For Quick Alerts
ALLOW NOTIFICATIONS  
For Daily Alerts

ಆಯುಧ ಪೂಜೆಗೆ ಮನೆಯಲ್ಲೇ ಹೆಸರುಬೇಳೆ ಹಲ್ವಾ ತಯಾರಿಸಿ

By Staff
|

ಬುಧವಾರ ಆಯುಧ ಪೂಜೆ. ಎಲ್ಲೆಡೆ ಸಿಹಿ ತಿಂಡಿಗಳ ಅಬ್ಬರ. ಈ ಅಬ್ಬರ ಈ ಬಾರಿ ನಿಮ್ಮ ಮನೇಲೂ ಜೋರಾಗಿಯೇ ಇರಲಿ. ಮನೆಯಲ್ಲೇ ಹೆಸರು ಬೇಳೆ ಹಲ್ವಾ ಮಾಡಿ ಮನೆ ಮಂದಿ, ನೆಂಟರಿಷ್ಟರು, ಅಕ್ಕ ಪಕ್ಕದವರಿಗೆಲ್ಲಾ ಸಿಹಿ ಹಂಚಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ.

ಹೆಸರು ಬೇಳೆ ಹಲ್ವಾ ಮಾಡೋದಕ್ಕೆ ಸ್ವಲ್ಪ ಸಮಯ ಹಿಡಿದರೂ ರುಚಿಯಲ್ಲಿ ಮಾತ್ರ ಹಿಂದೇಟಾಕುವುದಿಲ್ಲ. ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ, ಮತ್ತೆ ಮತ್ತೆ ಮಾಡಿ ರುಚಿ ನೋಡಬೇಕೆಂದು ನಿಮಗೇ ಅನ್ನಿಸುತ್ತೆ.

ಹೆಸರು ಬೇಳೆ ಹಲ್ವಾ ಮಾಡೋದಕ್ಕೆ ಏನೇನು ಬೇಕು?
1 ಕಪ್ ಹೆಸರುಬೇಳೆ, 1/2 ಕಪ್ ಕೋಯಾ ( ಹಾಲನ್ನು ಕುದಿಸಿ ಗಟ್ಟಿಗೊಳಿಸಬೇಕು ), ಸಕ್ಕರೆ ಪಾಕ, ಏಲಕ್ಕಿ ಪುಡಿ, ಚಿಕ್ಕದಾಗಿ ಕತ್ತರಿಸಿದ ಬಾದಾಮಿ, ಪಿಸ್ತಾ, ಗೋಡಂಬಿ, ಕೇಸರಿ ಮತ್ತು 6-7 ಚಮಚ ತುಪ್ಪ

ಹಲ್ವಾ ಮಾಡುವ ವಿಧಾನ ಹೀಗಿದೆ:
ಸ್ಟೆಪ್ 1: ಹೆಸರು ಬೇಳೆಯನ್ನು 4-5 ಗಂಟೆ ಅಥವಾ ರಾತ್ರಿಯಿಡೀ ನೆನೆಸಿಟ್ಟಿರಬೇಕು. ಅದನ್ನು ಸ್ವಲ್ಪವೇ ಸ್ವಲ್ಪ ನೀರು ಬೆರೆಸಿ ರುಬ್ಬಿ ತರಿತರಿ ಪೇಸ್ಟ್ ನಂತೆ ಮಾಡಿಕೊಳ್ಳಬೇಕು.

ಸ್ಟೆಪ್ 2: ನಾನ್ ಸ್ಟಿಕ್ ತವಾದಲ್ಲಿ ತುಪ್ಪ ಹಾಕಿ ಕಾಯಿಸಿ ಅದಕ್ಕೆ ಹೆಸರುಬೇಳೆ ಪೇಸ್ಟನ್ನು ಹಾಕಬೇಕು. ಮೀಡಿಯಂ ಉರಿಯಲ್ಲಿ ಹೆಸರು ಬೇಳೆ ಸ್ವಲ್ಪ ಕೆಂಪಗಾಗುವ ತನಕ ಚೆನ್ನಾಗಿ ತಿರುಗಿಸುತ್ತಲೇ ಇರಬೇಕು. ತುಪ್ಪ ಮೇಲ್ಭಾಗದಲ್ಲಿ ತೇಲುವಂತಿರಬೇಕು. ಹೆಸರು ಬೇಳೆ ಬೇಯಲು ಸುಮಾರು 30-45 ನಿಮಿಷ ತೆಗೆದುಕೊಳ್ಳುತ್ತದೆ.

ಸ್ಟೆಪ್ 3: ಕೋಯಾವನ್ನು ಬೆರೆಸಿ 20-30 ನಿಮಿಷ ಬಿಡದಂತೆ ತಿರುಗಿಸುತ್ತಲೇ ಇರಬೇಕು. ಇನ್ನೊಂದು ಕಡೆ ನಿಮಗೆ ಬೇಕೆನಿಸುವಷ್ಟು ಸಕ್ಕರೆ ಪಾಕವನ್ನು ತಯಾರಿಸಿಟ್ಟುಕೊಂಡಿರಬೇಕು. ಹಾಗೆಯೇ ಸ್ವಲ್ಪ ಹಾಲಿಗೆ ಕೇಸರಿ ಹಾಕಿ ಒಂದೆಡೆ ಇಟ್ಟುಕೊಳ್ಳಬೇಕು.

ಸ್ಟೆಪ್ 4:
ಹೆಸರು ಬೇಳೆ ಮತ್ತು ಕೋಯಾ ಮಿಶ್ರಣ ಸ್ವಲ್ಪ ಕೆಂಬಣ್ಣಕ್ಕೆ ತಿರುಗುತ್ತಿದ್ದಂತೆ ಅದಕ್ಕೆ ಸಕ್ಕರೆ ಪಾಕ ಹಾಕಿ ಚೆನ್ನಾಗಿ ತಿರುಗಿಸಿ ನಂತರ ಕೇಸರಿ ಬೆರೆಸಬೇಕು.

ಸ್ಟೆಪ್ 5: ಇನ್ನೊಂದು ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಕಾಯಿಸಿ ಬಾದಾಮಿ, ಪಿಸ್ತಾ, ಗೋಡಂಬಿಯನ್ನು ಸ್ವಲ್ಪವೇ ಹುರಿದುಕೊಂಡು ಏಲಕ್ಕಿ ಪುಡಿಯೊಂದಿಗೆ ಹಲ್ವಾಗೆ ಬೆರೆಸಬೇಕು. ಬಾದಾಮಿ, ಪಿಸ್ತಾ, ಗೋಡಂಬಿಯನ್ನು ಹಾಗೆಯೇ ಬೇಕಾದರೂ ಹಾಕಬಹುದು.

ಈಗ ಹಬ್ಬಕ್ಕೆ ಹೆಸರುಬೇಳೆ ಹಲ್ವಾ ಘಂ ಅಂತ ರೆಡಿಯಾಗಿರುತ್ತೆ. ಇದನ್ನು ಬೇಕಾದರೆ 3-4 ದಿನ ಫ್ರಿಡ್ಜ್ ನಲ್ಲಿಟ್ಟೂ ತಿನ್ನಬಹುದು.

English summary

Moong Dal Halwa Recipe | Navratri Sweet Halwa Recipe | ಹೆಸರು ಬೇಳೆ ಹಲ್ವಾ ರೆಸಿಪಿ | ನವರಾತ್ರಿ ಹಬ್ಬಕ್ಕೆ ಹಲ್ವಾ ಸಿಹಿ ತಿಂಡಿ

Moong dal halwa is a delicious sweet dish for Navratri. The recipe to make moong dal halwa is lengthy but the taste will be very good. Check out this Navratri sweet dish, moong dal halwa recipe.
X
Desktop Bottom Promotion