For Quick Alerts
ALLOW NOTIFICATIONS  
For Daily Alerts

ದೀಪಾವಳಿ ವಿಶೇಷ: ರುಚಿ ರುಚಿಯಾದ ಹಾಲಿನ ಪಾಯಸ

|

ಕೇರಳದ ಅತ್ಯಂತ ಜನಪ್ರಿಯ ಸಿಹಿ ಖಾದ್ಯವಾದ ಪಾಲ್ ಪಾಯಸಂ (ಹಾಲಿನ ಪಾಯಸ) ಅನ್ನು ಈ ದೀಪಾವಳಿಗೆ ನಿಮ್ಮ ಮನೆಯಲ್ಲಿ ಮಾಡಿ. ಸ್ವಲ್ಪ ದಪ್ಪನಾದ, ಕೆನೆಭರಿತವಾದ ಮತ್ತು ತುಸು ಗುಲಾಬಿ ಬಣ್ಣದ ಈ ಖೀರಿನಿಂದ ಕೂಡಿದ ಈ ಪಾಯಸವನ್ನು ಶುದ್ಧವಾದ ಕೆನೆಭರಿತವಾದ ಹಾಲು, ಅಕ್ಕಿಯಿಂದ ಮಾಡಲಾಗಿರುತ್ತದೆ. ಪಾಲ್ ಪಾಯಸಂನ ರೆಸಿಪಿಯನ್ನು ತುಂಬಾ ಬೇಗ ಮಾಡಬಹುದು.

ಪಾಲ್ ಪಾಯಸಂ ಅನ್ನು ಶುದ್ಧವಾದ ಹಾಲಿನಿಂದ ಮಾಡಲಾಗಿರುತ್ತದೆ, ದಕ್ಷಿಣ ಭಾರತದಲ್ಲಿ ಯಾವ ಹಬ್ಬವು ಪಾಯಸವಿಲ್ಲದೆ ಪರಿಪೂರ್ಣವಾಗುವುದಿಲ್ಲ. ಅದರಲ್ಲೂ ಕೇರಳ ಶೈಲಿಯ ಪಾಲ್ ಪಾಯಸಂ ಇದ್ದರಂತು ಹಬ್ಬದ ರುಚಿಯೇ ಬೇರೆ ಆಗುತ್ತದೆ. ಈಗ ನಮ್ಮ ಮುಂದೆ ದೀಪಾವಳಿ ಬಂದು ಕುಳಿತಿದೆ. ನಿಮ್ಮ ನಾಲಿಗೆಯ ರುಚಿ ಗ್ರಂಥಿಗಳನ್ನು ತಣಿಸಲು ಏನಾದರು ಹೊಸ ಬಗೆಯ ರುಚಿಯನ್ನು ಪ್ರಯತ್ನಿಸಲು ಬಯಸುತ್ತಿರುವಿರಾ? ಹಾಗಾದರೆ ತಡ ಏಕೆ, ಪಾಲ್ ಪಾಯಸಂ ಮಾಡಿ. ನಿಮಗಾಗಿ ಈ ದೀಪಾವಳಿಗೆ ಪಾಲ್ ಪಾಯಸಂ ರೆಸಿಪಿಯನ್ನು ನೀಡುತ್ತಿದ್ದೇವೆ. ಜಿಲೇಬಿ ರೆಸಿಪಿ: ದೀಪಾವಳಿ ರೆಸಿಪಿ

ಪ್ರಮಾಣ: 3
ಅಡುಗೆಗೆ ತಗುಲುವ ಸಮಯ: 30 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಕೆನೆ ಭರಿತ ಹಾಲು -2 ಲೀಟರ್‌ಗಳು
*ಸಕ್ಕರೆ - 2 1/2 ಕಪ್
*ಕಚ್ಛಾ ಅಕ್ಕಿ/ ಬಾಸುಮತಿ ಅಕ್ಕಿ - 2-3 ಚಮಚ
*ಪುಡಿ ಮಾಡಿದ ಏಲಕ್ಕಿ - 1/2 ಚಮಚ
*ಗೋಡಂಬಿ - 10 (ತುಪ್ಪದಲ್ಲಿ ಉರಿದಂತಹವು)
*ಮಂದಗೊಳಿಸಿದ ಹಾಲು- 2 ಚಮಚ (ಐಚ್ಛಿಕ)

ತಯಾರಿಸುವ ವಿಧಾನ
1. ಅಕ್ಕಿಯನ್ನು ಚೆನ್ನಾಗಿ ಒಂದರ್ಧ ಗಂಟೆ ಕಾಲ ನೆನೆಸಿ ಮತ್ತು ಚೆನ್ನಾಗಿ ಒಣಗಲು ಬಿಡಿ
2. ಇನ್ನು ಹಾಲನ್ನು ದಪ್ಪನಾದ ತಳ ಇರುವ ಪಾತ್ರೆಯಲ್ಲಿ ಹಾಕಿ ಕಾಯಿಸಿ.
3. ಈ ಹಾಲಿಗೆ ಬೆಂದ ಅಕ್ಕಿಯನ್ನು ಹಾಕಿ ಮತ್ತು ಹಾಗೆಯೇ ಕಲೆಸುವುದನ್ನು ಮುಂದುವರಿಸಿ.
4. ಒಂದು ವೇಳೆ ನೀವು ಪ್ರೆಶ್ಶರ್ ಕುಕ್ಕರ್ ಬಳಸುತ್ತಿದ್ದಲ್ಲಿ, ಅಕ್ಕಿ ಮತ್ತು ಹಾಲು ಎರಡನ್ನು ನೇರವಾಗಿ ಕುಕ್ಕರ್‌ಗೆ ಹಾಕಿ, ದೊಡ್ಡದಾದ ಉರಿಯಲ್ಲಿ ಒಂದು ವಿಶಲ್ ಬರುವವರೆಗೆ ಇಡಿ. ಒಂದು ವೇಳೆ ಕಡಿಮೆ ಉರಿಯಲ್ಲಿ ಇದನ್ನು ಮಾಡಬೇಕಾದಲ್ಲಿ, 15-20 ನಿಮಿಷದವರೆಗು ಇಡಿ.
5. ಅಕ್ಕಿ ಚೆನ್ನಾಗಿ ಬೆಂದ ಮೇಲೆ, ಅದನ್ನು ಚಮಚದಿಂದ ಚೆನ್ನಾಗಿ ರುಬ್ಬಿ ಮಿಶ್ರಣ ಮಾಡಿ. ನೀವು ಮತ್ತಷ್ಟು ಸಿಮ್‍ನಲ್ಲಿ ಇದನ್ನು ಮಾಡಿದರೆ, ಹಾಲು ಚೆನ್ನಾಗಿ ಕುದಿಯುತ್ತ, ಇರುವ ಹಾಲಿನ ಅರ್ಧ ಭಾಗದಷ್ಟು ಕೋವಾ ರೀತಿಯಲ್ಲಿ ಮಂದವಾಗುತ್ತ ಬರುತ್ತದೆ. ಈ ಮಿಶ್ರಣವು ಈ ಸಮಯದಲ್ಲಿ ಸ್ವಲ್ಪ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.
6. ಈಗ ನಿಮಗೆ ಬೇಕಾದಲ್ಲಿ, ಈ ಮಂದವಾದ ಹಾಲನ್ನು ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಿ.
7. ಈ ಮಿಶ್ರಣಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ. ಉರಿಯಿಂದ ಹೊರಗೆ ತೆಗೆದು, ಸಕ್ಕರೆ ಕರಗುವವರೆಗು ಇದನ್ನು ಚೆನ್ನಾಗಿ ಕಲೆಸಿಕೊಳ್ಳಿ.
8. ತದನಂತರ ಈ ಪಾಲ್ ಪಾಯಸಂಗೆ ಗೋಡಂಬಿಗಳಿಂದ ಅಲಂಕಾರ ಮಾಡಿ.
9. ಈ ರುಚಿ ರುಚಿಯಾದ ಸಿಹಿ ಪದಾರ್ಥವನ್ನು ಬಿಸಿ ಬಿಸಿಯಾಗಿ ಅಥವಾ ತಂಪಾಗಿ ಸರ್ವ್ ಮಾಡಬಹುದು.

English summary

Paal Payasam: A Must Try Recipe This Diwali

The Paal payasam is popular dessert in Kerala. Thick, creamy, and light pink, paal payasam is a rich kheer made with full cream milk in which rice and is cooked till it becomes soft.
X
Desktop Bottom Promotion