For Quick Alerts
ALLOW NOTIFICATIONS  
For Daily Alerts

ರಂಜಾನ್ ಗೆ ಶೀರ್ ಕುರ್ಮಾ ವಿಶೇಷ ಔತಣ

By Staff
|

ರಂಜಾನ್ ಉಪವಾಸ ಇನ್ನೇನು ಮುಗಿಯುವ ಸಮಯ ಬಂದಿದೆ. (ಆಗಸ್ಟ್ 30). ಈ ವೇಳೆ ಬಂಧು ಬಾಂಧವರಿಗೆ ಸಿಹಿಯ ಔತಣವಿದ್ದರೆ ಚೆಂದ. ಆದ್ದರಿಂದ ರಂಜಾನ್ ವಿಶೇಷ ಶೀರ್ ಕುರ್ಮಾ (ಖೀರ್) ನಿಮ್ಮ ಮನೆಯಲ್ಲೂ ಘಮಗುಟ್ಟಲಿ. ತಿನ್ನಲೂ ರುಚಿಕರ ಮಾಡಲೂ ಸುಲಭವಾಗಿರುವ ಈ ಸಿಹಿ ತಿಂಡಿ ಖೀರ್ ಹಬ್ಬಕ್ಕೆ ಹೇಳಿ ಮಾಡಿಸಿದಂತಿರುತ್ತದೆ

ಬೇಕಾಗುವ ಸಾಮಾನುಗಳು:
* 2 ಕಪ್ ಶಾವಿಗೆ
* 1/2 ಕಪ್ ಕೋಯಾ (ಕುದಿಸಿ ಗಟ್ಟಿಗೊಳಿಸಿದ ಹಾಲು)
* 5 1/2 ಕಪ್ ಹಾಲು
* ಏಲಕ್ಕಿ ಪುಡಿ
* 1/4 ಕಪ್ ಒಣ ದ್ರಾಕ್ಷಿ ಮತ್ತು ಗೋಡಂಬಿ (ಬೇಕಿದ್ದರೆ ಬಾದಾಮಿ)
* 1 1/2 ಕಪ್ ಸಕ್ಕರೆ
* 2 ಕಪ್ ತುಪ್ಪ

ತಯಾರಿಸುವ ವಿಧಾನ:

ಮೊದಲು ಅಗಲವಾದ ಬಾಣಲೆಯಲ್ಲಿ ತುಪ್ಪ ಹಾಕಿ ಶಾವಿಗೆಯನ್ನು ಸ್ವಲ್ಪ ಕೆಂಪಾಗುವ ತನಕ ಹುರಿದಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಅದಕ್ಕೆ ಕೋಯಾ ಬೆರೆಸಿ ಸಣ್ಣ ಉರಿಯಲ್ಲಿ 30 ನಿಮಿಷ ಕಾಯಿಸಿ ಚೆನ್ನಾಗಿ ತಿರುಗಿಸುತ್ತಾ ಇರಬೇಕು.

ನಂತರ ಸಕ್ಕರೆ ಬೆರೆಸಿ 3-4 ನಿಮಿಷ ತಿರುಗಿಸಬೇಕು. ಅದಕ್ಕೆ ಹುರಿದಿಟ್ಟುಕೊಂಡಿದ್ದ ಶಾವಿಗೆ ಬೆರೆಸಿ ಚೆನ್ನಾಗಿ ಕದಡಬೇಕು. ಇನ್ನೂ ಸ್ವಲ್ಪ ಹೆಚ್ಚು ಹಾಲು ಬೆರೆಸಿದರೆ ರುಚಿ ಹೆಚ್ಚಾಗುತ್ತದೆ. ಕೊನೆಗೆ ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಕಾಯಿಸಿ ಒಣದ್ರಾಕ್ಷಿ , ಗೋಡಂಬಿಯನ್ನು ಹುರಿದುಕೊಂಡು ಶಾವಿಗೆಗೆ ಹಾಕಬೇಕು.

ನಂತರ ಏಲಕ್ಕಿ ಪುಡಿ ಬೆರೆಸಿ ಚೆನ್ನಾಗಿ ಕದಡಬೇಕು. ಈಗ ಶಾವಿಗೆ ಪಾಯಸ ತಿನ್ನಲು ರೆಡಿಯಾಗಿದೆ. ಹಬ್ಬ ಹರಿದಿನಗಳಿಗೆ ಸೂಕ್ತವಾಗಿರುವ ಈ ಸಿಹಿ ಖಾದ್ಯ ಶೀರ್ ಕುರ್ಮಾ ರುಚಿ ಎಂತಹವರನ್ನೂ ಇನ್ನೊಮ್ಮೆ ತಿನ್ನಬೇಕೆನ್ನುವಂತೆ ಮಾಡುತ್ತದೆ.

English summary

Sheer khurma recipe | Kheer Recipe for Ramzan | Shavige payasa recipe | ರಂಜಾನ್ ಗೆ ಶಾವಿಗೆ ಪಾಯಸ

Muslim festival Kutub-e-Ramzan fasting is going to complete on 30th Aug 2011. Its time to know how to prepare most popular id recipe Seviyan. This is a dear sweet dish not only for Muslims but also for every Indian. So, lets read and cook today!
X
Desktop Bottom Promotion