For Quick Alerts
ALLOW NOTIFICATIONS  
For Daily Alerts

ದಟ್ಸ್ ಕನ್ನಡ ಸಿಹಿಪಾಕಶಾಲೆ : ಕ್ಯಾರೆಟ್ ಖೀರು

By Staff
|

*ಪ್ರಿಯಾ ಮಾಸೂರ, ಸ್ಯಾನ್ ಡಿಯೇಗೋ, ದಕ್ಷಿಣ ಕ್ಯಾಲಿಫೋರ್ನಿಯಾ

Carrot kheer
ಬೇಕಾಗುವ ಸಾಮಾನುಗಳು
ಕ್ಯಾರೆಟ್ - 2-3 ಹಾಲು - ಅರ್ಧ ಲೀಟರ್
ಸಕ್ಕರೆ - ಅರ್ಧ ಕಪ್ (ಸಕ್ಕೆಯ ಬದಲು Stevia ಉಪಯೋಗಿಸಬಹುದು)
ಬಾದಾಮಿ (ನೀರಲ್ಲಿ ನೆನೆಸಿದ್ದು) - 5-6
ಏಲಕ್ಕಿ ಪುಡಿ - 1 / 4 ಚಮಚ

ಮಾಡುವ ವಿಧಾನ
ಕ್ಯಾರೆಟ್ ಅನ್ನು ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಕ್ಯಾರೆಟ್ ಆರಿದ ಮೇಲೆ ಬಾದಾಮಿ ಜೊತೆಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಹಾಲನ್ನು ಕಾಯಿಸಲು ಇಡಿ. ಹಾಲು ಕುದಿಯುತ್ತಿರುವಾಗ ರುಬ್ಬಿದ ಪೇಸ್ಟ್ ನ್ನು ಬೆರೆಸಬೇಕು. ಅದರ ಜೊತೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ 3 - 4 ನಿಮಿಷ ಕುದಿಯಲು ಬಿಡಬೇಕು. ಕ್ಯಾರೆಟ್ ಖೀರ್ ರೆಡಿ!

ಕ್ಯಾರೆಟ್ ಖೀರ್ ನ್ನು ಬೇಸಿಗೆಯಲ್ಲಿ ತಂಪಾಗಿ ಮತ್ತು ಚಳಿಗಾಲದಲ್ಲಿ ಬಿಸಿಯಾಗಿ ಸವಿಯಬಹುದು!

Story first published: Monday, November 24, 2008, 13:44 [IST]
X
Desktop Bottom Promotion