For Quick Alerts
ALLOW NOTIFICATIONS  
For Daily Alerts

ಬೀಟ್ ರೂಟ್ ಹಲ್ವಾ ರೆಸಿಪಿ

|

ಮನೆಯಲ್ಲಿ ಹಲ್ವಾ ಮಾಡುವಾಗ ತಕ್ಷಣ ನೆನಪಿಗೆ ಬರುವುದು ಕ್ಯಾರೆಟ್ ಹಲ್ವಾ, ಕುಂಬಳಕಾಯಿ ಹಲ್ವಾ, ಆದರೆ ಬೀಟ್ ರೂಟ್ ನಿಂದಲೂ ಸವಿರುಚಿಯ ಹಲ್ವಾ ತಯಾರಿಸಬಹುದು ಗೊತ್ತಾ? ಈ ಬೀಟ್ ರೂಟ್ ಹಲ್ವಾವನ್ನು ಹೆಚ್ಚಿನ ಪರಿಶ್ರಮವಿಲ್ಲದೆ ತಯಾರಿಸಬಹುದು. ಮಕ್ಕಳಿಗಂತೂ ಇದರ ಬಣ್ಣ ಮತ್ತು ರುಚಿ ತುಂಬಾ ಇಷ್ಟವಾಗುವುದು.

ಬೀಟ್ ರೂಟ್ ಹಲ್ವಾ ಮಾಡುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ ನೋಡಿ:

Beetroot Halwa Recipe

ಬೇಕಾಗುವ ಸಾಮಾಗ್ರಿಗಳು
ತುರಿದ ಬೀಟ್ ರೂಟ್ 2 ಕಪ್
ಸಕ್ಕರೆ ಮುಕ್ಕಾಲು ಕಪ್
ಹಾಲು 2 ಕಪ್
ಏಲಕ್ಕಿ ಪುಡಿ 1/4 ಚಮಚ
ಸ್ವಲ್ಪ ಬಾದಾಮಿ
ಸ್ವಲ್ಪ ಗೋಡಂಬಿ
ತುಪ್ಪ 1/4 ಕಪ್
Khoa(ಬೇಕಿದ್ದರೆ)

ಮಾಡುವ ವಿಧಾನ:

* ಬೀಟ್ ರೂಟ್ ನ ಸಿಪ್ಪೆ ಸುಲಿದು ಅದನ್ನು ತುರಿಯಿರಿ.

* ಬಾದಾಮಿಯನ್ನು ಬಿಸಿ ನೀರಿನಲ್ಲಿ 10 ನಿಮಿಷ ಹಾಕಿ ಅದರ ಸಿಪ್ಪೆ ಸುಲಿಯಿರಿ, ನಂತರ ಚಿಕ್ಕ-ಚಿಕ್ಕ ಪೀಸ್ ಮಾಡಿ.

* ಪ್ಯಾನ್ ಗೆ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಗೋಡಂಬಿ ಹಾಕಿ 2-3 ನಿಮಿಷ ಫ್ರೈ ಮಾಡಿ ಬದಿಯಲ್ಲಿ ತೆಗೆದಿಡಿ.

* ನಂತರ ಗೋಡಂಬಿ ಫ್ರೈ ಮಾಡಿದ ಪ್ಯಾನ್ ಗೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಮಾಡಿ, ನಂತರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.

* ನಂತರ ಎರಡು ಕಪ್ ಹಾಲು ಮತ್ತು ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಬೀಟ್ ರೂಟ್ ಬೆಂದು ಮೆತ್ತಗಾಗಿ, ಹಾಲು ಬತ್ತುವವರೆಗೆ ಬೇಯಿಸಿ, ಆಗಾಗ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಬೇಕು, ಇಲ್ಲದಿದ್ದರೆ ಅಡಿ ಹಿಡಿಯುವುದು.

* ಈಗ ಏಲಕ್ಕಿ ಪುಡಿ ಹಾಕಿ ಉಳಿದ ತುಪ್ಪವನ್ನು ಸುರಿದು ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ಉರಿಯಿಂದ ಇಳಿಸಿ, ಗೋಡಂಬಿ ಬಾದಾಮಿಯಿಂದ ಅಲಂಕರಿಸಿ ತಣ್ಣಗಾಗಲು ಇಡಿ.

* ಬೇಕಾದರೆ khoaವನ್ನು ಮೇಲೆ ಹಾಕಬಹುದು. ಇಷ್ಟು ಮಾಡಿದರೆ ಸವಿರುಚಿಯ ಬೀಟ್ ರೂಟ್ ಹಲ್ವಾ ರೆಡಿ.

khoa ಮಾಡುವುದು ಹೇಗೆ?
ಇದು ರೆಡಿ ಮೇಡ್ ಸಿಗುತ್ತದೆ, ಮಾಡುವುದಾದರೆ ದೊಡ್ಡ ಪಾತ್ರೆಗೆ 1 ಕಪ್ ಹಾಲು ಹಾಕಿ, ಹಾಲು ಗಟ್ಟಿಯಾಗುವವರೆಗೆ ಕಡಿಮೆ ಉರಿಯಲ್ಲಿ ಕುದಿಸಬೇಕು. (ಇದನ್ನು ಹಲ್ವಾದ ಮೇಲೆ ಹಾಕಿದರೆ ಹಲ್ವಾದ ರುಚಿ ಹೆಚ್ಚುವುದು).

English summary

Beetroot Halwa Recipe

Beetroot Halwa is a delicious sweet made.It is easy to prepare and tastes great. If you want to know how to prepare this delicious halwa, have a look at this recipe.
X
Desktop Bottom Promotion