For Quick Alerts
ALLOW NOTIFICATIONS  
For Daily Alerts

ರುಚಿಗೆ ಕಮಿಯಿಲ್ಲದ ಹೆಸರು ಹಿಟ್ಟಿನ ಉಂಡೆ

By Super
|
Hesaru hittina unde
ಹೆಸರು ಹಿಟ್ಟಿನ ಉಂಡೆ ಸ್ಟೇಟಸ್ಸಿನಲ್ಲಿ ಬೂಂದಿ ಉಂಡೆ, ರವೆ ಉಂಡೆ, ಬೇಸನ್ ಲಾಡು, ತಂಬಿಟ್ಟು ಉಂಡೆ ಮುಂತಾದ ಉಂಡೆಗಳಿಗೆ ಸಮವಲ್ಲದಿದ್ದರೂ ರುಚಿಯಲ್ಲಿ ಮಾತ್ರ ಈ ಯಾವ ಉಂಡೆಗಳಿಗೂ ಕಡಿಮೆಯೇನಲ್ಲ. ಎಲ್ಲಾ ಹಬ್ಬಗಳಲ್ಲಿ ಅಲ್ಲದಿದ್ದರೂ ಆಗಾಗ ಬಾಯಿರುಚಿಗೆ ಮಾಡಬಹುದಾದ ಈ ಉಂಡೆಯನ್ನೊಮ್ಮೆ ಮಾಡಿ ನೋಡಿ.

* ವಾಣಿ, ಬೆಂಗಳೂರು.

ಬೇಕಾಗುವ ಪದಾರ್ಥಗಳು

ಹೆಸರು ಬೇಳೆ 1 ಬಟ್ಟಲು
ಸಕ್ಕರೆ 1 ಕಾಲು ಬಟ್ಟಲು
ಏಲಕ್ಕಿ ಪುಡಿ 1 ಚಮಚ
ತುಪ್ಪ 1/2 ಬಟ್ಟಲು

ಮಾಡುವ ವಿಧಾನ

ಹೆಸರು ಬೇಳೆಯನ್ನು ಬಾಣಲೆಯಲ್ಲಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕು. ಅದು ತಣ್ಣಗಾದ ನಂತರ ಮಿಕ್ಸರ್ ಗ್ರೈಂಡರ್ ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಸಕ್ಕರೆಯನ್ನು ಸಹ ಪುಡಿ ಮಾಡಿಕೊಳ್ಳಬೇಕು. ನಂತರ ಏಲಕ್ಕಿ ಪುಡಿಯೊಡನೆ ಹೆಸರು ಬೇಳೆ ಹಿಟ್ಟು ಮತ್ತು ಸಕ್ಕರೆ ಪುಡಿ ಬೆರೆಸಿ ಕೈಯಾಡಿಸಬೇಕು. ಅದಕ್ಕೆ ತುಪ್ಪ ಕಾಸಿ ಉಂಡೆ ಕಟ್ಟಿದರೆ ಹೆಸರು ಹಿಟ್ಟಿನ ಉಂಡೆ ತಯಾರು. ಉಂಡೆಯನ್ನು ಗೋಡಂಬಿ, ಒಣದ್ರಾಕ್ಷಿ ಮತ್ತು ಲವಂಗದಿಂದ ಅಲಂಕಾರ ಮಾಡಬಹುದು.

X
Desktop Bottom Promotion