್ಷ್ಯವಾಗಿದೆ. ಪೊಂಗಲ್ ಸಿಹಿ ಮತ್ತು ಖಾರ ಎರಡೂ ರೀತಿಯಲ್ಲಿ ತಯಾರಿಸಲಾಗುತ್ತದೆ.

ಇಂದು ನಾವು ಪೊಂಗಲ್ ರೆಸಿಪಿ ತಯಾರಿ ವಿಧಾನವನ್ನು ನಿಮಗಾಗಿ ನೀಡುತ್ತಿದ್ದೇವೆ.

ಸಂಕ್ರಾಂತಿಯ ಸ್ವಾದಿಷ್ಟ ತಿನಿಸುಗಳ ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಮಕರ ಸಂಕ್ರಾಂತಿಗೆ ಎಳ್ಳು, ಸಕ್ಕರೆ ಅಚ್ಚು, ಹುಗ್ಗಿ

Sakkarai Pongal: Pongal Special Recipe

ಪ್ರಮಾಣ: 3
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
. ಅಕ್ಕಿ (ಸೋನಾ ಮಸೂರಿ)
. ಹೆಸರು ಬೇಳೆ - 3 ಟೇಸ್ಫೂನ್

.ಬೆಲ್ಲ - 3/4 ಕಪ್
.ನೀರು - 4 ಕಪ್
.ತುಪ್ಪ - 3 ಟೇಸ್ಪೂನ್
.ಒಣದ್ರಾಕ್ಷಿ - 12-15
.ಗೇರುಬೀಜ- 8-10
.ಏಲಕ್ಕಿ - 2 (ಹುಡಿಮಾಡಿದ್ದು)
.ಲವಂಗ - 2 (ಹುಡಿಮಾಡಿದ್ದು)
.ತಿನ್ನಬಹುದಾದ ಕರ್ಪೂರ - ಸ್ವಲ್ಪ(ಬೇಕಾದರೆ ಮಾತ್ರ)

ಸಂಕ್ರಾಂತಿಯ ಸ್ವಾದಿಷ್ಟ ತಿನಿಸುಗಳ ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಮಕರ ಸಂಕ್ರಾಂತಿಗೆ ಸವಿ ಸವಿ-ಸ್ವಾದಿಷ್ಟ ತಿನಿಸುಗಳು

ಮಾಡುವ ವಿಧಾನ
1. ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಕಡೆ ಇರಿಸಿಕೊಳ್ಳಿ.

2. ಪ್ಯಾನ್‌ನಲ್ಲಿ ತುಪ್ಪ ಹಾಕಿ. ಹೆಸರು ಬೇಳೆಯನ್ನು ಕೆಂಪಗಾಗುವವರೆಗೆ ಹುರಿಯಿರಿ.

3. 3 ಕಪ್‌ನಷ್ಟು ನೀರು ಹಾಕಿ ಅಕ್ಕಿ ತೊಳೆದುಕೊಳ್ಳಿ.

4. ಅಕ್ಕಿ ಮತ್ತು ಹೆಸರು ಬೇಳೆ ಬೇಯುವವರೆಗೆ ಬೇಯಿಸಿಕೊಳ್ಳಿ.

5. ಅದೇ ಸಮಯದಲ್ಲಿ ಬೆಲ್ಲ ಮತ್ತು 1 ಕಪ್ ನೀರನ್ನು ಪ್ಯಾನ್‌ (ಪಾತ್ರೆಗೆ) ಹಾಕಿ.

6. ಬೆಲ್ಲ ಕರಗುವವರೆಗೆ ಬೇಯಿಸಿಕೊಳ್ಳಿ.

7. ಮಿಶ್ರಣವನ್ನು ಕಲಸಿಕೊಳ್ಳಿ. ಬೇಳೆ ಮತ್ತು ಅಕ್ಕಿ ಬೆಂದ ನಂತರ, ಪ್ರೆಶ್ಶರ್ ಪ್ಯಾನ್ ಮುಚ್ಚಳ ತೆರೆಯಿರಿ.

8. ಬೆಲ್ಲದ ಮಿಶ್ರಣವನ್ನು, ಏಲಕ್ಕಿ, ಲವಂಗ ಮತ್ತು ಕರ್ಪೂರವನ್ನು ಹಾಕಿ.

9. ಚೆನ್ನಾಗಿ ಮಿಶ್ರ ಮಾಡಿಕೊಂಡು 3-4 ನಿಮಿಷಗಳಷ್ಟು ಸಮಯ ಬೇಯಿಸಿಕೊಳ್ಳಿ.

10. ಉಳಿದ ತುಪ್ಪವನ್ನು ಪ್ಯಾನ್‌ಗೆ ಹಾಕಿ ಮತ್ತು ಬಿಸಿ ಮಾಡಿಕೊಳ್ಳಿ.

11. ಗೇರುಬೀಜವನ್ನು ಕೆಂಪಾಗಾಗುವರೆಗೆ ಹುರಿದುಕೊಳ್ಳಿ.

12. ಪೊಂಗಲ್‌ಗೆ ಇದನ್ನು ಹಾಕಿ.

13. ಒಣದ್ರಾಕ್ಷಿ ದುಂಡಗಾಗುವರೆಗೆ ಹುರಿದುಕೊಳ್ಳಿ.

14. ಒಣದ್ರಾಕ್ಷಿಯನ್ನು ಪೊಂಗಲ್‌ಗೆ ಹಾಕಿ ಮಿಶ್ರ ಮಾಡಿಕೊಳ್ಳಿ.

15. ಬಿಸಿ ಬಿಸಿಯಾಗಿ ಬಡಿಸಿಕೊಳ್ಳಿ ಇದರ ರುಚಿ ಇನ್ನಷ್ಟು ಸ್ವಾದಿಷ್ಟವಾಗಿರುತ್ತದೆ.

English summary

Sakkarai Pongal: Pongal Special Recipe

Pongal is a festival celebrated in South India as a festival of harvest. In North India, it is celebrated as Makar Sankranti.
Story first published: Friday, January 10, 2014, 12:09 [IST]
X
Desktop Bottom Promotion