For Quick Alerts
ALLOW NOTIFICATIONS  
For Daily Alerts

ಗರಮಾ ಗರಂ ಮಸಾಲ ಪರುಪ್ಪು ವಡೆ

By Super
|

ದಕ್ಷಿಣ ಭಾರತೀಯ ತಿಂಡಿಗಳಲ್ಲಿ ಅತಿಹೆಚ್ಚಿನ ಬೇಡಿಕೆ ಇರುವ ತಿಂಡಿ ಎಂದರೆ ಇಡ್ಲಿ ವಡೆ ಸಾಂಬಾರ್. ಇಡ್ಲಿ ಬೆಳಗ್ಗಿನ ತಿಂಡಿಯಾಗಿ ಹೆಚ್ಚಿನವರು ಇಷ್ಟಪಟ್ಟರೆ ಸಂಜೆಯ ಕುರುಕು ತಿಂಡಿಯಾಗಿ ಉದ್ದಿನವಡೆಗೇ ಹೆಚ್ಚಿನ ಬೇಡಿಕೆ. ಕೆಲವರು ಸಾಂಬಾರ್‌ನಲ್ಲಿ ಮುಳುಗಿಸಿ ತಿನ್ನಲು ಇಷ್ಟಪಟ್ಟರೆ ಉಳಿದವರಿಗೆ ಕಾಯಿ ಚಟ್ನಿಯೊಡನೆ ವಡೆ ಇಷ್ಟವಾಗುತ್ತದೆ.

ಅದರಲ್ಲೂ ಮಳೆ ಬಂದು ತಣ್ಣಾಗಾಗಿರುವ ವಾತಾವರಣದಲ್ಲಿ ವಡೆಗೆ ಹೆಚ್ಚಿನ ಬೇಡಿಕೆ. ಪ್ರಯಾಣಿಕರಿಗೂ ವಡೆ ಎಂದರೆ ಊಟದ ಬದಲಿಗೆ ಸೇವಿಸುವ ಲಘು ಆಹಾರವಾಗಿದೆ. ಆದರೆ ಪ್ರತಿಬಾರಿ ಉದ್ದಿನವಡೆಯನ್ನೇ ತಿಂದು ಬೇಸರವಾಗಿದೆಯೇ? ಬನ್ನಿ ಅದಕ್ಕೂ ಹೆಚ್ಚು ಗರಿಗರಿಯಾದ, ರುಚಿಯಾದ ಮಸಾಲಾ ಪರುಪ್ಪು ವಡೆ ನಿಮ್ಮ ಕುರುಕಲು ತಿಂಡಿಯ ಬಯಕೆಯನ್ನು ಪೂರ್ಣಗೊಳಿಸಬಲ್ಲುದು. ಗರಂ ಗರಂ ಮದ್ದೂರು ವಡೆ ನೀವೇ ಮಾಡಿ

ಕಡ್ಲೆಬೇಳೆ ಮತ್ತು ಕೆಲವು ಮಸಾಲೆ ವಸ್ತುಗಳು ಪ್ರಧಾನವಾಗಿರುವ ಈ ವಡೆ ಬೆಳಗಿನ ತಿಂಡಿಯಾಗಿಯೂ ಸೈ, ಸಂಜೆಯ ಕುರುಕಲು ತಿಂಡಿಯಾಗಿಯೂ ಜೈ ಅನ್ನಿಸಿಕೊಳ್ಳುತ್ತದೆ. ಟೀ ಕಾಫಿಯೊಡನೆ ಉತ್ತಮ ಜೊತೆಯನ್ನೂ ನೀಡುತ್ತದೆ. ಮಸಾಲೆ ವಡೆಗಿಂತಲೂ ಮಸಾಲಾ ಪರುಪ್ಪು ವಡೆ ಎಂದೇ ಹೆಚ್ಚು ಜನಪ್ರಿಯವಾಗಿರುವ ಈ ರುಚಿಕರ ತಿಂಡಿಯನ್ನು ಮಾಡುವ ವಿಧಾನವನ್ನು ಈಗ ಕಲಿಯೋಣ:

Masala Paruppu Vada: Crisp Snack

ಪ್ರಮಾಣ: ಸುಮಾರು ಹದಿನೈದರಿಂದ ಇಪ್ಪತ್ತು ವಡೆಗಳು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಕಡ್ಲೆ ಬೇಳೆ- 1 ಕಪ್
*ಈರುಳ್ಳಿ- 1 (ಚಿಕ್ಕದಾಗಿ ಹೆಚ್ಚಿದ್ದು)
*ಹಸಿಮೆಣಸು- 2 (ಚಿಕ್ಕದಾಗಿ ಕತ್ತರಿಸಿದ್ದು)
*ದೊಡ ಜೀರಿಗೆ (ಸೌಂಫ್) - 1 ಚಿಕ್ಕಚಮಚ
*ಕಾಳುಮೆಣಸಿನ ಪುಡಿ - ½ ಚಿಕ್ಕಚಮಚ
*ಕರಿಬೇವಿನ ಎಲೆ- 4-5
*ಕೊತ್ತಂಬರಿ ಸೊಪ್ಪು- 1 ದೊಡ್ಡ ಚಮಚ (ಎಲೆಗಳನ್ನು ಬಿಡಿಸಿ ಚಿಕ್ಕದಾಗಿ ಕತ್ತರಿಸಿದ್ದು)
*ಉಪ್ಪು-ರುಚಿಗನುಸಾರ
*ಹುರಿಯಲು ಎಣ್ಣೆ - 1 ಕಪ್

ವಿಧಾನ:
1) ಕಡ್ಲೆಬೇಳೆಯನ್ನು ತೊಳೆದು ಸುಮಾರು ನಾಲ್ಕರಿಂದ ಐದು ಗಂಟೆ ಬೇಳೆಯನ್ನು ಬೇರೆಯಾಗಿ ತೆಗೆದಿಡಿ. ಉಳಿದದ್ದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಅರೆಯಿರಿ.
2) ಸರಿಯಾದ ದ್ರವ್ಯತೆಗಾಗಿ ಕೊಂಚ ನೀರು ಸೇರಿಸಿ. ಇದು ದೋಸೆಹಿಟ್ಟಿಗಿಂತ ಗಟ್ಟಿಯಾದ ಹದವಿರುವಂತಿರಲಿ.
3) ಇದಕ್ಕೆ ದೊಡ್ಡ ಜೀರಿಗೆ, ಹಸಿಮೆಣಸು, ಬೇವಿನ ಎಲೆ, ಈರುಳ್ಳಿ, ಕಾಳುಮೆಣಸು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮತ್ತೊಮ್ಮೆ ಮಿಕ್ಸಿಯಲ್ಲಿ ಹಾಕಿ ಕಡೆಯಿರಿ. ಹಿಟ್ಟು ನುಣ್ಣಗಾದ ಬಳಿಕ ಕೈಯಲ್ಲಿ ಹಿಡಿದರೆ ಸುಲಭವಾಗಿ ಕೆಳಗೆ ಬೀಳಬಾರದು ಅಷ್ಟು ದಪ್ಪನೆ ಇರಲಿ.
4) ಈ ಮಿಶ್ರಣಕ್ಕೆ ತೆಗೆದಿಟ್ಟಿದ್ದ ಕಡ್ಲೆಬೇಳೆಯನ್ನು ಸೇರಿಸಿ ಚಮಚ ಬಳಸಿ ಕಲಕಿ.
5) ದಪ್ಪ ತಳದ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ನಿಮ್ಮ ಕೈಗಳಿಗೆ ಕೊಂಚವೇ ನೀರು ಹಾಕಿ ತೇವ ಮಾಡಿಕೊಳ್ಳಿ. ಬಳಿಕ ವಡೆಯ ಹಿಟ್ಟಿನ ಕೊಂಚಭಾಗ ಅಂಗೈ ಮೇಲಿರಿಸಿ ಚಿಕ್ಕದಾದ ರೊಟ್ಟಿಯಂತೆ ತಟ್ಟಿ.
6) ಎಣ್ಣೆ ಬಿಸಿಯಾಗಿರುವುದನ್ನು ಖಾತ್ರಿಪಡಿಸಿ. ಇದಕ್ಕೆ ಮೆಂತೆಯಕಾಳೊಂದನ್ನು ಹಾಕಿ ನೋಡಿ. ತಕ್ಷಣ ಸಿಡಿದರೆ ಎಣ್ಣೆ ಬಿಸಿಯಾಗಿದೆ ಎಂದರ್ಥ. ಮಧ್ಯಮಕ್ಕಿಂತಲೂ ಕೊಂಚ ಕಡಿಮೆ ಇರುವ ಉರಿಯಲ್ಲಿ ವಡೆಯ ಹಿಟ್ಟನ್ನು ನಿಧಾನವಾಗಿ ಎಣ್ಣೆಗೆ ಹಾಕಿ ನಡುನಡುವೆ ತಿರುವುತ್ತಾ ಹುರಿಯಿರಿ. ಸುಮಾರು ಕೆಂಬಣ್ಣ ಬಂದ ಬಳಿಕ ತೂತುಗಳ ಸೌಟು ಬಳಸಿ ಎಣ್ಣೆ ಬಸಿಯಿರಿ. ಬಳಿಕ ಕಿಚನ್ ಟವೆಲ್ ಪೇಪರ್ ಮೇಲೆ ಹರಡಿ. ಇದರಿಂದ ವಡೆಗೆ ಅಂಟಿಕೊಂಡಿದ್ದ ಎಣ್ಣೆ ನಿವಾರಿಸಬಹುದು.
7) ಕೈಗಳಲ್ಲಿ ವಡೆಯನ್ನು ತಟ್ಟಲು ಅನುಭವ ಸಾಲದೇ ಹೋದರೆ ಇದಕ್ಕೆ ಇನ್ನೊಂದು ವಿಧಾನವಿದೆ. ಇದಕ್ಕಾಗಿ ಸ್ವಚ್ಛವಾದ ತಲೆಯೊರೆಸುವ ತೆಳ್ಳಗಿನ ಟವೆಲ್ ಅಥವಾ ಹತ್ತಿಯ ಬಟ್ಟೆಯ ನಡುವೆ ವಡೆಯನ್ನು ತಟ್ಟಿ. ಇದನ್ನು ನಿಧಾನವಾಗಿ ಎಣ್ಣೆಯ ಮೇಲೆ ಕೊಂಡು ಹೋಗಿ ಉಲ್ಟಾ ಮಾಡಿ. ಬಟ್ಟೆಯನ್ನು ನಿಧಾನವಾಗಿ ಹಿಂಬದಿ ಮಡಚಿ ವಡೆಯ ಹಿಟ್ಟು ಕಳಚಿ ಎಣ್ಣೆಯಲ್ಲಿ ಬೀಳುವಂತೆ ಮಾಡಿ.
8) ಬಿಸಿಬಿಸಿಯಿದ್ದಂತೆಯೇ ಕಾಯಿಚಟ್ನಿ, ಟೊಮೇಟೋ ಕೆಚಪ್ ಅಥವಾ ಸಾಂಬಾರ್ ನೊಂದಿಗೆ ಬಡಿಸಿ, ಮೆಚ್ಚುಗೆ ಪಡಿಯಿರಿ.

English summary

Masala Paruppu Vada: Crisp Snack

Vada is a traditional South-Indian snack. This fried snack is crisp and is sometimes teamed up as a side dish with sambhar and coconut chutney. Vada is made with Bengal gram dal (chana dal) and spices. You can have vada as a breakfast dish or munch on it as a snack with a cup of hot tea or coffee. So, if you want to make some spicy vada, check out masala vada recipe. Also known as paruppu vada, this South-Indian snack can be a great treat with a hot beverage in the evening. Masala paruppu vada recipe:
Story first published: Wednesday, October 21, 2015, 11:07 [IST]
X
Desktop Bottom Promotion