For Quick Alerts
ALLOW NOTIFICATIONS  
For Daily Alerts

ಗರಿಗರಿ ಬಾಂಬೆ ಪೂರಿ ಸಿಹಿ ರೆಸಿಪಿ

By Prasad
|
Bombay Poori sweet recipe
ಯಾವುದೇ ಹಬ್ಬ-ಹರಿದಿನ ಅಥವಾ ಸಂತಸದ ಗಳಿಗೆಗೆ ಮೆರುಗನ್ನು ನೀಡುವ ಗರಿಗರಿ ಸಿಹಿ ತಿನಿಸು ಬಾಂಬೆ ಪೂರಿ. ಕೇವಲ ಬೆರಳೆಣಿಕೆಯಷ್ಟು ಪದಾರ್ಥಗಳೊಂದಿಗೆ ತಯಾರಿಸಬಹುದಾದ ಸ್ವಾದಿಷ್ಟ ಸಿಹಿ ಎಂದರೆ ಬಾಂಬೆ ಪೂರಿಯೇ ಇರಬಹುದು.

* ವಾಣಿ ನಾಯಿಕ, ಬೆಂಗಳೂರು

ಬೇಕಾಗುವ ಪದಾರ್ಥಗಳು

ಚಿರೋಟಿ ರವೆ 1 ಬಟ್ಟಲು
ತುಪ್ಪ 2 ಚಮಚ
ಸಕ್ಕರೆ
ಒಣ ಕೊಬ್ಬರಿ
ಏಲಕ್ಕಿ
ಕರಿಯಲು ಎಣ್ಣೆ

ತಯಾರಿಸುವ ವಿಧಾನ

* ಚಿರೋಟಿ ರವೆಗೆ 2 ಚಮಚ ತುಪ್ಪ ಮತ್ತು ನೀರು ಹಾಕಿ ಮಾಮೂಲಿ ಪೂರಿಗೆ ಕಲಿಸಿಕೊಳ್ಳುವ ಹಿಟ್ಟಿನ ಹದಕ್ಕೆ ಕಲಿಸಿಟ್ಟುಕೊಳ್ಳಬೇಕು.

* ಒಣ ಕೊಬ್ಬರಿ ಹೆರೆದುಕೊಂಡು ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಹಾಕಿ ಮಿಕ್ಸಿಯಲ್ಲಿ ಗಿರ್ ಅನ್ನಿಸಿ.

* ಹಿಟ್ಟನ್ನು ಪೂರಿಯಾಕಾರದಲ್ಲಿ ಲಟ್ಟಿಸಿಕೊಂಡು ಜಾಸ್ತಿ ಕೆಂಪಾಗದಂತೆ ಮತ್ತು ಚೆನ್ನಾಗಿ ಉಬ್ಬುವಂತೆ ಎಣ್ಣೆಯಲ್ಲಿ ಕರಿಯಿರಿ.

* ಬಿಸಿಬಿಸಿಯಾದ ಪೂರಿಯ ಎರಡೂ ಬದಿಯ ಮೇಲೆ ಸಕ್ಕರೆ, ಒಣ ಕೊಬ್ಬರಿ ಪುಡಿಯನ್ನು ಉದುರಿಸಿ.

ಅಷ್ಟೇ. ಇನ್ನೇನು? ಗರಿಗರಿ ಬಾಂಬೆ ಪೂರಿಯನ್ನು ಊಟದ ಜೊತೆ ತಿನ್ನಲು ನೀಡಿ. ಗಾಳಿಯಾಡದ ಡಬ್ಬಿಯಲ್ಲಿ ಇಟ್ಟರೆ ಮೂರ್ನಾಲ್ಕು ದಿನ ತಿನ್ನಬಹುದು. ಇನ್ನೊಂದು ಮಾತು, ಈ ಸಿಹಿ ತಿನಿಸಿಗೆ ಬಾಂಬೆ ಪೂರಿ ಅಂತ ಯಾಕೆ ಕರೀತಾರೆ ಅಂತ ನನಗಂತೂ ಗೊತ್ತಿಲ್ಲ, ಗೊತ್ತಿದ್ದವರು ತಿಳಿಸಬೇಕಾಗಿ ಕೋರಿಕೆ.

Story first published: Tuesday, August 10, 2010, 18:07 [IST]
X
Desktop Bottom Promotion