Just In
Don't Miss
- News
ಸಂಚಾರ ನಿಯಮ ಉಲ್ಲಂಘನೆ: ವಿಶೇಷ ಕಾರ್ಯಾಚರಣೆ ಹೇಗಿರಲಿದೆ ಗೊತ್ತೇ?
- Movies
ಬಾಲಿವುಡ್ ಗೆ ಎಂಟ್ರಿ ಕೊಟ್ಟ 'ದಿಯಾ' ಪೃಥ್ವಿ ಅಂಬರ್; ಯಾವ ಸಿನಿಮಾ?
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ರುಚಿ-'ಪನ್ನೀರ್ ರೋಲ್' ಅದೇನು ರುಚಿ ಅಂತೀರಾ...
ವಾರಾಂತ್ಯ ಬಂತು ಎಂದಾಗ ಮಕ್ಕಳು ವಿಶೇಷ ತಿನಿಸುಗಳಿಗಾಗಿ ನಿಮ್ಮ ಮುಂದೆ ಬೇಡಿಕೆ ಇಡುವುದು ಸಹಜವೇ ಆಗಿದೆ. ಯಾವಾಗಲೂ ಒಂದೇ ಬಗೆಯ ತಿನಿಸನ್ನು ತಿಂದು ಅವರಿಗೂ ಬೇಜಾರು ಬಂದಿರುತ್ತದೆ. ಅಂತೆಯೇ ತಮ್ಮ ಸ್ನೇಹಿತರಿಗೂ ಅತಿ ವಿಶೇಷವಾಗ ಅಮ್ಮನ ಕೈ ಅಡುಗೆಯನ್ನು ತಿನ್ನಿಸುವ ಬಯಕೆ ಅವರಿಗೂ ಇರುತ್ತದೆ.
ಹಾಗಿದ್ದರೆ ನಿಮ್ಮ ಮಕ್ಕಳ ಆಸೆಯನ್ನು ತೀರಿಸುವ ಬಗೆಯಲ್ಲಿಯೇ ಇಂದಿನ ಲೇಖನದಲ್ಲಿ ಅತ್ಯುತ್ತಮವಾದ ಪಾಕ ವೈವಿಧ್ಯದೊಂದಿಗೆ ನಾವು ನಿಮ್ಮ ಮುಂದೆ ಬಂದಿರುವೆವು. ಇದು ಸಸ್ಯಾಹಾರಿ ತಿನಿಸಾಗಿದ್ದು ಪನ್ನೀರ್ ಮತ್ತು ಇತರ ತರಕಾರಿ ಅಂಶಗಳಿಂದ ಮಕ್ಕಳ ಬಾಯಲ್ಲಿ ನೀರೂರುವಂತೆ ಮಾಡುವುದು ಖಂಡಿತ. ಸರಳವಾದ, ರುಚಿಯಾದ ಸಾರು-ಕ್ಯಾಪ್ಸಿಕಂ ಪನ್ನೀರ್
ಪನ್ನೀರ್ ರೋಲ್ ನಿಜಕ್ಕೂ ಅತ್ಯದ್ಭುತ ತಿನಿಸಾಗಿದ್ದು ನಿಮ್ಮ ಮನೆಯ ಸರಳ ಸಮಾರಂಭಕ್ಕೂ ಈ ತಿನಿಸನ್ನು ಮಾಡಿ ಅತಿಥಿಗಳ ಮನಮೆಚ್ಚಿಸಬಹುದಾಗಿದೆ. ಹಾಗಿದ್ದರೆ ರುಚಿಕರವಾದ ಪನ್ನೀರ್ ರೋಲ್ ರೆಸಿಪಿ ವಿಧಾನವನ್ನು ಇಂದಿಲ್ಲಿ ತಿಳಿಸಿಕೊಡುತ್ತಿದ್ದು ಇದು ನಿಮ್ಮ ಬಾಯಲ್ಲಿ ನೀರೂರಿಸುವುದು ಖಂಡಿತ.
ಪ್ರಮಾಣ - 4
*ಸಿದ್ಧತಾ ಸಮಯ - 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ - 20 ನಿಮಿಷಗಳು
ಸಾಮಾಗ್ರಿಗಳು:
*ಹಸಿಮೆಣಸು - 2-3 (ಸಣ್ಣದಾಗಿ ಹೆಚ್ಚಿದ್ದು)
*ಪನ್ನೀರ್ - 1 1/2 ಕಪ್ (ತುರಿದದ್ದು)
*ಆಲೂಗಡ್ಡೆ - 1 (ಬೇಯಿಸಿ ಹಿಸುಕಿದ್ದು)
*ಬಿಳಿ ಬ್ರೆಡ್ - 8 ಸ್ಲೈಸ್
*ಬ್ರೆಡ್ ಕ್ರಂಬ್ಸ್ - 1/2 ಕಪ್
*ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣದಾಗಿ ಕತ್ತರಿಸಿದ್ದು)
*ಚೀಸ್ - 3 ಚಮಚ (ತುರಿದದ್ದು)
*ಮೆಣಸಿನ ಹುಡಿ - 1 ಚಮಚ
*ಎಣ್ಣೆ ಹುರಿಯಲು
*ಚಾಟ್ ಮಸಾಲಾ - 1/2 ಚಮಚ
*ಉಪ್ಪು ರುಚಿಗೆ ತಕ್ಕಷ್ಟು ಚೈನೀಸ್ ಪನ್ನೀರ್ ನೂಡಲ್ಸ್ ರೆಸಿಪಿ
ಮಾಡುವ ವಿಧಾನ
1. ಪಾತ್ರೆಯನ್ನು ತೆಗೆದುಕೊಂಡು ಎಲ್ಲಾ ಸಾಮಾಗ್ರಿಗಳನ್ನು ಇದಕ್ಕೆ ಹಾಕಿ. ಚೆನ್ನಾಗಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿ ಮತ್ತು ಹಿಟ್ಟು ಸಿದ್ಧಪಡಿಸಿಕೊಳ್ಳಿ.
2. ಬಿಳಿ ಬ್ರೆಡ್ ಅನ್ನು ತೆಗೆದುಕೊಂಡು ತುದಿಯನ್ನು ಬೇರ್ಪಡಿಸಿ. ಈಗ ರೋಲಿಂಗ್ ಪ್ಯಾನ್ ಬಳಸಿಕೊಂಡು ಬ್ರೆಡ್ ತುಂಡುಗಳನ್ನು ಚಪ್ಪಡೆ ಮಾಡಿಕೊಳ್ಳಿ. ಪನ್ನೀರ್ ಸ್ಟಫಿಂಗ್ ಅನ್ನು ಒಂದು ಭಾಗಕ್ಕೆ ಸವರಿ ಮತ್ತು ನಿಧಾನವಾಗಿ ಅದನ್ನು ಸುತ್ತಿ.
3.ರೋಲ್‌ನ ತುದಿಗಳನ್ನು ಕಟ್ ಮಾಡಿ ಮತ್ತು ಮಧ್ಯಭಾಗದಲ್ಲಿ ಕೂಡ ತುಂಡರಿಸಿ ಹಾಗೂ ಪ್ರತಿಭಾಗಗಳನ್ನು ಟೂತ್‌ಪಿಕ್‌ನೊಂದಿಗೆ ವಿಭಾಗಿಸಿ.
4. ಇದೇ ಸಮಯದಲ್ಲಿ, ಎಣ್ಣೆಯನ್ನು ಕರಿಯಲು ಬಿಸಿ ಮಾಡಿಕೊಳ್ಳಿ. ಈಗ ರೋಲ್ ಅನ್ನು ಒಂದೊಂದಾಗಿ ಎಣ್ಣೆಗೆ ಹಾಕಿ ಮತ್ತು ಹುರಿಯಿರಿ. ರೋಲ್ ಚೆನ್ನಾಗಿ ಕಂದು ಚಿನ್ನ ಮಿಶ್ರ ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
5. ಈಗ ಕಿಚನ್ ಟವಲ್ ಬಳಸಿಕೊಂಡು ಹೆಚ್ಚುವರಿ ಎಣ್ಣೆಯನ್ನು ಹೊರತೆಗೆಯಿರಿ. ರೋಲ್ ಬಡಿಸುವಾಗ, ಟೂತ್‌ಪಿಕ್ ಅನ್ನು ತೆಗೆಯಿರಿ ಮತ್ತು ಮೆಚ್ಚಿನ ಚಟ್ನಿಯೊಂದಿಗೆ ಸವಿಯಲು ನೀಡಿ. ಪನ್ನೀರ್ ರೋಲ್ ಅನ್ನು ಬಡಿಸುವಾಗ ಇದರ ಜೊತೆಗೆ ಮೆಣಸಿನ ಚಟ್ನಿ ಅಥವಾ ಪುದೀನಾ ಇಲ್ಲವೇ ಟೊಮೇಟೊ ಚಟ್ನಿಯನ್ನು ಸಿದ್ಧಪಡಿಸಿಕೊಳ್ಳಿ. ಮನೆಯಲ್ಲಿ ಇದನ್ನು ಸಿದ್ಧಪಡಿಸಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ತಿಳಿಸಿ.