For Quick Alerts
ALLOW NOTIFICATIONS  
For Daily Alerts

ಸಿಹಿ ತಿನಿಸಿನ ಸರದಾರ- ಕ್ಯಾರೆಟ್ ಹಲ್ವಾ

By Super
|

ಕ್ಯಾರೆಟ್ ಹಲ್ವಾ ಎಂದರೆ ಯಾರೂ ಬೇಡವೆನ್ನಲಾಗದ ಸಿಹಿಯಾದ ಖಾದ್ಯವಾಗಿದೆ. ಕಣ್ಣಿಗೆ ಉತ್ತಮವಾದ ಪೋಷಕಾಂಶಗಳನ್ನು ಹೊಂದಿರುವ ಕ್ಯಾರೆಟ್ ಹಸಿಯಾಗಿಯೂ, ಬೇಯಿಸಿಯೂ, ಪಲ್ಯದ ರೂಪದಲ್ಲಿಯೂ, ಸಾಂಬಾರ್‌ನಲ್ಲಿ ಹೋಳುಗಳಂತೆಯೂ, ಸಿಹಿಪದಾರ್ಥವಾಗಿಯೂ ವಿವಿಧ ರೀತಿಯಲ್ಲಿ ಬಳಸಲ್ಪಡುವ ತರಕಾರಿಯಾಗಿದೆ. ಆರೋಗ್ಯದ ನಿಟ್ಟಿನಲ್ಲಿ ಕ್ಯಾರೆಟ್ ಪ್ರತಿದಿನವೂ ಸೇವಿಸಬೇಕಾದ ಒಂದು ಉಪಯುಕ್ತ

ತರಕಾರಿಯಾಗಿದೆ. ಆದರೆ ಇವೆಲ್ಲಕ್ಕೂ ಮಿಗಿಲಾದ ಇದರ ಉಪಯೋಗವೆಂದರೆ ಕ್ಯಾರೆಟ್ ಹಲ್ವಾ ಅಥವಾ ಹೆಚ್ಚಿನ ಜನರಿಂದ ಗುರುತಿಸಲ್ಪಡುವ ಗಾಜರ್ ಕಾ ಹಲ್ವಾ ಆದರೆ ಗಾಜರ್ ಕಾ ಹಲ್ವಾ ಮಾಡುವ ಸಾಂಪ್ರಾದಾಯಿಕ ವಿಧಾನ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಒಂದು ಭಾಗ ಕ್ಯಾರೆಟ್ ತುರಿಗೆ ಒಂದು ಭಾಗ ಹಸಿ ಹಾಲು ಹಾಕಿ ಹಾಲೆಲ್ಲಾ ಪೂರ್ಣವಾಗಿ ಇಂಗುವರೆಗೆ ಚಿಕ್ಕ ಉರಿಯಲ್ಲಿ ಬೇಯಿಸಬೇಕಾಗುತ್ತದೆ.

ಬಳಿಕವೇ ತುಪ್ಪದೊಡನೆ ಹುರಿದು ಸಕ್ಕರೆ ಅಥವಾ ಬೆಲ್ಲ ಹಾಕಿ ಇನ್ನೂ ತುಂಬಾ ಹೊತ್ತು ತಿರುವುತ್ತಾ ಇರಬೇಕಾಗುತ್ತದೆ. ತಿನ್ನುವವರೆಗೆ ನಿಮಿಷವಾದರೂ ಮಾಡುವವರಿಗೆ ಇದು ವರ್ಷದಂತೆಯೇ ಅನ್ನಿಸುತ್ತದೆ. ಕುಕ್ಕರುಗಳ ಬಳಕೆ ಇದನ್ನು ಸುಲಭವಾಗಿಸುತ್ತದಾದರೂ ಸಾಂಪ್ರಾದಾಯಿಕ ವಿಧಾನದ ರುಚಿ ಬರುವುದಿಲ್ಲ. ಕಡಿಮೆ ಸಮಯದಲ್ಲಿ ಸಾಂಪ್ರಾದಾಯಿಯ ರುಚಿ ಹೊಂದಿರುವ ಹಲ್ವಾ ಮಾಡಲು ಇನ್ನೊಂದು ವಿಧಾನವಿದೆ. ಹಲ್ವಾ ರುಚಿಯಾಗಬೇಕು ಅಲ್ವಾ? ಹೀಗೆ ಮಾಡಿ

Carrot Halwa With Khoya Recipe

ಹಾಲನ್ನು ಕುದಿಸಿ ಬಸಿದು ಮಾಡಿರುವ ಮಾವಾ ಅಥವಾ ಖೋವಾವನ್ನು ಹಾಲಿನ ಬದಲಿಗೆ ಬಳಸುವ ಮೂಲಕ ಸಾಂಪ್ರಾದಾಯಿಕ ರುಚಿಯನ್ನು ಹೊಂದಿರುವ ಹಲ್ವಾವನ್ನು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಹಲ್ವಾ ಅತಿಥಿಗಳಿಗೆ ಬಡಿಸಿದಾಗ ಇತರ ತಿಂಡಿಗಳಿಗಿಂತ ಹೆಚ್ಚಾಗಿ ಖರ್ಚಾಗುತ್ತದೆ. ಬನ್ನಿ ಜಾಣರು ಉಪಯೋಗಿಸುವ ಈ ವಿಧಾನವನ್ನು ಕಲಿತು ಜಾಣರಾಗೋಣ:

*ಪ್ರಮಾಣ: ಸುಮಾರು ಮೂವರಿಂದ ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಒಂದೂ ಕಾಲು ಘಂಟೆ (ನಡು ನಡುವೆ ಬೇರೆ ಕೆಲಸಗಳನ್ನೂ ಮಾಡಬಹುದು)

ಅಗತ್ಯವಿರುವ ಸಾಮಾಗ್ರಿಗಳು:
*ಕ್ಯಾರೆಟ್ (ಗಜ್ಜರಿ) - ಒಂದು ಕೇಜಿ, ಸಿಪ್ಪೆ ಸುಲಿದು ಚಿಕ್ಕದಾಗಿ ತುರಿದದ್ದು (ಸಿಪ್ಪೆಯಲ್ಲಿ ಅತಿ ಚಿಕ್ಕದಾದ ಮರಳಿನ ಕಣಗಳಿರುತ್ತವೆ. ತೊಳೆದರೂ ಸುಲಭವಾಗಿ ಹೋಗುವುದಿಲ್ಲ, ಆದ್ದರಿಂದ ನಿವಾರಿಸುವುದೇ ಉತ್ತಮ)
*ಹಾಲು - ಎರಡು ಲೀಟರ್
*ಖೋವಾ - ಅರ್ಧ ಕೇಜಿ (ಇದಕ್ಕೆ ಮಾವಾ ಎಂದು ಕರೆಯುತ್ತಾರೆ)
*ಸಕ್ಕರೆ - ಒಂದು ಕಪ್
*ತುಪ್ಪ - ಎರಡು ದೊಡ್ಡ ಚಮಚ

ಸಿಂಗರಿಸಲು:
*ಗೋಡಂಬಿ: ಐದರಿಂದ ಆರು (ಇಬ್ಬಾಗವಾಗಿಸಿದ್ದು)
*ಬಾದಾಮಿ : ಐದರಿಂದ ಆರು (ತೆಳುವಾದ ಬಿಲ್ಲೆಗಳಾಗಿಸಿದ್ದು)
*ಏಲಕ್ಕಿ ಪುಡಿ: ಒಂದು ಚಿಟಿಕೆ

ತಯಾರಿಕಾ ವಿಧಾನ:
1) ಹಾಲನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಕುದಿಬರಿಸಿ. ನಡುನಡುವೆ ನಿಧಾನವಾಗಿ ತಿರುವುತ್ತಿರಿ
2) ಕುದಿ ಬಂದ ಬಳಿಕ ಉರಿಯನ್ನು ಅತಿ ಚಿಕ್ಕದಾಗಿಸಿ ಪಾತ್ರೆ ತೆರೆದ ಸ್ಥಿತಿಯಲ್ಲಿ ಸುಮಾರು ಮುಕ್ಕಾಲು ಗಂಟೆಯಿಂದ ಐವತ್ತು ನಿಮಿಷದವರೆಗೆ ಕುದಿಯಲು ಬಿಡಿ. ಬಳಿಕ ಹಾಲು ದಟ್ಟವಾಗುತ್ತದೆ. ಪಾತ್ರೆಯ ತಳ ಹತ್ತದಂತೆ ನಡುನಡುವೆ ತಿರುವುತ್ತಿರಿ.
3) ಬಳಿಕ ತುರಿದ ಕ್ಯಾರೆಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಹಾಲನ್ನು ಕ್ಯಾರೆಟ್ ಹೀರಿಕೊಳ್ಳುವವರೆಗೆ ನಡುನಡುವುತ್ತಾ ತಿರುವುತ್ತಿರಿ.
4) ಕ್ಯಾರೆಟ್ ನಲ್ಲಿನ ನೀರಿನ ಅಂಶಕ್ಕೆ ಅನುಗುಣವಾಗಿ ಹೀರಿಕೊಳ್ಳುವ ಸಮಯ ಕೊಂಚ ಹೆಚ್ಚುಕಡಿಮೆಯಾಗಬಹುದು. ಆದರೂ ಸುಮಾರು ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತದೆ.
5) ಹಾಲೆಲ್ಲಾ ಹೀರಿಕೊಂಡಿದೆ ಎಂದು ಮನವರಿಕೆಯಾದ ಬಳಿಕ ಉರಿ ನಂದಿಸಿ ಪಾತ್ರೆಯನ್ನು ಬದಿಗಿಡಿ.
6) ಇನ್ನೊಂದು ದಪ್ಪತಳದ ಚಿಕ್ಕ ಪಾತ್ರೆಯಲ್ಲಿ ತುಪ್ಪ ಬಿಸಿಮಾಡಿ. ತುಪ್ಪ ಬಿಸಿಯಾಗುತ್ತಿದ್ದಂತೆಯೇ ಏಲಕ್ಕಿ ಪುಡಿ ಹಾಕಿ ತಕ್ಷಣವೇ ಬೆಂದ ಕ್ಯಾರೆಟ್ ತುರಿಯನ್ನು ಹಾಕಿ ತಿರುವಿ.
7) ಬಳಿಕ ಖೋವಾ ಮತ್ತು ಸಕ್ಕರೆಯನ್ನು ನಿಧಾನವಾಗಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉರಿ ಚಿಕ್ಕದಾಗಿರಲಿ
8) ಸಕ್ಕರೆ ಪೂರ್ಣವಾಗಿ ಕರಗಿದೆ ಅನ್ನಿಸಿದ ಬಳಿಕ ಉರಿ ನಂದಿಸಿ ತಣಿಯಲು ಬಿಡಿ. ಬಳಿಕ ಮೇಲ್ಭಾಗದಲ್ಲಿ ಗೋಡಂಬಿ ಮತ್ತು ಬಾದಾಮಿಗಳನ್ನು ಹರಡಿ ಅಲಂಕರಿಸಿ.
9) ಅತಿಥಿಗಳಿಗೆ ಬಿಸಿಬಿಸಿಯಿದ್ದಂತೆಯೇ ಬಡಿಸಿ, ಮೆಚ್ಚುಗೆ ಪಡೆಯಿರಿ.

ಸಲಹೆ:
1) ಸಾಂಪ್ರಾದಾಯಿಕ ವಿಧಾನದಲ್ಲಿ ಮಾಡುವಷ್ಟು ಸಮಯಾವಕಾಶವಿಲ್ಲದಿದ್ದರೆ ಕ್ಯಾರೆಟ್ ತುರಿಯನ್ನು ಕೊಂಚವೇ ನೀರಿನೊಂದಿಗೆ ಮುಕ್ಕಾಲು ಪಾಲು ಕುಕ್ಕರಿನಲ್ಲಿ ಬೇಯಿಸಿ. ಬಳಿಕ ನೀರು ಬಸಿದು ಖೋವಾ ಹಾಕಿ ಮತ್ತೊಮ್ಮೆ ಕುಕ್ಕರಿನಲ್ಲಿ ನಾಲ್ಕಾರು ಸೀಟಿ ಬರುವಂತೆ ಮಾಡಿ. ನಂತರ ತುಪ್ಪದಲ್ಲಿ ಹುರಿದರೆ ಸಾಕಷ್ಟು ಹತ್ತಿರದ ರುಚಿ ಬರುತ್ತದೆ.
2) ಸಮಯ ಉಳಿಸಲು ಇನ್ನೊಂದು ವಿಧಾನವೆಂದರೆ ಕ್ಯಾರೆಟ್‌ಗಳನ್ನು ಇಡಿಯಾಗಿ ಮುಕ್ಕಾಲು ಪಾಲು ಬೇಯಿಸಿ ಬಳಿಕ ಮಿಕ್ಸಿಯಲ್ಲಿ ಕೊಂಚವೇ ದೊರಗಾಗುವಂತೆ ತುರಿಯುವುದು. ಇದನ್ನು ಘನೀಕರಿಸಿದ ಹಾಲು (condensed milk) ನೊಂದಿಗೆ ಬೇಯಿಸಿ ಹಲ್ವಾ ತಯಾರಿಸಬಹುದು. ಈ ವಿಧಾನಕ್ಕೆ ಹದಿನೈದೇ ನಿಮಿಷ ಸಾಕು. ಘನೀಕರಿಸಿದ ಹಾಲಿನಲ್ಲಿಯೇ ಸಕ್ಕರೆ ಇರುವ ಕಾರಣ ಹೆಚ್ಚುವರಿ ಸಕ್ಕರೆ ಹಾಕುವ ಅಗತ್ಯವಿಲ್ಲ.

English summary

Carrot Halwa With Khoya Recipe

It is the season of carrots. So there is not doubt that carrots will be there in your healthy diet. Be it in the salad, side dishes or in dessert, carrots are one healthy vegetable that can be included in your diet. When we talk about desserts using carrot, what strikes our mind is gajar ka halwa.
Story first published: Thursday, October 22, 2015, 10:30 [IST]
X
Desktop Bottom Promotion