For Quick Alerts
ALLOW NOTIFICATIONS  
For Daily Alerts

ಬೊಂಬಾಟ್ ಸಿಹಿ ರೆಸಿಪಿ-'ಮಿಲ್ಕ್ ಮೈಸೂರ್ ಪಾಕ್'

By Vani Nayak
|

ಭಾನುವಾರ ಅಥವಾ ಇತರೆ ರಜೆ ದಿನಗಳಲ್ಲಿ ನೆಂಟರಿಷ್ಟರು ದಿಢೀರನೆ ಮನೆಗೆ ಬಂದರೆ ಸಿಹಿ ತಿನಿಸು ಏನು ಮಾಡಬೇಕೆಂದು ನಮ್ಮ ಮನಸ್ಸು ಆಲೋಚಿಸತೊಡಗುತ್ತದೆ. ಬಂದವರು ಸಿಹಿ ಪ್ರಿಯರಾಗಿದ್ದರಂತೂ, ಸಿಹಿ ತಿಂಡಿಯನ್ನು ಮಾಡಿಕೊಡದೇ ನಮಗೆ ಸಮಾಧಾನವಿರುವುದಿಲ್ಲ. ಆದರೆ, ಬಹುತೇಕ ಸಿಹಿ ತಿಂಡಿಗಳಿಗೆ ಪೂರ್ವಸಿದ್ಧತೆ ಅನಿವಾರ್ಯವಾಗಿರುತ್ತದೆ.

ಕೆಲವೊಂದು ವಿಶೇಷ ಸಿಹಿ ಭಕ್ಷ್ಯಗಳಿಗಂತೂ ಮಾರುಕಟ್ಟೆಗೇ ಹೋಗಿ ಬೇಕಾಗುವ ಸಾಮಗ್ರಿಗಳನ್ನು ತರುವ ಪರಿಸ್ಥಿತಿ ಎದುರಾಗುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ, ಸಮಯದ ಅಭಾವವಿರುತ್ತದೆ. ಅಂತಹ ಸಮಯದಲ್ಲಿ ಚಿಂತಿಸುವ ಅವಶ್ಯಕತೆ ಇಲ್ಲ. ಇಲ್ಲಿದೆ ಒಂದು ಸರಳವಾದ ರೆಸಿಪಿ, ಅದುವೇ "ಮಿಲ್ಕ್ ಮೈಸೂರ್ ಪಾಕ್". ಸಾಧಾರಣವಾಗಿ ಮನೆಯಲ್ಲೇ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿ ಈ ಸಿಹಿ ತಿನಿಸನ್ನು ಮಾಡಬಹುದಾಗಿದೆ.

Mouthwatering Milk Mysore park recipe

ಸ್ವಾದಿಷ್ಟಕರವಾದ ಈ ರೆಸಿಪಿಯನ್ನು ಅತ್ಯಂತ ಕಡಿಮೆಸಮಯದಲ್ಲಿ ತಯಾರಿಸಬಹುದಾಗಿದೆ. ಮಾಡುವ ವಿಧಾನವೂ ಸುಲಭವೇ ಆಗಿದೆ. ಮೈಸೂರ್ ಪಾಕ್ ಎಂದೊಡನೆ, ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರಿಯವಾದ ಸಿಹಿತಿಂಡಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸುರ್ರ್ರ್ ಸವಿಯಲು ಬೇಕಾ ಮೈಸೂರು ಪಾಕ

ಹೆಸರೇ ಸೂಚಿಸುವಂತೆ, ಈ ಖಾದ್ಯವನ್ನು ಕ್ಷೀರದಿಂದ ತಯಾರಿಸಿದರೆ, ಅದರ ಸ್ವಾದ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ. ಕೇವಲ ಅತಿಥಿಗಳು ಬಂದಾಗ ಅಷ್ಚೇ ಅಲ್ಲದೇ, ಹಬ್ಬಹರಿದಿನಗಳಲ್ಲಿ ಕೂಡ ಈ ಸಿಹಿತಿನಿಸನ್ನು ಮಾಡಬಹುದಾಗಿದೆ.ಅಷ್ಟೇ ಅಲ್ಲ, ಮನೆಮಂದಿಯಲ್ಲರೂ ಮಕ್ಕಳು ಸಹಿತಾಗಿ ಪಿಕ್ನಿಕ್ ಹೋದಾಗ ಕೂಡ ಅತಿ ಹೆಚ್ಚು ಜಿಡ್ಡಿಲ್ಲದ ಈ ಸಿಹಿತಿನಿಸನ್ನು ತೆಗೆದುಕೊಂಡು ಹೋಗಬಹುದು. ಬನ್ನಿ, ಇದಕ್ಕೆ ಬೇಕಾಗುವ ಸಾಮಗ್ರಿಗಳೇನು, ತಯಾರಿಸುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ.

ಮಿಲ್ಕ್ ಮೈಸೂರ್ ಪಾಕ್

*ಸಿದ್ಧತಾ ಸಮಯ : 2 ನಿಮಿಷ

*ತಯಾರಿಸಲು ಬೇಕಾಗುವ ಅವಧಿ : 15 - 20 ನಿಮಿಷಗಳು

ತಯಾರಿಸಲು ಬೇಕಾಗುವ ಸಾಮಗ್ರಿಗಳು:

*ಹಾಲು 1 ಕಪ್

*ಕಡಲೇ ಹಿಟ್ಟು 1 ಕಪ್

*ತುಪ್ಪ 1 ಕಪ್

*ಸಕ್ಕರೆ 2 ಕಪ್

*ಏಲಕ್ಕಿ ಪುಡಿ ಸ್ವಲ್ಪ

*ಗೋಡಂಬಿ ಚೂರುಗಳು ಸ್ವಲ್ಪ ಬಾಯಲ್ಲಿ ನೀರೂರಿಸುವ ಸಿಹಿ ತಿನಿಸು ಮೈಸೂರು ಪಾಕ್

ವಿಧಾನ:

1. ಮೊದಲಿಗೆ ಒಂದು ಬಾಣಲೆಯನ್ನು ಒಲೆಯ ಮೇಲೆ ಇಡಬೇಕು.

2. ಕಾದ ಬಾಣಲೆಗೆ ಮೊದಲೇ ಅಳಿದಿಟ್ಟುಕೊಂಡ ಕಡಲೇ ಹಿಟ್ಟನ್ನು ಹಾಕಿ ಘಮ್ ಎನ್ನುವವರೆಗೂ ಹುರಿದಿಟ್ಟುಕೊಳ್ಳಬೇಕು.

3. ಒಲೆಯ ಮೇಲಿಟ್ಟ ಕಾದ ದಪ್ಪ ತಳದ ಪಾತ್ರೆಗೆ ಸಕ್ಕರೆ ಮತ್ತು ಹಾಲನ್ನು ಹಾಕಬೇಕು.

4. ಸಕ್ಕರೆಯನ್ನು ಕರಗುವವರೆಗೂ ಕೈಯಾಡಿಸುತ್ತಾ ಇರಬೇಕು. ಸಕ್ಕರೆ ಕರಗಿದ ನಂತರ ಆ ಮಿಶ್ರಣ ಕುದಿಯಲಾರಂಬಿಸುತ್ತದೆ.

5. ನಂತರ ಹುರಿದಿಟ್ಟುಕೊಂಡ ಕಡಲೇಹಿಟ್ಟನ್ನು ನಿಧಾನವಾಗಿ ಕೈಯಾಡಿಸುತ್ತಾ ಹಾಕಬೇಕು. ಕೈ ಆಡಿಸುವುದನ್ನು ಬಿಡಬಾರದು. ಹೀಗೆ ಮಾಡುವುದರಿಂದ ಕಡಲೇ ಹಿಟ್ಟು ಮಿಶ್ರಣದ ಜೊತೆ ಹೊಂದಿಕೊಳ್ಳುತ್ತದೆ,ಗಂಟಾಗುವುದಿಲ್ಲ.

Mouthwatering Milk Mysore park recipe

6. ಸ್ವಲ್ಪ ಸ್ವಲ್ಪ ತುಪ್ಪವನ್ನು ಹಾಕುತ್ತಾ ಮಿಶ್ರಣವು ಗಟ್ಟಿಯಾಗುವವರೆಗೆ ಕೆದಕುತ್ತಾ ಇರಬೇಕು. ಗಟ್ಟಿಯಾಗುವಾಗ ಮಿಶ್ರಣವು ಪಾತ್ರೆಯ ತಳ ಬಿಡುತ್ತಾ ಬರುತ್ತದೆ.

7. ಗಟ್ಟಿಯಾದ ನಂತರ ತುಪ್ಪ ಸವರಿದ ದುಂಡಾಕಾರದ ತಟ್ಟೆಗೆ ಹಾಕಿಕೊಳ್ಳಬೇಕು. ತಟ್ಟೆಯ ಪೂರ್ತಿ ಭಾಗ ಮಿಶ್ರಣವು ಸಮನಾಗಿರುವಂತೆ ತಟ್ಟಬೇಕು.

8. ಸ್ವಲ್ಪ ಆರಲು ಬಿಡಬೇಕು.

9. ಸ್ವಲ್ಪ ಬೆಚ್ಚಗೆ ಇರುವಾಗಲೇ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಕೊಳ್ಳಬಹುದು. ಕತ್ತರಿಸಕೊಂಡ ನಂತರ ಆ ಬಿಲ್ಲೆಗಳ ಮೇಲೆ ಒಂದೊಂದು ಗೋಡಂಬಿ ತುಂಡುಗಳನ್ನು ಅಲಂಕಾರಿಕವಾಗಿ ಇಡಬಹುದು. ಹೀಗೆ ಮಾಡುವುದರಿಂದ ಈ ಸಿಹಿ ತಿನಿಸಿನ ಅಂದ ಹೆಚ್ಚುತ್ತದೆ. ನಿಮಗೆ ಗೋಡಂಬಿ ಬೇಡವಾದ್ದಲ್ಲಿ, ಬಾದಾಮಿ, ಪಿಸ್ತಾ, ಒಣ ದ್ರಾಕ್ಷಿ ಯಾವುದನ್ನಾದರೂ ಬಳಸಬಹುದು.

ಹೀಗೆ ಮಾಡಿದಲ್ಲಿ ರುಚಿರುಚಿಯಾದ, ಬಾಯಲ್ಲಿ ಇಟ್ಟರೆ ಕರಗುವ ಮಿಲ್ಕ್ ಮೈಸೂರ್ ಪಾಕ್ ಸವಿಯಲು ಸಿದ್ಧವಾಗುತ್ತದೆ.

ಅತ್ಯಂತ ಕಡಿಮೆ ಸಮಯದಲ್ಲಿ ಮಾಡಬಹುದಾದ ಸುಲಭವಾದ ಈ ರೆಸಿಪಿಯನ್ನು ನೀವು ಮಾಡಿ ನಿಮ್ಮ ಪರಿವಾರದೊಂದಿಗೆ ಸವಿಯಿರಿ.

ಸೂಚನೇ : ಈ ರೆಸಿಪಿಗೆ ಫುಡ್ ಕಲರ್, ಅಂದರೆ ಬಣ್ಣದ ಅವಶ್ಯಕತೆ ಇರುವುದಿಲ್ಲ.

English summary

Mouthwatering Milk Mysore park recipe

Milk Mysore pak recipe is easy & famous recipe in south indian, and today Boldsky going to Reveal the Secret how to prepare same in a easiest method to make in your home, have a look..
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more