For Quick Alerts
ALLOW NOTIFICATIONS  
For Daily Alerts

ಚುಮುಚುಮು ಚಳಿಗೆ, ಬಿಸಿಬಿಸಿ ಬ್ರೆಡ್ ಬೋಂಡಾ

By Super
|

ಚುಮುಚುಮು ಚಳಿ, ಮಳೆಬಿಟ್ಟ ಬಳಿಕ ಬೀಸುವ ತಂಗಾಳಿಯ ಸಮಯದಲ್ಲಿ ಬಿಸಿಬಿಸಿಯಾಗಿ ತಿನ್ನುವ ಖಾದ್ಯಗಳಿಗೆ ಹೆಚ್ಚು ರುಚಿ. ಮೆಣಸಿನ ಬೋಂಡಾ, ಕುಚ್ಚಿಗೆ ಅಕ್ಕಿಯ ಗಂಜಿಯೊಡನೆ ಖಾರವಾದ ಮಾವಿನ ಉಪ್ಪಿನಕಾಯಿ, ಖಾರವಾದ ಮದ್ದೂರು ವಡೆ ಇತ್ಯಾದಿ. ಆದರೆ ಇವನ್ನೆಲ್ಲಾ ತಯಾರಿಸಲು ಕೊಂಚ ಹೆಚ್ಚಿನ ಕಾಲಾವಕಾಶ ಬೇಕು. ಮಳೆ ನಿಂತ ಬಳಿಕ ಖಾರವಾದದ್ದೇನಾದರೂ ತಿನ್ನಬೇಕೆನಿಸಿದರೆ ಸಿದ್ಧ ರೂಪದಲ್ಲಿ ಸಿಗುವ ಬ್ರೆಡ್ ಉಪಯೋಗಿಸಿ ತಯಾರಿಸುವ ತಿಂಡಿಗಳು ರುಚಿಕರವೂ, ಗರಿಗರಿಯಾಗಿಯೂ, ಖಾರಖಾರವಾಗಿಯೂ ಆಗಿದ್ದು ಬೇಗಬೇಗನೆಯೂ ಸಿದ್ಧವಾಗುತ್ತದೆ.

ಬ್ರೆಡ್‌ನಲ್ಲಿ ಹಲವು ಖಾದ್ಯಗಳನ್ನು ಮಾಡಲು ಸಾಧ್ಯವಿದೆಯಾದರೂ ಚಳಿಯ ಸಮಯದಲ್ಲಿ ಅಥವಾ ಮಳೆಬಿಟ್ಟ ಬಳಿಕ ತಯಾರಿಸಲು ಸೂಕ್ತವಾದುದೆಂದರೆ ಬ್ರೆಡ್ ಬೋಂಡ. ಇದರೊಂದಿಗೆ ಬಿಸಿಬಿಸಿಯಾದ ಚಿಕ್ಕಮಗಳೂರು ಫಿಲ್ಟರ್ ಕಾಫಿ ಇದ್ದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚುವ ರುಚಿ ಹುಚ್ಚೆಬ್ಬಿಸುತ್ತದೆ. ಅತಿ ಮೃದುವಾದ ಈ ಬೋಂಡಾವನ್ನು ಎಣ್ಣೆಯಲ್ಲಿ ಕರಿದ ಬಳಿಕವೂ ಕೊಂಚವೂ ಎಣ್ಣೆಯನ್ನು ಹೀರಿಕೊಳ್ಳದೇ ಗರಿಗರಿಯಾಗಿದ್ದು ಜೊತೆಗಿರುವ ಈರುಳ್ಳಿ, ಆಲುಗಡ್ಡೆ ಮತ್ತು ಹಸಿಮೆಣಸು ಈ ರುಚಿಯನ್ನು ಹೆಚ್ಚಿಸುತ್ತವೆ. ಬನ್ನಿ ಇದನ್ನು ತಯಾರಿಸುವ ಬಗೆಯನ್ನು ಈಗ ಕಲಿಯೋಣ. ಸಂಜೆ ಟೀ ಜೊತೆ ಸವಿಯಲು ಆಲೂ ಬೋಂಡಾ

Spicy Bread Bonda Recipe For A Chilly Day

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಾಗಿರುವ ಸಾಮಾಗ್ರಿಗಳು:
*ಬ್ರೆಡ್: ಆರು ಹೋಳುಗಳು
*ಆಲುಗಡ್ಡೆ - ಮೂರು (ಮಧ್ಯಮ ಗಾತ್ರದ್ದು, ಬೇಯಿಸಿ ಸಿಪ್ಪೆ ಸುಲಿದು ಚಿಕ್ಕದಾಗಿ ಪುಡಿಯಾಗಿಸಿದ್ದು)
*ಈರುಳ್ಳಿ: ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಜೀರಿಗೆ : ಕಾಲು ಚಿಕ್ಕ ಚಮಚ
*ಹಸಿಮೆಣಸು: ನಾಲ್ಕರಿಂದ ಐದು
*ಕೆಂಪು ಮೆಣಸಿನ ಪುಡಿ: ಕಾಲು ಚಿಕ್ಕ ಚಮಚ (ಕಾಶ್ಮೀರಿ ದೇಘಿ ಮಿರ್ಚಿ ಪುಡಿ ಆದರೆ ಅರ್ಧ ಚಮಚ, ಇದರ ರುಚಿ ಇನ್ನೂ ಹೆಚ್ಚು)
*ಹಾಲು - ಒಂದು ಕಪ್
*ಎಣ್ಣೆ: ಹುರಿಯಲು ಅಗತ್ಯವಿದ್ದಷ್ಟು
*ಉಪ್ಪು: ರುಚಿಗನುಸಾರ ಬೋಂಡಾ ಅಲ್ಲ, ಬಜ್ಜಿ ಅಲ್ಲ, ಆಲೂ ಪಕೋಡ ಇದು

ವಿಧಾನ:
ಹೂರಣಕ್ಕೆ:
1) ಒಂದು ದಪ್ಪತಳದ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. ಬಳಿಕ ಜೀರಿಗೆ, ಆಲುಗಡ್ಡೆ, ಈರುಳ್ಳಿ, ಹಸಿಮೆಣಸು ನಂತರ ಒಣಮೆಣಸಿನ ಪುಡಿಯನ್ನು ಒಂದೊಂದಾಗಿ ಹಾಕುತ್ತಾ ನಿಧಾನವಾಗಿ ತಿರುವುತ್ತಾ ಬನ್ನಿ.
2) ಈರುಳ್ಳಿ ಸುಮಾರು ಅರ್ಧಕ್ಕಿಂತ ಹೆಚ್ಚು ಬೆಂದಿದೆ ಎಂದ ಬಳಿಕವೇ ಆಲುಗಡ್ಡೆ ಹಾಕಿ ನಂತರ ಚೆನ್ನಾಗಿ ಕಲಕಿ ಉಪ್ಪು ಹಾಕಿ ಕೆಳಗಿಸಿ.
ಬ್ರೆಡ್ ಹೋಳುಗಳಿಗೆ:
3) ಬ್ರೆಡ್ ಹೋಳುಗಳ ಅಂಚುಗಳನ್ನು ಕತ್ತರಿಸಿ ತೆಗೆಯಿರಿ. ಬಳಿಕ ಪ್ರತಿ ಹೋಳನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ.
4) ಪ್ರತಿ ಚೂರನ್ನು ಕೊಂಚವೇ ಹಾಲಿನಲ್ಲಿ ಮುಳುಗಿಸಿ ತಕ್ಷಣ ಮೇಲಕ್ಕಿತ್ತಿ. ಬ್ರೆಡ್ ಹಾಲನ್ನು ಹೀರಬಾರದು, ಕೊಂಚಮಾತ್ರ ತಗುಲಿರಬೇಕು.
5) ಈಗ ಸುಮಾರು ಒಂದು ಚಮಚದಷ್ಟು ಹೂರಣವನ್ನು ಪ್ರತಿ ಬ್ರೆಡ್ ತುಂಡಿನ ಮೇಲೆ ಹಾಕಿ ಎಣ್ಣೆ ಸವರಿದ ಕೈಗಳಿಂದ ಇಡಿಯ ಬ್ರೆಡ್ ಆವರಿಸುವಂತೆ ದಪ್ಪನಾಗಿ ಸವರಿ. ಎಲ್ಲಿಯೂ ಜಾಗ ಬಿಡದಂತೆ ನೋಡಿಕೊಳ್ಳಿ.
6) ಬಳಿಕ ಬಾಣಲೆಯಲ್ಲಿ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಸುಮಾರು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಮಗುಚುತ್ತಾ ಕರಿಯಿರಿ.
7) ಬಳಿಕ ಕಿಚನ್ ಟವೆಲ್ ಪೇಪರ್ ಮೇಲೆ ಹರಡಿ ಹೆಚ್ಚಿನ ಎಣ್ಣೆಯನ್ನು ಇಂಗುವಂತೆ ಮಾಡಿ.
8) ಬಿಸಿಬಿಸಿಯಿದ್ದಂತೆಯೇ ಟೊಮೇಟೊ ಸಾಸ್ ನೊಂದಿಗೆ ಮಕ್ಕಳಿಗೆ ಮತ್ತು ಹಿರಿಯರಿಗೆ ನೀಡಿ, ಫಿಲ್ಟರ್ ಕಾಫಿಯೊಡನೆ ಮಳೆಗಾಲದ ಸವಿಯನ್ನು ಆನಂದಿಸಿ.

English summary

Spicy Bread Bonda Recipe For A Chilly Day

Bread bonda, snacks with bread, recipes with bread, bread recipes, easy recipes with bread. In this busy and hectic life, we may find less time to cook food. However, there is one food item that is definetly available in everyone's house and that is 'bread'. Yes, in many houses bread toast is a common breakfast option, which we enjoy having with tea or coffee.
Story first published: Friday, November 20, 2015, 12:55 [IST]
X
Desktop Bottom Promotion