For Quick Alerts
ALLOW NOTIFICATIONS  
For Daily Alerts

ಓಣಂ ನೆಪದಲ್ಲಿ ನೀವೂ ಉನ್ನಿ ಅಪ್ಪಂ ಮಾಡ್ತೀರಾ?

|
Unni appam recipe for onam
ಓಣಂ ಹಬ್ಬದ ದಿನ ನೆಂಟರಿಷ್ಟರು ಬಂದರೆ ಉನ್ನಿ ಅಪ್ಪಂ ಇರಲೇಬೇಕು. ಕೇರಳದ ಈ ವಿಶೇಷ ಸಿಹಿ ತಿನಿಸು ಓಣಂ ದಿನ ಪ್ರತಿ ಮನೆಯಲ್ಲೂ ಇದ್ದೇ ಇರುತ್ತೆ. ಕೆಲಸಕ್ಕೆ ಹೋಗುವ ಅಥವಾ ಮೊದಲ ಬಾರಿ ಉನ್ನಿ ಅಪ್ಪಂ ಮಾಡಬೇಕೆಂದಿರುವ ಮಹಿಳೆಯರಿಗೆ ಉನ್ನಿ ಅಪ್ಪಂ ತಯಾರಿಸುವ ಸುಲಭ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಉನ್ನಿ ಅಪ್ಪಂ ತಯಾರಿಸುವ ಸುಲಭ ವಿಧಾನವನ್ನು ತಿಳಿದುಕೊಳ್ಳಿ:
ಬೇಕಾಗುವ ಪದಾರ್ಥಗಳು:
* 2 ಕಪ್ ಅಕ್ಕಿ ಹಿಟ್ಟು
* 1/2 ಕಪ್ ಮೈದಾ ಹಿಟ್ಟು
* 2 ಬಾಳೆಹಣ್ಣು
* 1 1/2 ಕಪ್ ಬೆಲ್ಲದ ಪುಡಿ
* 4 ಚಮಚ ತುಪ್ಪ
* 1 ಚಮಚ ಏಲಕ್ಕಿ ಪುಡಿ
* 2 ಚಮಚ ಚಕ್ಕೆ ಪುಡಿ
* ತೆಂಗಿನ ಚೂರು
* ಎಣ್ಣೆ

ಉನ್ನಿ ಅಪ್ಪಂ ತಯಾರಿಸುವ ವಿಧಾನ ಹೀಗಿದೆ:
* ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ ಕುದಿಯಲು ಆರಂಭಿಸಿದ ನಂತರ ಬೆಲ್ಲದ ಪುಡಿ ಬೆರೆಸಬೇಕು. ಬೆಲ್ಲ ಕರಗಿ ಪಾಕದಂತೆ ಆಗುವ ತನಕ ಕಾಯಿಸುತ್ತಿರಬೇಕು.
* ತೆಂಗಿನ ಕಾಯಿಯನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ ತುಪ್ಪದಲ್ಲಿ ಹುರಿಯಬೇಕು. ನಂತರ ಅದನ್ನು ಬೆಲ್ಲದ ಪಾಕಕ್ಕೆ ಬೆರೆಸಿ ಸಣ್ಣ ಉರಿಯಲ್ಲಿ ಕಾಯಿಸಬೇಕು.
* ಇದೇ ಸಮಯದಲ್ಲಿ ಅಕ್ಕಿ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಕಲೆಸಿಟ್ಟುಕೊಳ್ಳಬೇಕು.
* ನಂತರ ಬಾಳೆಹಣ್ಣನ್ನು ಚೆನ್ನಾಗಿ ಹಿಸುಕಿ ಅದನ್ನು ಬೇಯುತ್ತಿರುವ ಬೆಲ್ಲದ ಪಾಕಕ್ಕೆ ಹಾಕಿ 2 ನಿಮಿಷ ಕಾಯಿಸಿ ಕೆಳಗಿಳಿಸಬೇಕು.
* ಈಗ ಬೆಲ್ಲದ ಮಿಶ್ರಣವನ್ನು ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿ ಚೆನ್ನಾಗಿ ಕಲೆಸಬೇಕು.
* ಏಲಕ್ಕಿ ಮತ್ತು ಚೆಕ್ಕೆ ಪುಡಿಯನ್ನೂ ಮಿಶ್ರಣ ಮಾಡಿ ಕಲೆಸಬೇಕು.
* ನಂತರ ಸ್ವಲ್ಪ ಗಟ್ಟಿಯಾಗಿರುವ ಈ ಮಿಶ್ರಣವನ್ನು ಅಪ್ಪಂ ಮೇಕರ್ ನಿಂದ ಆಕಾರ ಕೊಟ್ಟು ಒಂದು ಗಂಟೆ ಹಾಗೆ ಬಿಡಬೇಕು.
* ಈಗ ಅಪ್ಪಂಗಳನ್ನು ಎಣ್ಣೆ ಅಥವಾ ತುಪ್ಪದಲ್ಲಿ ಎರಡೂ ಕಡೆ ಕರೆದರೆ ಉನ್ನಿ ಅಪ್ಪಂ ತಿನ್ನಲು ಸಿದ್ಧ.

English summary

Unni Appam Recipe for Onam | Onam Special Recipes | ಓಣಂಗೆ ಉನ್ನಿ ಅಪ್ಪಂ ರೆಸಿಪಿ | ಓಣಂ ಸಿಹಿ ತಿನಿಸುಗಳು

Unni appam is one of the most essential Onam recipes for a family platter. The feast that is cooked for Onam has to include appam recipes. This appam recipe is ideal for working women or first time appam makers. Take a look.
Story first published: Thursday, September 8, 2011, 19:14 [IST]
X
Desktop Bottom Promotion