For Quick Alerts
ALLOW NOTIFICATIONS  
For Daily Alerts

ಓಣಂ ಹಬ್ಬದ ಸ್ಪೆಷಲ್: ಘಮ್ಮೆನ್ನುವ ಹಾಲಿನ ಪಾಯಸ

|

ಕೇರಳದಲ್ಲಿ ಈಗ ಓಣಂ ಹಬ್ಬದ ಕಲರವ ಆರಂಭವಾಗಿದೆ. ಓಣಂ ಎಂಬುದು ಒಂದು ಸುಗ್ಗಿ ಹಬ್ಬವಾಗಿದ್ದು, ಅಪಾರ ಶ್ರದ್ಧೆ ಮತ್ತು ಭಕ್ತಿಗಳಿಂದ ಇದನ್ನು ಆಚರಿಸಲಾಗುತ್ತದೆ. ಅದರಲ್ಲೂ ತಿಂಡಿಗಳನ್ನು ತಿನ್ನಲು ಬಯಸುವ ಭೋಜನ ಪ್ರಿಯರಿಗೆ ಓಣಂ ನಿಜಕ್ಕೂ ದೊಡ್ಡ ಹಬ್ಬವೇ, ಏಕೆಂದರೆ ಇದರಲ್ಲಿ ತಿನ್ನಲು ದೊರೆಯುವ ಊಟ-ತಿಂಡಿಗಳ ಪಟ್ಟಿಯೇ ಈ ಹಬ್ಬದ ಪ್ರಧಾನ ಆಕರ್ಷಣೆ.

ಅದರಲ್ಲೂ ಕೇರಳದ ಅತ್ಯಂತ ಜನಪ್ರಿಯ ಸಿಹಿ ಖಾದ್ಯವಾದ ಪಾಲ್ ಪಾಯಸಂ (ಹಾಲಿನ ಪಾಯಸ) ಅನ್ನು ಈ ಬಾರಿ ನಿಮ್ಮ ಓಣಂ ಹಬ್ಬಕ್ಕೆ ಮಿಸ್ ಮಾಡದಿರಿ. ಸ್ವಲ್ಪ ದಪ್ಪನಾದ, ಕೆನೆಭರಿತವಾದ ಮತ್ತು ತುಸು ಗುಲಾಬಿ ಬಣ್ಣದ ಈ ಖೀರಿನಿಂದ ಕೂಡಿದ ಈ ಪಾಯಸವನ್ನು ಶುದ್ಧವಾದ ಕೆನೆಭರಿತವಾದ ಹಾಲು, ಅಕ್ಕಿಯಿಂದ ಮಾಡಲಾಗಿರುತ್ತದೆ. ಹಾಗಾದರೆ ತಡ ಏಕೆ, ಬನ್ನಿ ಪಾಲ್ ಪಾಯಸಂ (ಹಾಲಿನ ಪಾಯಸ)ಮಾಡಲು ರೆಡಿಯಾಗಿ...

ಪ್ರಮಾಣ: 3
ಅಡುಗೆಗೆ ತಗುಲುವ ಸಮಯ: 30 ನಿಮಿಷಗಳು ಓಣಂ ಸ್ಪೆಷಲ್: ಸ್ವಾದಿಷ್ಟ ಅಡಾ ಪಾಯಸಂ

Onam Special - Kerala style Pal payasam

ಅಗತ್ಯವಾದ ಪದಾರ್ಥಗಳು
*ಕೆನೆ ಭರಿತ ಹಾಲು -2 ಲೀಟರ್‌ಗಳು
*ಸಕ್ಕರೆ - 2 1/2 ಕಪ್
*ಬಾಸುಮತಿ ಅಕ್ಕಿ - 2 ಕಪ್
*ಪುಡಿ ಮಾಡಿದ ಏಲಕ್ಕಿ - 1/2 ಚಮಚ
*ಗೋಡಂಬಿ - 10 (ತುಪ್ಪದಲ್ಲಿ ಉರಿದಂತಹವು)
*ಮಂದಗೊಳಿಸಿದ ಹಾಲು- 2 ಚಮಚ (ಐಚ್ಛಿಕ)

ತಯಾರಿಸುವ ವಿಧಾನ
1.ಅಕ್ಕಿಯನ್ನು ಚೆನ್ನಾಗಿ ಒಂದರ್ಧ ಗಂಟೆ ಕಾಲ ನೆನೆಸಿ ಮತ್ತು ಚೆನ್ನಾಗಿ ಒಣಗಲು ಬಿಡಿ
2.ಇನ್ನು ಹಾಲನ್ನು ದಪ್ಪನಾದ ತಳ ಇರುವ ಪಾತ್ರೆಯಲ್ಲಿ ಹಾಕಿ ಕಾಯಿಸಿ.
3.ಈ ಹಾಲಿಗೆ ಬೆಂದ ಅಕ್ಕಿಯನ್ನು ಹಾಕಿ ಮತ್ತು ಹಾಗೆಯೇ ಕಲೆಸುವುದನ್ನು ಮುಂದುವರಿಸಿ.
4.ಒಂದು ವೇಳೆ ನೀವು ಪ್ರೆಶ್ಶರ್ ಕುಕ್ಕರ್ ಬಳಸುತ್ತಿದ್ದಲ್ಲಿ, ಅಕ್ಕಿ ಮತ್ತು ಹಾಲು ಎರಡನ್ನು ನೇರವಾಗಿ ಕುಕ್ಕರ್‌ಗೆ ಹಾಕಿ, ದೊಡ್ಡದಾದ ಉರಿಯಲ್ಲಿ ಒಂದು ವಿಶಲ್ ಬರುವವರೆಗೆ ಇಡಿ. ಒಂದು ವೇಳೆ ಕಡಿಮೆ ಉರಿಯಲ್ಲಿ ಇದನ್ನು ಮಾಡಬೇಕಾದಲ್ಲಿ, 15-20 ನಿಮಿಷದವರೆಗು ಇಡಿ.
5.ಅಕ್ಕಿ ಚೆನ್ನಾಗಿ ಬೆಂದ ಮೇಲೆ, ಅದನ್ನು ಚಮಚದಿಂದ ಚೆನ್ನಾಗಿ ರುಬ್ಬಿ ಮಿಶ್ರಣ ಮಾಡಿ. ನೀವು ಮತ್ತಷ್ಟು ಸಿಮ್‍ನಲ್ಲಿ ಇದನ್ನು ಮಾಡಿದರೆ, ಹಾಲು ಚೆನ್ನಾಗಿ ಕುದಿಯುತ್ತ, ಇರುವ ಹಾಲಿನ ಅರ್ಧ ಭಾಗದಷ್ಟು ಕೋವಾ ರೀತಿಯಲ್ಲಿ ಮಂದವಾಗುತ್ತ ಬರುತ್ತದೆ. ಅಲ್ಲದೆ ಮಿಶ್ರಣವು ಈ ಸಮಯದಲ್ಲಿ ಸ್ವಲ್ಪ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.
6.ಈಗ ನಿಮಗೆ ಬೇಕಾದಲ್ಲಿ, ಈ ಮಂದವಾದ ಹಾಲನ್ನು ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಿ.
7.ಇನ್ನು ಮಿಶ್ರಣಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ. ಉರಿಯಿಂದ ಹೊರಗೆ ತೆಗೆದು, ಸಕ್ಕರೆ ಕರಗುವವರೆಗು ಇದನ್ನು ಚೆನ್ನಾಗಿ ಕಲೆಸಿಕೊಳ್ಳಿ.
8.ತದನಂತರ ಈ ಪಾಲ್ ಪಾಯಸಂಗೆ ಗೋಡಂಬಿಗಳಿಂದ ಅಲಂಕಾರ ಮಾಡಿ.
9. ಈ ರುಚಿ ರುಚಿಯಾದ ಸಿಹಿ ಪದಾರ್ಥವನ್ನು ಬಿಸಿ ಬಿಸಿಯಾಗಿ ಅಥವಾ ತಂಪಾಗಿ ಸರ್ವ್ ಮಾಡಬಹುದು.

English summary

Onam Special - Kerala style Pal payasam

Pal payasam is a special Kerala dessert dish/kheer made with milk & rice on festivals such as Onam, Vishu etc; Learn how to make Special Kerala style Pal Payasam. This is an easy to follow recipe with step wise instructions.
Story first published: Saturday, August 22, 2015, 19:38 [IST]
X
Desktop Bottom Promotion