Just In
Don't Miss
- Automobiles
ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು
- News
ಮಂಜಿನ ದಟ್ಟಣೆಯಿಂದ ಅಪಘಾತ; ಪಶ್ಚಿಮ ಬಂಗಾಳದಲ್ಲಿ 13 ಮಂದಿ ಸಾವು
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮುದ್ದಿನ ಅಮ್ಮನಿಗಾಗಿ ತಯಾರಿಸಿ-ಮಾವಿನ ಹಣ್ಣಿನ ಕೇಕ್!
ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ನೀವು ಎದ್ದೇಳುವ ಮೊದಲೇ ಅಡುಗೆ ಮನೆಗೆ ಹೋಗಿ ನಿಮಗೆ ಬೇಕಾಗುವ ತಿಂಡಿ ತಯಾರಿಸಿಡುವ ತಾಯಿಗೆ ಮುಂದಿನ ಭಾನುವಾರ ಬರುವಂತಹ ಅಮ್ಮಂದಿರ ದಿನದಂದು ಯಾವ ರೀತಿಯಲ್ಲಿ ಆಕೆಯ ದಿನವನ್ನು ವಿಶೇಷವಾಗಿಸಲಿದ್ದೀರಿ ಎನ್ನುವ ಬಗ್ಗೆ ಏನಾದರೂ ಆಲೋಚನೆ ಮಾಡಿದ್ದೀರಾ? ಹೊಸ ರುಚಿ: ಕ್ರ್ಯಾನ್ಬೆರಿ ಪಿಸ್ತಾ ಕೇಕ್ ಬಿಸ್ಕತ್ ರೆಸಿಪಿ
ಆದರೆ ಬೋಲ್ಡ್ ಸ್ಕೈ ಮಾತ್ರ ನಿಮಗಾಗಿ ಅಮ್ಮಂದಿರ ದಿನದ ವಿಶೇಷವಾದ ಮಾವಿನ ಹಣ್ಣಿನಿಂದ ತಯಾರಿಸಿದ ಕೇಕ್ ಅನ್ನು ತಯಾರಿಸುವುದು ಹೇಗೆಂದು ಹೇಳಿಕೊಡಲಿದೆ. ನೀವೇ ಇದನ್ನು ತಯಾರಿಸಿದ್ದೀರಿ ಎಂದು ಆಕೆಗೆ ತಿಳಿದಿದರೆ ಆಗ ಆಕೆ ತುಂಬಾ ಖುಷಿ ಪಡಬಹುದು ಮತ್ತು ಆಕೆಯೊಂದಿಗೆ ಸೇರಿ ಇದನ್ನು ತಯಾರಿಸಬಹುದು. ಈ ಬೇಸಿಗೆಯಲ್ಲಿ ಮಾವಿನ ಹಣ್ಣಿನ ಕೇಕ್ ಮಾಡಿಕೊಂಡು ತಯಾರಿಸುವುದು ಹೇಗೆಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ.
12 ಜನರಿಗೆ ಆಗುವಷ್ಟು
ತಯಾರಿಯ ಸಮಯ 20 ನಿಮಿಷ
ಅಡುಗೆ ಸಮಯ- 1 ಗಂಟೆ
ಬೇಕಾಗುವ ಸಾಮಗ್ರಿಗಳು
*ಮೊಟ್ಟೆ-2
*ಅಡುಗೆ ಸೋಡಾ-2 ಚಮಚ
*ಕೇಕ್ ಹಿಟ್ಟು- ¾ ಕಪ್
*ಉಪ್ಪು- ¼ ಚಮಚ
*ಸಕ್ಕರೆ- 1 ಕಪ್
*ಉಪ್ಪು ರಹಿತ ಬೆಣ್ಣೆ-100 ಗ್ರಾಂ
*ವೆನಿಲ್ಲಾ ಎಸೆನ್ಸ್-1 ಚಮಚ
*ಲಿಂಬೆ ರಸ- 3 ಚಮಚ
*ಹಾಲು -ಅರ್ಧ ಕಪ್ ಚಾಕಲೇಟ್ ಚಿಪ್ಸ್ ಕೇಕ್‌ಗೆ-ಮನಸೋತು ಹೋಗುವಿರಿ!
ಕ್ರೀಮ್ ಗಾಗಿ
*ಡಬಲ್ ಕ್ರೀಮ್- 1 ಕಪ್
*ಮಾವಿನ ತಿರುಳು- 1 ಕಪ್
*ಐಸಿಂಗ್ ಶುಗರ್- 2 ಚಮಚ
*ವೆನಿಲ್ಲಾ ಸಾರ-1-ಚಮಚ
ಮಾವಿನ ಮೊಸರಿಗಾಗಿ
*ಮಾವಿನ ತಿರುಳು 500 ಗ್ರಾಂ
*ನಾಲ್ಕು ಮೊಟ್ಟೆಯ ಲೋಳೆ
*ಸಕ್ಕರೆ 1/3 ಕಪ್
*ಉಪ್ಪು ಒಂದು ಚಿಟಿಕೆ
*ಲಿಂಬೆರಸ 3 ಚಮಚ
*ಆಲಿವ್ ತೈಲ ¼ ಕಪ್
*ಮಾವಿನ ಪದರವನ್ನು ಹೊಂದಿರುವ ಕೇಕ್ ಅನ್ನು ತಯಾರಿಸಲು ನೀವು ಸ್ವಲ್ಪ ತಾಳ್ಮೆ ವಹಿಸಬೇಕು. ಇದನ್ನು ತಯಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಒಂದು ಸಲ ಇದನ್ನು ತಯಾರಿಸಲು ನೀವು ಯಶಸ್ವಿಯಾದರೆ ನೀವು ಗೆದ್ದಂತೆ.
ಕೇಕ್ ತಯಾರಿಸುವ ವಿಧಾನ
1. ಕೇಕ್ ತವಾ ಅಥವಾ ಯಾವುದೇ ನಾನ್ ಸ್ಟಿಕ್ ತವಾ ತೆಗೆದುಕೊಳ್ಳಿ. ಇದರ ಬದಿ ಮತ್ತು ತಳಕ್ಕೆ ಬೆಣ್ಣೆ ಹಚ್ಚಿಕೊಳ್ಳಿ. ಹಿಟ್ಟನ್ನು ಪ್ರತಿಯೊಂದು ಬದಿಗೆ ಸಿಂಪಡಿಸಿಕೊಳ್ಳಿ. ಓವನ್ ಅನ್ನು 180 ಡಿಗ್ರಿಯಲ್ಲಿ ಬಿಸಿಮಾಡಿಟ್ಟುಕೊಳ್ಳಿ.
2. ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಅದಕ್ಕೆ ಹಿಟ್ಟು, ಬೇಕಿಂಗ್ ಪೌಡರ್ ಮತ್ತು ಉಪ್ಪು ಹಾಕಿಕೊಳ್ಳಿ. ಇನ್ನೊಂದು ಬದಿಯಲ್ಲಿ ಬೆಣ್ಣೆ ಮತ್ತು ಸಕ್ಕರೆಯನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
3. ಈಗ ಮೊಟ್ಟೆಯ ಲೋಳೆ ತೆಗೆಯಿರಿ. ಪ್ರತೀ ಸಲ ಒಂದು ಮೊಟ್ಟೆಯ ಲೋಳೆ ತೆಗೆದ ಬಳಿಕ ಸರಿಯಾಗಿ ಕಳಸಿಕೊಂಡು ಮತ್ತೊಂದು ಮೊಟ್ಟೆಯ ಲೋಳೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ವೆನಿಲ್ಲಾ ಸಾರ, ಹಾಲು ಮತ್ತು ಲಿಂಬೆರಸ ಹಾಕಿ. ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
4. ಇನ್ನು ಈ ಮಿಶ್ರಣವನ್ನು ಹಿಟ್ಟಿನ ಮಿಶ್ರಣಕ್ಕೆ ಹಾಕಿಕೊಳ್ಳಿ ಮತ್ತು ಸರಿಯಾಗಿ ರುಬ್ಬಿ. ನೀವು ಮೊದಲು ತಯಾರು ಮಾಡಿಟ್ಟ ಕೇಕ್ ತವಾಗೆ ಈ ಮಿಶ್ರಣವನ್ನು ಹಾಕಿಕೊಳ್ಳಿ.
5. ಇಷ್ಟೆಲ್ಲಾ ಆದ ನಂತರ ಕೇಕ್ ಅನ್ನು 20-25 ನಿಮಿಷ ಮೊದಲೇ ಬಿಸಿ ಮಾಡಿಟ್ಟ ಓವನ್ ನಲ್ಲಿ ಬೇಯಿಸಿ. ಕೇಕ್ ರೆಡಿಯಾಗಿದೆಯಾ ಎಂದು ಒಂದು ಕಡ್ಡಿ ಹಾಕಿ ತಿಳಿದುಕೊಳ್ಳಿ.
6. ವಯರ್ ರ್ಯಾಕ್ ನಲ್ಲಿ ಕೇಕ್ ಅನ್ನು ಸಂಪೂರ್ಣವಾಗಿ ತಣ್ಣಗಾಗಿಸಿ.
ಮಾವಿನ ಮೊಸರು
1.ಮಾವಿನ ತಿರುಳು, ಉಪ್ಪು ಮತ್ತು ನಿಂಬೆ ರಸವನ್ನು ಒಂದು ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.
2. ಇದಕ್ಕೆ ಮೊಟ್ಟೆಯ ಲೋಳೆ ಹಾಕಿ ಮತ್ತೆ ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಗೆ ಹಾಕಿದ ಬಳಿಕ ಒಂದು ನೀರಿನ ಪಾತ್ರೆಯಲ್ಲಿ ಹಾಕಿ ಸಿಮ್ಮರ್ ನಲ್ಲಿಡಿ. ಆಗಾಗ ಇದನ್ನು ತಿರುಗಿಸುತ್ತಾ ಇದ್ದರೆ ಮಿಶ್ರಣವು ದಪ್ಪಗೆ ಆಗುವುದು.
3. ಸರಿಯಾಗಿ ದಪ್ಪವಾದ ಬಳಿಕ ಇದನ್ನು ಬಿಸಿಯಿಂದ ತೆಗೆಯಿರಿ ಮತ್ತು ಅದಕ್ಕೆ ಆಲಿವ್ ತೈಲವನ್ನು ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಫ್ರಿಡ್ಜ್ ನಲ್ಲಿ ಇಟ್ಟುಬಿಡಿ.
ಕೇಕ್ ಜೋಡಣೆ
1. ಒಂದು ಪಾತ್ರೆ ತೆಗೆದುಕೊಂಡು ಮಾವಿನ ತಿರುಳನ್ನು ಬಿಟ್ಟು ಉಳಿದ ಸಾಮಗ್ರಿಗಳನ್ನು ಹಾಕಿಕೊಂಡು ಕ್ರೀಮ್ ಮಾಡಿಕೊಳ್ಳಿ.
2. ಕೇಕ್ ನ್ನು ತುಂಡು ಮಾಡಿಕೊಂಡು ಇದನ್ನು ಪ್ಲೇಟ್ ನಲ್ಲಿಡಿ. ಕತ್ತರಿಸಿಕೊಂಡು ಕೇಕ್ ನ ಮೇಲೆ ಮಾವಿನ ಮೊಸರನ್ನು ಹಾಕಿಕೊಳ್ಳಿ. ಇದರ ಬಳಿಕ ಕ್ರೀಮ್ ಹಾಕಿ.
3. ಕತ್ತರಿಸಿಕೊಂಡಿರುವ ಮಾವಿನ ತಿರುಳನ್ನು ಅದರ ಮೇಲಿಡಿ ಮತ್ತು ಇನ್ನೊಂದು ಕೇಕ್ ಅದರ ಮೇಲಿಡಿ. ಹೀಗೆ ಪುನರಾವರ್ತಿಸಿ. ಅಂತಿಮವಾಗಿ ಸಂಪೂರ್ಣ ಕೇಕ್ ಮಾವಿನ ಮೊಸರು ಮತ್ತು ಕ್ರೀಮ್ ನಿಂದ ತುಂಬಿರುತ್ತದೆ.
4. ಫ್ರಿಡ್ಜ್ ನಲ್ಲಿಟ್ಟು ತಂಪಾಗಿರುವಾಗಲೇ ತಿನ್ನಿ
5. ಕೇಕ್ ಮಾಡುವ ಸಂಪೂರ್ಣ ವಿಧಾನವು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆದರೆ ನೀವು ಈ ಕೇಕ್ ಅನ್ನು ತಯಾರಿಸಿ ನೀಡಿದಾಗ ಅದನ್ನು ತಿನ್ನುವವರ ಮುಖದಲ್ಲಿ ನಗು ಕಂಡರೆ ಅದಕ್ಕಿಂತ ದೊಡ್ಡ ಗೆಲುವು ಮತ್ತೊಂದಿಲ್ಲ.