For Quick Alerts
ALLOW NOTIFICATIONS  
For Daily Alerts

ಸ್ನೇಹ ಚಿರಂತರವಾಗಿರಲಿ, ಬಾಯಿ ಸಿಹಿ ಮಾಡಿಕೊಳ್ಳಿ

|
Badam katli
ಭಾನುವಾರ ಸ್ನೇಹಿತರ ದಿನ, ಈ ದಿನ ತಮ್ಮ ಆತ್ಮೀಯ ಗೆಳೆಯ ಗೆಳತಿಯರಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ ಅವರ ಬಾಯಿಗೆ ಸಿಹಿ ಹಂಚಿ ತಾವೂ ಬಾಯಿ ಸಿಹಿಮಾಡಿಕೊಂಡು ನಮ್ಮ ಸ್ನೇಹ ಹೀಗೆ ಸುಖಮಯವಾಗಿ ನಿರಂತರವಾಗಿರಲೆಂದು ಹಾರೈಸುವ ಸುದಿನ. ಈ ಬಾರಿ ನಿಮ್ಮ ಸ್ನೇಹಿತರಿಗೆ ನೀವೂ ಸ್ಪೆಷಲ್ ಸರ್ಪೈಸ್ ಕೊಡಬಹುದು.
;

ಹೇಗೆ ಅಂತೀರ? ನಿಮ್ಮ ಮನೆಯಲ್ಲಿ ಸ್ನೇಹಿತರಿಗೆಂದು ಹೊಸ ಸ್ವೀಟ್ ತಯಾರಿಸಿ, ಹಂಚಿ ಅವರನ್ನು ಖುಷಿ ಪಡಿಸಬಹುದು. ತುಂಬಾ ರುಚಿಯಾಗಿರುವ ಈ ಬಾದಾಮ್ ಕಟ್ಲಿ ಮಾಡಲೂ ಸುಲಭ ಹಂಚಲೂ ಚೆಂದ. ಬಾದಾಮಿ ಕಟ್ಲಿಯನ್ನು ಮಾಡಿ ನಿಮ್ಮ ಸ್ನೇಹಿತರ ಬಾಯಿ ಸಿಹಿ ಮಾಡಿ.

;

ಬೇಕಾಗುವ ಪದಾರ್ಥಗಳು:
* 500 ಗ್ರಾಂ ಬಾದಾಮಿ
* 400-450 ಗ್ರಾಂ ಸಕ್ಕರೆ
*ಮುಕ್ಕಾಲು ಕಪ್ ಕಾಯಿಸಿದ ಹಾಲು

ಬಾದಾಮಿ ಕಟ್ಲಿ ತಯಾರಿಸುವ ವಿಧಾನ: ಹಿಂದಿನ ದಿನವೇ ಅಂದರೆ 10-12 ಗಂಟೆಗಳ ಕಾಲ ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಬೇಕು. ನಂತರ ನೀರನ್ನು ತೆಗೆದು ಬಾದಾಮಿ ಸಿಪ್ಪೆಯನ್ನು ಬಿಡಿಸಿಕೊಳ್ಳಬೇಕು. ಇದಕ್ಕೆ ಹಾಲನ್ನು ಹಾಕಿ ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು. ಬಾಣಲೆಯಲ್ಲಿ ಬಾದಾಮಿ ಮಿಶ್ರಣ ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೂ ತಿರುಗಿಸುತ್ತಲೇ ಇರಬೇಕು.

;

ಇದು ನಾದುವ ಹಿಟ್ಟಿನಂತೆ ಆಗುತ್ತದೆ. ಅಲ್ಲಿಯವರೆಗೂ ಸಣ್ಣ ಉರಿಯಲ್ಲಿರಿಸಬೇಕು. ನಂತರ ಈ ಮಿಶ್ರಣವನ್ನು ತೆಗೆದುಕೊಂಡು ಸಮತಟ್ಟಾದ ತಟ್ಟೆಗೆ ಹಾಕಿಕೊಂಡು ಒಂದೇ ಸಮ ಬರುವಂತೆ ತಟ್ಟಬೇಕು. ಅದು ಪೂರ ತಣ್ಣಗಾಗುವ ಮುನ್ನ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಬಹುದು.

;

ಇದನ್ನು ಗಟ್ಟಿ ಮುಚ್ಚಳವಿರುವ ಡಬ್ಬಕ್ಕೆ ಹಾಕಿಟ್ಟರೆ ಎರಡು ವಾರದ ತನಕವೂ ಇರುತ್ತದೆ. ಇದು ಮಕ್ಕಳಿಗೂ ಒಳ್ಳೆಯದು ಮತ್ತು ತಿನ್ನಲೂ ರುಚಿಕರ. ಇನ್ನೇನು ಫ್ರೆಂಡ್ ಶಿಪ್ ಡೇ ಸ್ವೀಟ್ ರೆಸಿಪಿ ಮಾಡಿನೋಡ್ತೀರ ಅಲ್ವ?

English summary

Almond sweet recipe | Almond katli recipe | Nuts and Nutrition | ಬಾದಾಮಿ ಸ್ವೀಟ್ ಖಾದ್ಯ | ಬಾದಾಮಿ ಕಟ್ಲಿ ರೆಸಿಪಿ | ಪೌಷ್ಟಿಕಾಂಶ

'Friendship day' symbolizes the importance of sweet relationship. Why don't you prepare an easy sweet dish for your sweet friends? We have yummy sweet dish recipe just for you. A simple badam katli or almond katli. This is a friendship day special recipe prepared using badam, sugar and milk. The delicate taste of badam, just lingers in your mouth long after you have finished savouring the sweet.;
Story first published: Saturday, August 6, 2011, 11:00 [IST]
X
Desktop Bottom Promotion