For Quick Alerts
ALLOW NOTIFICATIONS  
For Daily Alerts

ಚೈನೀಸ್ ಪನ್ನೀರ್ ನೂಡಲ್ಸ್ ರೆಸಿಪಿ

|

ನೂಡಲ್ಸ್ ಚಿಕ್ಕ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟವಾಗುವ ಆಹಾರವಾಗಿದೆ. ಇದನ್ನು ಸುಲಭವಾಗಿ ಮಾಡಬಹುದಾದ ಕಾರಣ ಬೆಳಗಿನ ಬ್ರೇಕ್ ಫಾಸ್ಟ್ ಗೆ ಸೂಕ್ತವಾದ ತಿಂಡಿಯಾಗಿದೆ. ಈ ನೂಡಲ್ಸ್ ಅನ್ನು ಚೈನೀಸ್ ಶೈಲಿಯಲ್ಲಿ ತಯಾರಿಸಿದರಂತೂ ತುಂಬಾ ರುಚಿಕರವಾಗಿರುತ್ತದೆ.

ಇಲ್ಲಿ ನಾವು ಪನ್ನೀರ್ ಹಾಗೂ ನೂಡಲ್ಸ್ ಹಾಕಿ ತಯಾರಿಸುವ ಚೈನೀಸ್ ಶೈಲಿಯ ನೂಡಲ್ಸ್ ರೆಸಿಪಿ ನೀಡಿದ್ದೇವೆ ನೋಡಿ:

Chinese Paneer Noddles Recipe

ಬೇಕಾಗುವ ಸಾಮಾಗ್ರಿಗಳು:

ನೂಡಲ್ಸ್ 1 ಪ್ಯಾಕೆಟ್
ಈರುಳ್ಳಿ 2 (ಕತ್ತರಿಸಿದ್ದು)
ಕ್ಯಾಪ್ಸಿಕಂ 1
ಕ್ಯಾರೆಟ್ 1
ಎಲೆಕೋಸು ಅರ್ಧದಷ್ಟು (ಚಿಕಕ್ದಗಿ ಕತ್ತರಿಸಿರಬೇಕು)
ಬೆಳ್ಳುಳ್ಳಿ ಎಸಳು 3-4
ಚಿಕ್ಕ ಈರುಳ್ಳಿ 2
ಪನ್ನೀರ್ ಅರ್ಧ ಕಪ್
ಸೋಯಾ ಸಾಸ್ 2 ಚಮಚ
ಹಸಿ ಮೆಣಸಿನಕಾಯಿಯ ಸಾಸ್ ಒಂದು ಚಮಚ
ಕರಿಮೆಣಸಿನ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

1. ನೀರನ್ನು ಕುದಿಸಿ ಅದರಲ್ಲಿ ನೂಡಲ್ಸ್ ಹಾಕಿ ಅದನ್ನು ಬೇಯಿಸಿ. ನಂತರ ಅದನ್ನು ತಣ್ಣೀರಿಲ್ಲಿ ಹಾಕಿ ನಂತರ ಒಂದು ಪಾತ್ರೆಯಲ್ಲಿ ಹಾಕಿಡಿ.

2. ಈಗ ಪಾತ್ರೆಯಲ್ಲಿ 1/4 ಕಪ್ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು. ನಂತರ ಅದಕ್ಕೆ ಬೆಳ್ಳುಳ್ಳಿ, ಈರುಳ್ಳು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು, ನಂತರ ಕ್ಯಾಪ್ಸಿಕಂ, ಕ್ಯಾರೆಟ್ ಹಾಕಿ ಕ್ಯಾಪ್ಸಿಕಂ ಬೇಯುವವರೆಗೆ ಹುರಿಯಬೇಕು.

3. ನಂತರ ಚಿಕ್ಕ ಈರುಳ್ಳಿ (Spring onion), ಎಲೆಕೋಸು, ಪನ್ನೀರ್ ತುಂಡುಗಳನ್ನು ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ನಂತರ ಹಸಿ ಮೆಣಸಿನಕಾಯಿಯ ಸಾಸ್ ಹಾಗೂ ಸೋಯಾ ಸಾಸ್ ಸೇರಿಸಬೇಕು. ನಂತರ ಕರಿ ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ನಂತರ ಬೇಯಿಸಿದ ನೂಡಲ್ಸ್ ಹಾಕಿ 1-2 ನಿಮಿಷ ಬೇಯಿಸಿದರೆ ರುಚಿಕರವಾದ ಚೈನೀಸ್ ವೆಜ್ ನೂಡಲ್ಸ್ ರೆಡಿ.

ಇದನ್ನು ಟೊಮೆಟೊ ಸಾಸ್ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

Chinese Paneer Noddles Recipe | Variety Of Breakfast Recipe | ಚೈನೀಸ್ ಪನ್ನೀರ್ ನೂಡಲ್ಸ್ ರೆಸಿಪಿ | ಅನೇಕ ಬಗೆಯ ಬ್ರೇಕ್ ಫಾಸ್ಟ್ ರೆಸಿಪಿ

Noodles is loved by everyone. From kids to adults, we all love to eat noodles. This dish from the Chinese cuisine is popular worldwide. Paneer noodles or fried rice is the most popular main course dishes from the Chinese cuisine.
X
Desktop Bottom Promotion