For Quick Alerts
ALLOW NOTIFICATIONS  
For Daily Alerts

ಈ ಹೋಳಿಗೆ ಸ್ಪೆಷಲ್ ಪೂರನ್ ಪೋಲಿ

|
Puran Poli Sweet Recipe
ಹೋಳಿಗೆ ಸ್ಪೆಷಲ್ ಅಡುಗೆಯಾಗಿ ಮಹಾರಾಷ್ಟ್ರದ ಕಡೆ ಪೂರನ್ ಪೋಲಿಯನ್ನು ತಯಾರಿಸುತ್ತಾರೆ. ಈ ತಿಂಡಿ ಮಾಡುವ ವಿಧಾನ ಸುಲಭವಾಗಿದ್ದು ಇವತ್ತು ನಾವು ಈ ಹೋಳಿ ಸ್ಪೆಷಲ್ ಅಡುಗೆಯ ಬಗ್ಗೆ ತಿಳಿಯೋಣ:

ಬೇಕಾಗುವ ಸಾಮಗ್ರಿಗಳು:
1. ಒದು ಕಪ್ ಕಡಲೆ ಬೇಳೆ
2. ಒಂದು ಕಪ್ ಮೈದಾ
3. ಅರ್ಧ ಕಪ್ ಗೋಧಿ ಹಿಟ್ಟು
4. ಒಂದು ಕಪ್ ಬೆಲ್ಲ
5. 4-6 ಚಮಚ ವನಸ್ಪತಿ
6. ಒಂದು ಚಮಚ ಏಲಕ್ಕಿ
7. ಬಿಸಿನೀರು

ತಯಾರಿಸುವ ವಿಧಾನ:

1. ಕುಕ್ಕರ್ ನಲ್ಲಿ ಕಡಲೆ ಬೇಳೆಯನ್ನು ಬೇಯಿಸಿ ನಂತರ ಕಡಲೆ ಬೇಳೆಯಿಂದ ನೀರನ್ನು ಸೋಸಿ ತಣ್ಣೀರಿನಲ್ಲಿ ಹಾಕಿಡಬೇಕು.

2. ಗೋಧಿ ಮತ್ತು ಮೈದಾ ಹಿಟ್ಟನ್ನು ಮಿಶ್ರ ಮಾಡಿ ಮೃದುವಾದ ಮಿಶ್ರಣವಾಗುವವರೆಗೆ ಕಲೆಸಿಡಬೇಕು.

3. ಈಗ ಬಾಣಲೆಯನ್ನು ಮಿಶ್ರ ಮಾಡಿ ಅದಕ್ಕೆ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾಗುವಾಗ ಅದಕ್ಕೆ ಕಡಲೆ ಬೇಳೆ ಮತ್ತು ಬೆಲ್ಲವನ್ನು ಹಾಕಿ ಗಟ್ಟಿಯಾದ ಮಿಶ್ರಣವಾಗುವರೆಗೆ ತಿರುಗಿಸುತ್ತಾ ಇರಬೇಕು. ನಂತರ ಈ ಮಿಶ್ರಣವನ್ನು ಉರಿಯಿಂದ ಇಳಿಸಿ ಆರಲು ಇಡಬೇಕು.

4. ನಂತರ ಕಡಲೆ ಬೇಳೆ ಮತ್ತು ಬೆಲ್ಲದ ಮಿಶ್ರಣವನ್ನು ಮಿಕ್ಸಿಯಲ್ಲಿ ಅರೆಯಬೇಕು.

5. ಈಗ ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ಮಾಡಿ ಚಪ್ಪಾತಿಗೆ ತಟ್ಟುವ ಹಾಗೆ ತಟ್ಟಬೇಕು. ಅದರ ಮೇಲೆ ಕಡಲೆ ಬೇಳೆ ಮತ್ತು ಬೆಲ್ಲದ ಮಿಶ್ರಣವನ್ನು ಹಾಕಿ ಪುನಃ ಉಂಡೆ ಕಟ್ಟಿ ರೊಟ್ಟಿ ಅಥವಾ ಚಪಾತಿ ಅಕಾರದಲ್ಲಿ ತಟ್ಟಬೇಕು.

6. ಈಗ ತವಾವನ್ನು ಬಿಸಿ ಮಾಡಲು ಇಟ್ಟು ಅದರಲ್ಲಿ ಈ ಪೂರನ್ ಪೋಲಿಯನ್ನು ರೋಸ್ಟ್ ಮಾಡಿದರೆ ರುಚಿಕರವಾದ ಹೋಳಿ ಸ್ಪೆಷಲ್ ರೆಡಿ.

English summary

Puran Poli Sweet Recipe | Holi Special Recipe | ಪೂರನ್ ಪೋಲಿ ರೆಸಿಪಿ | ಹೋಳಿಗೆ ಸ್ಪೆಷಲ್ ಅಡುಗೆ

Puran Poli is a tasty sweet dish made in Maharashtra. This sweet dish is commonly made during Holi.
Story first published: Wednesday, March 7, 2012, 16:31 [IST]
X
Desktop Bottom Promotion