For Quick Alerts
ALLOW NOTIFICATIONS  
For Daily Alerts

ಆರೋಗ್ಯಕ್ಕೆ ಹಿತಕರ ಬೆಣ್ಣೆ ಗುಲ್ಕಂದ್ ರೆಸಿಪಿ

By Prasad
|
Rose petals for Butter Gulkand recipe
ಪ್ರೇಮಿಗಳ ದಿನದಂದು ಭೂಮಿಯ ಮೇಲಿನ ಕೋಟಿ ಕೋಟಿ ಪ್ರಣಯಿಗಳ ಪ್ರೇಮದ ಬೆಸುಗೆಗೆ ಹೂವಿನ ಹಾಸಿಗೆ ಹಾಸಿದ್ದ ನವಿರು ನವಿರಾದ ಗುಲಾಬಿ ಪಕಳೆಗಳನ್ನು ಇಂದು ಕೇಳುವವರೇ ಇಲ್ಲ. ಇಷ್ಟವಿದ್ದವರ ಮುಡಿಗೆ ಕೆಲಕಾಲವೇರಿರುತ್ತದೆ, ಇಷ್ಟವಿಲ್ಲದವರ ಕಾಲ ಕೆಳಗೆ ಅನಾಥವಾಗಿ ಬಿದ್ದಿರುತ್ತದೆ, ಇಷ್ಟೇ ರೋಸ್ ಲೈಫು.

ಪವಿತ್ರವಾದ ಪ್ರೇಮದ ಸಂಕೇತವಾಗಿರುವ ಗುಲಾಬಿ ಪಕಳೆಗಳನ್ನು ಅನಾಥವಾಗಿಸುವ ಮುನ್ನವೆ ಸ್ವಾದಿಷ್ಟಕರವಾದ ಬೆಣ್ಣೆ ಗುಲ್ಕಂದ್ ತಯಾರಿಸಿ ಪ್ರೇಮಿಗಳ ದಿನಕ್ಕೆ ಮತ್ತಷ್ಟು ಅರ್ಥವಂತಿಕೆ ತರೋಣ. ಮನಸಿಗೆ ತಂಪು ನೀಡುವ ಗುಲಾಬಿ ಪಕಳೆಗಳಿಂದ ಹೊಟ್ಟೆಗೂ ತಂಪು ತರುವ ಬೆಣ್ಣೆ ಗುಲ್ಕಂದ್ ರೆಸಿಪಿ ತಯಾರಿಸೋಣ. ಗುಲ್ಕಂದನ್ನು ಎಲೆ ಅಡಿಕೆಯ ಜೊತೆ ಬೆರೆಸಿ ತಿನ್ನಬಹುದು ಮತ್ತು ಹಾಗೆಯೇ ತಿನ್ನಲು ಕೂಡ ರುಚಿಯಾಗಿರುತ್ತದೆ.

ಬೇಕಾಗುವ ಪದಾರ್ಥಗಳು

ನಾಲ್ಕು ಬಟ್ಟಲು ಗುಲಾಬಿ (ರೋಸ್) ಪಕಳೆಗಳು
ನಾಲ್ಕು ಬಟ್ಟಲು ಸಕ್ಕರೆ
ಏಳೆಂಟು ಏಲಕ್ಕಿ
ರೋಸ್ ಎಸೆನ್ಸ್

ತಯಾರಿಸುವ ವಿಧಾನ

* ಗುಲಾಬಿ (ರೋಸ್) ಪಕಳೆಗಳನ್ನು ಚೆನ್ನಾಗಿ ತೊಳೆದು ಸಕ್ಕರೆ, ರೋಸ್ ಎಸೆನ್ಸ್ ಮತ್ತು ಪುಡಿಯಾಗಿಸಿದ ಏಲಕ್ಕಿಯೊಂದಿಗೆ ಬೆರೆಸಬೇಕು.

* ಈ ಮಿಶ್ರಣವನ್ನು ತೇವಾಂಶವಿಲ್ಲದ ಪಾರದರ್ಶಕ ಗಾಜಿನ ಬಾಟಲಿಯಲ್ಲಿ ಸೇರಿಸಿ, ಸುಮಾರು 1 ವಾರಗಳ ಕಾಲ ಬಿಸಿಲಿನಲ್ಲಿ ಇಡಬೇಕು.

* ಎರಡುಮೂರು ದಿನಗಳಿಗೊಮ್ಮೆ ಕಟ್ಟಿಗೆಯ ಚಮಚದಿಂದ ತಿರುವಿ ಮತ್ತೆ ಬಿಸಿಲಿನಲ್ಲಿ ಇಡಬೇಕು.

* ಹೂವಿನ ಪಕಳೆ ಮತ್ತು ಸಕ್ಕರೆ ಚೆನ್ನಾಗಿ ಬೆರೆತುಕೊಂಡ ನಂತರ ತಿನ್ನಬಹುದು.

* ಬೇಕೆಂದಾಗಲೆಲ್ಲ ಕುಲ್ಕಂದ್ ಮೇಲೆ ಒಂದು ಚಮಚ ತಾಜಾ ಬೆಣ್ಣೆ ಹಾಕಿ ತಿನ್ನಿರಿ.

ಆರೋಗ್ಯಕ್ಕೂ ಒಳ್ಳೆಯದು

* ಗುಲ್ಕಂದ್ ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ.
* ಪಿತ್ತ ಕಡಿಮೆ ಮಾಡಿ, ದೇಹದ ಉಷ್ಣವನ್ನು ತಹಬದಿಗೆ ತರುತ್ತದೆ.
* ಬೆಣ್ಣೆ ಗುಲ್ಕಂದ್ ಅಸಿಡಿಟಿಯನ್ನು ಶಮನ ಮಾಡುತ್ತದೆ.

English summary

Tasty and healthy butter Gulkand | Butter Gulkand recipe | Gulkand health benefits | ಬೆಣ್ಣೆ ಕುಲ್ಕಂದ್ ರೆಸಿಪಿ | ಆರೋಗ್ಯಕ್ಕೆ ಹಿತಕರ ಕುಲ್ಕಂದ್

Tasty and healthy butter Gulkand recipe. Do not throw the rose petals after celebrating valentine's day on February 14. There are plenty health benefits of Gulkand.
X
Desktop Bottom Promotion