For Quick Alerts
ALLOW NOTIFICATIONS  
For Daily Alerts

ಹೆಸರು ಬೇಳೆಯ ಚಾಟ್ - ಥಟ್ಟನೇ ತಯಾರಿಸಿ!

By Manu
|

ಮಳೆಗಾಲ ಈಗಾಗಲೇ ಪ್ರಾರಂಭವಾಗಿದೆ. ಮನೆಯಲ್ಲಿ ಚಳಿಯೂ ಆವರಿಸುತ್ತಿದೆ. ಆದರೆ ಮನೆಯೆಲ್ಲಾ ಅವರಿಸಿರುವ ನೀರಿನ ಪಸೆಯ ಕಾರಣ ಅಡುಗೆ ಮನೆಯಲ್ಲಿ ಹೆಚ್ಚಿನ ಹೊತ್ತು ಇರಲಿಕ್ಕೆ ಬೇಜಾರಾಗಿದೆಯೇ? ಈ ಸಂದರ್ಭದಲ್ಲಿ ಅತಿ ಶೀಘ್ರವಾಗಿ ತಯಾರಿಸಬಹುದಾದ ಖಾದ್ಯಗಳಿಗೆ ಹೆಚ್ಚಿನ ಆದ್ಯತೆ ದೊರಕುತ್ತದೆ. ಇಂತಹ ಒಂದು ರುಚಿಕರ ಖಾದ್ಯವೆಂದರೆ ಹೆಸರುಬೇಳೆಯ ಚಾಟ್. ಇದಕ್ಕೆ ಬೇಕಾದುದು ಕೆಲವು ಸುಲಭವಾದ ಸಾಮಗ್ರಿಗಳು ಮಾತ್ರ.

ಒಂದೇ ಒಂದು ಹೆಚ್ಚುವರಿ ಸಾಮಾಗ್ರಿ ಎಂದರೆ ಮೊಳಕೆ ಬರಿಸಿದ ಹೆಸರು ಕಾಳು. ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿದ್ಧ ರೂಪದಲ್ಲಿಯೂ ಸಿಗುವ ಕಾರಣ ಹೆಚ್ಚಿನ ಸಮಯ ವ್ಯಯಿಸುವ ಅಗತ್ಯವಿಲ್ಲ. ಇಲ್ಲದಿದ್ದರೆ ನಾಲ್ಕಾರು ದಿನ ನೀರಿನಲ್ಲಿಟ್ಟು ಮೊಳಕೆ ಬರಿಸಿದ ಹೆಸರುಕಾಳನ್ನು ಬಳಸುವುದು ಇನ್ನೂ ಉತ್ತಮ. ಮೊಳಕೆ ಬಂದ ಹೆಸರು ಬೇಳೆ ಪರೋಟ

ಇನ್ನುಳಿದಂತೆ ಬೇರೆ ಸಾಮಾಗ್ರಿಗಳು ಮನೆಯಲ್ಲಿ ಸದಾ ಲಭ್ಯವಿದ್ದು ಈ ರುಚಿಯಾದ ತೊವ್ವೆ ತಯಾರಿಸಲು ಯಾವುದೇ ಅಡ್ಡಿ ಆತಂಕವಿಲ್ಲ. ಒಮ್ಮೆ ಇದರ ರುಚಿ ನೋಡಿದ ಮನೆಯ ಸದಸ್ಯರು ಮತ್ತೊಮ್ಮೆ ಮಗದೊಮ್ಮೆ ಬೇಕು ಎಂದು ಬೇಡಿಕೆ ಸಲ್ಲಿಸುವುದು ಮಾತ್ರ ಖಚಿತ.

ಈ ಚಾಟ್ ಕೇವಲ ರುಚಿಕರ ಮಾತ್ರವಲ್ಲ, ಹೆಸರು ಬೇಳೆ ಮತ್ತು ಮೊಳಕೆ ಬರಿಸಿದ ಹೆಸರುಕಾಳಿನ ಎಲ್ಲಾ ಗುಣಗಳನ್ನು ಹೊಂದಿದ್ದು ಅತಿ ಆರೋಗ್ಯಕರ ಆಹಾರವಾಗಿದೆ. ಈ ತೊವ್ವೆಯ ಇನ್ನೊಂದು ಹೆಗ್ಗಳಿಕೆ ಎಂದರೆ ಇದನ್ನು ದಿನದ ಯಾವುದೇ ಹೊತ್ತಿನಲ್ಲಿ ಸೇವಿಸಬಹುದು. ಉಪಾಹಾರದಲ್ಲಿ ರೊಟ್ಟಿ, ಇಡ್ಲಿ ದೋಸೆಗಳ ಜೊತೆಗೆ, ಮಧ್ಯಾಹ್ನ ಅನ್ನ, ರಾತ್ರಿ ಚಪಾತಿ ರೊಟ್ಟಿಗಳೊಂದಿಗೆ ಸುಲಭವಾಗಿ ನಂಜಿಕೊಳ್ಳಬಹುದು.

ಅಲ್ಲದೇ ದೇಹದ ತಾಪಮಾನವನ್ನು ಇಳಿಸಿ ತಂಪಾಗಿರಿಸಲೂ ಮೊಳಕೆಬರಿಸಿದ ಹೆಸರುಕಾಳು ಉತ್ತಮವಾಗಿದೆ. ಮಕ್ಕಳಂತೂ ಈ ತೊವ್ವೆಯನ್ನು ಸವಿದರೆ ಅವರಿಗೆ ಇಷ್ಟವಿಲ್ಲದ ಚಪಾತಿಗಳೊಂದಿಗೂ ತಿನ್ನಲು ತಯಾರಾಗುತ್ತಾರೆ. ಇನ್ನೇಕೆ ತಡ, ಬನ್ನಿ, ಈ ರುಚಿಕರ ರೆಸಿಪಿಯನ್ನು ತಯಾರಿಸುವುದನ್ನು ಕಲಿಯೋಣ:

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಹತ್ತು ನಿಮಿಷಗಳು

*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ನಯವಾಗಿ ಹುರಿದ ಹೆಸರು ಬೇಳೆ: ಇನ್ನೂರು ಗ್ರಾಂ

*ಮೊಳಕೆ ಬರಿಸಿದ ಹೆಸರು ಕಾಳು: ಅರ್ಧ ಕಪ್

*ಈರುಳ್ಳಿ: ಅರ್ಧ ಕಪ್ (ಚಿಕ್ಕದಾಗಿ ಹೆಚ್ಚಿದ್ದು)

*ಟೊಮೇಟೊ:ಅರ್ಧ ಕಪ್ (ಚಿಕ್ಕದಾಗಿ ಹೆಚ್ಚಿದ್ದು)

*ಕ್ಯಾರೆಟ್ : ಅರ್ಧ ಕಪ್ (ಚಿಕ್ಕದಾಗಿ ಹೆಚ್ಚಿದ್ದು)

*ಹುಣಸೆ ಹುಳಿಯ ನೀರು - 1/2 ಚಿಕ್ಕಚಮಚ

*ಹಸಿ ಮೆಣಸಿನ ಪೇಸ್ಟ್- 1/2 ಚಿಕ್ಕಚಮಚ

*ಬೆಲ್ಲದ ಸಿರಪ್ ಅಥವಾ ದ್ರಾವ - 1/2 ಚಿಕ್ಕಚಮಚ

*ಕೊತ್ತಂಬರಿ ಸೊಪ್ಪು- ಸುಮಾರು ಅರ್ಧ ಕಟ್ಟು, ಅಲಂಕಾರಕ್ಕಾಗಿ

*ಲಿಂಬೆ ರಸ - 1/2 ಚಿಕ್ಕಚಮಚ

*ಉಪ್ಪು: ರುಚಿಗನುಸಾರ ಹೆಸರು ಬೇಳೆ ಕ್ಯಾರೆಟ್ ಕೋಸಂಬರಿ

ವಿಧಾನ:

1) ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಈರುಳ್ಳಿ, ಟೊಮೇಟೊ, ಕ್ಯಾರೆಟ್, ಹಸಿಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

2) ಇದಕ್ಕೆ ಹುರಿದ ಹೆಸರುಬೇಳೆ ಮತ್ತು ಮೊಳಕೆ ಬರಿಸಿದ ಹೆಸರು ಕಾಳು ಹಾಕಿ ಮಿಶ್ರಣ ಮಾಡಿ.

3) ಬಳಿಕ ಹುಣಸೆ ಹುಳಿ, ಬೆಲ್ಲದ ನೀರು ಹಾಕಿ ಮಿಶ್ರಣ ಮಾಡಿ

4) ನಂತರ ಉಪ್ಪು ಮತ್ತು ಲಿಂಬೆರಸ ಹಾಕಿ ಮಿಶ್ರಣ ಮಾಡಿ.

5) ಈ ಚಾಟ್ ಅನ್ನು ಪಾತ್ರೆಯಿಂದ ತಟ್ಟೆಗೆ ಸುರಿದು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

6) ಅತಿಥಿಗಳಿಗೆ ಬಡಿಸಿ ಮೆಚ್ಚುಗೆಗಳಿಸಿ ಈ ರೆಸಿಪಿ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಾಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

English summary

Simple Yet Tasty Masala Moong Dal Recipe

It's yet another chilly day! And are you enjoying this super cool climate at home? If so, then we shall make your day even better, by sharing with you a chaat recipe that is best suited for this climate. The fried masala moong dal is a very tasty chaat recipe that you can have this evening. This special chaat recipe is prepared with some very basic ingredients that are usually stored in your kitchen. These can give you an amazing taste that you would want to prepare again and again.
X