For Quick Alerts
ALLOW NOTIFICATIONS  
For Daily Alerts

ತೋಷಾ ತಿನ್ನಿ ಸಂತೋಷವಾಗಿರಿ

By Super
|

ತೋಷಾ ಎಂಬುದು ಉತ್ತರ ಭಾರತದ ಸಿಹಿ ತಿನಸು. ಯುಗಾದಿ-ದಸರಾ-ದೀಪಾವಳಿ ಹಬ್ಬಕ್ಕೆ ಹೇಳಿ ಮಾಡಿಸಿದ ಸಿಹಿ ಖಾದ್ಯ. ತೋಷಾದಂಥ ಸಣ್ಣಪುಟ್ಟ ಸಿಹಿತಿನಿಸುಗಳನ್ನು ಮಾಡಿ ನಾವೂ ತಿಂದು, ಇತರರಿಗೂ ಬಡಿಸುವುದರಲ್ಲಿಯೇ ಸಂತೋಷವಿದೆ. ಯುಗಾದಿ ಸಂದರ್ಭದಲ್ಲಿ ಆ ಸಂತಸ ನಿಮ್ಮದಾಗಲಿ.

* ಗಾಯತ್ರಿ ಶೇಷಾಚಲ

ತೆಗೆದಿಟ್ಟುಕೊಳ್ಳಬೇಕಾದ ಪದಾರ್ಥಗಳು

ಗೋದಿ ಹಿಟ್ಟು- 1 ಕಪ್‌
ಮೈದಾ ಹಿಟ್ಟು- 1/2 ಕಪ್‌
ತುಪ್ಪ - 3 ಚಮಚ
ಬೇಕಿಂಗ್‌ ಸೋಡಾ- 1 ಚಿಟುಕೆ
ಸಕ್ಕರೆ- 2 ಕಪ್‌
ಕೇಸರಿ - 1/2 ಚಮಚ
ರಿಫೈನ್ಡ್‌ ಎಣ್ಣೆ - 1/2 ಲೀಟರ್‌

ಮಾಡುವ ವಿಧಾನ

ಮೊದಲು ತುಪ್ಪವನ್ನು ಕರಗಿಸಿಕೊಳ್ಳಿ. ಆನಂತರ ಮೈದಾ ಹಿಟ್ಟಿಗೆ ತುಪ್ಪವನ್ನು ಹಾಕಿ ನಾದಿಕೊಳ್ಳಿ. ಜೊತೆಗೆ ಗೋಧಿ ಹಿಟ್ಟು ಮತ್ತು ಸೋಡಾ ಹಾಕಿ ಕಲಿಸಿಕೊಳ್ಳಿ. (ಸೂಚನೆ: ಎಷ್ಟು ಅಗತ್ಯವೋ ಅಷ್ಟು ಮಾತ್ರ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು).

ಹಿಟ್ಟನ್ನು ಚಿಕ್ಕ ಚಿಕ್ಕ ನಿಂಬೆಹಣ್ಣಿನ ಗಾತ್ರದಲ್ಲಿ ಮಾಡಿಕೊಳ್ಳಿ. ಇದನ್ನು ಕೋಡುಬಳೆ ಆಕಾರದಲ್ಲಿಯೂ ಸುತ್ತಿಕೊಳ್ಳಬಹುದು. ಕಾಯ್ದ ಎಣ್ಣೆಯಲ್ಲಿ ಒಂದೊಂದೆ ಬಿಡುತ್ತಾ ಹೋಗಿ, ಕೆಂಪು ಬಣ್ಣಕ್ಕೆ ತಿರುಗಿದ ಬಳಿಕ ಹೊರಕ್ಕೆ ತೆಗೆಯಿರಿ. ಇನ್ನೊಂದೆಡೆ ಸಕ್ಕರೆ ತೆಗೆದುಕೊಳ್ಳಿ, ಅದು ಮುಳುಗುವಷ್ಟು ನೀರು ಹಾಕಿ ಸ್ಟೋವ್‌ ಮೇಲೆ ಇಡಿ. ಸಕ್ಕರೆ ಪಾಕ ಎಳೆಎಳೆಯಾಗಿ ಬಂದ ನಂತರ ಕೆಳಗಿಳಿಸಿಕೊಳ್ಳಿ. ಆನಂತರ ಅದಕ್ಕೆ ಕೇಸರಿ ಬಣ್ಣ ಹಾಕಿಕೊಳ್ಳಿ. ಈಗ ತಯಾರಾದ ಪಾಕವನ್ನು ಒಲೆಯಿಂದ ಕೆಳಗಿಳಿಸಿ.

ಮೊದಲೇ ಕರಿದಿಟ್ಟ ತೋಷಾಗಳನ್ನು ಬಿಸಿ ಸಕ್ಕರೆ ಪಾಕದಲ್ಲಿ ಹಾಕಿ 5 ನಿಮಿಷ ಬಿಡಿ. ಆನಂತರ ತೆಗೆದು ತಟ್ಟೆಯಲ್ಲಿ ಜೋಡಿಸಿಕೊಳ್ಳಿ. ಈಗ ತೋಷಾ ತಯಾರು... ಇದು ಯುಗಾದಿ, ದಸರಾ, ದೀಪಾವಳಿ ಯಾವುದೇ ಹಬ್ಬವಿರಲಿ ಸಂಭ್ರಮ ದ್ವಿಗುಣಗೊಳಿಸುವಂಥ ತಿನಿಸು. ಮನಸಾರೆ ಸವಿಯಿರಿ.

X
Desktop Bottom Promotion