For Quick Alerts
ALLOW NOTIFICATIONS  
For Daily Alerts

ರಂಜಾನ್ ಸ್ಪೆಷಲ್: ಪಾಲಕ್ ಸೊಪ್ಪು-ಚೀಸ್ ಟೋಸ್ಟ್ ರೆಸಿಪಿ

|

ರಂಜಾನ್ ತಿಂಗಳ ಪ್ರತಿದಿನವೂ ಪ್ರತಿಮನೆಯಲ್ಲಿ ವಿಶೇಷ ಅಡುಗೆಗಳು ತಯಾರಾಗುತ್ತವೆ. ವಿಶೇಷವಾಗಿ ಇಫ್ತಾರ್ ಸಮಯದಲ್ಲಿ ಅತಿಥಿಗಳನ್ನು ಆಹ್ವಾನಿಸಿ ವಿವಿಧ ಅಡುಗೆಗಳನ್ನು ಆಸ್ವಾದಿಸುವ ಮೂಲಕ ಅಂದಿನ ಉಪವಾಸವನ್ನು ಸಂಪನ್ನಗೊಳಿಸುವುದು ರಂಜಾನ್‌ನ ಸಂತೋಷವನ್ನು ನೂರ್ಮಡಿಗೊಳಿಸುತ್ತದೆ. ಆದರೆ ಹೆಚ್ಚಿನ ಅಡುಗೆಗಳು ನಿಮ್ಮ ಸಮಯವನ್ನು ಕಬಳಿಸಿಬಿಡುವುದರಿಂದ ಧಾರ್ಮಿಕ ಕಾರ್ಯಗಳಿಗೆ ಸಮಯ ಕೊರತೆಯಾಗುತ್ತದೆ.

ಕಡಿಮೆ ಸಮಯದಲ್ಲಿಯೂ ರುಚಿಯಾದ ಅಡುಗೆಗಳನ್ನು ಮಾಡಿ ನಿಮ್ಮ ಸಮಯವನ್ನು ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಬಹುದು. ಅಂತಹ ಒಂದು ಸುಲಭವಾದ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಅಡುಗೆ ಪಾಲಕ್ ಮತ್ತು ಚೀಸ್ ಟೋಸ್ಟ್. ಪಾಲಕ್‌ನಲ್ಲಿ ಉತ್ತಮವಾದ ಕಬ್ಬಿಣದ ಅಂಶವಿದ್ದು ಉಪವಾಸದ ಬಳಿಕ ಬಳಲಿದ ದೇಹಕ್ಕೆ ಹೆಚ್ಚಿನ ಚೈತನ್ಯ ನೀಡುತ್ತದೆ. ಜೊತೆಗೇ ಹೆಚ್ಚಿನ ಕ್ಯಾಲ್ಸಿಯಂ ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತದೆ. ರಂಜಾನ್ ಸ್ಪೆಷಲ್: ಕಾಶ್ಮೀರ ಶೈಲಿಯ ಮಿರ್ಚಿ ಕುರ್ಮಾ!

*ಪ್ರಮಾಣ: ಐವರಿಗೆ ಒಂದು ಹೊತ್ತಿಗೆ ಸಾಕಾಗುವಶ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು

Ramazan special: Spinach And Cheese Toast

ಬೇಕಾಗುವ ಸಾಮಾಗ್ರಿಗಳು
*ಬ್ರೆಡ್ ಸ್ಲೈಡ್ - ಹತ್ತು -ಟೋಸ್ಟ್ ಮಾಡಿದ್ದು (ಇಡಿಯ ಗೋಧಿ ಹಿಟ್ಟಿನಿಂದ ತಯಾರಿಸಿದ್ದು (brown bread), ಮೈದಾ ಹಿಟ್ಟಿನ ಬ್ರೆಡ್ (white bread) ಉಪಯೋಗಿಸಿದರೆ ತುಂಬಾ ಗಟ್ಟಿಯಾಗುತ್ತದೆ)
*ಸ್ಯಾಂಡ್ ವಿಚ್ ಕ್ರೀಂ: ಒಂದು ದೊಡ್ಡ ಚಮಚ
*ಕಾಳುಮೆಣಸಿನ ಪುಡಿ: ಎರಡು ಚಿಕ್ಕ ಚಮಚ
*ಎಲೆಕೋಸು : ಕೊಂಚ (ಚಿಕ್ಕದಾಗಿ ಹೆಚ್ಚಿದ್ದು)
*ಟೊಮೇಟೊ: ಒಂದು - ತೆಳುವಾದ ಸ್ಲೈಡ್‌ಗಳಾಗಿ ಕತ್ತರಿಸಿದ್ದು- ಒಂದು (ದೊಡ್ಡ ಗಾತ್ರ), ಮಧ್ಯಮ ಗಾತ್ರದ್ದಾದರೆ ಎರಡು
*ಚೀಸ್:ಚಿಕ್ಕದಾಗಿ ತುರಿದದ್ದು - ಎಂಟು ಚಿಕ್ಕ ಚಮಚ
*ಪಾಲಕ್ ಸೊಪ್ಪು: ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ನಯವಾಗಿ ಅರೆದದ್ದು - ಎರಡು ಕಪ್
*ಈರುಳ್ಳಿ: ಎರಡು (ಚಿಕ್ಕದು) ಚಿಕ್ಕದಾಗಿ ಹೆಚ್ಚಿದ್ದು
*ಬೆಣ್ಣೆ: ಒಂದು ದೊಡ್ಡಚಮಚ
*ಮೆಕ್ಕೆಜೋಳದ ಹಿಟ್ಟು : (cornflour): ಹಾಲಿನ ಕ್ರೀಂನಲ್ಲಿ ಗೊಟಾಯಿಸಿದ್ದು - ಒಂದು ದೊಡ್ಡ ಚಮಚ
*ಹಸಿಮೆಣಸು : ಮೂರು (ದೊಡ್ಡ ಗಾತ್ರದ್ದು)
*ಅಡುಗೆ ಸೋಡಾ: ಚಿಟಿಕೆ
*ಉಪ್ಪು: ರುಚಿಗನುಸಾರ

ವಿಧಾನ: ಪಾಲಕ್ ಸೊಪ್ಪಿನ ಮೇಲ್ಪದರಕ್ಕಾಗಿ:
1) ದಪ್ಪತಳದ ಬಾಣಲೆಯಲ್ಲಿ ಬೆಣ್ಣೆ, ಹಸಿಮೆಣಸು, ಈರುಳ್ಳಿ ಹಾಕಿ ಚಿಕ್ಕ ಉರಿಯಲ್ಲಿ ಎರಡು ನಿಮಿಷಗಳ ಕಾಲ ತಿರುವುತ್ತಾ ಹುರಿಯಿರಿ
೨) ಇದಕ್ಕೆ ಅರೆದ ಪಾಲಕ್ ಸೊಪ್ಪು, ಮೆಕ್ಕೆಜೋಳದ ಹಿಟ್ಟು, ಉಪ್ಪು, ಅಡುಗೆ ಸೋಡಾ ಹಾಕಿ ಮಧ್ಯಮ ಉರಿಯಲ್ಲಿ ಸುಮಾರು ಐದು ನಿಮಿಷ ಬೇಯಿಸಿ ಅಥವಾ ಗಾಢವಾಗುವವರೆಗೆ ತಿರುವಿರಿ.
೩) ಇದನ್ನು ಒಲೆಯಿಂದ ಕೆಳಗಿಳಿಸಿ ಒಂದು ಬದಿಗೆ ಮುಚ್ಚಳ ಮುಚ್ಚದೇ ತಣಿಯಲು ಬಿಡಿ

ವಿಧಾನ: ಟೋಸ್ಟ್ ತಯಾರಿಸಲು:
1)ಬ್ರೆಡ್ ಸ್ಲೈಡ್‌ಗಳ ಮೇಲೆ ಮೊದಲು ತುರಿದ ಚೀಸ್, ಟೊಮೇಟೊ ಸ್ಲೈಡ್, ಎಲೆಕೋಸಿನ ತುರಿಗಳನ್ನು ಪೂರ್ಣವಾಗಿ ಆವರಿಸುವಂತೆ ಹರಡಿ ಅದರ ಮೇಲೆ ದೊಡ್ಡ ಚಮಚದಿಂದ ಪಾಲಕ್ ಸೊಪ್ಪಿನ ಮೇಲ್ಪದರವನ್ನು ದಪ್ಪನಾಗಿ ಸವರಿ.
2) ಬಳಿಕ ಕಾಳುಮೆಣಸಿನ ಪುಡಿಯನ್ನು ಉದುರಿಸಿ.
3) ಎಲ್ಲಾ ಬ್ರೆಡ್ ಸ್ಲೈಡ್ ಗಳ ಮೇಲೆ ಈ ಪದರಗಳನ್ನು ಸವರಿದ ಬಳಿಕ ಒವನ್‌ನಲ್ಲಿ ಇನ್ನೂರು ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಹತ್ತು ನಿಮಿಷ ಬೇಯಿಸಿ.
4) ಕೆಳಗಿಳಿಸಿದ ಬಳಿಕ ನಿಮ್ಮ ಆಯ್ಕೆಗೆ ತಕ್ಕಂತೆ ತ್ರಿಕೋನಾಕೃತಿ ಅಥವಾ ಚೌಕಾಕಾರದಲ್ಲಿ ಕತ್ತರಿಸಿ ಬಿಸಿಬಿಸಿ ಇರುವಂತೆಯೇ ಅತಿಥಿಗಳಿಗೆ ಬಡಿಸಿ.

English summary

Ramazan special: Spinach And Cheese Toast

This is a healthy and easy snack for iftar. You can eat this yummy creamy spinach toast to suffice your appetite until you have the main feast of Ramadan iftar. Those who don't like brad will also like to eat this finger liking spinach toast. This will not make you heavy and will not kill your appetite for dinner at iftar.
Story first published: Saturday, June 20, 2015, 10:20 [IST]
X
Desktop Bottom Promotion