For Quick Alerts
ALLOW NOTIFICATIONS  
For Daily Alerts

  ರಂಜಾನ್ ಸ್ಪೆಷಲ್: ಖರ್ಜೂರದ ಬರ್ಫಿ, ಸ್ವರ್ಗಕ್ಕೆ ಮೂರೇ ಗೇಣು!

  By Manu
  |

  ಒಂದು ತಿಂಗಳ ಕಾಲ ಉಪವಾಸ ಆಚರಿಸುವ ಮುಸ್ಲಿಮರಿಗೆ ಇದೊಂದು ಪವಿತ್ರವಾದ ಮಾಸವಾಗಿದ್ದು ಆ ಬಳಿಕ ಬರುವ ರಮಧಾನ್ (ರಂಜಾನ್ ಅನ್ನುವುದು ವಾಡಿಕೆಯಾದರೂ ರಮಧಾನ್ ಎಂಬುವುದೇ ಸರಿಯಾದ ಉಚ್ಛಾರಣೆಯಾಗಿದೆ) ಹಬ್ಬ ಸಹಾ ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಪವಿತ್ರ ಮಾಸದಲ್ಲಿ ಭಕ್ತರು ಉಪವಾಸವಿರುವ ಮೂಲಕ ದೇಹವನ್ನು ದಂಡಿಸುವುದು ಮಾತ್ರವಲ್ಲ, ಮಾನಸಿಕವಾಗಿ ಹಲವು ಕಟ್ಟಳೆಗಳಿಗೆ ಒಳಗಾಗುವ ಮೂಲಕ ಆಂತರ್ಯದಿಂದಲೂ ಪರಿಶುದ್ಧರಾಗುತ್ತಾರೆ.

  ಇಡಿಯ ದಿನ ಉಪವಾಸವಿದ್ದರೂ ಸೂರ್ಯಾಸ್ತಕ್ಕೂ ಮುನ್ನ ಮತ್ತು ಸೂರ್ಯಾಸ್ತಮಾನದ ಬಳಿಕ ಆಹಾರ ಸೇವಿಸಬಹುದು. ಭಾರತದಲ್ಲಿ ಈ ಅವಧಿ ಸುಮಾರು ಹದಿಮೂರುವರೆ ಗಂಟೆ ಇದೆ. ಈ ಅವಧಿಯಲ್ಲಿ ಒಂದು ತೊಟ್ಟು ನೀರನ್ನೂ ಕುಡಿಯಲು ಸಾಧ್ಯವಿಲ್ಲದ ಕಾರಣ ದೇಹ ಯಾವುದೇ ಕೊರತೆಯಿಂದ ಬಳಲದಂತಿರಲು ಹೆಚ್ಚಿನ ಪೌಷ್ಟಿಕಾಂಶವಿರುವ ಆಹಾರವನ್ನು ಬೆಳಗ್ಗೆ ಸೇವಿಸುವುದು ಉತ್ತಮ. ಖರ್ಜೂರ ಇಂತಹ ಒಂದು ಅದ್ಭುತ ಆಹಾರವಾಗಿದ್ದು ಅತಿಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುವ ಮೂಲಕ ಉಪವಾಸಿಗರ ದೇಹವನ್ನು ಹೆಚ್ಚು ಬಳಲದಿರುವಂತೆ ನೆರವಾಗುತ್ತದೆ.     ರಂಜಾನ್ ಮಾಸದಲ್ಲಿ ಖರ್ಜೂರಕ್ಕೆ ಏಕೆ ಅಷ್ಟೊಂದು ಮಹತ್ವ?

  ರಮಧಾನ್ ಅಥವಾ ರಂಜಾನ್ ಮಾಸದಲ್ಲಿ ಪೋಷಕಾಂಶಗಳ ಆಗರವೂ ಆಗಿರುವ ಖರ್ಜೂರವನ್ನು ಸೇವಿಸುವುದು ಒಂದು ಧಾರ್ಮಿಕ ವಿಧಿಯೂ ಆಗಿದೆ. ಖರ್ಜೂರದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ, ಕ್ಯಾಲ್ಸಿಯಂ, ಗ್ಲೂಕೋಸ್ ಮೊದಲಾದ ಪೋಷಕಾಂಶಗಳಿವೆ. ಇವೆಲ್ಲವೂ ದಿನದಲ್ಲಿ ಹಸಿವಾಗದಿರಲು ನೆರವಾಗುತ್ತದೆ ಮತ್ತು ನಿತ್ಯದ ಚಟುವಟಿಕೆಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ. ಆದರೆ ಬರೆಯ ಖರ್ಜೂರವನ್ನು ತಿನ್ನುವುದಕ್ಕಿಂತ ಇದನ್ನು ಸಿಹಿ ಖಾದ್ಯರ ರೂಪದಲ್ಲಿ ಬಡಿಸಿದರೆ ಇನ್ನಷ್ಟು ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಖರ್ಜೂರದ ಬರ್ಫಿ ರಮಧಾನ್ ತಿಂಗಳಿಗೆ ಒಂದು ಸಮರ್ಪಕ ಆಯ್ಕೆಯಾಗಿದೆ.

  Delicious Dates Barfi Recipe For Ramzan
   

   ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು

  *ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು

  *ತಯಾರಿಕಾ ಸಮಯ: ಹದಿನೈದು ನಿಮಿಷಗಳು

  ಅಗತ್ಯವಿರುವ ಸಾಮಾಗ್ರಿಗಳು:

  *ಬೀಜ ನಿವಾರಿಸಿದ ಖರ್ಜೂರ: ಇನ್ನೂರು ಗ್ರಾಂ

  *ಪಿಸ್ತಾ: ಅರ್ಧ ಕಪ್ (ಚಿಕ್ಕದಾಗಿ ತುಂಡರಿಸಿದ್ದು)

  *ಒಣ ದ್ರಾಕ್ಷಿ: ಅರ್ಧ ಕಪ್

  *ಬಾದಾಮಿ: ಅರ್ಧ ಕಪ್ (ಚಿಕ್ಕದಾಗಿ ತುಂಡರಿಸಿದ್ದು)

  *ಬಿಳಿಗೋಡಂಬಿ : ಅರ್ಧ ಕಪ್ (ಚಿಕ್ಕದಾಗಿ ತುಂಡರಿಸಿದ್ದು)

  *ಗಸಗಸೆ: ಒಂದು ಚಿಕ್ಕ ಚಮಚ

  *ಒಣ ಅಂಜೂರ: ಅರ್ಧ ಕಪ್ (ಚಿಕ್ಕದಾಗಿ ತುಂಡರಿಸಿದ್ದು)

  *ತುಪ್ಪ: ಅಗತ್ಯಕ್ಕೆ ತಕ್ಕಂತೆ                        ರಂಜಾನ್ ಗೆ ಶೀರ್ ಕುರ್ಮಾ ವಿಶೇಷ ಔತಣ

  ವಿಧಾನ:

  1) ಮೊದಲು ಖರ್ಜೂರಗಳನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಳಿಕ ಮಿಕ್ಸಿಯ ಜಾರ್ ನಲ್ಲಿ ಹಾಕಿ ಅರೆಯಿರಿ. ಮೊದಮೊದಲು ನುಣ್ಣಗಾಗಲು ಖರ್ಜೂರ ಕೊಂಚ ಹಟ ಹಿಡಿಯುತ್ತದೆ. ಕೊಂಚ ತಾಳ್ಮೆ ವಹಿಸಿ ನಾಲ್ಕಾರು ಬಾರಿ ಮುಚ್ಚಳ ತೆರೆದು ಸರಿಯಾಗಿ ಮಿಶ್ರಣ ಮಾಡಿದರೆ ನುಣ್ಣಗಾಗುತ್ತದೆ.

  2) ಬಳಿಕ ನುಣ್ಣಗಾದ ಖರ್ಜೂರವನ್ನು ಒಂದು ತಟ್ಟೆಯಲ್ಲಿ ಹರಡಿ.

  3) ಒಂದು ದಪ್ಪತಳದ ಕಾವಲಿಯ ಮೇಲೆ ಕೊಂಚ ತುಪ್ಪ ಸುರಿದು ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಬಿಸಿಯಾಗುತ್ತಿದ್ದಂತೆಯೇ ಗಸಗಸೆ ಹಾಕಿ ಕೊಂಚವೇ ಹುರಿಯಿರಿ. ಗಸಗಸೆ ಕೊಂಚ ಕೆಂಪುಬಣ್ಣ ಪಡೆಯುತ್ತಿದ್ದಂತೆಯೇ ಉಳಿದ ಎಲ್ಲಾ ಒಣಫಲಗಳನ್ನು ಹಾಕಿ. ಗಸಗಸೆ ಹೆಚ್ಚು ಕೆಂಪಗಾಗಲು ಬಿಡಬಾರದು, ಬಿಟ್ಟರೆ ಇದು ಕಹಿಯಾಗುತ್ತದೆ. ಎಲ್ಲವನ್ನೂ ಸತತವಾಗಿ ತಿರುವುತ್ತಿರಿ. ಇವುಗಳಲ್ಲಿ ಯಾವುವೂ ಕಾವಲಿಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ.

  4) ಸಾಧಾರಣವಾಗಿ ಎಲ್ಲಾ ಒಣಫಲಗಳು ಹುರಿದಿವೆ ಎಂದೆನಿಸಿದ ಬಳಿಕ ಅರೆದ ಖರ್ಜೂರವನ್ನು ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿ. ಸತತವಾಗಿ ತಿರುವುತ್ತಿರುವ ಮೂಲಕ ಕಾವಲಿಯ ತಳಕ್ಕೆ ಹಿಡಿಯದಂತೆ ಎಚ್ಚರಿಕೆ ವಹಿಸಿ.

  5) ಸುಮಾರು ಐದು ನಿಮಿಷದ ಬಳಿಕ ಈ ದ್ರವ ಗಟ್ಟಿಯಾಗಿರುವುದು ಗಮನಕ್ಕೆ ಬರುತ್ತದೆ. ಒಂದು ತಟ್ಟೆಯಲ್ಲಿ ಕೊಂಚ ತುಪ್ಪ ಸವರಿ ಈ ಘನಪದಾರ್ಥವನ್ನು ತಟ್ಟೆಯ ಮೇಲೆ ಇಟ್ಟು ಕೊಂಚವೇ ರೊಟ್ಟಿ ತಟ್ಟಿದಂತೆ ತಟ್ಟಿ ಸಮಾನವಾಗಿ ದಪ್ಪಗಿರುವಂತೆ ಮಾಡಿ.

  6) ಈ ತಟ್ಟೆಯನ್ನು ಫ್ರಿಜ್ಜಿನಲ್ಲಿ ಸುಮಾರು ಒಂದು ಗಂಟೆ ಕಾಲ ಇರಿಸಿ. ಬಳಿಕ ಹೊರತೆಗೆದು ಚಾಕುವಿನಿಂದ ಚೌಕಾಕಾರದಲ್ಲಿ ಅಥವಾ ನಿಮ್ಮ ಇಷ್ಟದ ಆಕೃತಿಯಲ್ಲಿ ಕತ್ತರಿಸಿ ಉಪವಾಸ ಸಂಪನ್ನಗೊಳಿಸಲು ಆಗಮಿಸಿದ ಅತಿಥಿಗಳಿಗೆ ಬಡಿಸಿ.

  ಈ ರುಚಿಯಾದ ಬರ್ಫಿ ಮಕ್ಕಳಿಂದ ಹಿಡಿದ ಹಿರಿಯರಿಗೆಲ್ಲರಿಗೂ ಇಷ್ಟವಾಗುತ್ತದೆ. ಆದರೆ ಇದರ ಸಕ್ಕರೆಯ ಪ್ರಮಾಣದ ಕಾರಣ ಮಧುಮೇಹದವರಿಗೆ ಸೂಕ್ತವಲ್ಲ. ಈ ಬರ್ಫಿ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಆಯ್ದುಕೊಳ್ಳಿ.

  English summary

  Delicious Dates Barfi Recipe For Ramzan

  Dates has several health benefits, which is taken especially during the fasting period of Ramzan. It provides nutrition and is rich in iron, calcium, glucose, etc. The best part of eating dates and recipes with dates is that it controls your hunger pangs during the day. So, as a special recipe for Ramzan, have a look at this special, delicious dates barfi recipe.
  Story first published: Thursday, June 9, 2016, 13:31 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more