For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ ವಿಶೇಷ- ಘಮಘಮಿಸುವ ಬೀಟ್‍ರೂಟ್ ಹಲ್ವಾ

|

ಹಬ್ಬಗಳು ಒಂದರ ಮೇಲೊಂದರಂತೆ ಆಗಮಿಸುತ್ತಿವೆ, ಅದರಲ್ಲೂ ಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕಲವೇ ದಿನಗಳು ಬಾಕಿ ಉಳಿದಿವೆ, ಅಷ್ಟೇ ಅಲ್ಲದೆ ಹಬ್ಬಗಳೊಂದಿಗೆ ಆತ್ಮೀಯತೆಯನ್ನು ತೋರುವ ಅತಿಥಿಗಳು ಮತ್ತು ಸ್ನೇಹಿತರು ನಿಮ್ಮ ನಿವಾಸಕ್ಕೆ ಬಂದೇ ಬರುತ್ತಾರೆ. ಅವರು ಬಂದಾಗ ಯಾವಾಗಲೂ ಮಾಡುವ ಅಡುಗೆಯನ್ನೇ ಅವರಿಗೆ ತಯಾರಿಸಿ ಬಡಿಸುವುದು ಸೂಕ್ತವಾಗಿರುವುದಿಲ್ಲ ಹಾಗಿದ್ದರೆ ಅವರಿಗೆ ವಿಶೇಷವಾಗಿರುವ ಮತ್ತು ನಿಮ್ಮ ಹಬ್ಬದ ಕಳೆಯನ್ನು ಹೆಚ್ಚಿಸುವ ರುಚಿಕರವಾದ ತಿಂಡಿಯನ್ನು ಮಾಡುವುದು ಅತೀ ಅಗತ್ಯ.

ಹಾಗಿದ್ದರೆ ಯಾವ ಖಾದ್ಯ ತಿಂಡಿಯನ್ನು ತಯಾರಿಸುವುದೆಂದು ಚಿಂತಿಸದಿರಿ. ನಿಮ್ಮ ಸ್ವಾದವನ್ನು ಪರಿಪೂರ್ಣಗೊಳಿಸುವುದರ ಜೊತೆಗೆ ಮನೆಗೆ ಬರುವ ಅತಿಥಿಗಳನ್ನು ಸಂತೃಪ್ತಿಪಡಿಸಲು ಮತ್ತು ಹಬ್ಬದ ವಾತಾವರಣವನ್ನು ಇನ್ನಷ್ಟು ಸಿಹಿಗೊಳಿಸಲು ಬೀಟ್‍ರೂಟ್ ಹಲ್ವಾ ತಯಾರಿಯನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಇಲ್ಲಿರುವ ತಯಾರಿ ವಿಧಾನವನ್ನು ಒಮ್ಮೆ ಚೆನ್ನಾಗಿ ಮನನ ಮಾಡಿಕೊಳ್ಳಿ. ತದನಂತರ ಹಲ್ವಾವನ್ನು ತಯಾರಿಸಿ. ಖಂಡಿತ ಇದು ನಿಮ್ಮ ಹಬ್ಬದ ಕಳೆಯನ್ನು ದುಪ್ಪಟ್ಟುಗೊಳಿಸುತ್ತದೆ.

Janmashtami Special: Mouthwatering Beetroot Halwa Recipe

ತಯಾರಿಕೆಗೆ ತಗುಲುವ ಸಮಯ: 10 ನಿಮಿಷ
ಅಡುಗೆಗೆ ತಗುಲುವ ಸಮಯ: 60 ನಿಮಿಷ

ಬೀಟ್‍ರೂಟ್ ಹಲ್ವಾ ಮಾಡಲು ಬೇಕಾದ ಪದಾರ್ಥಗಳು:
*ಬೀಟ್‍ರೂಟ್ - 4
*ಹಾಲು - 2 ಕಪ್
*ಸಕ್ಕರೆ - 1/2 ಕಪ್ ಅಥವಾ ರುಚಿಗೆ ತಕ್ಕಷ್ಟು
*ಏಲಕ್ಕಿ ಪುಡಿ - 1 ಟೀ ಚಮಚ
*ತುಪ್ಪ - 3 ಟೇಬಲ್ ಚಮಚ
*ಗೋಡಂಬಿ - ಸ್ವಲ್ಪ
*ಒಣ ದ್ರಾಕ್ಷಿ - ಸ್ವಲ್ಪ
*ಬಾದಾಮಿ - ಒಂದು ಹಿಡಿ
*ಕೋವಾ - 100 ಗ್ರಾಂ
*ಮಂದಗೊಳಿಸಿದ ಹಾಲು - ನಿಮ್ಮ ರುಚಿಗೆ ತಕ್ಕಷ್ಟು

ಬೀಟ್‍ರೂಟ್ ಹಲ್ವಾ ತಯಾರಿಸುವ ವಿಧಾನ
1. ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು ಸುಲಿಯಿರಿ.
2. ತುಪ್ಪವನ್ನು ಆಳವಾದ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ.
3. ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ.
4. ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ.
5. ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.
6. ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.
7. ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲೆಸಿ ಕೊಡಿ.
8. ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ.
9. ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗೂ ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ ಇರಿ.
10. ಹುರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ.
11. ಈಗ ಬೀಟ್‍ರೂಟ್ ಹಲ್ವಾ ಬಡಿಸಲು ಸಿದ್ಧವಾಗಿದೆ. ಆರೋಗ್ಯಕರವಾದ ಹಲ್ವಾವನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಂಡು ಸೇವಿಸಿ.

English summary

Janmashtami Special: Mouthwatering Beetroot Halwa Recipe

Betroot is rich in potassium, magnesium, iron, vitamins A, B6 and C, folic acid, carbohydrates, protein, antioxidants and soluble fibre. In this article we look at the Beetroot Halwa Recipe. It is a traditional recipe that is prepared for many Indian festivals and auspicious occasions, and also you can easily prepare this. Try out this Beetroot Halwa Recipe at home to welcome Lord krishna this year.
Story first published: Wednesday, September 2, 2015, 19:58 [IST]
X
Desktop Bottom Promotion