For Quick Alerts
ALLOW NOTIFICATIONS  
For Daily Alerts

ರಾಖಿ ಹಬ್ಬದ ಸ್ಪೆಷಲ್-ಕೇಸರಿ ಸಂದೇಶ್ ಸ್ವೀಟ್

By Neha Mathur
|

ಸಹೋದರ-ಸಹೋದರಿಯ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ಹಬ್ಬ ಈ ರಕ್ಷಾ ಬಂಧನ. ಈ ದಿನ ನಿಮ್ಮ ಸಹೋದರನ ಕೈಗೆ ರಾಖಿ ಕಟ್ಟಲು ಹೋಗುವಾಗ ನೀವೇ ಕೈಯಾರೆ ತಯಾರಿಸಿದ ಸ್ವೀಟ್ ಕೂಡ ಜೊತೆಯಲ್ಲಿ ಕೊಂಡೊಯ್ದರೆ ರಾಖಿ ಹಬ್ಬ ಮತ್ತಷ್ಟು ಸ್ಪೆಷಲ್ ಆಗಿರುತ್ತದೆ ಅಲ್ಲವೇ?

ಇಲ್ಲಿ ನಾನು ರಾಖಿ ಹಬ್ಬಕ್ಕೆ ಸ್ಪೆಷಲ್ ಆಗಿ ನೀವು ಸುಲಭದಲ್ಲಿ ತಯಾರಿಸಬಹುದಾದ ಪನ್ನೀರ್ ಸ್ವೀಟ್ ನ ರೆಸಿಪಿ ನೀಡಿದ್ದೇನೆ ನೋಡಿ:

ಸಲಹೆ: ಸಿದ್ಧವಾಗಿರುವ ಪನ್ನೀರ್ ಅನ್ನು ಬಳಸಬಹುದು, ಇಲ್ಲವೇ ಪುರುಸೊತ್ತು ಇದ್ದರೆ ಹಾಲನ್ನು ಒಡೆದು ಪನ್ನೀರ್ ಮಾಡಿ ಈ ಸ್ವೀಟ್ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು
ಕೆನೆ ಇರುವ ಹಾಲು 1 ಲೀಟರ್
ನಿಂಬೆ ರಸ 1 ಚಮಚ
ಪುಡಿ ಮಾಡಿದ ಸಕ್ಕರೆ 4 ಚಮಚ
ಏಲಕ್ಕಿ ಪುಡಿ 1 ಚಮಚ ಮತ್ತು ಸ್ವಲ್ಪ ಹಾಲಿನ ಪುಡಿ
ಚಿಟಕಿಯಷ್ಟು ಕೇಸರಿ
ಸ್ವಲ್ಪ ಡ್ರೈ ಫ್ರೂಟ್ಸ್

ಪನ್ನೀರ್ ತಯಾರಿಸುವ ವಿಧಾನ

ಪನ್ನೀರ್ ತಯಾರಿಸುವ ವಿಧಾನ

* ಹಾಲನ್ನು ಚೆನ್ನಾಗಿ ಕುದಿಸಿ, ಅದಕ್ಕೆ ನಿಂಬೆ ರಸ ಹಿಂಡಿ ತಣ್ಣಗಾಗಲು ಇಡಿ.

* ನಂತರ ಒಡೆದ ಹಾಲನ್ನು ಮಸ್ಲೀನ್ ಮಟ್ಟೆಯಲ್ಲಿ ಹಾಕಿ ಸಿಂಕ್ ಹತ್ತಿರ ಒಂದು ಮೊಳೆಯಲ್ಲಿ ನೇತು ಹಾಕಿ. ಅದರಲ್ಲಿರುವ ನೀರಿನಂಶ ಹೋಗಿ, ಗಟ್ಟಿಯಾಗುವವರೆಗೆ ಅಂದರೆ 2-3 ಗಂಟೆಗಳ ಕಾಲ ನೇತು ಹಾಕಿ.

ಸ್ಟೆಪ್ 2

ಸ್ಟೆಪ್ 2

* ನಂತರ ಅದನ್ನು ತೆಗೆದು ಸ್ವಚ್ಛವಾದ ಪಾತ್ರೆಯಲ್ಲಿ ಹಾಕಿ, ಅದಕ್ಕೆ ಸಕ್ಕರೆ, ಹಾಲಿನ ಪುಡಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.

ಸ್ಟೆಪ್ 3

ಸ್ಟೆಪ್ 3

* ನಂತರ ನಾನ್ ಸ್ಟಿಕ್ ಪ್ಯಾನ್ ತೆಗೆದು ಅದರಲ್ಲಿ ಈ ಮಿಶ್ರಣ ಹಾಕಿ ಇದರಲ್ಲಿರುವ ತೇವಾಂಶ ಹೋಗಲು ಸ್ವಲ್ಪ ಹೊತ್ತು ಸೌಟ್ ನಿಂದ ಆಡಿಸುತ್ತಾ ಬಿಸಿ ಮಾಡಿ.

ಸ್ಟೆಪ್ 4

ಸ್ಟೆಪ್ 4

* ನಂತರ ಉರಿಯಿಂದ ಇಳಿಸಿ, ಸ್ವಲ್ಪ ತಣ್ಣಗಾದ ಮೇಲೆ ಅದರಿಂದ ಉಂಡೆ ಕಟ್ಟಿ, ಅದನ್ನು ಸ್ವಲ್ಪ ಚಪ್ಪಟೆಯಾಗಿ ಮಾಡಿ, ಮಧ್ಯದಲ್ಲಿ ಬೆರಳಿನಿಂದ ಸ್ವಲ್ಪ ಗುಂಡಿ ರೀತಿಯಲ್ಲಿ ಮಾಡಿ.

ಸ್ಟೆಪ್ 5

ಸ್ಟೆಪ್ 5

ನಂತರ ಅದರ ಮೇಲೆ ಕೇಸರಿ ಉದುರಿಸಿ, ಡ್ರೈ ಫ್ರೂಟ್ಸ್ ಹಾಕಿದರೆ ರಾಖಿ ಹಬ್ಬಕ್ಕೆ ಸ್ಪೆಷಲ್ ಸ್ವೀಟ್ ಕೇಸರಿ ಸಂದೇಶ್ ರೆಡಿ.

English summary

Kesari Sandesh Recipe For Rakshabandhan

Kesar means saffron and sandesh is a special Bengali sweet made with paneer. So, here is a Rakshabandhan special sandesh recipe with a twist of saffron in it.
X
Desktop Bottom Promotion